Homeಅಂಕಣಗಳುಅಶ್ಫಾಕುಲ್ಲಾ ಖಾನ್ ಎಂಬ ಅಪ್ಪಟ ದೇಶಪ್ರೇಮಿಯ ನೆನೆಯುತ್ತಾ: ಡಿ.ಉಮಾಪತಿ

ಅಶ್ಫಾಕುಲ್ಲಾ ಖಾನ್ ಎಂಬ ಅಪ್ಪಟ ದೇಶಪ್ರೇಮಿಯ ನೆನೆಯುತ್ತಾ: ಡಿ.ಉಮಾಪತಿ

ಅಶ್ಫಾಕ್ ಒಂದೊಮ್ಮೆ ರಷ್ಯಾದ ಕ್ರಾಂತಿಕಾರಿ ನಾಯಕ ವ್ಲಾದಿಮಿರ್ ಲೆನಿನ್‍ಗೆ ಪತ್ರ ಬರೆಯಬಯಸಿದ್ದ. ಆತ ಗಲ್ಲಿಗೇರುವ ಮುನ್ನ ಆತನ ಸಂದೇಶವನ್ನು ಸೆರೆಮನೆಯಿಂದ ಕದ್ದು ಹೊರ ಸಾಗಿಸಲಾಗಿತ್ತು.

- Advertisement -
- Advertisement -

ಅಶ್ಫಾಕುಲ್ಲಾ ಖಾನ್ ಬದುಕಿದ್ದಿದ್ದರೆ ಇದೇ ಅಕ್ಟೋಬರ್ 22ರಂದು ಅವರಿಗೆ 120 ವರ್ಷ ತುಂಬುತ್ತಿತ್ತು. ಉತ್ತರಪ್ರದೇಶದ ಶಹಜಹಾನಪುರ ಆತನ ಹುಟ್ಟೂರು. ಖಾನ್ ಬೆಳೆದದ್ದು ಗಾಂಧೀಜಿ ಬ್ರಿಟಿಷ್ ಸರ್ಕಾರಕ್ಕೆ ತೆರಿಗೆ ನೀಡದಂತೆ ಕರೆ ನೀಡಿ ಅಸಹಕಾರ ಚಳವಳಿ ಹೂಡಿದ್ದ ದಿನಗಳಲ್ಲಿ.

ಹಿಂದುಸ್ತಾನಿ ರಿಪಬ್ಲಿಕನ್ ಅಸೋಸಿಯೇಷನ್‍ನ (ಎಚ್.ಆರ್.ಎ) ಕ್ರಾಂತಿಕಾರಿ ತಲೆಯಾಳು ರಾಮಪ್ರಸಾದ್ ಬಿಸ್ಮಿಲ್ ಸಂಗಡ 1924ರಲ್ಲಿ ಕಾಕೋರಿ ರೈಲು ದರೋಡೆಯಲ್ಲಿ ಭಾಗವಹಿಸಿದ್ದ ಖಾನ್ ಕೇವಲ 27ನೆಯ ವಯಸ್ಸಿನಲ್ಲಿ ಬ್ರಿಟಿಷರ ನೇಣುಗಂಬಕ್ಕೆ ಕೊರಳೊಡ್ಡಿದ ಹುತಾತ್ಮ. ಬ್ರಿಟಿಷ್ ವಿರೋಧಿ ಬೆಂಕಿಯುಂಡೆ.
ಕಾಕೋರಿಯಿಂದ ಲಖ್ನೋಗೆ ರೈಲುಗಾಡಿಯಲ್ಲಿ ಸಾಗಿಸಲಾಗುತ್ತಿದ್ದ ಬ್ರಿಟಿಷ್ ಸರ್ಕಾರಿ ಖಜಾನೆಯನ್ನು ಲೂಟಿ ಮಾಡಿ, ಆ ಹಣದಿಂದ ಸ್ವಾತಂತ್ರ್ಯ ಹೋರಾಟಕ್ಕೆ ಬೇಕಾಗಿದ್ದ ಹತಾರುಗಳನ್ನು ಖರೀದಿಸುವುದು ಕಾಕೋರಿ ದರೋಡೆ ಹಿಂದಿನ ಕಾರ್ಯಸೂಚಿಯಾಗಿತ್ತು.

