Homeಮುಖಪುಟ40ರ ದಶಕದ ಕನ್ನಡದ ಪ್ರಮುಖ ನಟ ರಾಜಾವಿಕ್ರಮ 'ಕೆಂಪರಾಜ ಅರಸ್'ರವರ ಸ್ಮರಣೆ

40ರ ದಶಕದ ಕನ್ನಡದ ಪ್ರಮುಖ ನಟ ರಾಜಾವಿಕ್ರಮ ‘ಕೆಂಪರಾಜ ಅರಸ್’ರವರ ಸ್ಮರಣೆ

- Advertisement -
- Advertisement -

ನಲವತ್ತರ ದಶಕದಲ್ಲಿನ್ನೂ ಕನ್ನಡ ಚಿತ್ರರಂಗ ನೆಲೆಕಂಡುಕೊಳ್ಳುತ್ತಿತ್ತು. ಈ ಸಂದರ್ಭದಲ್ಲಿ ಕೆಂಪರಾಜ ಅರಸು ಅಭಿನಯದ ಚಿತ್ರಗಳು ಕನ್ನಡ ಮಾತ್ರವಲ್ಲದೆ ದಕ್ಷಿಣ ಭಾರತದ ಇತರೆ ಚಿತ್ರರಂಗಗಳ ಗಮನ ಸೆಳೆದಿದ್ದವು. ಇಂದು (ಮೇ 18) ಅವರು ಅಗಲಿದ ದಿನ.

***

ಕನ್ನಡ ವಾಕ್ಚಿತ್ರ ಪರಂಪರೆ ಶುರುವಾಗಿದ್ದು 1934ರಲ್ಲಿ. ಆರಂಭದ ಎರಡು ದಶಕಗಳು ಕನ್ನಡ ಚಿತ್ರರಂಗಕ್ಕೆ ಕಲ್ಲುಮುಳ್ಳಿನ ಹಾದಿಯೇ. ಸ್ಟುಡಿಯೋ ಸೌಲಭ್ಯಗಳು ಇಲ್ಲದಿದ್ದುದು, ಬಂಡವಾಳದ ಕೊರತೆ, ತಂತ್ರಜ್ಞರ ಅಭಾವದ ಜೊತೆ ಚಿತ್ರ ನಿರ್ಮಿಸುವವರೂ ಇರಲಿಲ್ಲ. ಇಂತಹ ಸಂದರ್ಭದಲ್ಲಿ ನಲವತ್ತರ ದಶಕದ ಅವಧಿಯಲ್ಲಿ ತಯಾರಾದ ಕೆಲವು ಚಿತ್ರಗಳಲ್ಲಿ ಕೆಂಪರಾಜ ಅರಸು ಅವರು ನಾಯಕನಾಗಿ ನಟಿಸಿ ಗಮನ ಸೆಳೆದಿದ್ದರು. ಹಾಗಾಗಿ ಕನ್ನಡ ಸಿನಿಮಾ ನಾಯಕನಟರ ಪರಂಪರೆಯಲ್ಲಿ ಅವರ ಹೆಸರು ಕಡ್ಡಾಯವಾಗಿ ಪ್ರಸ್ತಾಪವಾಗುತ್ತದೆ.

ಮೈಸೂರು ಅರಸು ಕುಟುಂಬದವರು ಕೆಂಪರಾಜ ಅರಸ್, ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಡಿ.ದೇವರಾಜ ಅರಸು ಅವರ ಸಹೋದರ. ಗುಬ್ಬಿ ವೀರಣ್ಣನವರು ನಿರ್ಮಿಸಿದ ’ಜೀವನ ನಾಟಕ’ (1942) ಚಿತ್ರದೊಂದಿಗೆ ಕೆಂಪರಾಜ ಅರಸು ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು. ನಂತರ ’ಭಕ್ತ ರಾಮದಾಸ್’ (1948) ಚಿತ್ರದೊಂದಿಗೆ ನಿರ್ದೇಶನಕ್ಕೂ ಕೈ ಹಾಕಿದರು. ಅವರಿಗೆ `ರಾಜಾವಿಕ್ರಮ’ (1951) ಚಿತ್ರದ ಪಾತ್ರ ದೊಡ್ಡ ಹೆಸರು ತಂದುಕೊಟ್ಟಿತು. ಇದು ಅವರ ನಿರ್ಮಾಣ ಸಂಸ್ಥೆಯಡಿ ತಯಾರಾದ ಚಿತ್ರವೂ ಆಗಿದ್ದು ವಿಶೇಷ.

