Homeಮುಖಪುಟಕರ್ನಲ್ ಸೋಫಿಯಾ ಖುರೇಷಿ ವಿರುದ್ಧ ಹೇಳಿಕೆ ನೀಡಿದ್ದ ಸಚಿವ ನಾಪತ್ತೆ | ಕಾಂಗ್ರೆಸ್‌ನಿಂದ ಪೋಸ್ಟರ್ ಬಿಡುಗಡೆ

ಕರ್ನಲ್ ಸೋಫಿಯಾ ಖುರೇಷಿ ವಿರುದ್ಧ ಹೇಳಿಕೆ ನೀಡಿದ್ದ ಸಚಿವ ನಾಪತ್ತೆ | ಕಾಂಗ್ರೆಸ್‌ನಿಂದ ಪೋಸ್ಟರ್ ಬಿಡುಗಡೆ

- Advertisement -
- Advertisement -

ಆಪರೇಷನ್ ಸಿಂಧೂರದ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದ ಕರ್ನಲ್ ಸೋಫಿಯಾ ಖುರೇಷಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಮಧ್ಯಪ್ರದೇಶದ ಸಚಿವ “ಕಾಣೆಯಾಗಿದ್ದಾರೆ” ಎಂದು ರಾಜ್ಯದ ಇಂದೋರ್ ಜಿಲ್ಲೆಯ ಕಾಂಗ್ರೆಸ್ ನಾಯಕರೊಬ್ಬರು ಪೋಸ್ಟರ್‌ಗಳನ್ನು ಹಂಚಿಕೊಂಡಿದ್ದಾರೆ. ಅವರ ಬಗ್ಗೆ ಮಾಹಿತಿ ನೀಡುವವರಿಗೆ ಬಹುಮಾನ ನೀಡುವುದಾಗಿ ಕೂಡಾ ಅವರು ಹೇಳಿದ್ದಾರೆ.

‘ಗುಮ್ಶುದಾ ಕಿ ತಲಾಶ್’ (ಕಾಣೆಯಾದ ವ್ಯಕ್ತಿಗಾಗಿ ಹುಡುಕಾಟ) ಎಂಬ ಶೀರ್ಷಿಕೆಯೊಂದಿಗೆ ಪೋಸ್ಟರ್‌ಗಳ ಮೂಲಕ, ಬುಡಕಟ್ಟು ವ್ಯವಹಾರಗಳ ಸಚಿವರ ಬಗ್ಗೆ “ಮಾಹಿತಿ” ನೀಡಿದವರಿಗೆ 11,000 ರೂ.ಗಳನ್ನು ನೀಡುವುದಾಗಿ ಕಾಂಗ್ರೆಸ್ ನಾಯಕ ಹೇಳಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

“ಸಚಿವ ಶಾ ಎಲ್ಲಿಯೂ ಕಾಣುತ್ತಿಲ್ಲ, ಸಂಪುಟ ಸಭೆಗಳಲ್ಲಿಯೂ ಕಾಣಿಸದ ಕಾರಣ ನಾವು ಈ ಪೋಸ್ಟರ್‌ಗಳನ್ನು ಹಾಕಿದ್ದೇವೆ” ಎಂದು ಅವರು ಶನಿವಾರ ಹೇಳಿದ್ದಾರೆ. ಅವರು ರಾಜೀನಾಮೆ ನೀಡುವವರೆಗೂ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ ಎಂದು ಜಿಲ್ಲೆಯಲ್ಲಿ ಪೋಸ್ಟರ್‌ಗಳನ್ನು ಹಾಕಿರುವ ಇಂದೋರ್ ಜಿಲ್ಲಾ ಕಾಂಗ್ರೆಸ್ ಸೇವಾ ದಳದ ಅಧ್ಯಕ್ಷ ವಿವೇಕ್ ಖಂಡೇಲ್ವಾಲ್ ಹೇಳಿದ್ದಾರೆ.

ಮೇ 12 ರಂದು ಜಿಲ್ಲೆಯ ಮೋಹ್ ಬಳಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಸಚಿವ ಶಾ ಅವರು, ಕರ್ನಲ್ ಸೋಫಿಯಾ ಖುರೇಷಿ ಅವರನ್ನು “ಭಯೋತ್ಪಾದಕ ಸಹೋದರಿ” ಎಂದು ಉಲ್ಲೇಖಿಸಿದ್ದರು.ಇದರ ನಂತರ ಅವರ ವಿರುದ್ಧ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು.

ಈ ನಡುವೆ, ಮಧ್ಯಪ್ರದೇಶ ಹೈಕೋರ್ಟ್ ಸ್ವಯಂಪ್ರೇರಿತವಾಗಿ ಅವರ ಹೇಳಿಕೆಯನ್ನು ಪರಿಗಣಿಸಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲು ಆದೇಶಿಸಿತು. ತರುವಾಯ, ಸುಪ್ರೀಂಕೋರ್ಟ್ ಅವರನ್ನು ಖಂಡಿಸಿ, ಈ ವಿಷಯದ ಬಗ್ಗೆ ಎಸ್‌ಐಟಿ ತನಿಖೆಗೆ ಆದೇಶಿಸಿದೆ.

ಇಲ್ಲಿ ಕ್ಲಿಕ್ ಮಾಡಿ

ಇದನ್ನೂಓದಿ:  ಬೆಳಗಾವಿ| ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮೇಕಳಿ‌ಯ ಲೋಕೇಶ್ವರ ಸ್ವಾಮಿ ಬಂಧನ

ಬೆಳಗಾವಿ| ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮೇಕಳಿ‌ಯ ಲೋಕೇಶ್ವರ ಸ್ವಾಮಿ ಬಂಧನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -