ಇಂಫಾಲ್: ಮಣಿಪುರ ಭದ್ರತಾ ಪಡೆಗಳು 5 ಜಿಲ್ಲೆಗಳಲ್ಲಿ ನಡೆಸಿದ ದಾಳಿಯಲ್ಲಿ ಮಣಿಪುರ ಪೊಲೀಸ್, ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (CAPF), ಸೇನೆ ಮತ್ತು ಅಸ್ಸಾಂ ರೈಫಲ್ಸ್‌ನ ಜಂಟಿ ತಂಡಗಳು ಶನಿವಾರ ಮಣಿಪುರದ ಐದು ಇಂಫಾಲ್ ಕಣಿವೆಯ ಜಿಲ್ಲೆಗಳಲ್ಲಿ ನಡೆಸಿದ ಪ್ರಮುಖ ಕಾರ್ಯಾಚರಣೆಯಲ್ಲಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಬೃಹತ್ ಸಂಗ್ರಹದ ಜೊತೆಗೆ 328 ರೈಫಲ್‌ಗಳು ಮತ್ತು ಬಂದೂಕುಗಳನ್ನು ವಶಪಡಿಸಿಕೊಂಡಿವೆ.
ಕಂಗ್ಲಿಪಾಕ್ ಕಮ್ಯುನಿಷ್ಟ್ ಪಕ್ಷ (ನೊಯೋನ್) ಪ್ರಿಪಾಕ್ (ಪಿ ಆರ್ ಇ ಪಿಎಕೆ)ನ ಐವರು ಸದಸ್ಯರನ್ನು ಭಾರತ-ಮ್ಯಾನ್ಯಾರ್ ಗಡಿಯ ಶಾಂಗ್ ಟಾಂಗ್ ನಲ್ಲಿ ಬಂಧಿಸಲಾಗಿದೆ. ಇಂಫಾಲ್ ಉತ್ತರ ಜಿಲ್ಲೆಯಲ್ಲಿ ಪ್ರತ್ಯೇಕ ಕಾರ್ಯಾಚರಣೆ ನಡೆಸಿ ಭದ್ರತಾ ಪಡೆಗಳು ಮೂರು ವೆಹಿಕ್ಯುಲರ್ ರೇಡಿಯೋ ಸಲಕರಣೆ, 13 ವೈರ್ ಲೆಸ್, ಏಳು ವೈರ್ ಲೆಸ್ ಆಂಟೆನಾ ಮತ್ತಿತರ ಸಾಧನಗಳನ್ನು ವಶಕ್ಕೆ ಪಡೆದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜೂನ್ 13-14ರ ಮಧ್ಯರಾತ್ರಿ ಗುಪ್ತಚರ ನೇತೃತ್ವದ ದಾಳಿಗಳನ್ನು ಐದು ಕಣಿವೆ ಜಿಲ್ಲೆಗಳಾದ ಇಂಫಾಲ್ ಪೂರ್ವ, ಇಂಫಾಲ್ ಪಶ್ಚಿಮ, ಬಿಷ್ಣುಪುರ್, ಕಾಕ್ಚಿಂಗ್ ಮತ್ತು ತೌಬಲ್ ಹೊರವಲಯದಲ್ಲಿ ನಡೆಸಲಾಗಿತ್ತು. ಜಂಟಿ ತಂಡಗಳು ಸ್ಫೋಟಕಗಳು ಮತ್ತು ಇತರ ಯುದ್ಧೋಚಿತ ಸಾಮಗ್ರಿಗಳನ್ನು ವಶಪಡಿಸಿಕೊಂಡಿವೆ. 151 ಎಸ್‌ಎಲ್‌ಆರ್ ರೈಫಲ್, 65 ಇನ್ಸಾಸ್ ರೈಫಲ್‌ಗಳು, ಇತರ ರೀತಿಯ 73 ರೈಫಲ್‌ಗಳು, 5 ಕಾರ್ಬೈನ್ ಗನ್, 2 ಎಂಪಿ-5 ಗನ್ ಸೇರಿದಂತೆ ಒಟ್ಟು 328 ಬಂದೂಕುಗಳು ಮತ್ತು ರೈಫಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಣಿಪುರ ಪೊಲೀಸ್ ಎಡಿಜಿಪಿ ಲಾರಿ ದೋರ್ಜಿ ಲಟೂ ಹೇಳಿದರು.
ಯಾವ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ?
151 ಎಸ್‌ಎಲ್‌ಆರ್ ರೈಫಲ್‌ಗಳು, 65 ಐಎನ್‌ಎಸ್‌ಎಎಸ್ ರೈಫಲ್‌ಗಳು, 73 ಇತರ ರೈಫಲ್‌ಗಳು, ಐದು ಕಾರ್ಬೈನ್ ಗನ್‌ಗಳು, ಎರಡು ಎಂಪಿ 5 ಗನ್‌ಗಳು, 12 ಲೈಟ್ ಮೆಷಿನ್ ಗನ್‌ಗಳು, ಆರು ಎಕೆ ಸರಣಿ ರೈಫಲ್‌ಗಳು, ಎರಡು ಅಮೋಘ್ ರೈಫಲ್‌ಗಳು, ಒಂದು ಮಾರ್ಟರ್, ಆರು ಪಿಸ್ತೂಲ್‌ಗಳು, ಒಂದು ಎಆರ್-15 ಮತ್ತು ಎರಡು ಫ್ಲೇರ್ ಗನ್‌ಗಳು ವಶಪಡಿಸಿಕೊಂಡ ಸ್ಪೋಟಕಗಳಲ್ಲಿ ಸೇರಿವೆ.