ಉರ್ದು ಕಾವ್ಯವೆಂದರೆ ಖಾನ್‍ಗೆ ಅಚ್ಚುಮೆಚ್ಚು. ವಾರಸಿ ಇಲ್ಲವೇ ಹಜರತ್ ಕಾವ್ಯನಾಮದೊಂದಿಗೆ ಬರೆಯುತ್ತಿದ್ದರು. ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಪಂಡಿತ್ ರಾಮಪ್ರಸಾದ್ ಬಿಸ್ಮಿಲ್ ಕೂಡ ಸ್ವಾತಂತ್ರ್ಯ ಹೋರಾಟದ ಕೆಚ್ಚಿಗೆ ಮತ್ತು ಉರ್ದು ಕವಿತೆಗೆ ಹೆಸರಾಗಿದ್ದವರು. ಅವರ ಉರ್ದು ಕಾವ್ಯಪ್ರತಿಭೆ ಮತ್ತು ಕಲಿತನದ ಕತೆಗಳನ್ನು ಎಳೆಯ ಖಾನ್ ತನ್ನ ಅಣ್ಣನಿಂದ ಕೇಳಿ ಅರಿತಿದ್ದ. ಅವಕ್ಕೆ ಮಾರುಹೋಗಿ ಅಭಿಮಾನಿಯೇ ಆಗಿಬಿಟ್ಟಿದ್ದ. ಚೌರಿಚೌರಾ ಹಿಂಸಾತ್ಮಕ ಘಟನೆಯ ನಂತರ ಗಾಂಧೀಜಿ ತಮ್ಮ ಅಸಹಕಾರ ಚಳವಳಿಯನ್ನು ವಾಪಸು ತೆಗೆದುಕೊಂಡಿದ್ದರು. ಅವರ ಈ ಹೆಜ್ಜೆ ಸಾವಿರಾರು ಯುವ ಕ್ರಾಂತಿಕಾರಿಗಳಿಗೆ ತೀವ್ರ ನಿರಾಶೆ ಉಂಟು ಮಾಡಿತ್ತು. ಅಹಿಂಸಾತ್ಮಕ ಹಾದಿ ಕುರಿತು ಅವರಲ್ಲಿ ಭ್ರಮನಿರಸನ ಮೂಡಿಸಿತ್ತು. ಈ ಪೈಕಿ ಅಶ್ಫಾಕುಲ್ಲಾ ಖಾನ್ ಕೂಡ ಒಬ್ಬನಾಗಿದ್ದ. ರಾಮಪ್ರಸಾದ್ ಬಿಸ್ಮಿಲ್ ಸಂಘಟನೆಯನ್ನು (ಎಚ್.ಆರ್.ಎ) ಸೇರಲು ತವಕಿಸಿದ. ಆದರೆ ಸೇರಿಸಿಕೊಳ್ಳಲು ಆರಂಭದಲ್ಲಿ ಬಿಸ್ಮಿಲ್ ಉತ್ಸುಕತೆ ತೋರಲಿಲ್ಲ. ಶಹಜಹಾನಪುರದ ಇತರೆ ಪಠಾಣ ಕುಟುಂಬಗಳಂತೆ ಖಾನ್ ಕುಟುಂಬ ಕೂಡ ಸಿರಿವಂತಿಕೆ ಸೂಸಿತ್ತು. ತಂದೆ ಕೊತ್ವಾಲ ಹುದ್ದೆಯಲ್ಲಿದ್ದರು. ಅಂತಿಮವಾಗಿ ಇಬ್ಬರನ್ನೂ ಹತ್ತಿರ ತಂದದ್ದು ಉರ್ದು ಕವಿತೆಯೆಡೆಗಿನ ಕಡುಪ್ರೇಮ ಮತ್ತು ತಾಯ್ನೆಲವನ್ನು ದಾಸ್ಯದಿಂದ ಬಿಡಿಸುವ ಪಣ ತೊಟ್ಟ ನಿಗಿನಿಗಿ ದೇಶಭಕ್ತಿ. ಬ್ರಾಹ್ಮಣ ಮತ್ತು ಮುಸ್ಲಿಮ್ ತರುಣರಿಬ್ಬರು ಪ್ರಸಿದ್ಧ ಪ್ರಾಣಸ್ನೇಹಿತರಾಗಿ ಇತಿಹಾಸ ಸೇರಿದರು.

