ಒಕ್ಕೂಟ ಸರ್ಕಾರದ ವಿವಾದಿತ ಕೃಷಿ ಕಾಯ್ದೆಗಳು ರದ್ದಾಗಬೇಕೆಂದು ಮತ್ತು ಎಂಎಸ್‌ಪಿ ಖಾತ್ರಿಗಾಗಿ ಹೊಸ ಕಾನೂನಿಗೆ ಒತ್ತಾಯಿಸಿ ಸತತ ಒಂದು ವರ್ಷದಿಂದ ದೆಹಲಿಯ ಗಡಿಗಳಲ್ಲಿ ಮತ್ತು ದೇಶಾದ್ಯಂತ ನಡೆದ ಚಾರಿತ್ರಿಕ ರೈತ ಹೋರಾಟಕ್ಕೆ ಜಯ ಲಭಿಸಿದೆ. ದಿಟ್ಟ ರೈತ ಹೋರಾಟ ಎದುರು ಮಂಡಿಯೂರಿರುವ ನರೇಂದ್ರ ಮೋದಿ ಸರ್ಕಾರ ಕೊನೆಗೂ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ ಘೋಷಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇದು ಅನ್ಯಾಯದ ವಿರುದ್ಧ ಜಯ ಎಂದು ಕರೆದಿದ್ದಾರೆ.
“ಈ ದೇಶದ ಅನ್ನದಾತರು ತಮ್ಮ ಸತ್ಯಾಗ್ರಹದಿಂದ ಅಹಂಕಾರದ ತಲೆ ತಗ್ಗಿಸುವಂತೆ ಮಾಡಿದ್ದಾರೆ. ಅನ್ಯಾಯದ ವಿರುದ್ಧದ ಈ ವಿಜಯಕ್ಕೆ ಅಭಿನಂದನೆಗಳು! ಜೈ ಹಿಂದ್, ಜೈ ಹಿಂದ್ ರೈತ!” ಎಂದು ಹಿಂದಿಯಲ್ಲಿ ಅವರು ಟ್ವೀಟ್ ಮಾಡಿದ್ದಾರೆ.
देश के अन्नदाता ने सत्याग्रह से अहंकार का सर झुका दिया।
अन्याय के खिलाफ़ ये जीत मुबारक हो!जय हिंद, जय हिंद का किसान!#FarmersProtest https://t.co/enrWm6f3Sq
— Rahul Gandhi (@RahulGandhi) November 19, 2021
ಇದರೊಟ್ಟಿಗೆ ರಾಹುಲ್ ಗಾಂಧಿ ಈ ವರ್ಷದ ಜನವರಿ 14 ರಂದು ಮಾಧ್ಯಮಗಳೆದುರು ರೈತ ಹೋರಾಟ ಬೆಂಬಲಿಸಿ ಮಾತನಾಡಿದ್ದ ವಿಡಿಯೋವನ್ನು ಸಹ ಹಂಚಿಕೊಂಡಿದ್ದಾರೆ. ಅದರಲ್ಲಿ “ಬರೆದಿಟ್ಟುಕೊಳ್ಳಿ, ಒತ್ತಾಯದಿಂದ ಈ ಕಾಯ್ದೆಗಳನ್ನು ಕೇಂದ್ರ ಸರ್ಕಾರ ವಾಪಸ್ ಪಡೆಯುತ್ತದೆ” ಎಂದು ಆತ್ಮವಿಶ್ವಾಸದಿಂದ ಎಂದು ಅವರು ಮಾತನಾಡಿದ್ದರು. ಅದು ಇಂದು ನಿಜವಾದ ಹಿನ್ನೆಲೆಯಲ್ಲಿ ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಆ ವೈರಲ್ ವಿಡಿಯೋದಲ್ಲಿ, “ರೈತರ ಹೋರಾಟದ ಬಗ್ಗೆ ಅತೀವ ಹೆಮ್ಮೆಯೆನಿಸುತ್ತಿದೆ. ನಾನು ರೈತರನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ. ಮುಂದೆಯು ರೈತರೊಂದಿಗೆ ನಿಲ್ಲುತ್ತೇನೆ. ಅವರ ಹಕ್ಕೊತ್ತಾಯಗಳನ್ನು ಪಂಜಾಬ್ ಯಾತ್ರೆಯಲ್ಲಿ ಮುನ್ನೆಲೆಗೆ ತರುತ್ತೇನೆ. ಬರೆದಿಟ್ಟುಕೊಳ್ಳಿ, ನಾನು ಹೇಳುತ್ತೇನೆ, ಒತ್ತಾಯದಿಂದ ಈ ಕಾಯ್ದೆಗಳನ್ನು ಕೇಂದ್ರ ಸರ್ಕಾರ ವಾಪಸ್ ಪಡೆಯುತ್ತದೆ. ನಾನು ಹೇಳಿದ್ದನ್ನು ನೆನಪಿಟ್ಟುಕೊಳ್ಳಿ, ಧನ್ಯವಾದಗಳು” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
Important political victory for @RahulGandhi who did not budge in his support for agitating farmers pic.twitter.com/rqpdulhOwQ
— Swati Chaturvedi (@bainjal) November 19, 2021
ಇದು ರಾಹುಲ್ ಗಾಂಧಿಗೆ ಪ್ರಮುಖ ರಾಜಕೀಯ ಗೆಲುವು. ಅವರು ಯಾರಿಗೂ ಮಣಿಯದೆ ಧರಣಿ ನಿರತ ರೈತರ ಬೆಂಬಲಕ್ಕೆ ನಿಂತರು ಎಂದು ಪತ್ರಕರ್ತೆ ಸ್ವಾತು ಚತುರ್ವೇದಿಯವರು ಟ್ವಿಟರ್‌ನಲ್ಲಿ ಬರೆದಿದ್ದಾರೆ.
