- Advertisement -
- Advertisement -
ತೀವ್ರ ಕುತೂಹಲ ಕೆರಳಿಸಿದ್ದ ಮಹಾರಾಷ್ಟ್ರ ಸರ್ಕಾರ ರಚನೆಯ ವಿವಾದದ ತೀರ್ಪನ್ನು ಇಂದು ಸುಪ್ರೀಂ ಪ್ರಕಟಿಸಿದ್ದು ನಾಳೆ ಅಂದರೆ ಬುಧವಾರ ಸಂಜೆ 5 ಗಂಟೆಯೊಳಗೆ ದೇವೇಂದ್ರ ಫಡ್ನವಿಸ್‌ರವರು ಬಹುಮತ ಸಾಬೀತು ಮಾಡಬೇಕೆಂದು ಆದೇಶಿಸಿದೆ.
ಆ ಮೂಲಕ ಕಾಂಗ್ರೆಸ್, NCP ಮತ್ತು ಶಿವಸೇನೆಗೆ ನಿರಾಳತೆ ಸಿಕ್ಕಿದ್ದು, ಬಿಜೆಪಿ ದೇವೇಂದ್ರ ಫಡ್ನವಿಸ್‌ರವರಿಗೆ ಅಗ್ನಿಪರೀಕ್ಷೆ ಎದುರಾಗಿದೆ. ಇನ್ನೊಂದು ದಿನದಲ್ಲೇ ಅವರು ಬಹುಮತ ಸಾಬೀತು ಮಾಡಲೇಬೇಕಿದೆ.
ಗುಪ್ತ ಮತದಾನ ನಡೆಯಬಾರದು, ಬಹುಮತ ಸಾಬೀತು ಪ್ರಕ್ರಿಯೆ ನೇರಪ್ರಸಾರ ಆಗಬೇಕು ಎಂದು ಷರತ್ತುಗಳನ್ನು ವಿಧಿಸಲಾಗಿದೆ.
ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಳಿಸಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ನ್ಯಾಯಮೂರ್ತಿ ರಮಣರವರ ನೇತೃತ್ವದ ಅವರಿದ್ದ ತ್ರಿಸದಸ್ಯ ಪೀಠ ಈ ತೀರ್ಪು ನೀಡಿದೆ.
ಹಂಗಾಮಿ ಸ್ಪೀಕರ್ ನೇಮಕ ಮಾಡಬೇಕು, ಬೆಳಿಗ್ಗೆಯಿಂದ ಸಂಜೆ 5 ಗಂಟೆಯವರೆಗೆ ಶಾಸಕರ ಪ್ರಮಾಣವಚನ ನಡೆಯಲಿದ್ದು 5 ಗಂಟೆಯೊಳಗೆ ಬಹುಮತ ಸಾಬೀತು ಪ್ರಕ್ರಿಯೆ ಮುಗಿಯಬೇಕು ಎಂದು ಕೋರ್ಟ್ ಆದೇಶಿಸಿದೆ.


