Homeಕರ್ನಾಟಕಮಧ್ಯಂತರ ಆದೇಶವನ್ನು ತಪ್ಪಾಗಿ ಅರ್ಥೈಸಿ ಮುಸ್ಲಿಂ ಬಾಲಕಿಯರ ಹಕ್ಕುಗಳ ಉಲ್ಲಂಘನೆ: ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗೆ ಬಹಿರಂಗ...

ಮಧ್ಯಂತರ ಆದೇಶವನ್ನು ತಪ್ಪಾಗಿ ಅರ್ಥೈಸಿ ಮುಸ್ಲಿಂ ಬಾಲಕಿಯರ ಹಕ್ಕುಗಳ ಉಲ್ಲಂಘನೆ: ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗೆ ಬಹಿರಂಗ ಪತ್ರ

- Advertisement -
- Advertisement -

ಹಿಜಾಬ್‌ ವಿಚಾರವಾಗಿ ರಾಜ್ಯ ಹೈಕೋರ್ಟ್‌ ನೀಡಿರುವ ಮಧ್ಯಂತರ ಆದೇಶವನ್ನು ತಪ್ಪಾಗಿ ಅರ್ಥೈಸಿ, ಮುಸ್ಲಿಂ ಬಾಲಕಿಯರು ಹಾಗು ಮಹಿಳೆಯರ ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆಯಾಗುತ್ತಿರುವ ಬಗ್ಗೆ ಬಹುತ್ವ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ ಅವರಿಗೆ ಬಹಿರಂಗ ಪತ್ರ ಬರೆಯಾಗಿದೆ.

ಹಿಜಾಬ್ ವಿಚಾರಕ್ಕೆ ಸಂಬಂಧಪಟ್ಟಂತೆ ರಾಜ್ಯದ ಉಚ್ಛ ನ್ಯಾಯಾಲಯ ಹೊರಡಿಸಿದ ಮಧ್ಯಂತರ ಆದೇಶದ ನಂತರ ಮುಸ್ಲಿಂ ಮಹಿಳೆಯರು ಹಾಗೂ ಬಾಲಕಿಯರ ಮೇಲೆ ನಡೆಸಲಾಗಿರುವಂತಹ ದುರುದ್ದೇಶಪೂರಿತ, ಅಮಾನವೀಯ ಹಾಗೂ ಅಗೌರವಯುತ ದಾಳಿಯ ಹಿನ್ನೆಲೆಯಲ್ಲಿ ಬಹಿರಂಗ ಪತ್ರವನ್ನು ಬರೆದಿದ್ದೇವೆ ಎಂದು ಬಹುತ್ವ ಕರ್ನಾಟಕ ತನ್ನ ಪತ್ರದಲ್ಲಿ ನ್ಯಾಯ ಮೂರ್ತಿಗಳಿಗೆ ಹೇಳಿದ್ದಾರೆ.

ಪತ್ರಕ್ಕೆ ಓದುಗರು ಕೂಡಾ ಸಹಿ ಹಾಕಬಹುದಾಗಿದ್ದು, ಸಹಿ ಹಾಕಲು ಇಲ್ಲಿ ಕ್ಲಿಕ್ ಮಾಡಿ.

“ಬಂಧುತ್ವ, ವ್ಯಕ್ತಿ ಗೌರವ, ಐಕ್ಯತೆ ಮತ್ತು ರಾಷ್ಟ್ರದ ಏಕತೆಯನ್ನು ಖಾತ್ರಿಪಡಿಸುವುದು ನಮ್ಮ ಸಂವಿಧಾನದ ಮೂಲಭೂತ ಉದ್ದೇಶಗಳಲ್ಲಿ ಒಂದಾಗಿದೆ. ಇಂದು ರಾಜ್ಯದ ವಿವಿಧ ಅಂಗಗಳು, ಮಾಧ್ಯಮ ಸಂಸ್ಥೆಗಳು ನ್ಯಾಯಾಲಯದ ಮಧ್ಯಂತರ ಆದೇಶವನ್ನು ದುರುಪಯೋಗಿಸಿ ಮುಸ್ಲಿಂ ಸಮುದಾಯದ ಸಾಂವಿಧಾನಿಕ ಮೌಲ್ಯಗಳು ಹಾಗೂ ಘನತೆಗೆ ಹಾನಿ ತರುವಲ್ಲಿ ತೊಡಗಿವೆ. ಆದರೆ ಇಂದು ನಮ್ಮ ಸಾಂವಿಧಾನಿಕ ಮೌಲ್ಯಗಳನ್ನು ಬಹಿರಂಗವಾಗಿ ಉಲ್ಲಂಘಿಸುತ್ತಿದ್ದರೂ ಸಹ ನ್ಯಾಯಾಲಯಗಳು ವಹಿಸಿರುವ ಸಂಪೂರ್ಣ ಮೌನ ನಮ್ಮಲ್ಲಿ ಆಘಾತ ಹಾಗೂ ಆತಂಕವನ್ನು ಸೃಷ್ಟಿಸಿದೆ” ಎಂದು ಪತ್ರದಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.