ಕೃಷಿ ಕಾನೂನುಗಳು, ನೋಟು ಅಮಾನ್ಯೀಕರಣ, ಭೂ ಸ್ವಾಧೀನ ಮಸೂದೆ, ಕರೋನಾ ಮತ್ತು ವ್ಯಾಕ್ಸಿನೇಷನ್, GST (ಗಬ್ಬರ್ ಸಿಂಗ್ ತೆರಿಗೆ). ರಾಹುಲ್ ಗಾಂಧಿ ಮೊದಲೇ ಹೇಳಿದ್ದ ಈ ಐದು ವಿಷಯಗಳು 100% ಸರಿಯಾಗಿದ್ದವು. ಅವರು ಮೋದಿಯವರಂತೆ ತಮ್ಮ ನಿಲುವನ್ನು ಎಂದಿಗೂ ಬದಲಾಯಿಸುವುದಿಲ್ಲ. ಅವರು ತನ್ನ ನಂಬಿಕೆಗಳಿಗೆ ಬದ್ಧನಾಗಿರುತ್ತಾರೆ ಮತ್ತು ಯಾವಾಗಲೂ ಸರಿ ಎಂದು ಸಾಬೀತುಪಡಿಸುತ್ತಾನೆ. ರಾಹುಲ್ ಗಾಂಧಿ ದೂರದೃಷ್ಟಿಯ ನಾಯಕ ಎಂದು ಕಾಂಗ್ರೆಸ್ ವಕ್ತಾರ ಶ್ರೀವತ್ಸ ಬರೆದಿದ್ದಾರೆ.
Things @RahulGandhi was 100% right about
?Farm Laws
?Demonetization
?Land Acquisition Bill
?Corona & Vaccination
?GST:Gabbar Singh TaxHe never changes his stand like Modi. He stands by his convictions & is always proven right.
Rahul Gandhi is a visionary leader. #RG24
— Srivatsa (@srivatsayb) November 19, 2021
ಮತ್ತಷ್ಟು ಜನರ ಅನಿಸಿಕೆಗಳು ಈ ಕೆಳಗಿನಂತಿವೆ.
Remember this speech @RahulGandhi in Parliament ..#FarmersProtest #DarGayaModi #जीता_किसान_हारा_अभिमान pic.twitter.com/x8o9WlItM5
— Niraj Bhatia (@bhatia_niraj23) November 19, 2021
Rahul Gandhi is the voice of our farmers.
Today our farmers won. pic.twitter.com/omkKA1nDCE
— Aaron Mathew (@AaronMathewINC) November 19, 2021
This is what Confidence means.
"Mark my words, Take it from me, The Government will be forced to take back the farm laws".
This is what Sh.@RahulGandhi ji had said in January this year. pic.twitter.com/RxbqzduLY5
— Javed Rashid Khan?? (@JavedRashid_INC) November 19, 2021
The extraordinary will, resolve and belief in people’s power!
That’s opposition for you!
That’s @RahulGandhi for everyone!#FarmersProtest pic.twitter.com/uIfiJCaMiG— Dr Pooja Tripathi (@Pooja_Tripathii) November 19, 2021
ಇದನ್ನೂ ಓದಿ: ಮೊದಲು ನಿರ್ಲಕ್ಷಿಸುತ್ತಾರೆ, ನಂತರ ನಗುತ್ತಾರೆ, ಕುಸ್ತಿಗೆ ಬರುತ್ತಾರೆ, ನೀನು ಗೆಲ್ಲುತ್ತೀಯ: ರೈತ ಹೋರಾಟದ ಪಾಠ



Jai farmer Jai Hind ??