PC : Facebook

ಬಂದೂಕು, ಬಾಂಬುಗಳಂತಹ ಹತಾರುಗಳ ಖರೀದಿಗೆ ಹಣ ಹೊಂದಿಸಲು ಇಬ್ಬರೂ ಹೂಡಿದ ಹಂಚಿಕೆ ಕಾಕೋರಿ ರೈಲು ದರೋಡೆ. 1925ರ ಆಗಸ್ಟ್ ಒಂಬತ್ತರ ದರೋಡೆಯ ನಂತರ ಇವರಿಗೆ ಭಯೋತ್ಪಾದಕರು ಎಂಬ ಹಣೆಪಟ್ಟಿ ಹಚ್ಚುತ್ತದೆ ಬ್ರಿಟಿಷ್ ಸರ್ಕಾರ. ಬೇಟೆಯಾಡಿ ಸೆರೆಹಿಡಿದು ಗಲ್ಲಿಗೇರಿಸಿದ ನಾಲ್ವರು ಕ್ರಾಂತಿಕಾರಿಗಳ ಪೈಕಿ ಬಿಸ್ಮಿಲ್ ಮತ್ತು ಖಾನ್ ಪ್ರಮುಖರು. ಉಳಿದಿಬ್ಬರು ರಾಜೇಂದ್ರನಾಥ ಲಾಹಿರಿ ಮತ್ತು ರೋಶನ್ ಸಿಂಗ್.

ಯುವಕ ಅಶ್ಫಾಕ್ ಒಂದೊಮ್ಮೆ ರಷ್ಯಾದ ಕ್ರಾಂತಿಕಾರಿ ನಾಯಕ ವ್ಲಾದಿಮಿರ್ ಲೆನಿನ್‍ಗೆ ಪತ್ರ ಬರೆಯಬಯಸಿದ್ದ. 1927ರ ಡಿಸೆಂಬರ್ 19ರಂದು ಗಲ್ಲಿಗೇರುವ ಮುನ್ನ ಆತನ ಸಂದೇಶವನ್ನು ಸೆರೆಮನೆಯಿಂದ ಕದ್ದು ಹೊರ ಸಾಗಿಸಲಾಗಿತ್ತು. ಸ್ವಾತಂತ್ರ್ಯದ ಜೊತೆಗೆ ಸಮಾನತೆ ಸಾಧಿಸುವುದೂ ಅಶ್ಫಾಕ್ ಆಸೆಯಾಗಿತ್ತು.