ಮುಂದೆ ’ಜಲದುರ್ಗ’, ’ನಳ ದಮಯಂತಿ’ ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿ, ನಟಿಸಿದರು. ’ಜಲದುರ್ಗ’, ಫ್ರೆಂಚ್ ಕಾದಂಬರಿ `ಕೌಂಟ್ ಆಫ್ ಮಾಂಟ್‍ಕ್ರಸ್ಟೋ’ ಆಧರಿಸಿದ ಸಿನಿಮಾ. `ಕೃಷ್ಣಲೀಲಾ’, `ಮಹಾನಂದ’ ಅರಸರ ಇತರ ಪ್ರಮುಖ ಚಿತ್ರಗಳಾಗಿವೆ. ಕರ್ನಾಟಕ ಚಲನಚಿತ್ರ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಉತ್ತಮ ಅಭಿವೃದ್ಧಿ ಕಾರ್ಯಕ್ರಮಗಳೊಂದಿಗೆ ಕನ್ನಡ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ್ದಾರೆ.

***

ಫೋಟೊ : ಬೆಂಗಳೂರು ಇಂಟರ್‌ನ್ಯಾಷನಲ್ ಹೋಟೆಲ್‍ನಲ್ಲಿ `ದೇವರ ಕಣ್ಣು’ ಚಿತ್ರದ ಸುದ್ದಿಗೋಷ್ಠಿ ಸಂದರ್ಭ. ಭಗವತಿ ಪ್ರೊಡಕ್ಷನ್ಸ್‌ನ ಪಾಲ್ ನಿರ್ಮಾಣದ ಚಿತ್ರವಿದು. ಹಿಂದೆ ಪಾಲ್, ಸಾಹಿತಿ ತ.ರಾ.ಸು. ಅವರ ’ಚಕ್ರತೀರ್ಥ’ ಕೃತಿಯನ್ನು ಆಧರಿಸಿ ಸಿನಿಮಾ ನಿರ್ಮಿಸಿದ್ದರು. ಪಾಲ್ ಆಹ್ವಾನದ ಮೇರೆಗೆ ತ.ರಾ.ಸು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಅವರೊಂದಿಗಿರುವವರು ನಟ, ನಿರ್ದೇಶಕ, ನಿರ್ಮಾಪಕ ಕೆಂಪರಾಜ ಅರಸು. ಆಗ ಅರಸು ಕರ್ನಾಟಕ ಚಲನಚಿತ್ರ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. (ಫೋಟೊ ಕೃಪೆ: ಪ್ರಗತಿ ಅಶ್ವತ್ಥ ನಾರಾಯಣ, ಜೆಪಿ)


ಇದನ್ನೂ ಓದಿ: ಭೋಜರಾಜರನ್ನು ನೋಡಲು ಬಂದ ಎನ್‍ಟಿಆರ್! : ‘ಕವಿರತ್ನ ಕಾಳಿದಾಸ’ ಚಿತ್ರೀಕರಣ ನೆನೆದ ಶ್ರೀನಿವಾಸಮೂರ್ತಿ 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್, ಕೆ. ಕವಿತಾಗೆ ನೋ ರಿಲೀಫ್‌: ನ್ಯಾಯಾಂಗ ಬಂಧನ ಮೇ 7ರವರೆಗೆ ವಿಸ್ತರಣೆ

0
ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕಿ ಕೆ ಕವಿತಾ ಅವರ ನ್ಯಾಯಾಂಗ ಬಂಧನವನ್ನು...