Homeಕರ್ನಾಟಕಮಂಗಳೂರು ವಿಡಿಯೋ ಬಿಡುಗಡೆ ಮಾಡಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದೇನು?

ಮಂಗಳೂರು ವಿಡಿಯೋ ಬಿಡುಗಡೆ ಮಾಡಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದೇನು?

ಮ್ಯಾಜಿಸ್ಟ್ರೇಟ್‌ ತನಿಖೆ ಅಗತ್ಯವಿಲ್ಲ. ಈ ಬಗ್ಗೆ ಎಲ್ಲಾ ಪಕ್ಷದವರೂ ಸೇರಿದ ಸದನ ಸಮಿತಿ ರಚನೆಯಾಗಬೇಕು. ಈ ಕುರಿತು ಅಸೆಂಬ್ಲಿಯೊಳಗೆ ಒತ್ತಾಯಿಸುತ್ತೇನೆ - ಎಚ್‌.ಡಿ.ಕೆ

- Advertisement -
- Advertisement -

ಕಳೆದ ಡಿಸೆಂಬರ್‌ 19ರಂದು ನಡೆದ ಮಂಗಳೂರು ಗಲಭೆ ಪ್ರಕರಣಕ್ಕೆ ಸಂಭಂದಿಸಿದಂತೆ, ಇಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಸುದ್ದಿಗೋಷ್ಠಿ ಕರೆದು ಸುಮಾರು 35 ದೃಶ್ಯಗಳ ವಿಡಿಯೋ ಸಿಡಿಗಳನ್ನು ಬಿಡುಗಡೆ ಮಾಡಿದ್ದಾರೆ. ರಾಜ್ಯಸರ್ಕಾರ ಮತ್ತು ಮಂಗಳೂರು ಪೊಲೀಸರ ವಿರುದ್ಧ ಹರಿಹಾಯ್ದ ಅವರು ಮಂಗಳೂರು ಕಮಿಷನರ್ ಪಿ.ಎಸ್ ಹರ್ಷರವರ ನಡೆ ಅನುಮಾನಾಸ್ಪದವಾಗಿದೆ, ಪೋಲಿಸರಿಗೆ ಈ ಅಧಿಕಾರ ನೀಡಿದವರು ಯಾರು ಎಂದು ಪ್ರಶ್ನಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟಕಾರರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡುವ ಮೂಲಕ ಪೊಲೀಸರಿಂದಲೇ ಈ ಘಟನೆ ಹಿಂಸೆರೂಪಕ್ಕೆ ತಿರುಗಿದ್ದು, ಕಾರಣರಾದ ಪೊಲೀಸ್ ಆಯುಕ್ತ ಪಿ.ಎಸ್.ಹರ್ಷರವರ ಅಮಾನತ್ತಿಗೆ ಆಗ್ರಹಿಸಿದ್ದಾರೆ.

ವಿಡಿಯೋ ನೋಡಿ

ಮಂಗಳೂರು ಹಿಂಸಾಚಾರ

ಮಂಗಳೂರು ಹಿಂಸಾಚಾರಕ್ಕೆ ಪೊಲೀಸರೇ ಕಾರಣವೇ? ಎಚ್‌.ಡಿ ಕುಮಾರಸ್ವಾಮಿ ಬಿಡುಗಡೆ ಮಾಡಿದ ವಿಡಿಯೋದಲ್ಲೇನಿದೆ? ನೋಡಿಬಿಡಿ

Posted by Naanu Gauri on Friday, January 10, 2020

ಜನಸಾಮಾನ್ಯರು, ಬಿದಿವ್ಯಾಪಾರಿಗಳ ಮೇಲೆನಡೆದ ದಾಳಿ ಅಮಾನವೀಯ ಎಂದ ಅವರು, ಈ ಹಿಂದೆ ಪೊಲೀಸ್ ಠಾಣೆಯ ಮೇಲೆ ಗಲಭೆಕೋರರ ದಾಳಿ ನಡೆಸಿ, ಶತ್ರಾಸ್ತ್ರಗಳನ್ನು ಕದ್ದೊಯ್ಯಲು ಯತ್ನಿಸಿದ್ದರಿಂದ ಪೊಲೀಸರಿಂದ ಗುಂಡು ಹಾರಿಸಬೇಕಾಯಿತು ಎಂಬ ಕಾರಣ ನೀಡಿದ್ದಾರೆ. ಸರ್ಕಾರ ಅಂಗಡಿಗೆ ದಾಳಿ ಮಾಡಿದರು ಅದಕ್ಕೆ ಗುಂಡು ಹಾರಿಸಬೇಕಾಯಿತು ಅನ್ನುತ್ತಿದೆ? ಯಾರನ್ನು ನಂಬುವುದು?

