ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಅವರ ಕುಟುಂಬ ಸದಸ್ಯರು ಶುಕ್ರವಾರ ಮಧ್ಯಪ್ರದೇಶದ ಓಂಕಾರೇಶ್ವರದಲ್ಲಿ ‘ಮಾ ನರ್ಮದಾ’ ಆರತಿ ನೆರವೇರಿಸಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಮಧ್ಯಪ್ರದೇಶದ ಪ್ರಸಿದ್ಧ ಶಿವ ದೇವಾಲಯಕ್ಕೆ ಭೇಟಿ ನೀಡಿದಾಗ ಗಡಿಯಾರ ಚಲಿಸುವ ದಿಕ್ಕಿಗೆ (ಪ್ರದಕ್ಷಿಣಾಕಾರಕ್ಕೆ) ವಿರುದ್ಧವಾಗಿ ಆರತಿ ಮಾಡಿದರು ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಮಾಡಿ ಟೀಕೆಗೆ ಗುರಿಯಾಗಿದ್ದಾರೆ.
ರಾಹುಲ್ ಅವರ 4 ಸೆಕೆಂಡ್‌ಗಳ ಕ್ಲಿಪ್ ಅನ್ನು ಹಂಚಿಕೊಂಡ ಮಾಳವಿಯಾ, “ಆರತಿಯನ್ನು ಪ್ರದಕ್ಷಿಣಾಕಾರವಾಗಿ ಮಾಡಲಾಗುತ್ತದೆ ಎಂದು ತಿಳಿದಿದ್ದರೆ ಕಾಂಗ್ರೆಸ್ ನಾಯಕ ರಾಹುಲ್ ಸಾರ್ವಜನಿಕವಾಗಿ ತನ್ನನ್ನು ತಾನು ಪ್ರದರ್ಶಿಸಿಕೊಳ್ಳುವುದಿಲ್ಲ” ಎಂದಿದ್ದಾರೆ.
“ಆರತಿಯನ್ನು ಪ್ರದಕ್ಷಿಣಾಕಾರವಾಗಿ ಮಾಡಲಾಗುತ್ತದೆ ಮತ್ತು ಅದಕ್ಕೆ ವೈಜ್ಞಾನಿಕ ಕಾರಣವಿದೆ (ಭೂಮಿಯು ಪ್ರದಕ್ಷಿಣಾಕಾರವಾಗಿ ಅಂದರೆ ಗಡಿಯಾರದ ಮುಳ್ಳುಗಳು ಸುತ್ತುವ ರೀತಿ ಚಲಿಸುತ್ತದೆ) ಎಂದು ‘ಚುನಾವಣೆಯ ಹಿಂದೂ’ವಾಗಿರುವ ರಾಹುಲ್ ಗಾಂಧಿಗೆ ತಿಳಿದಿದ್ದರೆ ಅವರು ತಮ್ಮನ್ನು ತಾವು ಚಮತ್ಕಾರಕ್ಕೆ ಒಳಪಡಿಸಿಕೊಳ್ಳುತ್ತಿರಲಿಲ್ಲ… ಸಾರ್ವಜನಿಕವಾಗಿ ಹೀಗೆ…” ಎಂದು ಮಾಳವಿಯಾ ಟ್ವೀಟ್ ಮಾಡಿದ್ದಾರೆ.
If only “chunavi Hindu” Rahul Gandhi knew that aarti is done clockwise and there is a scientific reason for it (earth moves in clockwise direction and hence environmental frequencies are in sync with movement), he would not be making a spectacle of himself in public like this… pic.twitter.com/5ZebOFAFm6
— Amit Malviya (@amitmalviya) November 26, 2022
ಮಾಳವಿಯಾ ಮಾಡಿರುವ ಟ್ವೀಟ್‌ಗೆ ಸಾರ್ವಜನಿಕರು ತಿರುಗೇಟು ನೀಡಿದ್ದಾರೆ. “ರಾಹುಲ್ ಗಾಂಧಿಯವರು ನಿಜವಾಗಿಯೂ ಆರತಿಯನ್ನು ಪ್ರದಕ್ಷಿಣಾಕಾರವಾಗಿ ಮಾಡುತ್ತಿದ್ದಾರೆ. ಮಾಳವಿಯಾ ಅವರಿಗೆ ಇದು ಅಪ್ರದಕ್ಷಿಣಾಕಾರವಾಗಿ ಕಾಣುತ್ತದೆ” ಎಂದಿದ್ದಾರೆ.
