Homeಚಳವಳಿಪ್ರತಿಭಟನಾಕಾರರು ರೈತರಂತೆ ಕಾಣುತ್ತಿಲ್ಲ ಎಂದ ಕೇಂದ್ರ ಸಚಿವ ವಿ.ಕೆ.ಸಿಂಗ್; AAP ಆಕ್ಷೇಪ

ಪ್ರತಿಭಟನಾಕಾರರು ರೈತರಂತೆ ಕಾಣುತ್ತಿಲ್ಲ ಎಂದ ಕೇಂದ್ರ ಸಚಿವ ವಿ.ಕೆ.ಸಿಂಗ್; AAP ಆಕ್ಷೇಪ

- Advertisement -
- Advertisement -

ರೈತ ವಿರೋಧಿ ಕಾಯ್ದೆಗಳ ವಿರುದ್ದ ಪ್ರತಿಭಟನೆ ನಡೆಸುತ್ತಿರುವವರಲ್ಲಿ ಅನೇಕರು ರೈತರಂತೆ ಕಾಣುತ್ತಿಲ್ಲ. ಕಾನೂನಿನ ವಿರೋಧಕ್ಕಿಂತಲೂ ಕಮಿಷನ್ ಪಡೆಯುವವರು ಇದರ ಹಿಂದಿದ್ದಾರೆ ಎಂದು ಕೇಂದ್ರ ಸಚಿವ ವಿ.ಕೆ.ಸಿಂಗ್ ಹೇಳಿದ್ದಾರೆಂದು ಎಎಸ್‌ಐ ವರದಿ ಮಾಡಿದೆ.

ಪ್ರತಿಭಟನೆಯಲ್ಲಿ ಕಾಣುತ್ತಿರುವ ಚಿತ್ರಗಳ ಪೈಕಿ ಅನೇಕರು ರೈತರಂತೆ ಕಾಣುತ್ತಿಲ್ಲ. ರೈತರ ಹಿತದೃಷ್ಟಿಯಿಂದ ಏನು ಮಾಡಲಾಗಿದೆ, ಇದು ಕೃಷಿ ಕಾನೂನಿನೊಂದಿಗೆ ಆಕ್ಷೇಪ ಹೊಂದಿರುವ ರೈತರಲ್ಲ, ಬೇರೆಯವರು. ಕಾನೂನಿನ ವಿರೋಧಕ್ಕಿಂತಲೂ ಕಮಿಷನ್ ಪಡೆಯುವವರು ಈ ಪ್ರತಿಭಟನೆಯ ಹಿಂದಿದ್ದಾರೆ ಎಂದು ಅವರು ಹೇಳಿದ್ದಾರೆ.

ಇದನ್ನು ಓದಿ: ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ ಶಾಹೀನ್‌ಬಾಗ್ ಅಜ್ಜಿ ಬಿಲ್ಕೀಸ್‌ರನ್ನು ಬಂಧಿಸಿದ ಪೊಲೀಸರು!

ಆಮ್‌ ಆದ್ಮಿ ಪಕ್ಷ ಆಕ್ಷೇಪ

ಸಚಿವ ವಿ.ಕೆ. ಸಿಂಗ್ ಹೇಳಿಕೆಗೆ ಆಮ್ ಅದ್ಮಿ ಪಕ್ಷ ಪ್ರತ್ಯುತ್ತರ ನೀಡಿದ್ದು, ಪ್ರತಿಭಟನಾಕಾರರು ರೈತರಂತೆ ಕಾಣಿಸಿಕೊಳ್ಳಲು ಅವರು ನೇಗಿಲು ಹಾಗೂ ಎತ್ತಿನೊಂದಿಗೆ ಬರಬೇಕಾದ ಅಗತ್ಯವಿತ್ತೇ? ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಐತಿಹಾಸಿಕ ಚಳುವಳಿ ಪ್ರಾರಂಭವಾದಂದಿನಿಂದಲೂ ಬಿಜೆಪಿ ನಾಯಕರು ಪ್ರತಿಭಟನೆಯನ್ನು ಖಾಲಿಸ್ತಾನ್ ಚಳುವಳಿ ಎಂದೂ, ಕಾಂಗ್ರೆಸ್ ಪ್ರೇರಿತ ಎಂದೂ ಟೀಕೆ ಮಾಡುತ್ತಲೆ ಇದ್ದು ಇದು ದೇಶದಾದ್ಯಂತ ತೀವ್ರ ಟೀಕೆಗೆ ಗುರಿಯಾಗಿದೆ.

ನಿನ್ನೆಯಷ್ಟೇ ಚಳುವಳಿ ನಿರತ ರೈತರೊಂದಿಗೆ ಕೇಂದ್ರ ಸರ್ಕಾರ ಮಾತುಕತೆ ನಡೆಸಿ, ಕಾನೂನಿನ ಬಗ್ಗೆ ಚರ್ಚೆ ನಡೆಸಲು ಸಮಿತಿಯೊಂದನ್ನು ರಚಿಸಿ ಎಂದು ನೀಡಿದ ಸಲಹೆಯನ್ನು ರೈತರು ತಿರಸ್ಕರಿಸಿದ್ದು, ಜಾರಿಗೆ ತಂದಿರುವ ಕಾನೂನನ್ನು ರದ್ದುಗೊಳಿಸಲೇ ಬೇಕು ಎಂದು ಪಟ್ಟುಹಿಡಿದಿದ್ದಾರೆ. ನಾಳೆ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ.

ಇದನ್ನೂ ಓದಿ: ’ರೈತರು ದೇಶದ ಜೀವನಾಡಿ, ರೈತರೊಂದಿಗೆ ಇಡೀ ದೇಶ ನಿಲ್ಲಬೇಕು’- ಪಿಣರಾಯಿ ವಿಜಯನ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷ ಬಿತ್ತುವ, ವಿಭಜನೀಯ ಶಕ್ತಿಗಳನ್ನು ಸೋಲಿಸಲು ಒಗ್ಗಟ್ಟಾಗಬೇಕು: ಅಡ್ಮಿರಲ್ ರಾಮದಾಸ್ ಅವರ ಕೊನೆಯ ಸಂದೇಶ...

0
ಲೋಕಸಭೆ ಚುನಾವಣೆ ಹೊಸ್ತಿಲ್ಲಲ್ಲಿ ನೌಕಾಪಡೆಯ ಮಾಜಿ ಮುಖ್ಯಸ್ಥ ಅಡ್ಮಿರಲ್ ರಾಮ್‌ದಾಸ್ ಅವರ ಕೊನೆಯ ಕಾಲದ ಸಂದೇಶವನ್ನು ಅವರ ಪತ್ನಿ ಲಲಿತಾ ರಾಮದಾಸ್‌ ಸಾರ್ವಜನಿಕರ ಮುಂದಿಟ್ಟಿದ್ದು, ದ್ವೇಷಿಸುವ, ವಿಭಜನೀಯ, ಸರ್ವಾಧಿಕಾರಿಗಳನ್ನು ಸೋಲಿಸಲು ಒಗ್ಗಟ್ಟಾಗಬೇಕು ಎಂದು...