ಪೊಲೀಸರ್‌ ಠಾಣೆಯ ಹೊರಗೆ 360ಡಿಗ್ರಿ ಕವರ್‌ ಮಾಡುವ ಸಿಸಿ ಕ್ಯಾಮರ ಇದೆ. ಅದರ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿದರೆ ಪ್ರಕರಣದ ನೈಜತೆ ತಿಳಿಯುತ್ತದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಗಲಭೆಯಲ್ಲಿ ಹಲವು ಪೊಲೀಸರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಆದರೆ ಇಲ್ಲಿಯವರೆಗೆ ಒಬ್ಬ ಅಧಿಕಾರಿಯನ್ನು ಸಹ ನಾನು ಆಸ್ಪತ್ರೆಯಲ್ಲಿ ನೋಡಿಲ್ಲ.

ಮ್ಯಾಜಿಸ್ಟ್ರೇಟ್‌ ತನಿಖೆ ಅಗತ್ಯವಿಲ್ಲ. ಈ ಬಗ್ಗೆ ಎಲ್ಲಾ ಪಕ್ಷದವರೂ ಸೇರಿದ ಸದನ ಸಮಿತಿ ರಚನೆಯಾಗಬೇಕು. ಈ ಕುರಿತು ಅಸೆಂಬ್ಲಿಯೊಳಗೆ ಒತ್ತಾಯಿಸುತ್ತೇನೆ ಎಂದರು.

ಈ ಎಲ್ಲಾ ದೃಶ್ಯಗಳನ್ನು ನಾನು ಸದನದಲ್ಲಿ ಬಿಡುಗಡೆ ಮಾಡಬೇಕೆಂದಿದ್ದೆ. ಆದರೆ ಮಂಗಳೂರಿನಲ್ಲಿ ನಿವೃತ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಯಾದ ಗೋಪಾಲಗೌಡರ ನತೃತ್ವದಲ್ಲಿ ನಡೆಯಬೆಕ್ಕಿದ್ದ “ಪೀಪಲ್ಸ್ ಕೋರ್ಟ್” ಎಂಬ ಚರ್ಚಾ ಕಾರ್ಯಕ್ರಮಕ್ಕೆ ಸರ್ಕಾರ ಅನುಮತಿ ನಿರಾಕರಿಸಿದ ಹಿನ್ನಲ್ಲೆಯಲ್ಲಿ, ಆ ಕ್ರಮವನ್ನು ಪ್ರಬಲವಾಗಿ ಖಂಡಿಸಿ ಬಿಡುಗಡೆ ಮಾಡಿರುವುದಾಗಿ ತಿಳಿಸಿದರು.

ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟು ಸಮಸ್ಯೆ ಉಂಟು ಮಾಡುತ್ತಿದ್ದೀರಿ, ಬಿಜೆಪಿಯವರು ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸಲು ಹೊರಟಿದ್ದೀರಿ. ಜನತೆಯಲ್ಲಿ ವಿಶ್ವಾಸ ಮೂಡಿಸದ್ದೇ ಇದ್ದರೆ ಎಷ್ಟು ದಿನ ಸರ್ಕಾರ ನಡೆಸುತ್ತೀರಿ? ಒಂದು ದಿನ ಜನರ ಆಕ್ರೋಶ ಚಿಮ್ಮುವುದಿಲ್ಲವೇ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಬಿಹಾರದಿಂದ ಕೂಲಿಕೆಲಸ ಮಾಡಲು ಬಂದಿದ್ದ ಕಾರ್ಮಿಕನಿಗೆ ಗುಂಡು ಹಾರಿಸಿದ್ದಾರೆ. ಇನ್ನೊಬ್ಬ ಪಿ.ಎಚ್‌.ಡಿ ಓದುತ್ತಿರುವ ಹುಡುಗನಿಗೂ ಗುಂಡು ಬಿದ್ದಿದೆ. ಅವರ ಆಸ್ಪತ್ರೆ ಖರ್ಚು 26 ಲಕ್ಷ ಬಿಲ್‌ ಆಗಿದೆ. ಯಾರು ಕಟ್ಟುತ್ತಾರೆ? ಎಂದು ಪ್ರಶ್ನಿಸಿದ್ದಾರೆ.