“ಫೆಬ್ರವರಿ 4 ರಂದು ರಾಜ್ಯದ ವಿವಿಧ ಜಿಲ್ಲೆಗಳ ಶಾಲೆಗಳಲ್ಲಿ, ಹಿಜಾಬ್‌‌‌ ಹಾಗೂ ಬುರ್ಖಾಗಳನ್ನು ಧರಿಸಿ ಬರುವಂತಹ ಮುಸ್ಲಿಂ ಶಿಕ್ಷಕಿಯರು ಹಾಗೂ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಿಸಲಾಗುತ್ತಿದೆ. ಶಾಲೆಯ ಹೊರಗೆ, ಬಹಿರಂಗವಾಗಿ ಎಲ್ಲರ ಎದುರಿಗೆ ಹಿಜಾಬ್ ಹಾಗೂ ಬುರ್ಖಾಗಳನ್ನು ತೆಗೆಯುವಂತೆ ಸೂಚಿಸಲಾಗುತ್ತಿದೆ. ಜಿಲ್ಲಾಡಳಿತಗಳು, ಸರ್ಕಾರಿ ಇಲಾಖೆಗಳು, ಸಚಿವರು ಹಾಗೂ ಮಾಧ್ಯಮಗಳು, ಶಾಲೆಗಳು ಒಳಗೊಂಡಂತೆ ಎಲ್ಲಾ ಶೈಕ್ಷಣಿಕ ಸಂಸ್ಥೆಗಳಲ್ಲಿಯೂ ಹಿಜಾಬ್ ಧರಿಸುವುದನ್ನು ನಿರ್ಬಂಧಿಸಿರುವ ಕುರಿತು ನ್ಯಾಯಾಲಯದ ಮಧ್ಯಂತರ ಆದೇಶವನ್ನು ವ್ಯಾಖ್ಯಾನಿಸಿರುವ ರೀತಿಯ ಹಿನ್ನೆಲೆಯಲ್ಲಿ ಈ ಅಗೌರವ ಹಾಗೂ ಸಾರ್ವಜನಿಕ ಅವಮಾನವನ್ನು ನಡೆಸಲಾಗುತ್ತಿದೆ” ಎಂದು ಪತ್ರವು ಉಲ್ಲೇಖಿಸಿದೆ.

ಮಾಧ್ಯಮಗಳಲ್ಲಿ ವರದಿ ಮಾಡಿರುವ ಘಟನಾವಳಿಗಳ ವಿವರಗಳನ್ನು ಕೂಡಾ ಪತ್ರವು ನ್ಯಾಯಾಲಯದ ಗಮನಕ್ಕೆ ತಂದಿದೆ.

“ನ್ಯಾಯಾಲಯದ ಮಧ್ಯಂತರ ಆದೇಶವು ಕಾಲೇಜು ಅಭಿವೃದ್ಧಿ ಸಮಿತಿಗಳು ವಿದ್ಯಾರ್ಥಿಗಳ ಡ್ರೆಸ್ ಕೋಡ್ ಅಥವಾ ಸಮವಸ್ತ್ರವನ್ನು ಸೂಚಿಸಿರುವ ಸಂಸ್ಥೆಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ಸ್ಪಷ್ಟವಾಗಿ ಹೇಳುತ್ತದೆ. ಈ ಆದೇಶವು ಶಾಲಾ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಅಥವಾ ಕಾಲೇಜು ವಿದ್ಯಾರ್ಥಿಗಳಿಗೆ ಯಾವುದೇ ಕಾಲೇಜು ಅಭಿವೃದ್ಧಿ ಸಮಿತಿಗಳು ಇಲ್ಲದಿರುವಲ್ಲಿ ಅಥವಾ ಅಭ್ಯಾಸ ಅಥವಾ ನಿಯಮದ ಪ್ರಕಾರ ಹಿಜಾಬ್ ಅನ್ನು ಅನುಮತಿಸಿದರೆ ಅದು ಅನ್ವಯಿಸುತ್ತದೆ ಎಂದು ಆದೇಶದಲ್ಲಿ ಎಲ್ಲಿಯೂ ಸೂಚಿಸಿಲ್ಲ” ಎಂದು ಪತ್ರವು ಉಲ್ಲೇಖಿಸಿದೆ.

