ಮುದ್ರಣ, ಎಲೆಕ್ಟ್ರಾನಿಕ್ ಮತ್ತು ಡಿಜಿಟಲ್ ಮಾಧ್ಯಮಗಳ ಸುದ್ದಿ ವಿಷಯವನ್ನು ವಿಶ್ಲೇಷಿಸಲು ಮಹಾರಾಷ್ಟ್ರ ಸರ್ಕಾರ ಮಾಧ್ಯಮ ಮೇಲ್ವಿಚಾರಣಾ ಕೇಂದ್ರವನ್ನು ಸ್ಥಾಪಿಸಲಿದೆ; ಈ ಉದ್ದೇಶಕ್ಕಾಗಿ ₹10 ಕೋಟಿಗಳ ಬಜೆಟ್ ಅನ್ನು ನಿಗದಿಪಡಿಸಿದೆ.
ಬುಧವಾರ ಪ್ರಕಟವಾದ ಸರ್ಕಾರಿ ನಿರ್ಣಯದ (ಜಿಆರ್) ಪ್ರಕಾರ, ಕೇಂದ್ರವು ಮುದ್ರಣ ಮತ್ತು ಪ್ರಸಾರ ಮಾಧ್ಯಮಗಳಲ್ಲಿನ ಎಲ್ಲ ದಾರಿತಪ್ಪಿಸುವ ಸುದ್ದಿ ವರದಿಗಳನ್ನು ಸಂಗ್ರಹಿಸಿ ವಿಶ್ಲೇಷಿಸುತ್ತದೆ. ಈ ಬಗ್ಗೆ ವಾಸ್ತವಿಕ ವರದಿಯನ್ನು ಸಿದ್ಧಪಡಿಸುತ್ತದೆ.
ದಾರಿತಪ್ಪಿಸುವ ಸುದ್ದಿ ಇದ್ದರೆ, ಅದನ್ನು ಶೀಘ್ರದಲ್ಲೇ ಸ್ಪಷ್ಟಪಡಿಸಲಾಗುತ್ತದೆ. ನಕಾರಾತ್ಮಕ ಸುದ್ದಿ ಇದ್ದರೆ, ಸ್ಪಷ್ಟೀಕರಣವನ್ನು ತ್ವರಿತವಾಗಿ ನೀಡಲಾಗುವುದು ಎಂದು ಅದು ಹೇಳಿದೆ.
ಪ್ರಕಟಣೆಗಳು, ಚಾನೆಲ್‌ಗಳು ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಬೆಳವಣಿಗೆಯಿಂದಾಗಿ ಕೇಂದ್ರದ ಅವಶ್ಯಕತೆ ಸ್ಥಾಪನೆ ಅನಿವಾರ್ಯ. ಸರ್ಕಾರಿ ಯೋಜನೆಗಳು, ನೀತಿಗಳಿಗೆ ಸಂಬಂಧಿಸಿದ ಸುದ್ದಿಗಳನ್ನು ಹೇಗೆ ನೀಡಲಾಗುತ್ತದೆ ಎಂಬುದನ್ನು ಒಂದೇ ಛತ್ರಿಯಡಿಯಲ್ಲಿ ಮೇಲ್ವಿಚಾರಣೆ ಮಾಡುವ ಅಗತ್ಯವಿತ್ತು ಎಂದು ಸರ್ಕಾರಿ ಆದೇಶದಲ್ಲಿ ತಿಳಿಸಲಾಗಿದೆ.
ಪ್ರತಿದಿನ ಬೆಳಿಗ್ಗೆ 8 ರಿಂದ ರಾತ್ರಿ 10 ರವರೆಗೆ ಕಾರ್ಯನಿರ್ವಹಿಸುವ ಈ ಕೇಂದ್ರವನ್ನು ಮಾಹಿತಿ ಮತ್ತು ಪ್ರಚಾರ ನಿರ್ದೇಶನಾಲಯ ನಿರ್ವಹಿಸುತ್ತದೆ.
ಕೇಂದ್ರವನ್ನು ಸ್ಥಾಪಿಸಲು ಸರ್ಕಾರ ಆಡಳಿತಾತ್ಮಕ ಮತ್ತು ಆರ್ಥಿಕ ಅನುಮೋದನೆ ನೀಡಿದೆ ಎಂದು ಜಿಆರ್ ತಿಳಿಸಿದೆ.
ಸರ್ಕಾರಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಪಿಡಿಎಫ್ ರೂಪದಲ್ಲಿ ಸಂಗ್ರಹಿಸಲು ವೃತ್ತಿಪರ ಸಲಹೆಗಾರರನ್ನು ನೇಮಿಸಿಕೊಳ್ಳಲಾಗುತ್ತದೆ. ಸುದ್ದಿಗಳನ್ನು ಸಕಾರಾತ್ಮಕ, ನಕಾರಾತ್ಮಕ ಸುದ್ದಿ, ಇಲಾಖೆಗಳು, ಸಮಸ್ಯೆಗಳು, ಘಟನೆಗಳು ಮತ್ತು ವ್ಯಕ್ತಿಗಳಂತಹ ವರ್ಗಗಳಾಗಿ ವಿಂಗಡಿಸಲಾಗುತ್ತದೆ.
ಎಲೆಕ್ಟ್ರಾನಿಕ್ ಮಾಧ್ಯಮ ವಿಷಯದ ಮೇಲ್ವಿಚಾರಣೆಯ ಸಮಯದಲ್ಲಿ, ಸುದ್ದಿ ವಿಷಯದ ಪ್ರವೃತ್ತಿಗಳು, ಮನಸ್ಥಿತಿ ಮತ್ತು ಸ್ವರದ ಬಗ್ಗೆ ಸಲಹೆಗಾರರು ಗಂಟೆಗೊಮ್ಮೆ ಎಚ್ಚರಿಕೆಗಳನ್ನು ನೀಡುತ್ತಾರೆ. ಒಂದು ವರ್ಷದ ಅವಧಿಗೆ ಇ-ಟೆಂಡರ್ ಪ್ರಕ್ರಿಯೆಯ ಮೂಲಕ ಸಲಹೆಗಾರರನ್ನು ನೇಮಿಸಿಕೊಳ್ಳಲಾಗುತ್ತದೆ.
ಕೆಲಸವು ತೃಪ್ತಿಕರವಾಗಿದೆ ಎಂದು ಕಂಡುಬಂದರೆ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ನಿರ್ದೇಶನಾಲಯ (ಡಿಜಿಐಪಿಆರ್) ಸಲಹೆಗಾರರ ಅವಧಿಯನ್ನು ಎರಡು ವರ್ಷಗಳಿಗೆ ವಿಸ್ತರಿಸಲು ಅಧಿಕಾರ ಹೊಂದಿದೆ. ಅವಧಿಯು ಮೂರು ವರ್ಷಗಳಿಗಿಂತ ಹೆಚ್ಚು ಇರಬಾರದು ಎಂದು ಜಿಆರ್ ಹೇಳಿದೆ.
ಸನಾತನ ವಿವಾದ: ಉದಯನಿಧಿ ವಿರುದ್ಧ ಹೊಸ ಎಫ್‌ಐಆರ್ ದಾಖಲಿಸುವಂತಿಲ್ಲ ಎಂದ ಸುಪ್ರೀಂ ಕೋರ್ಟ್


