ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಗುರಿಯಾಗಿ ದೋಷಿ ಎಂದು ಪರಿಗಣಿಸ್ಪಟ್ಟಿರುವ ಪ್ರಶಾಂತ್ ಭೂಷಣ್ ಪರವಾಗಿ ಬೆಂಗಳೂರಿನ ಹಲವಾರು ಕಡೆ ಪ್ರತಿಭಟನೆಗಳು ದಾಖಲಾಗಿವೆ.
ಇಂದು ಭೂಷಣ್ ಅವರ ಶಿಕ್ಷೆಯ ಪ್ರಮಾಣದ ಕುರಿತು ವಿಚಾರಣೆ ನಡೆಯುತ್ತಿರುವುದರಿಂದ ದನಿಯಿಲ್ಲದವರ ದನಿ ಪ್ರಶಾಂತ್ ಭೂಷಣ್ ಜೊತೆ ನಾವಿದ್ದೇವೆ ಎಂದು ಸಾವಿರಾರು ಜನರು ಬೀದಿಗಿಳಿದಿದ್ದಾರೆ.
ಇದನ್ನೂ ಒದಿ: ಕ್ಷಮೆಯಾಚಿಸುವುದಿಲ್ಲ, ಖುಷಿಯಿಂದ ಶಿಕ್ಷೆ ಸ್ವೀಕರಿಸುತ್ತೇನೆ: ಪ್ರಶಾಂತ್ ಭೂಷಣ್
ಬೆಂಗಳೂರಿನ ಹಲವಾರು ಕಡೆ ಪ್ರತಿಭಟನೆಗಳು ನಡೆದಿದ್ದು, “ಹಮ್ ದೇಖೇಂಗೆ”(ನಾವೂ ನೋಡುತ್ತೇವೆ) ಎಂಬ ಬಿತ್ತಿಪತ್ರಗಳನ್ನು ಹಿಡಿದ ಹಲವಾರು ಸಾಮಾಜಿಕ ಕಾರ್ಯಕರ್ತರು ಪ್ರಶಾಂತ್ ಭೂಷಣ್‌ಗೆ ಬೆಂಬಲ ವ್ಯಕ್ತಪಡಿಸಿದರು. ಬೆಂಗಳೂರು ನಗರ ಜಿಲ್ಲೆಯ ಬಾಗಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವರು ಸಾಮಾಜಿಕ ಕಾರ್ಯಕರ್ತರು ಕೊರೊನಾ ಮಾರ್ಗಸೂಚಿಯನ್ನು ಪಾಲಿಸಿಕೊಂಡು ಪ್ರಶಾಂತ್ ಭೂಷಣ್ ಪರ ನಾವು ಇದ್ದೇವೆ ಎಂದು ಪ್ರತಿಭಟನೆ ನಡೆಸಿದರು.

ಬೆಂಗಳೂರಿನ ಸಂಜಯ್ ನಗರ ವಾರ್ಡ್‌ನ ಭೂಪಸಂದ್ರ ಮುಖ್ಯ ರಸ್ತೆಯಲ್ಲಿ ಹಲವರು ಜನರು ಪ್ರಶಾಂತ್ ಭೂಷಣ್ ಪರವಾಗಿ ದನಿಯೆತ್ತಿದರು.


ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಆತ್ಮಸಾಕ್ಷಿಯ ಸ್ವಾತಂತ್ರ್ಯಕ್ಕಾಗಿ ಪ್ರಶಾಂತ್ ಭೂಷಣ್ ಪರ ನಾವು ಇದ್ದೇವೆ ಎಂದು ಬೆಂಗಳೂರು ನಗರದ ಯಲಚೇನಹಳ್ಳಿ ವಾರ್ಡ್‌ನಲ್ಲಿ ಸಾಮಾಜಿಕ ಕಾರ್ಯಕರ್ತರು ಬೆಂಬಲ ವ್ಯಕ್ತಪಡಿಸಿದರು.

ಬೆಂಗಳೂರು ನಗರ ಜಿಲ್ಲೆಯ ಸೂಲಿಕೆರೆ ಗ್ರಾಮ ಪಂಚಾಯಿತಿಯ ಸಾಮಾಜಿಕ ಕಾರ್ಯಕರ್ತರು ಸಂವಿಧಾನದ ಆಶಯಗಳ ರಕ್ಷಣೆಗಾಗಿ ಪ್ರಶಾಂತ್ ಭೂಷಣ್ ಪರ ನಾವಿದ್ದೇವೆ ಎಂದು ಘೋಷಿಸಿದರು.

ಬೆಂಗಳೂರು ನಗರದ ಪಾದರಾಯನಪುರದಲ್ಲಿ ನೂರಾರು ಜನರು ಪ್ರಶಾಂತ್ ಭೂಷಣ್ ಪರ ನಿಂತು ತಮ್ಮ ಪ್ರತಿಭಟನೆಯನ್ನು ದಾಖಲಿಸಿದರು.



ಪ್ರಸ್ತುತ ನಡೆಯುತ್ತಿವ ವಿಚಾರಣೆಯಲ್ಲಿ ಪ್ರಶಾಂತ್ ಭೂಷಣ್, “ಸಂವಿಧಾನದ ರಕ್ಷಣೆ ಎನ್ನುವುದು ವ್ಯಕ್ತಿಗತವಾಗಿ ಹಾಗೂ ವೃತ್ತಿಯಿಂದ ಬರಬೇಕು. ಈ ದಿಸೆಯಲ್ಲಿ ಯಾವುದು ನನ್ನ ಆದ್ಯ ಕರ್ತವ್ಯ ಎಂದು ಭಾವಿಸಿದ್ದೇನೆಯೋ ಅದರ ಒಂದು ಸಣ್ಣ ಪ್ರಯತ್ನ ನನ್ನ ಟ್ವೀಟ್‌ಗಳಾಗಿವೆ” ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ತನ್ನ ಹೇಳಿಕೆ ದಾಖಲಿಸಿದ ಪ್ರಶಾಂತ್ ಭೂಷಣ್, ತಾನು ಕ್ಷಮೆ ಕೇಳುವುದಿಲ್ಲ, ಶಿಕ್ಷೆ ಸ್ವೀಕರಿಸುತ್ತೇನೆ ಎಂದು ಮಹಾತ್ಮ ಗಾಂಧಿಯನ್ನು ಉಲ್ಲೇಖಿಸಿ ಘೋಷಿಸಿದ್ದಾರೆ. ಎರಡು ಮೂರು ದಿನಗಳ ಸಮಯ ನೀಡುತ್ತೇವೆ, ನಿಮ್ಮ ಹೇಳಿಕೆಯನ್ನು ಮರುಪರಿಶೀಲಿಸುತ್ತೀರಾ ಎಂಬ ನ್ಯಾಯಮೂರ್ತಿಗಳ ಮನವಿಗೆ ಯಾವುದೇ ಕಾರಣಕ್ಕೂ ನನ್ನ ಹೇಳಿಕೆಗಳಲ್ಲಿ ಬದಲಾವಣೆ ಇಲ್ಲ ಎಂದು ದಿಟ್ಟತೆ ಮೆರೆದಿದ್ದಾರೆ.
ಓದಿ: ನ್ಯಾಯಾಧೀಶರು ಹಾಗೂ ವಕೀಲರು ಸೇರಿದಂತೆ 3 ಸಾವಿರಕ್ಕೂ ಹೆಚ್ಚು ಜನರಿಂದ ಪ್ರಶಾಂತ್ ಭೂಷಣ್ ಪರ ಸಹಿ ಅಭಿಯಾನ