“ಹೀಗಿದ್ದರೂ, ಈ ಆದೇಶವನ್ನು ರಾಜ್ಯದಾದ್ಯಂತ ಎಲ್ಲಾ ಶೈಕ್ಷಣಿಕ ಸಂಸ್ಥೆಗಳಲ್ಲಿಯೂ ಹಿಜಾಬ್ ಅನ್ನು ಖಡಾಖಂಡಿತವಾಗಿ ನಿರ್ಬಂಧಿಸಲಾಗಿರುವುದಾಗಿ ಬಿಂಬಿಸಲಾಗಿದೆ. ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳು ಹಾಗೂ ಕಾಲೇಜುಗಳಲ್ಲಿಯೂ ಹಿಜಾಬ್ ಅನ್ನು ನಿರ್ಬಂಧಿಸಿರುವುದಾಗಿ ಜಿಲ್ಲಾಡಳಿತಗಳು ಮೌಖಿಕ ಸೂಚನೆಯನ್ನು ನೀಡಿರುವುದಾಗಿ ತಿಳಿದು ಬಂದಿದೆ.

ಸುದ್ದಿ ಚಾನೆಲ್‌ಗಳು ನಿಮ್ಮ ಆದೇಶವನ್ನು ಕಡ್ಡಾಯವಾಗಿ ‘ಅನುಷ್ಠಾನ’ಗೊಳಿಸಬೇಕೆಂದು ಬೊಬ್ಬೆಯಿಟ್ಟು, ಕ್ಯಾಮೆರಾಗಳೊಂದಿಗೆ ಶಾಲಾ ತರಗತಿ ಕೊಠಡಿಗಳ ಒಳಗೆ ಹೋಗಿ ಹಿಜಾಬ್ ಧರಿಸಿರುವಂತಹ ಅಪ್ರಾಪ್ತ ವಯಸ್ಕ ಬಾಲಕಿಯರ ಮುಖಗಳನ್ನು ಪದೇ ಪದೇ ತೋರಿಸುತ್ತಿವೆ. ಈ ಮೂಲಕ ನ್ಯಾಯಾಲಯದ ಮಧ್ಯಂತರ ಆದೇಶವನ್ನು ಧಿಕ್ಕರಿಸುತ್ತಿರುವಂತೆ ಬಿಂಬಿಸುವ ಮೂಲಕ ಈಗಾಗಲೇ ಆತಂಕ ಸೃಷ್ಟಿಯಾಗಿರುವ ವಾತಾವರಣದಲ್ಲಿ ಮತ್ತಷ್ಟು ಭಯವನ್ನು ಸೃಷ್ಟಿಸುತ್ತಿವೆ. ಈ ವ್ಯತಿರಿಕ್ತ ಪ್ರಚಾರದಿಂದ ಭಯದ ಹಾಗು ಆತಂಕದ ವಾತಾವರಣ ಸೃಷ್ಟಿಯಾಗಿದೆ” ಎಂದು ಪತ್ರವು ಆತಂಕ ವ್ಯಕ್ತಪಡಿಸಿದೆ.