“ಬಡವರು ಸಂತಸದಿಂದ ಸಲೀಸಾಗಿ ಬಾಳುವೆ ಮಾಡಲು ಸಾಧ್ಯವಿರುವಂತಹ ಸ್ವಾತಂತ್ರ್ಯ ಹಿಂದೂಸ್ತಾನಕ್ಕೆ ಬೇಕಿದೆ. ವರ್ಕ್‍ಶಾಪಿನಲ್ಲಿ ಕೆಲಸ ಮಾಡುವ ಮೆಕ್ಯಾನಿಕ್ ಅಬ್ದುಲ್ಲಾ, ಚಪ್ಪಲಿ ಹೊಲೆಯುವ ಧನಿಯಾ ಹಾಗೂ ಸಾಧಾರಣ ರೈತರು ಲಖ್ನೋದ ನವಾಬರ ಅರಮನೆಯಲ್ಲಿ ಗಣ್ಯರ ಮುಂದಿನ ಸಾಲುಗಳ ಕುರ್ಚಿಗಳಲ್ಲಿ ಇದಿರುಬದಿರಾಗಿ ಕುಳಿತುಕೊಳ್ಳುವ ದಿನಗಳು ಬರಬೇಕೆಂದು ದೇವರಲ್ಲಿ ಪ್ರಾರ್ಥಿಸುವೆ. ಕಮ್ಯುನಿಸ್ಟರೊಂದಿಗೆ ನನ್ನ ಸಮಹಮತವಿದೆ. ಬಡರೈತರು ಮತ್ತು ಅಸಹಾಯಕ ಕಾರ್ಮಿಕರಿಗಾಗಿ ನನ್ನ ಹೃದಯ ಸದಾ ಅಳುತ್ತಿರುತ್ತದೆ. ಕಾಕೋರಿ ದರೋಡೆ ಪ್ರಕರಣದ ನಂತರ ತಲೆ ಮರೆಸಿಕೊಂಡು ತಿರುಗುತ್ತಿದ್ದಾಗ ಇಂತಹ ಕುಟುಂಬಗಳೊಂದಿಗೆ ವಾಸವಿದ್ದೆ. ಅವರ ಬವಣೆ ನನ್ನ ಕಣ್ಣುಗಳ ತೇವವಾಗಿಸಿತ್ತು. ನಮ್ಮ ಪೇಟೆ ಪಟ್ಟಣ ನಗರಗಳು ಥಳಗುಟ್ಟುವುದು ಇವರಿಂದಾಗಿಯೇ. ನಮ್ಮ ಗಿರಣಿಗಳು, ಕಾರ್ಖಾನೆಗಳು ನಡೆಯುವ ಹಿಂದಿನ ಶ್ರಮ ಇವರದೇ. ಪ್ರಪಂಚದ ಪ್ರತಿ ಕಾಮಗಾರಿಯ ಹಿಂದೆ ಇರುವುದು ಇವರದೇ ಬೆವರು. ಬೆಳೆಯುವ-ಉತ್ಪಾದಿಸುವ ಈ ಶ್ರಮಿಕರನ್ನು ದುಃಖ-ದುಸ್ಥಿತಿಗಳು ಬಿಡದೆ ಬೆಂಬತ್ತಿವೆ. ಅವರ ಈ ಕಷ್ಟ ಕಣ್ಣೀರಿನ ಮೂಲಕಾರಣ ಬಿಳಿತೊಗಲಿನ ಒಡೆಯರು ಮತ್ತು ಅವರ ಏಜೆಂಟರು. ಹಳ್ಳಿ ಹಳ್ಳಿಗೆ ಹೋಗಿ, ಗಿರಣಿ ಕಾರ್ಖಾನೆಗಳಿಗೆ ತೆರಳಿ ಅವರ ದುಸ್ಥಿತಿಯನ್ನು ಅಧ್ಯಯನ ಮಾಡಬೇಕು ಮತ್ತು ಅವರಲ್ಲಿ ರಾಜಕೀಯ ಎಚ್ಚರವನ್ನು ಮೂಡಿಸಬೇಕು” ಎಂಬುದು ಖಾನ್‍ನ ಅಂತಿಮ ಸಂದೇಶವಾಗಿತ್ತು. ಆರ್ಥಿಕ ಸ್ವಾತಂತ್ರ್ಯದ ಜೊತೆ ಜೊತೆಗೆ ಸಾಮಾಜಿಕ-ಸಾಂಸ್ಕೃತಿಕ ಸಮಾನತೆಯೂ ಈ ಸಂದೇಶದಲ್ಲಿ ಸೇರಿತ್ತು ಎಂಬುದನ್ನು ಗಮನಿಸಬೇಕಿದೆ.