ನಂತರ ಮಾಧ್ಯಮಗಳನ್ನು ತರಾಟೆಗೆ ತೆಗೆದುಕೊಂಡ ಅವರು, ಮಾಧ್ಯಮಗಳು ಸಂವಿಧಾನದ ನಾಲ್ಕನೇ ಅಂಗ.. ಸಿಎಎ, ಎನ್‌ಆರ್‌ಸಿ ವಿಷಯದಲ್ಲಿ ಜನರಿಗೆ ಸತ್ಯ ತಿಳಿಸಲು ಮುಂದಾಗಿ. ನನ್ನ ಮೇಲೆ ಲಘುವಾಗಿ ಮಾತಾಡುವುದುನ್ನು ಬಿಡಿ. ನಾನು ಬಿಡುವ ದಾಖಲೆಗಳಿಗೆ ಇತಿಹಾಸವಿದೆ. ಮಾಹಿತಿ ಸಂಗ್ರಹವಿಲ್ಲದೇ ದಾಖಲೆ ಬಿಡುಗಡೆ ಮಾಡುವುದಿಲ್ಲ ಎಂದರು.

ಸರ್ಕಾರ ಸಿಎಎ ಬದಿಗಿರಿಸಿ, ನಿರುದ್ಯೋಗದ ಬಗ್ಗೆ ಗಮನಕೊಡಬೇಕು. ಇಂದು ಮೋದಿಯವರು ಆರ್ಥಿಕ ಸಚಿವರನ್ನು ಬಿಟ್ಟು ಸಭೆ ನಡೆಸಿದ್ದಾರೆ ಅಂದರೆ ಏನು ಅರ್ಥ? ಇದು ಈ ದೇಶದ ಪರಿಸ್ಥಿತಿ. ಎಲ್ಲಾ ಮಾಧ್ಯಮಗಳಲ್ಲಿ ಆರ್ಥಿಕತೆ ಹಳ್ಳ ಹಿಡಿಯುತ್ತಿರುವುದು ವರದಿಯಾಗುತ್ತಿದೆ ಎಂದರು.

ನಮ್ಮ ರಾಜ್ಯ ಸರ್ವಜನಾಂಗದ ಶಾಂತಿಯ ತೋಟ. ಇದಕ್ಕೆ ಬಿಜೆಪಿ ಸ್ನೇಹಿತರು ಬೆಂಕಿಯಿಡಲು ಹೊರಟಿದ್ದಾರೆ. ಇದು ನಾಗರಿಕ ಸರ್ಕಾರವೇ? ಎಂದು ಪ್ರಶ್ನಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ ವೀಕ್ಷಿಸುತ್ತಾ ಬೀದಿಯಲ್ಲಿ ತಿರುಗಾಡುವ ಯುವಕರ ಖಾತೆಗಳಿಗೆ ಹಣ...

0
"ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ಗಳನ್ನು ಬಳಸಿಕೊಂಡು ಬೀದಿಗಳಲ್ಲಿ ತಿರುಗುತ್ತಿರುವ ನಮ್ಮ ಯುವಕರ ಬ್ಯಾಂಕ್ ಖಾತೆಗಳಿಗೆ ವಾರ್ಷಿಕ ಒಂದು ಲಕ್ಷ ರೂಪಾಯಿ ಮತ್ತು ತಿಂಗಳಿಗೆ 8,500 ರೂಪಾಯಿಗಳನ್ನು ಜಮಾ ಮಾಡಲಾಗುತ್ತದೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ"...