“ಕೆಲವು ಶಾಲೆಗಳು ವಿದ್ಯಾರ್ಥಿನಿಯರು ಹಾಗೂ ಶಿಕ್ಷಕಿಯರನ್ನು ಶಾಲೆಯನ್ನು ಪ್ರವೇಶಿಸುವ ಮುಂಚೆಯೇ ಎಲ್ಲರ ಎದುರಿಗೆ ಹಿಜಾಬ್ ಹಾಗೂ ಬುರ್ಖಾಗಳನ್ನು ತೆಗೆಯುವಂತೆ ಸೂಚಿಸುತ್ತಿವೆ. ಹಿಜಾಬ್ ತೆಗೆಯಲು ನಿರಾಕರಿಸಿದಂತಹ ಕೆಲವು ವಿದ್ಯಾರ್ಥಿನಿಯರನ್ನು ಪರೀಕ್ಷೆಗಳನ್ನು ಬರೆಯದಿರುವಂತೆ ತಡೆಯಲಾಗಿದೆ. ಶಿವಮೊಗ್ಗದ ಒಂದು ಶಾಲೆಯಲ್ಲಿ ಫೆಬ್ರವರಿ 15ರಂದು ನಡೆದಂತಹ ಒಂದು ಅಮಾನವೀಯ ಘಟನೆಯಲ್ಲಿ ಓರ್ವ ಶಿಕ್ಷಕಿ ಒಂದು ಮಗುವನ್ನು ಶಾಲೆಯಿಂದ ಹೊರದೂಡಿದರು, ಈಟಿವಿ ಭಾರತ ಎಂಬ ಸುದ್ದಿ ವಾಹಿನಿಯ ವರದಿಗಾರ ವಿದ್ಯಾರ್ಥಿನಿಯನ್ನು ದೂಡಿದ ನಂತರ ತಮ್ಮ ಕ್ಯಾಮೆರಾದೊಂದಿಗೆ ಆ ಬಾಲಕಿಯನ್ನು ಹಿಂಬಾಲಿಸಿ ಚಿತ್ರೀಕರಿಸಿದ್ದಾರೆ” ಎಂದು ಶಿವಮೊಗ್ಗದಲ್ಲಿ ನಡೆದ ಘಟನೆಯ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

“ಫೆಬ್ರವರಿ 14 ಮತ್ತು 15ರಂದು ರಾಜ್ಯದ ಹಲವು ಕಡೆ ಮುಸ್ಲಿಂ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು, ರಾಜ್ಯದಲ್ಲಿ ಹಿಂದೆಂದೂ ಅನುಭವಿಸದೇ ಇರುವಂತಹ ಅವಮಾನವನ್ನು ಎದುರಿಸಿದ್ದು, ಕಿರುಕುಳಕ್ಕೀಡಾಗಿದ್ದಾರೆ. ನ್ಯಾಯಾಲಯದ ಮಧ್ಯಂತರ ಆದೇಶದ ತಪ್ಪು ವ್ಯಾಖ್ಯಾನದ ಫಲಿತಾಂಶವಾಗಿ, ಭಾರತದ ಸಂವಿಧಾನದ ಪರಿಚ್ಛೇದ 21 ಹಾಗೂ 21ಎ ಅಡಿ ಖಾತ್ರಿಪಡಿಸಿರುವಂತೆ, ಕರ್ನಾಟಕದ ಮುಸ್ಲಿಂ ಮಹಿಳೆಯರ ಧರ್ಮದ ಆಚರಣೆ, ಶಿಕ್ಷಣ ಹಾಗೂ ಘನತೆಯಂತಹ ಮೂಲಭೂತ ಹಕ್ಕುಗಳ ಸಂಪೂರ್ಣ ಉಲ್ಲಂಘನೆಗೆಯಾಗಿದೆ’‌’ ಎಂದು ಪತ್ರವು ಒತ್ತಿ ಹೇಳಿದೆ.