ಎಲ್ಲ ಬಗೆಯ ಪರಕೀಯ ಆಳ್ವಿಕೆ ನ್ಯಾಯಬಾಹಿರ. ಅಂಚಿನಲ್ಲಿ ಜೋತುಬಿದ್ದು ಜೀವ ಹಿಡಿದ ದೀನ ದರಿದ್ರರ ಹಕ್ಕುಗಳನ್ನು ಮಾನ್ಯ ಮಾಡದಿರುವ, ಬಂಡವಾಳಶಾಹಿಗಳು ಮತ್ತು ಜಮೀನುದಾರರ ಹಿತವನ್ನು ಕಾಪಾಡುವ, ಕಾರ್ಮಿಕರು ಮತ್ತು ರೈತರ ಸಮಾನ ಭಾಗವಹಿಸುವಿಕೆ ಇಲ್ಲದಿರುವ ಹಾಗೂ ಯಥಾಸ್ಥಿತಿವಾದಿ ತಾರತಮ್ಯಗಳು ಮತ್ತು ವಿಶೇಷಾಧಿಕಾರಗಳನ್ನು ಕಾಪಾಡಲು ಕಾಯಿದೆ ಕಾನೂನು ಮಾಡುವ ಯಾವುದೇ ಸರ್ಕಾರ ಕೂಡ ನ್ಯಾಯಬಾಹಿರ. ಭಾರತ ಸ್ವತಂತ್ರ ದೇಶವಾಗಿ ನಮ್ಮದೇ ಜನರ ಸರ್ಕಾರ ಬಂದ ನಂತರವೂ ಬಡವರು-ಬಲ್ಲಿದರು, ಉಳುವವರು-ಜಮೀನುದಾರರ ನಡುವಣ ತಾರತಮ್ಯ ಎಂದಿನಂತೆ ಕೊನೆಸಾಗಿದರೆ ಅದಕ್ಕಿಂತ ಹೀನಾಯ ಮತ್ತೊಂದೇನಿದೆ. ಸಮಾನತೆ ಎಂಬುದು ನೆಲೆಸುವ ತನಕ ಸ್ವಾತಂತ್ರ್ಯವನ್ನು ನೀಡಬೇಡ ಎಂದು ದೇವರಲ್ಲಿ ಪ್ರಾರ್ಥಿಸುವೆ. ಇಂತಹ ನಂಬಿಕೆಗಾಗಿ ನನಗೆ ಕಮ್ಯುನಿಸ್ಟ್ ಎಂಬ ಹಣೆಪಟ್ಟಿ ಹಚ್ಚಿದರೂ ಪರವಾಗಿಲ್ಲ. ನಾನು ದೇವರಲ್ಲಿ ನಂಬಿಕೆ ಉಳ್ಳವನು. ದೇವರು ಎಲ್ಲರನ್ನೂ ಸಮಾನರನ್ನಾಗಿಯೇ ಸೃಷ್ಟಿಸುತ್ತಾನೆ ಎಂಬ ಅಶ್ಫಾಕ್ ಮಾತುಗಳಲ್ಲಿ ಆವರ ಮಾನವೀಯ ಚಿಂತನೆ ಹರಳುಗಟ್ಟಿದೆ. ಹಿಂದೂ-ಮುಸ್ಲಿಮರನ್ನು ಒಡೆವ ಪಿತೂರಿಯ ಕುರಿತೂ ಆತ ಮಾತಾಡಿದ್ದರು. ಅಂತಹವರೇ ದೇಶದ ನಿಜ ಶತ್ರುಗಳು ಎಂದು ಬಣ್ಣಿಸಿದ್ದರು.