ಒಟ್ಟು 328 ರೈಫಲ್‌ಗಳು ಮತ್ತು ಬಂದೂಕುಗಳ ಜೊತೆಗೆ, ಭದ್ರತಾ ಪಡೆಗಳು 591 ವಿವಿಧ ಮ್ಯಾಗಜೀನ್‌ಗಳು, 3,534 ಎಸ್‌ಎಲ್‌ಆರ್ ಮದ್ದುಗುಂಡುಗಳು, 2,186 ಐಎನ್‌ಎಸ್‌ಎಎಸ್ ಮದ್ದುಗುಂಡುಗಳು, .303 ರೈಫಲ್‌ಗಳ 2,252 ಮದ್ದುಗುಂಡುಗಳು, 234 ಎಕೆ ಮದ್ದುಗುಂಡುಗಳು, 407 ಅಮೋಘ್ ಮದ್ದುಗುಂಡುಗಳು, 20 9-ಎಂಎಂ ಪಿಸ್ತೂಲ್ ಮದ್ದುಗುಂಡುಗಳು, 10 ಗ್ರೆನೇಡ್‌ಗಳು, ಮೂರು ಲ್ಯಾಥೋಡ್‌ಗಳು ಮತ್ತು ಏಳು ಡಿಟೋನೇಟರ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಸಹಜ ಸ್ಥಿತಿಯನ್ನು ಮರುತರಲು, ಸಾರ್ವಜನಿಕ ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಮತ್ತು ನಾಗರಿಕರು ಮತ್ತು ಅವರ ಆಸ್ತಿಯ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಮಣಿಪುರ ಪೊಲೀಸರು, ಭದ್ರತಾ ಪಡೆಗಳು ನಡೆಸಿದ ಪ್ರಮುಖ ಸಾಧನೆಯಾಗಿದೆ ಎಂದು ಎಡಿಜಿಪಿ ಹೇಳಿದ್ದಾರೆ.
ಶಾಂತಿಯುತ ಮತ್ತು ಸುರಕ್ಷಿತ ಮಣಿಪುರಕ್ಕೆ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತೇವೆ. ಸಾರ್ವಜನಿಕರು ಪೊಲೀಸ್ ಮತ್ತು ಭದ್ರತಾ ಪಡೆಗಳೊಂದಿಗೆ ಸಹಕರಿಸಬೇಕು ಮತ್ತು ಅಕ್ರಮ ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿದ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳು ಅಥವಾ ಮಾಹಿತಿಯನ್ನು ಹತ್ತಿರದ ಪೊಲೀಸ್ ಠಾಣೆ ಅಥವಾ ಕೇಂದ್ರ ನಿಯಂತ್ರಣ ಕೊಠಡಿಗೆ ವರದಿ ಮಾಡಬೇಕು ಎಂದು ಅವರು ಕೋರಿದರು.
2023ರಲ್ಲಿ ಮಣಿಪುರದಲ್ಲಿ ಮೈತೇಯಿ ಮತ್ತು ಕುಕಿ-ಜೋ ಗುಂಪುಗಳ ನಡುವೆ ಜನಾಂಗೀಯ ಹಿಂಸಾಚಾರ ಭುಗಿಲೆದ್ದಾಗ ಉದ್ವಿಗ್ನತೆ ಹೆಚ್ಚಾಯಿತು. ಆಗ ನಡೆದ ಹಿಂಸಾಚಾರದಲ್ಲಿ 260ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು ಮತ್ತು ಸಾವಿರಾರು ಜನರು ನಿರಾಶ್ರಿತರಾಗಿದ್ದರು ಎಂದು ಪಿಟಿಐ ವರದಿ ಮಾಡಿದೆ.
ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ರಾಜೀನಾಮೆ ನೀಡಿದ ನಂತರ ಕೇಂದ್ರವು ಫೆಬ್ರವರಿ 13ರಂದು ಈಶಾನ್ಯ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಿತ್ತು. 2027ರವರೆಗೆ ಅಧಿಕಾರಾವಧಿಯನ್ನು ಹೊಂದಿರುವ ರಾಜ್ಯ ವಿಧಾನಸಭೆಯನ್ನು ಅಮಾನತಿನಲ್ಲಿಡಲಾಗಿದೆ.
ಏತನ್ಮಧ್ಯೆ, ಸುಪ್ರೀಂ ಕೋರ್ಟ್ ನಿರ್ದೇಶನದ ಪ್ರಕಾರ ಮಣಿಪುರ ಜನಾಂಗೀಯ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಸಿಬಿಐ ತನಿಖೆ ನಡೆಸುತ್ತಿದೆ.
ಕೆಲ ದಿನಗಳ ಹಿಂದೆ ಮೈತೇಯಿ ಸಂಘಟನೆಯ ಅರಾಂಬೈ ಟೆಂಗೋಲ್ ನಾಯಕರ ಬಂಧನದ ವಿರುದ್ಧ ಮಣಿಪುರದಾದ್ಯಂತ ಬೃಹತ್ ಪ್ರತಿಭಟನೆಗಳು ನಡೆದವು. ಇದರಿಂದಾಗಿ ಆಡಳಿತವು ಇಂಫಾಲ್ ಕಣಿವೆಯ ಐದು ಜಿಲ್ಲೆಗಳಲ್ಲಿ ನಿಷೇಧಾಜ್ಞೆಗಳನ್ನು ವಿಧಿಸಿ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿತ್ತು.
2023ರ ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದ ವಿವಿಧ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಐವರು ನಾಯಕರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಜಮ್ಮು ಕಾಶ್ಮೀರ ಕಂದಾಯ ಇಲಾಖೆ ಪರೀಕ್ಷೆಯಿಂದ ಉರ್ದು ಭಾಷೆ ಕೈಬಿಡಲು ಬಿಜೆಪಿ ಒತ್ತಾಯ