“ಕೋವಿಡ್ ಸಾಂಕ್ರಾಮಿಕದಿಂದಾಗಿ ದೀರ್ಘ ಕಾಲದವರೆಗೂ ಶಿಕ್ಷಣ ಸಂಸ್ಥೆಗಳು ಮುಚ್ಚಿದ್ದು ಈಗಷ್ಟೇ ಆರಂಭವಾಗಿವೆ. ಮೇಲಾಗಿ ವಾರ್ಷಿಕ ಪರೀಕ್ಷಾಪೂರ್ವ ಸಿದ್ಧತಾ ಪರೀಕ್ಷೆಗಳು ನಡೆಯುತ್ತಿರುವ ಶೈಕ್ಷಣಿಕ ವರ್ಷದ ಈ ನಿರ್ಣಾಯಕ ಸಮಯದಲ್ಲಿ ರಾಜ್ಯದಾದ್ಯಂತ ಹಿಜಾಬ್ ನಿರ್ಬಂಧಿಸಿರುವುದು ವಿದ್ಯಾರ್ಥಿಗಳಲ್ಲಿ ಗಂಭೀರ ಸ್ವರೂಪದ ಆತಂಕ ಹಾಗೂ ಕಷ್ಟದ ಸನ್ನಿವೇಶವನ್ನು ಸೃಷ್ಟಿಸಿದೆ. ಕೋವಿಡ್ ಪಿಡುಗಿನಿಂದಾಗಿ ವಿದ್ಯಾರ್ಥಿಗಳು ಎಲ್ಲಿಲ್ಲದ ವ್ಯಾಪಕ ರೀತಿಯಲ್ಲಿ ಶಾಲೆ ಬಿಟ್ಟಿರುವ ಪ್ರಕ್ರಿಯೆಯು ನಡೆಯುತ್ತಿರುವಾಗ, ಮಕ್ಕಳ ಶಿಕ್ಷಣಕ್ಕೆ ಕುಂದು ಬರದಂತೆ ನೋಡಿಕೊಳ್ಲುವುದು ಸರಕಾರದ ಕಾನೂನುಬದ್ಧ ಜವಾಬ್ದಾರಿಯಾಗಿರುತ್ತದೆ. ಆದರೆ ಸರಕಾರದ ಪ್ರಸ್ತುತ ಕ್ರಮಗಳಿಂದಾಗಿ ಬಾಲಕಿಯರು ಇನ್ನೂ ಹೆಚ್ಚು ಪ್ರಮಾಣದಲ್ಲಿ ಶಾಲೆಗೆ ಹೋಗುವುದನ್ನು ಬಿಡುತ್ತಿದ್ದಾರೆ” ಎಂದು ಪತ್ರವು ಹೇಳಿದೆ.

“ರಾಜ್ಯದಾದ್ಯಂತ ಮುಸ್ಲಿಂ ಮಹಿಳೆಯರು, ಬಾಲಕಿಯರು ಹಾಗೂ ಮಕ್ಕಳ ವಿರುದ್ಧದ ಈ ಅವಮಾನ ಮತ್ತು ಅಗೌರವದ ಸನ್ನಿವೇಶಗಳನ್ನು ಉಚ್ಛ ನ್ಯಾಯಾಲಯದ ಗಮನಕ್ಕೆ ಹಲವು ಬಾರಿ ತರಲಾಗಿದೆ. ಆದಾಗ್ಯೂ, ಈ ವಿಷಯದ ಕಡೆ ಗಮನ ನೀಡಿಲ್ಲ. ಸರಕಾರದಿಂದ ಮತ್ತು ಸುದ್ದಿ ಮಾಧ್ಯಮಗಳಿಂದ ಅಲ್ಪ ಸಂಖ್ಯಾತರ ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆ ಆಗದಂತೆ ನೋಡಿಕೊಳ್ಳುವಂತೆ ಸಂವಿಧಾನವು ನ್ಯಾಯಾಲಯಗಳಿಗೆ ಅಧಿಕಾರ ನೀಡುತ್ತದೆ. ಮಾನ್ಯ ಉಚ್ಛ ನ್ಯಾಯಾಲಯವು ಸಾಂವಿಧಾನಿಕ ಮೌಲ್ಯಗಳನ್ನು ರಕ್ಷಿಸುವ ತನ್ನ ಕರ್ತವ್ಯನ್ನು ಪೂರೈಸಬೇಕಾಗಿ ಮಾನ್ಯ ನ್ಯಾಯಾಲಯದ ಸಾಂವಿಧಾನಿಕ ಆತ್ಮಸಾಕ್ಷಿಯನ್ನು ಉಲ್ಲೇಖಿಸಿ ಮನವಿ ಮಾಡುತ್ತಿದ್ದೇವೆ. ಇಂತಹ ವ್ಯಾಪಕ ರೀತಿಯಲ್ಲಿ ನಡೆಯುತ್ತಿರುವ ಘನತೆ ಮತ್ತು ಸ್ವಾತಂತ್ರ್ಯದ ಉಲ್ಲಂಘನೆಗಳನ್ನು ಸಾಂವಿಧಾನಿಕ ಉಚ್ಛ ನ್ಯಾಯಾಲಯವು ಪ್ರೇಕ್ಷಕನಾಗಿರುವಂತಿಲ್ಲ” ಎಂದು ಪತ್ರವು ಉಲ್ಲೇಖಿಸಿದೆ.