“ತನ್ನ ಎಡಭಾಗವು ರಾಹುಲ್ ಅವರಿಗೆ ಬಲಭಾಗವಾಗಿರುತ್ತದೆ ಎಂದು ಅಮಿತ್ ಮಾಳವಿಯಾ ಅವರಿಗೆ ತಿಳಿವಳಿಕೆ ಇದ್ದಿದ್ದರೆ, ಅವರು ಸ್ವಯಂ ಮುಜುಗರವನ್ನು ಎದುರಿಸಬೇಕಾಗಿರಲಿಲ್ಲ” ಎಂದು ವ್ಯಂಗ್ಯವಾಡಿದ್ದಾರೆ.
“ನನ್ನ ಮೂರುವರೆ ವರ್ಷದ ಮಗುವಿಗೆ ನಿಮಗಿಂತ ಚೆನ್ನಾಗಿ ತಿಳಿವಳಿಕೆ ಇದೆ” ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ. “ನಿಮ್ಮ ಖಾತೆಯನ್ನು ಡಿಲೀಟ್ ಮಾಡಿ ರಾಜಕೀಯ ಸನ್ಯಾಸತ್ವ ಸ್ವೀಕರಿಸಿ. ನಿಮಗೆ ಇಷ್ಟೂ ತಿಳಿಯದಿದ್ದರೆ, ಆಡಳಿತದ ಬಗ್ಗೆ ನಿಮಗೇನು ತಿಳಿದಿದೆ?” ಎಂದು ಪ್ರಶ್ನಿಸಿದ್ದಾರೆ.
ರಾಹುಲ್ ಗಾಂಧಿಯವರ ರೀತಿಯಲ್ಲಿಯೇ ಪ್ರಧಾನಿ ನರೇಂದ್ರ ಮೋದಿಯವರು ಆರತಿ ಬೆಳಗುತ್ತಿರುವ ವಿಡಿಯೊವನ್ನು ಅಮಿತ್ ಅವರಿಗೆ ಟ್ಯಾಗ್ ಮಾಡಿ ಪತ್ರಕರ್ತ ಮೊಹಮ್ಮದ್ ಜುಬೇರ್ ಪ್ರತಿಕ್ರಿಯೆ ನೀಡಿದ್ದಾರೆ. ಈವರೆಗೆ ಅಮಿತ್ ಅವರ ವಿಡಿಯೊಗಿಂತ, ಜುಬೇರ್ ನೀಡಿರುವ ಪ್ರತಿಕ್ರಿಯೆಯೇ ಹೆಚ್ಚು ರೀಟ್ವೀಟ್ ಆಗಿದೆ.
Hello @amitmalviya 👋pic.twitter.com/jYcmJFzd37
— Mohammed Zubair (@zoo_bear) November 26, 2022
ಪ್ರಧಾನಿ ನರೇಂದ್ರ ಮೋದಿ ಅವರು ರಾಹುಲ್ ಗಾಂಧಿಯವರ ರೀತಿಯಲ್ಲಿಯೇ ಆರತಿ ಮಾಡುವ ವೀಡಿಯೋವನ್ನು ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ ಅವರು ಹಂಚಿಕೊಂಡಿದ್ದಾರೆ. “ಅದನ್ನೇ ನೀವು ಮೋದಿಯವರಿಗೆ ಏಕೆ ಹೇಳಬಾರದು?” ಎಂದು ಪ್ರಶ್ನಿಸಿದ್ದಾರೆ.
