ಮಾರುಕಟ್ಟೆ ನಿಯಮಗಳ ಉಲ್ಲಂಘನೆ ಆರೋಪದ ಮೇಲೆ ಅದಾನಿ ಎಂಟರ್‌ಪ್ರೈಸಸ್ ವಿರುದ್ಧದ ಪ್ರಕರಣದಿಂದ ಬಾಂಬೆ ಹೈಕೋರ್ಟ್ ಸೋಮವಾರ ಪ್ರಧಾನಿ ಮೋದಿ ಅವರ ಆಪ್ತ ಕೈಗಾರಿಕೋದ್ಯಮಿಗಳಾದ ಗೌತಮ್ ಅದಾನಿ ಮತ್ತು ಅವರ ಸಹೋದರ ರಾಜೇಶ್ ಅದಾನಿ ಅವರನ್ನು ಖುಲಾಸೆಗೊಳಿಸಿದೆ ಎಂದು ಬಾರ್ ಮತ್ತು ಬೆಂಚ್ ವರದಿ ಮಾಡಿದೆ. ಮಾರುಕಟ್ಟೆ ವಂಚನೆ ಪ್ರಕರಣ
ನ್ಯಾಯಮೂರ್ತಿ ಆರ್.ಎನ್. ಲಡ್ಡಾ ಅವರ ಏಕ ಪೀಠವು ಕಂಪನಿ ಮತ್ತು ಇಬ್ಬರು ಅದಾನಿಗಳನ್ನು ಪ್ರಕರಣದಿಂದ ಬಿಡುಗಡೆ ಮಾಡುವ ಮ್ಯಾಜಿಸ್ಟ್ರೇಟ್ ನಿರ್ಧಾರವನ್ನು ರದ್ದುಗೊಳಿಸಿದ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿತು. ಮಾರುಕಟ್ಟೆ ವಂಚನೆ ಪ್ರಕರಣ
ಸುಮಾರು 388 ಕೋಟಿ ರೂ.ಗಳ ಕಾನೂನುಬಾಹಿರ ಲಾಭವನ್ನು ಕಂಪೆನಿ ಮಾಡಿರುವ ಹಗರಣ ಇದಾಗಿದೆ ಎಂದು ಪಿಟಿಐ ಹೇಳಿದೆ. ಗಂಭೀರ ವಂಚನೆ ತನಿಖಾ ಕಚೇರಿ(ಎಸ್‌ಎಫ್‌ಐಒ)ಯ ವಿಚಾರಣೆ ಸಮಯದಲ್ಲಿ ಕಂಪನಿಯ ನಿಯಂತ್ರಕ ಅನುಸರಣೆ ಮತ್ತು ಹಣಕಾಸು ವಹಿವಾಟುಗಳಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿತ್ತು.
ಎಸ್‌ಎಫ್‌ಐಒ 2012 ರಲ್ಲಿ ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ ಮತ್ತು ಅದರ ಪ್ರವರ್ತಕರಾದ ಗೌತಮ್ ಅದಾನಿ ಮತ್ತು ರಾಜೇಶ್ ಅದಾನಿ ವಿರುದ್ಧ ಪ್ರಕರಣ ದಾಖಲಿಸಿತ್ತು. ನಂತರ ಅದು ಅದಾನಿ ಸೇರಿದಂತೆ 12 ಜನರ ವಿರುದ್ಧ ಆರೋಪಪಟ್ಟಿ ಸಲ್ಲಿಸಿತು. ಮುಂಬೈನ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಮೇ 2014 ರಲ್ಲಿ ಅವರನ್ನು ಪ್ರಕರಣದಿಂದ ಬಿಡುಗಡೆ ಮಾಡಿತು.
ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶದ ವಿರುದ್ದ ಎಸ್‌ಎಫ್‌ಐಒ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸೆಷನ್ಸ್ ನ್ಯಾಯಾಲಯ ನವೆಂಬರ್ 2019 ರಲ್ಲಿ ಮ್ಯಾಜಿಸ್ಟ್ರೇಟ್ ಆದೇಶವನ್ನು ರದ್ದುಗೊಳಿಸಿತು ಮತ್ತು ಸಂಸ್ಥೆಯು ಅದಾನಿ ಗ್ರೂಪ್‌ನಿಂದ ಕಾನೂನುಬಾಹಿರ ಲಾಭದ ಪ್ರಕರಣವನ್ನು ಹೂಡಿದೆ ಎಂದು ಹೇಳಿತ್ತು.
ಈ ಆದೇಶವನ್ನು ಪ್ರಶ್ನಿಸಿ ಕೈಗಾರಿಕಾ ಉದ್ಯಮಿ ಅದಾನಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಇದೀಗ ಹೈಕೋರ್ಟ್ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ರದ್ದು ಮಾಡಿ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಿದೆ. ಈ ಅರ್ಜಿಯನ್ನು ಅದಾನಿ ಎಂಟರ್‌ಪ್ರೈಸಸ್ 2019 ರಲ್ಲಿ ಸಲ್ಲಿಸಿತು. ಅದರ ನಂತರ ಅವರು ಸೆಷನ್ಸ್ ನ್ಯಾಯಾಲಯದ ತೀರ್ಪಿನ ಮೇಲೆ ತಡೆಯಾಜ್ಞೆ ಪಡೆದಿದ್ದರು. ಪ್ರಕರಣ ಬಾಕಿ ಇರುವಾಗಲೂ ತಡೆಯಾಜ್ಞೆ ಮುಂದುವರೆದಿತ್ತು.
ಸೋಮವಾರ ಹೈಕೋರ್ಟ್ ಅರ್ಜಿಯನ್ನು ಅನುಮತಿಸಿ ಇಬ್ಬರನ್ನು ಪ್ರಕರಣದಿಂದ ಬಿಡುಗಡೆ ಮಾಡಿದೆ. ವಿವರವಾದ ಆದೇಶದ ಪ್ರತಿ ಇನ್ನೂ ಲಭ್ಯವಿಲ್ಲ ಎಂದು ಬಾರ್ ಆಂಡ್ ಬೆಂಚ್ ವರದಿ ಮಾಡಿದೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ನಮ್ಮ ಮೆಟ್ರೋ ನೇಮಕಾತಿ ವಿವಾದ; ಸ್ಥಳೀಯರಿಗೆ ಆದ್ಯತೆ ನೀಡುವಂತೆ ಕನ್ನಡ ಪರ ಕಾರ್ಯಕರ್ತರ ಆಗ್ರಹ
ನಮ್ಮ ಮೆಟ್ರೋ ನೇಮಕಾತಿ ವಿವಾದ; ಸ್ಥಳೀಯರಿಗೆ ಆದ್ಯತೆ ನೀಡುವಂತೆ ಕನ್ನಡ ಪರ ಕಾರ್ಯಕರ್ತರ ಆಗ್ರಹ