‘ರಾಜ್ಯದಲ್ಲಿ ಸರ್ಕಾರ ಹಾಗೂ ಸುದ್ದಿ ಮಾಧ್ಯಮಗಳ ಕ್ರಮಗಳಿಂದಾಗಿ ಕೆಲವು ದಿನಗಳಿಂದ ಸಂಭವಿಸುತ್ತಿರುವ ಘಟನೆಗಳ ಹಿನ್ನೆಲೆಯಲ್ಲಿ ಮಾನ್ಯ ಉಚ್ಛ ನ್ಯಾಯಾಲಯದ ಈ ಉದ್ದೇಶಗಳನ್ನು ಎತ್ತಿ ಹಿಡಿಯಲಾಗಿಲ್ಲ ಎಂದು ಪತ್ರವು ಮತ್ತೊಮ್ಮೆ ನ್ಯಾಯಾಲಯದ ಮೂಲಕ ತಮ್ಮ ಗಮನಕ್ಕೆ ತರಲು ಬಯಸಿದ್ದೇವೆ ಎಂದು ತಿಳಿಸಿದ್ದು, “ನಮ್ಮ ಮಕ್ಕಳು ಹಾಗೂ ನಮ್ಮ ಸಹ ಮಹಿಳಾ ನಾಗರಿಕರ ವಿರುದ್ಧ ನಡೆಯುತ್ತಿರುವ ಈ ತೀವ್ರ ಅವಮಾನ ಮತ್ತು ಆತಂಕದ ಸನ್ನಿವೇಶ ಇನ್ನು ಮುಂದುವರೆಯುವಂತಿಲ್ಲ” ಎಂದು ಆಶಿಸಿದೆ.

ಮುಸ್ಲಿಮ್ ಮಕ್ಕಳು, ಬಾಲಕಿಯರು ಹಾಗೂ ಶಿಕ್ಷಕರು ಎದುರಿಸುತ್ತಿರುವಂತಹ ಅಗೌರವ ಮತ್ತು ಅವಮಾನದ ಕುರಿತು ಈ ಕೂಡಲೇ ಗಮನ ನೀಡುವಂತೆ ಪತ್ರವು ನ್ಯಾಯಾಲಯವನ್ನು ಕೋರಿದ್ದು, ಕೆಳಗಿನ ಅಂಶಗಳನ್ನು ಉಲ್ಲೇಖಿಸಿ ಕ್ರಮಗಳನ್ನು ಕೈಗೊಳ್ಳುವಂತೆ ಕೋರಿದೆ.

  • ಈ ಆದೇಶದ ವ್ಯಾಪ್ತಿಯ (ಸ್ಕೊಪ್ ) ಕುರಿತು ಕೂಡಲೇ ಸ್ಪಷ್ಟಪಡಿಸುವುದು.
  • ರಾಜ್ಯ ಶಿಕ್ಷಣ ಇಲಾಖೆಯ ಅಧಿಕಾರಿಗಳು , ಜಿಲ್ಲಾ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳಿಂದ ಆದೇಶದ ತಪ್ಪು ವ್ಯಾಖ್ಯಾನದ ಕುರಿತು ವಿಚಾರಣೆ ನಡೆಸಲು ನಿರ್ದೇಶಿಸುವುದು.
  • ಶಿಕ್ಷಣದ ಹಕ್ಕನ್ನು ನಿರಾಕರಿಸಿರುವಂತಹ ಮುಸ್ಲಿಂ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಪರಿಹಾರ ಒದಗಿಸುವುದು.
  • ಘನತೆಯ ಸಾಂವಿಧಾನಿಕ ತತ್ವಗಳು ಮತ್ತು ಖಾಸಗಿತನದ ಹಕ್ಕನ್ನು ಉಲ್ಲಂಘಿಸಿದಂತಹ ಮಾಧ್ಯಮಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶಿಸುವುದು.

