ಮಂಗಳವಾರ ಉತ್ತರಪ್ರದೇಶದ ವಿಧಾನಸಭಾ ಸಭಾಂಗಣದಲ್ಲಿ ಶಾಸಕರೊಬ್ಬರು ಪಾನ್ ಮಸಾಲ ಉಗುಳಿರುವ ಘಟನೆ ನಡೆದಿದೆ. ಈ ಕುರಿತು ಮಾಹಿತಿ ಪಡೆದ ಸ್ಫೀಕರ್, ಸ್ವತಃ ಅವರೆ ಸ್ಥಳವನ್ನು ಸ್ವಚ್ಛಗೊಳಿಸಿದ್ದಾರೆ.
ಮಂಗಳವಾರ ಸದನ ಆರಂಭವಾಗುವ ಮೊದಲು ಸದಸ್ಯರನ್ನುದ್ದೇಶಿಸಿ ಮಾತನಾಡಿದ ಸತೀಶ್ ಮಹಾನಾ, ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ ಆ ಪ್ರದೇಶವನ್ನು ಸ್ವಚ್ಛಗೊಳಿಸಿದೆ ಎಂದು ಹೇಳಿದ್ದಾರೆ.
ವಿಡಿಯೋ ಮೂಲಕ ಶಾಸಕರು ಉಗುಳಿರುವ ಕೃತ್ಯದಲ್ಲಿ ಭಾಗಿಯಾಗಿರುವುದನ್ನು ನೋಡಿದ್ದೇನೆ. ಸಾರ್ವಜನಿಕ ಅವಮಾನವನ್ನು ತಪ್ಪಿಸಲು ಶಾಸಕರ ಹೆಸರನ್ನು ಹೇಳುವುದಿಲ್ಲ ಎಂದು ಸತೀಶ್ ಮಹಾನ ಅವರು ತಿಳಿಸಿದ್ದಾರೆ.
“ಇಂದು ಬೆಳಿಗ್ಗೆ, ನಮ್ಮ ವಿಧಾನಸಭಾ ಸಭಾಂಗಣದಲ್ಲಿ ಯಾರೋ ಸದಸ್ಯರು ಪಾನ್ ಮಸಾಲ ಜಿಗಿದು, ಉಗುಳಿದ್ದಾರೆ ಎಂಬ ಮಾಹಿತಿ ನನಗೆ ಸಿಕ್ಕಿತು. ಹಾಗಾಗಿ, ನಾನು ಇಲ್ಲಿಗೆ ಬಂದು ಅದನ್ನು ಸ್ವಚ್ಛಗೊಳಿಸಿದೆ. ನಾನು ವೀಡಿಯೊದಲ್ಲಿ ಶಾಸಕರನ್ನು ನೋಡಿದ್ದೇನೆ. ಆದರೆ ನಾನು ಯಾವುದೇ ವ್ಯಕ್ತಿಯನ್ನು ಅವಮಾನಿಸಲು ಬಯಸುವುದಿಲ್ಲ. ಆದ್ದರಿಂದ, ನಾನು ಅವರ ಹೆಸರನ್ನು ಬಹಿರಂಗಪಡಿಸುತ್ತಿಲ್ಲ. ಯಾರಾದರೂ ಹೀಗೆ ಮಾಡುವುದನ್ನು ನೋಡಿದರೆ, ಅವರನ್ನು ತಡೆಯಬೇಕು ಎಂದು ನಾನು ಎಲ್ಲಾ ಸದಸ್ಯರನ್ನು ಒತ್ತಾಯಿಸುತ್ತೇನೆ… ಈ ಸಭೆಯನ್ನು ಸ್ವಚ್ಛವಾಗಿಡುವುದು ನಮ್ಮ ಜವಾಬ್ದಾರಿ… ಶಾಸಕರು ಬಂದು ಅವರು ಇದನ್ನು ಮಾಡಿದ್ದಾರೆಂದು ಹೇಳಿದರೆ ಒಳ್ಳೆಯದು; ಇಲ್ಲದಿದ್ದರೆ, ನಾನು ಅವರಿಗೆ ಕರೆ ಮಾಡುತ್ತೇನೆ” ಎಂದು ಅವರು ಹೇಳಿದ್ದಾರೆ.
ಉತ್ತರಪ್ರದೇಶದ ಹಣಕಾಸು ಸಚಿವ ಸುರೇಶ್ ಕುಮಾರ್ ಖನ್ನಾ ಫೆಬ್ರವರಿ 20ರಂದು 2025-26ನೇ ಸಾಲಿನ ರಾಜ್ಯ ಬಜೆಟ್ ಅನ್ನು ಮಂಡಿಸಿದರು, ಇದು 2024-25ರ ಬಜೆಟ್‌ಗಿಂತ ಶೇ. 9.8 ರಷ್ಟು ಹೆಚ್ಚಾಗಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮೂಲಸೌಕರ್ಯ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸಿದ್ದಾರೆ ಎಂದು ಅವರು ಹೇಳಿದರು.
“ಈ ಬಜೆಟ್ 8,08,736 ಕೋಟಿ ರೂ.ಗಳಿಗಿಂತ ಹೆಚ್ಚಾಗಿದೆ, ಇದು 2024-25ರ ಬಜೆಟ್‌ಗಿಂತ ಶೇ. 9.8 ರಷ್ಟು ಹೆಚ್ಚಾಗಿದೆ. ಒಂದೆಡೆ, ಬಜೆಟ್ ಗಾತ್ರದಲ್ಲಿನ ಬೆಳವಣಿಗೆ ರಾಜ್ಯದ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ, ಮತ್ತೊಂದೆಡೆ, ಇದು ಡಬಲ್ ಎಂಜಿನ್ ಸರ್ಕಾರದ ಬದ್ಧತೆಯನ್ನು ಸಹ ತೋರಿಸುತ್ತದೆ” ಎಂದು ಸಿಎಂ ಯೋಗಿ ಪತ್ರಿಕಾಗೋಷ್ಠಿಯಲ್ಲಿ ಹೇಳಿರುವುದಾಗಿ ಸುದ್ದಿ ಸಂಸ್ಥೆ ಎಎನ್‌ಐ ಉಲ್ಲೇಖಿಸಿದೆ.
ಯುಪಿಯ ಆರ್ಥಿಕತೆಯು ಈ ಹಿಂದೆ ದೇಶದಲ್ಲಿ 6-7ನೇ ಸ್ಥಾನದಲ್ಲಿದ್ದರೆ, ಈಗ ಅದು ಭಾರತದ ಎರಡನೇ ಅತಿದೊಡ್ಡ ಆರ್ಥಿಕತೆಯಾಗಿದೆ ಎಂದು ಯೋಗಿ ಆದಿತ್ಯನಾಥ್ ಎತ್ತಿ ಹೇಳಿದರು.
ಅಂಬೇಡ್ಕರ್-ದಲಿತ ಸಮುದಾಯದ ಅವಹೇಳನ ನಾಟಕ; ಜೈನ್ ಯೂನಿವರ್ಸಿಟಿ ವಿದ್ಯಾರ್ಥಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣ ವಜಾ


