ಮಂಗಳೂರಿನ ಹೊರವಲಯದಲ್ಲಿ ಕೊಲೆಗೀಡಾದ ರೌಡಿ ಸುಹಾಸ್ ಶೆಟ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಪ್ರಮುಖ ಆರೋಪಿ ಸೇರಿದಂತೆ ಎಂಟು ಜನರನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ. 2022 ರ ಫಾಜಿಲ್ ಕೊಲೆ ಪ್ರಕರಣದ ಪ್ರಮುಖ ಆರೋಪಿಯೂ ಆಗಿದ್ದ ರೌಡಿ ಸುಹಾಸ್ ಅವರನ್ನು ಗುರುವಾರ ರಾತ್ರಿ ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ಹತ್ಯೆ ಮಾಡಿತ್ತು.
ಘಟನೆಯ ನಂತರ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಾದ್ಯಂತ ಅಶಾಂತಿಯನ್ನು ಹುಟ್ಟುಹಾಕಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ ಅಧಿಕಾರಿಗಳು ನಿಷೇಧಾಜ್ಞೆಗಳನ್ನು ಜಾರಿ ಮಾಡಿದ್ದರು. ಅದಾಗ್ಯೂ, ಶುಕ್ರವಾರ ರೌಡಿಯ ಮೃತದೇಹ ಮೆರವಣಿಗೆ ವೇಳೆ ಹಿಂಸಾಚಾರ ಕೂಡಾ ಸಂಭವಿಸಿತ್ತು. ಅಲ್ಲದೆ, ಅವಳಿ ಜಿಲ್ಲೆಗಳಲ್ಲಿ ಹಿಂಸಾಚಾರದ ಐದು ಪ್ರತ್ಯೇಕ ಘಟನೆಗಳು ಸಂಭವಿಸಿತ್ತು.
ಕೊಲೆ ಪ್ರಕರಣದಲ್ಲಿ ಒಟ್ಟು 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರ ಪಟ್ಟಿ ಕೆಳಗಿನಂತಿವೆ.
- ಶಾಂತಿಗುಡ್ಡೆ ಪೇಜಾವರ ಗ್ರಾಮದ ನಿವಾಸಿ ಅಬ್ದುಲ್ ನಾಸಿರ್ ಅವರ ಪುತ್ರ ಅಬ್ದುಲ್ ಸಫ್ವಾನ್ (29) ಈತ ಚಾಲಕನಾಗಿ ದುಡಿಯುತ್ತಿದ್ದ.
- ಬಜ್ಪೆ ನಿವಾಸಿ ಅಬೂಬಕ್ಕರ್ ಅವರ ಪುತ್ರ ನಿಯಾಝ್ (28), ಈತ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ.
- ಕೆಂಜಾರು ನಿವಾಸಿ ಅಬ್ದುಲ್ ರಝಾಕ್ ಅವರ ಪುತ್ರ ಮುಹಮ್ಮದ್ ಮುಝಮ್ಮಿಲ್ (32), ಸೌದಿ ಅರೇಬಿಯಾದಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಈತ ಕಳೆದ ನಾಲ್ಕು ತಿಂಗಳ ಹಿಂದೆ ಊರಿಗೆ ಮರಳಿದ್ದಾನೆ.
- ಕಳವಾರು ನಿವಾಸಿ ಮುಹಮ್ಮದ್ ಅವರ ಪುತ್ರ ಕಲಂದರ್ ಶಾಫಿ (31), ಈತ ಬೆಂಗಳೂರಿನಲ್ಲಿ ಸೇಲ್ಸ್ ಮ್ಯಾನ್ ಆಗಿ ದುಡಿಯುತ್ತಿದ್ದ.
- ಚಿಕ್ಕಮಗಳೂರಿನ ಕಳಸ ನಿವಾಸಿ ರಾಜೇಶ್ ಅವರ ಪುತ್ರ ರಂಜಿತ್ (19), ಈತ ಚಾಲಕನಾಗಿ ದುಡಿಯುತ್ತಿದ್ದ.
- ಚಿಕ್ಕಮಗಳೂರಿನ ಕಳಸ ನಿವಾಸಿ ಮಾರಿ ಮುತ್ತು ಅವರ ಪುತ್ರ ನಾಗರಾಜ್ (20), ಈತ ಶಾಮಿಯಾನ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದ.
- ಜೋಕಟ್ಟೆ ನಿವಾಸಿ ಅಬ್ದುಲ್ ಮಜೀದ್ ಅವರ ಪುತ್ರ ಮುಹಮ್ಮದ್ ರಿಝ್ವಾನ್ (28), ಈತ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದ.
- ಉಮರುಲ್ ಫಾರೂಕ್ ಅವರ ಪುತ್ರ ಆದಿಲ್ ಮೆಹರೂಫ್. ಈತ 2022 ರಲ್ಲಿ ಕೊಲೆಯಾದ ಫಾಝಿಲ್ ಅವರ ಸಹೋದರ.
ಯಾರು ಈ ರೌಡಿ ಸುಹಾಸ್ ಶೆಟ್ಟಿ?
42 ವರ್ಷದ ರೌಡಿ ಶೀಟರ್ ಸುಹಾಸ್ ಶೆಟ್ಟಿ ಕ್ರಿಮಿನಲ್ ದಾಖಲೆಯಿರುವ ವ್ಯಕ್ತಿಯಾಗಿದ್ದಾರೆ. ಅವರ ವಿರುದ್ಧ ಐದು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು. ಇವುಗಳಲ್ಲಿ ದಕ್ಷಿಣ ಕನ್ನಡದಲ್ಲಿ ಒಂದು ಮತ್ತು ಮಂಗಳೂರು ನಗರದಲ್ಲಿ ನಾಲ್ಕು ದಾಖಲಾಗಿವೆ. ಒಟ್ಟು ಪ್ರಕರಣಗಳಲ್ಲಿ ಎರಡು ಕೊಲೆ ಪ್ರಕರಣ ಮತ್ತು ದಲಿತ ದೌರ್ಜನ್ಯ ಸೇರಿದಂತೆ ಇತರ ಪ್ರಕರಣಗಳು ಅವರ ಮೇಲೆ ಇದ್ದವು.
2022 ರಲ್ಲಿ ಕಾಟಿಪಳ್ಳದ ಮಂಗಳಪೇಟೆಯ ಮುಸ್ಲಿಂ ಯುವಕ 23 ವರ್ಷದ ಮೊಹಮ್ಮದ್ ಫಾಜಿಲ್ ಹತ್ಯೆಯಲ್ಲಿ ರೌಡಿ ಸುಹಾಸ್‌ನ ಮೊದಲ ಆರೋಪಿಯಾಗಿದ್ದರು.
ಸುಹಾಸ್ ಕೊಲೆ ರಾಜಕೀಯ ಮತ್ತು ಕೋಮು ಅಶಾಂತಿಗೆ ಕಾರಣವಾಗಿದೆ. ಬಿಜೆಪಿ ಪರ ಸಂಘಟನೆಯಾದ ವಿಎಚ್‌ಪಿ ದುಷ್ಕರ್ಮಿ ಸಂಘಟನೆಗಳು ಶುಕ್ರವಾರ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬಂದ್‌ಗೆ ಕರೆ ನೀಡಿದ್ದವು. ಈ ವೇಳೆ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳ ಮೇಲೆ ಹಲವಾರು ಕಲ್ಲು ತೂರಾಟದ ಘಟನೆಗಳು ವರದಿಯಾಗಿವೆ. ರೌಡಿ ಸುಹಾಸ್ ಶೆಟ್ಟಿ