ಪತ್ರಕ್ಕೆ ಓದುಗರು ಕೂಡಾ ಸಹಿ ಹಾಕಬಹುದಾಗಿದ್ದು, ಸಹಿ ಹಾಕಲು ಇಲ್ಲಿ ಕ್ಲಿಕ್ ಮಾಡಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
- Advertisment -

ಸ್ವಕ್ಷೇತ್ರ ತಿರುವನಂತಪುರದಲ್ಲಿ ಬಿಜೆಪಿ ಭರ್ಜರಿ ಗೆಲುವು : ‘ಪ್ರಜಾಪ್ರಭುತ್ವದ ಸೌಂದರ್ಯ’ ಎಂದ ಕಾಂಗ್ರೆಸ್ ಸಂಸದ ಶಶಿ ತರೂರ್

ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಇಂದು (ಡಿ.13) ಪ್ರಕಟಗೊಂಡಿದ್ದು, ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 45 ವರ್ಷಗಳ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌...

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ : ಯುಡಿಎಫ್‌ ಸ್ಪಷ್ಟ ಮೇಲುಗೈ

ಇಂದು (2025 ಡಿಸೆಂಬರ್ 13, ಶನಿವಾರ) ಪ್ರಕಟಗೊಂಡ ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಲ್ಲಿ ವಿರೋಧ ಪಕ್ಷಗಳ ಒಕ್ಕೂಟವಾದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸ್ಪಷ್ಟ ಮೇಲುಗೈ ಸಾಧಿಸಿದೆ. ಈ ಮೂಲಕ ರಾಜ್ಯ...

ಕೋಲ್ಕತ್ತಾ ಮೆಸ್ಸಿ ಕಾರ್ಯಕ್ರಮದಲ್ಲಿ ಗಲಾಟೆ | ಕ್ಷಮೆ ಯಾಚಿಸಿದ ಸಿಎಂ ಮಮತಾ ಬ್ಯಾನರ್ಜಿ, ತನಿಖೆಗೆ ಸಮಿತಿ ರಚನೆ; ಆಯೋಜಕನ ಬಂಧನ

ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಭೇಟಿಯ ವೇಳೆ ಶನಿವಾರ (ಡಿಸೆಂಬರ್ 13) ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಉಂಟಾದ ಗಲಾಟೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕ್ಷಮೆಯಾಚಿಸಿದ್ದು, ನಿವೃತ್ತ ನ್ಯಾಯಮೂರ್ತಿ...

ಮೆಸ್ಸಿ ನೋಡಲು 25 ಸಾವಿರ ರೂ. ಪಾವತಿಸಿದವರಿಗೆ ನಿರಾಶೆ; ಕೋಪಗೊಂಡ ಅಭಿಮಾನಿಗಳಿಂದ ಕ್ರೀಡಾಂಗಣದಲ್ಲಿ ದಾಂಧಲೆ

ಶನಿವಾರ ನಡೆದ ಲಿಯೋನೆಲ್ ಮೆಸ್ಸಿ ಅವರ ಬಹು ನಿರೀಕ್ಷಿತ "ಗೋಟ್ ಇಂಡಿಯಾ ಟೂರ್" ಕೋಲ್ಕತ್ತಾದಲ್ಲಿ ಅಸ್ತವ್ಯಸ್ತವಾಯಿತು. ಯುವ ಭಾರತಿ ಕ್ರಿರಂಗನ್‌ನಲ್ಲಿ ರೊಚ್ಚಿಗೆದ್ದ ಅಭಿಮಾನಿಗಳ ದಾಂಧಲೆಯಿಂದ ಕ್ರೀಡಾಂಗಣ ಅವ್ಯವಸ್ಥೆಗೆ ಒಳಗಾಯಿತು. ಸಾವಿರಾರು ಅಭಿಮಾನಿಗಳು ಅರ್ಜೆಂಟೀನಾದ...

ಡ್ರಗ್‌ ಪೆಡ್ಲರ್‌ಗಳ ಮನೆ ಒಡೆದು ಹಾಕುವ ಹೇಳಿಕೆ : ಪರಮೇಶ್ವರ್ ಮಾತಿಗೆ ಆತಂಕ ವ್ಯಕ್ತಪಡಿಸಿದ ಕಾಂಗ್ರೆಸ್ ಹಿರಿಯ ನಾಯಕ ಚಿದಂಬರಂ

"ಡ್ರಗ್‌ ಪೆಡ್ಲರ್‌ಗಳ ಬಾಡಿಗೆ ಮನೆಗಳನ್ನು ಒಡೆದು ಹಾಕುವ ಹಂತಕ್ಕೆ ಹೋಗಿದ್ದೇವೆ" ಎಂಬ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆಗೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಆತಂಕ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ...