ಅಶ್ಫಾಕ್ ಶಂಕೆ- ಸಂದೇಹಗಳು ಇಂದಿನ ಭಾರತದಲ್ಲಿ ನಿಜರೂಪ ಧರಿಸಿ ಅಬ್ಬರಿಸಿವೆ.


ಇದನ್ನೂ ಓದಿ: ಬಹುಜನ ಭಾರತ: ಕೋಮುವಾದದ ಇರುಳ ಸೀಳುವ ಬೆಳಕು ಭಗತ್
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...

ಕೇಂದ್ರ ಸರ್ಕಾರದ ಎಚ್ಜರಿಕೆ ನಂತರ 3,500 ಪೋಸ್ಟ್‌ಗಳ ನಿರ್ಬಂಧ, 600 ಖಾತೆಗಳನ್ನು ಅಳಿಸಿದ ಎಕ್ಸ್ ಪ್ಲಾಟ್ ಫಾರ್ಮ್

ಮಹಿಳೆಯರನ್ನು ಗುರಿಯಾಗಿಸಿಕೊಂಡು AI- ರಚಿತವಾದ ಅಶ್ಲೀಲ ವಿಡಿಯೋಗಳ ವಿಷಯವನ್ನು ಕೇಂದ್ರವು ಗಮನಕ್ಕೆ ತಂದ ಕಠಿಣ ಕಾನೂನು ಜಾರಿಗೊಳಿಸುವಿಕೆಗೆ ಪ್ರತಿಜ್ಞೆ ಮಾಡಿದ ನಂತರ X 3,500 ಪೋಸ್ಟ್‌ಗಳು ಮತ್ತು 600 ಖಾತೆಗಳನ್ನು ಅಳಿಸಿಹಾಕಿದೆ.   ಅಶ್ಲೀಲ ವಿಷಯಗಳ...

ಮಾನವ ತಲೆಬುರುಡೆ, ಹುಲಿಚರ್ಮದಂತಹ ಕಸ್ಟಮೈಸ್ ಚರ್ಮ ಸೇರಿದಂತೆ ಹಲವು ಅನುಮಾನಾಸ್ಪದ ವಸ್ತುಗಳ ಮಾರಾಟ: ಮಾಂತ್ರಿಕನ ಬಂಧನ

ಬೆಂಗಳೂರು ವಲಯ ಘಟಕದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಉತ್ತರ ಬೆಂಗಳೂರಿನ ಭೂಪ್ಸಂದ್ರದ 39 ವರ್ಷದ ವ್ಯಕ್ತಿಯನ್ನು ವನ್ಯಜೀವಿ (ರಕ್ಷಣಾ) ಕಾಯ್ದೆ, 1972 ರ ಅಡಿಯಲ್ಲಿ ಬಂಧಿಸಿದೆ. "ಜನವರಿ 9 ರಂದು ನಡೆದ ಕಾರ್ಯಾಚರಣೆಯಲ್ಲಿ...

ದಲಿತ ಮಹಿಳೆಯನ್ನು ಕೊಂದು ಮಗಳ ಅಪಹರಣ : ಆರೋಪಿಯ ಬಂಧನ

ಉತ್ತರ ಪ್ರದೇಶದ ಮೀರತ್‌ನಲ್ಲಿ ದಲಿತ ಮಹಿಳೆಯನ್ನು ಕೊಂದು, ಆಕೆಯ ಮಗಳನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಶನಿವಾರ (ಜ.10) ಬಂಧಿಸಿದ್ದಾರೆ. ಬಂಧಿತನನ್ನು 22 ವರ್ಷದ ಪರಾಸ್ ಸೋಮ್ (ಪರಾಸ್ ಠಾಕೂರ್) ಎಂದು ಗುರುತಿಸಲಾಗಿದೆ. ರಜಪೂತ ಸಮುದಾಯದ...

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...