Why don't you tell the same to Modi? https://t.co/6dsz4aYsCZ pic.twitter.com/Abb2ZLMmNf
— Renuka Chowdhury (@RenukaCCongress) November 26, 2022
ಭೂಮಿ ಗಡಿಯಾರದ ರೀತಿ ಸುತ್ತುತ್ತದೆ ಎಂದು ಅಮಿತ್ ಮಾಡಿರುವ ಪ್ರತಿಪಾದನೆಯನ್ನು ಅನೇಕರು ಸರಿಪಡಿಸಿದ್ದಾರೆ. ಉತ್ತರ ಧ್ರುವ ನಕ್ಷತ್ರವಾದ ಪೊಲಾರಿಸ್‌ನಿಂದ ನೋಡಿದಾಗ ಭೂಮಿಯು ಅಪ್ರದಕ್ಷಿಣಾಕಾರವಾಗಿ ತಿರುಗುತ್ತದೆ ಎಂದು ತಿಳಿಸಿದ್ದಾರೆ.
“ಅಮಿತ್ ಅವರಿಗೆ ಸಾಮಾನ್ಯ ವಿಜ್ಞಾನದ ಅರಿವೂ ಇಲ್ಲ. ಇವರ ಪ್ರಕಾರ ಪ್ರಧಾನಿ ನರೇಂದ್ರ ಮೋದಿಯವರೂ ಚುನಾವಣೆ ಹಿಂದೂ” ಎಂದಿದ್ದಾರೆ. ಜೊತೆಗೆ ಮೋದಿಯವರು ತೊಟ್ಟಿಲು ತೂಗುವ ರೀತಿಯಲ್ಲಿ ಆರತಿ ಬೆಳಗುತ್ತಿರುವ ವಿಡಿಯೊ ವೈರಲ್ ಆಗುತ್ತಿದೆ.
— PUNEET VIZH (@Puneetvizh) November 26, 2022
ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ರಾಹುಲ್ ಗಾಂಧಿಯವರ ತಲೆಕೆಳಗಾದ ಫೋಟೋವನ್ನು ಹಂಚಿಕೊಂಡಿದ್ದಕ್ಕಾಗಿ ವಿರೋಧ ಪಕ್ಷದ ನಾಯಕರಿಂದ ಟೀಕೆಗೆ ಗುರಿಯಾಗಿದ್ದಾರೆ. ಯೂತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದ ಬಿ.ವಿ.ಶ್ರೀನಿವಾಸ್ ಅವರು ಪ್ರತಿಕ್ರಿಯಿಸಿ, 2014ರ ಹಿಂದೆ ಸಿಲಿಂಡರ್ ಬೆಲೆ ಏರಿಕೆ ಖಂಡಿಸಿ ಸ್ಮೃತಿಯವರು ಮಾಡಿದ್ದ ಹೋರಾಟದ ಫೋಟೋವನ್ನು ಟ್ಯಾಗ್ ಮಾಡಿದ್ದಾರೆ.
अब ठीक है। pic.twitter.com/tiHcqsBhBI
— Srinivas BV (@srinivasiyc) November 25, 2022
“ರಾಹುಲ್ ಪ್ರದಕ್ಷಿಣಾಕಾರವಾಗಿ ಆರತಿ ಮಾಡುತ್ತಿದ್ದಾರೆ. ನೀವು ಇನ್ನೊಂದು ಕಡೆಯಿಂದ ನೋಡುತ್ತಿದ್ದೀರಿ. ಪ್ರತಿ ದೇವಸ್ಥಾನದಲ್ಲಿಯೂ ಇದೇ ರೀತಿ ಆರತಿ ಮಾಡಲಾಗುತ್ತದೆ. ರಾಹುಲ್ ಮಾಡುವ ಎಲ್ಲದರಲ್ಲೂ ತಪ್ಪು ಹುಡುಕುವುದನ್ನು ನಿಲ್ಲಿಸಿ ಮತ್ತು ನಿಮ್ಮ ಮೇಲಧಿಕಾರಿಗಳಿಂದ ಹೊಸ ಉದ್ಯೋಗ ವಿವರಣೆಯನ್ನು ಪಡೆಯಿರಿ. ಅವರನ್ನು ಸದಾ ಟ್ರೋಲ್ ಮಾಡುವುದಕ್ಕೆ ಬೇಸರವಿಲ್ಲವೇ?” ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ.
He is doing it clockwise. You're looking from the other side. This is the way Aarti is done in every temple.
Stop looking for fault in everything he does & get a new job description from your bosses. Aren't you bored of trolling him all the time?
— Katyusha (@Indian10000000) November 26, 2022