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ: ಶಶಿ ತರೂರ್ ಕ್ಷೇತ್ರ ತಿರುವನಂತಪುರಂನಲ್ಲಿ ಬಿಜೆಪಿ ಮುನ್ನಡೆ

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ವಿಶೇಷವಾಗಿ ತಿರುವನಂತಪುರಂನಲ್ಲಿ ಭಾರತೀಯ ಜನತಾ ಪಕ್ಷದ ಸಾಧನೆಯನ್ನು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಶನಿವಾರ ಅಭಿನಂದಿಸಿದ್ದಾರೆ. ಜನರ ತೀರ್ಪನ್ನು ಗೌರವಿಸಬೇಕು ಎಂದು ಹೇಳಿದ್ದಾರೆ. ಎಕ್ಸ್‌ನಲ್ಲಿ ದೀರ್ಘ...

ಆಳಂದ ಮತಗಳ್ಳತನ | ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಸೇರಿ 7 ಮಂದಿ ವಿರುದ್ಧ ಎಸ್‌ಐಟಿ ಚಾರ್ಜ್‌ಶೀಟ್‌

ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತಗಳ್ಳತನ (ಚುನಾವಣಾ ಆಕ್ರಮ) ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ಆಳಂದದ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್...

ಉತ್ತರ ಪ್ರದೇಶ| ಗಸ್ತು ವಾಹನ ಹಳ್ಳಕ್ಕೆ ಉರುಳಿಸಿದ ಪಾನಮತ್ತ ಪೊಲೀಸರು; ಕ್ರೇನ್ ಚಾಲಕನ ಮೇಲೆ ಹಲ್ಲೆ

ಶುಕ್ರವಾರ (ಡಿಸೆಂಬರ್ 12) ರಾತ್ರಿ ಪೊಲೀಸರೊಬ್ಬರು ಕಾರಿನ ನಿಯಂತ್ರಣ ಕಳೆದುಕೊಂಡ ಬಳಿಕ '112' ಪೊಲೀಸ್ ಪ್ರತಿಕ್ರಿಯೆ ವಾಹನ (ಪಿಆರ್‌ವಿ) ಹಳ್ಳಕ್ಕೆ ಉರುಳಿದೆ. ವರದಿಗಳ ಪ್ರಕಾರ, ಘಟನೆಯ ಸಮಯದಲ್ಲಿ ಪೊಲೀಸರು ಪಾನಮತ್ತರಾಗಿದ್ದರು. ಕಾರ್ ಕಂದಕಕ್ಕೆ...

ಲಿಯೋನೆಲ್ ಮೆಸ್ಸಿ ಇಂಡಿಯಾ ಪ್ರವಾಸ; ಅಭೂತಪೂರ್ವ ಸ್ವಾಗತ ಕೋರಿದ ಕೋಲ್ಕತ್ತಾ ಅಭಿಮಾನಿಗಳು

ಇಂಡಿಯಾ ಪ್ರವಾಸ ಪ್ರಾರಂಭಿಸಿರುವ ಅರ್ಜೆಂಟೀನಾದ ಪುಟ್‌ಬಾಲ್‌ ತಾರೆ ಲಿಯೋನೆಲ್ ಮೆಸ್ಸಿ ಕೋಲ್ಕತ್ತಾಗೆ ಬಂದಿಳಿದಿದ್ದಾರೆ. ಶನಿವಾರ ಬೆಳಗಿನ ಜಾವ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳಿಂದ ಅವರಿಗೆ ಅಭೂತಪೂರ್ವ ಸ್ವಾಗತ ಕೋರಿದರು. ಅರ್ಜೆಂಟೀನಾದ ಸೂಪರ್‌ಸ್ಟಾರ್ ದುಬೈ...

ನಟಿಯ ಅಪಹರಣ, ಅತ್ಯಾಚಾರ ಪ್ರಕರಣ : ಆರು ಅಪರಾಧಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಮಲಯಾಳಂ ಮೂಲದ ಬಹುಭಾಷಾ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ (2017ರ ಪ್ರಕರಣ) ಆರು ಅಪರಾಧಿಗಳಿಗೆ ಇಪ್ಪತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ (ಡಿಸೆಂಬರ್ 12) ಕೇರಳ ನ್ಯಾಯಾಲಯ ಆದೇಶಿಸಿದೆ. ಡಿಸೆಂಬರ್...