ಮಹಾರಾಷ್ಟ್ರದಲ್ಲಿ ಮರಾಠಿ ಕಡ್ಡಾಯ, ಇತರ ಭಾಷೆ ಕಲಿಯುವುದು ವೈಯಕ್ತಿಕ ಆಯ್ಕೆ: ದೇವೇಂದ್ರ ಫಡ್ನವೀಸ್

ಮಹಾರಾಷ್ಟ್ರ ಸರ್ಕಾರವು ಎನ್‌ಇಪಿ 2020 ರ ಅಡಿಯಲ್ಲಿ ಹಿಂದಿಯನ್ನು ಮೂರನೇ ಭಾಷೆಯಾಗಿ ಕಡ್ಡಾಯಗೊಳಿಸಿದ ನಂತರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಶನಿವಾರ ಪ್ರತಿಕ್ರಿಯೆ ನೀಡಿದ್ದು, ಎಲ್ಲರೂ ಮರಾಠಿ ಕಲಿಯಬೇಕು. ಹೆಚ್ಚುವರಿ ಭಾಷೆಗಳನ್ನು ಕಲಿಯುವುದು ವೈಯಕ್ತಿಕ ಆಯ್ಕೆಯಾಗಿದೆ ಎಂದು ಪ್ರತಿಪಾದಿಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಫಡ್ನವೀಸ್, ಹಿಂದಿಗೆ ವಿರೋಧ ಮತ್ತು ಇಂಗ್ಲಿಷ್‌ಗೆ ಹೆಚ್ಚುತ್ತಿರುವ ಆದ್ಯತೆಯ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿ, ಮರಾಠಿಗೆ ಯಾವುದೇ ಸವಾಲನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದರು. “ಮಹಾರಾಷ್ಟ್ರದಲ್ಲಿ ಮರಾಠಿ ಭಾಷೆ ಕಡ್ಡಾಯವಾಗಿದೆ; ಎಲ್ಲರೂ ಅದನ್ನು ಕಲಿಯಬೇಕು. ಹೆಚ್ಚುವರಿಯಾಗಿ, ನೀವು … Continue reading ಮಹಾರಾಷ್ಟ್ರದಲ್ಲಿ ಮರಾಠಿ ಕಡ್ಡಾಯ, ಇತರ ಭಾಷೆ ಕಲಿಯುವುದು ವೈಯಕ್ತಿಕ ಆಯ್ಕೆ: ದೇವೇಂದ್ರ ಫಡ್ನವೀಸ್