ಹೆಸರು ಬದಲಾವಣೆಗೆ ಹೆಸರುವಾಸಿಯಾಗಿರುವ ಮೋದಿ ಮೋದಿ ನೇತೃತ್ವದ ಆಡಳಿತ, ವಿಶ್ವದ ಅತಿದೊಡ್ಡ ಗ್ರಾಮೀಣ ಉದ್ಯೋಗ ಯೋಜನೆಯನ್ನು ಮರುನಾಮಕರಣ ಮಾಡಲು ಸಜ್ಜಾಗಿದೆ. ಮಹತ್ತರ ಯೋಜನೆಯಿಂದ ಮಹಾತ್ಮ ಗಾಂಧಿಯವರ ಹೆಸರನ್ನು ತೆಗೆದುಹಾಲು ಮುಂದಾಗಿದೆ ಎಂದು ‘ದಿ ವೈರ್’ ವರದಿ ಮಾಡಿದೆ.
ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಜಾರಿಗೆ ತಂದಿದ್ದ ಗ್ರಾಮೀಣ ಉದ್ಯೋಗ ಯೋಜನೆಯಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ‘ವಿಕ್ಷಿತ್ ಭಾರತ್ – ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ)’ ಮಸೂದೆ ಎಂದು ಮರುನಾಮಕರಣ ಮಾಡಲಿದೆ ಎಂದು ತಿಳಿದುಬಂದಿದೆ.
ಸಂಸತ್ತಿನಲ್ಲಿ ಈ ಮಸೂದೆ ಅಂಗೀಕಾರವಾದರೆ, ಅದನ್ನು ವಿಬಿ–ಜಿ ಆರ್‌ಎಮ್ ಜಿ ಕಾಯ್ದೆ ಎಂಬ ಸಂಕ್ಷಿಪ್ತ ರೂಪದಿಂದ ಕರೆಯಲಾಗುತ್ತದೆ.
ಸರ್ಕಾರವು ಪ್ರಸ್ತಾವಿತ ಮಸೂದೆಯಲ್ಲಿ ‘ಮಹಾತ್ಮ ಗಾಂಧಿ’ ಹೆಸರನ್ನು ಸಂಪೂರ್ಣವಾಗಿ ತೆಗೆದುಹಾಕುವ ಮೂಲಕ ಯೋಜನೆಯನ್ನು ಮರುರೂಪಿಸುತ್ತಿದೆ ಎಂದು ತೋರುತ್ತದೆ.
ಸರ್ಕಾರದ ಪ್ರಸ್ತಾವನೆಯು ಗ್ರಾಮೀಣಾಭಿವೃದ್ಧಿಯನ್ನು ‘ವಿಕ್ಷಿತ್ ಭಾರತ @2047 ರ ರಾಷ್ಟ್ರೀಯ ದೃಷ್ಟಿಕೋನಕ್ಕೆ ಅನುಗುಣವಾಗಿ’ ಎಂದು ಹೇಳಿದೆ. ಪ್ರತಿ ಹಣಕಾಸು ವರ್ಷದಲ್ಲಿ 125 ದಿನಗಳ ಕೂಲಿ ಉದ್ಯೋಗದ ಶಾಸನಬದ್ಧ ಖಾತರಿಯನ್ನು ಒದಗಿಸುವ ಮೂಲಕ, ವಯಸ್ಕ ಸದಸ್ಯರು ಕೌಶಲ್ಯರಹಿತ ದೈಹಿಕ ಕೆಲಸವನ್ನು ಕೈಗೊಳ್ಳಲು ಸ್ವಯಂಸೇವಕರಾಗಿರುವ ಪ್ರತಿಯೊಂದು ಗ್ರಾಮೀಣ ಕುಟುಂಬಕ್ಕೂ ಒದಗಿಸುವುದು’ ಯೋಜನೆಯ ಉದ್ದೇಶವಾಗಿದೆ.
ಮನರೇಗಾ ದೇಶದ ಹೆಚ್ಚಿನ ಭಾಗಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ 100 ದಿನಗಳ ಕೆಲಸವನ್ನು ನೀಡಿತು. ಇದು ಕೌಶಲ್ಯರಹಿತ ಕಾರ್ಮಿಕರಿಗೆ ಸಾಕಷ್ಟು ಆರ್ಥೀಕ ಬೆಂಬಲ ನೀಡಿತು.
ಆದರೆ, ಪ್ರಸ್ತಾವಿತ ಮಸೂದೆಯು ಈ ಯೋಜನೆಯನ್ನು ‘ಕೇಂದ್ರ ಪ್ರಾಯೋಜಿತ ಯೋಜನೆಯಾಗಿ’ ಕಾರ್ಯಗತಗೊಳಿಸುವ ಗುರಿಯನ್ನು ಹೊಂದಿದೆ. ಇದರ ಅಡಿಯಲ್ಲಿ ಈ ಕಾಯಿದೆಯ ಸೆಕ್ಷನ್ 22 ರ ಉಪ-ವಿಭಾಗ (2) ರ ಅಡಿಯಲ್ಲಿ ಒದಗಿಸಲಾದ ನಿಧಿ-ಹಂಚಿಕೆ ಮಾದರಿಗೆ ಅನುಗುಣವಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ನಡುವೆ ಹಣಕಾಸಿನ ಹೊಣೆಗಾರಿಕೆಯನ್ನು ಹಂಚಿಕೊಳ್ಳಲಾಗುತ್ತದೆ. ಇದರಲ್ಲಿ ಈಶಾನ್ಯ ರಾಜ್ಯಗಳು ಮತ್ತು ಹಿಮಾಲಯನ್ ರಾಜ್ಯಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಹೆಚ್ಚಿದ ಪಾಲು ಮತ್ತು ಅದರ ಹಂಚಿಕೆಯಾದ ಪಾಲಿಗಿಂತ ಹೆಚ್ಚಿನ ವೆಚ್ಚವನ್ನು ಭರಿಸುವ ರಾಜ್ಯ ಸರ್ಕಾರದ ಜವಾಬ್ದಾರಿಯೂ ಸೇರಿದೆ.
ಮನರೇಗಾ ಯೋಜನೆಯಿಂದ ರಾಜ್ಯಗಳು ಈಗಾಗಲೇ ಅಪಾರ ಆರ್ಥಿಕ ಹೊರೆಯಿಂದ ಬಳಲುತ್ತಿವೆ. ಯಾವುದೇ ಕೇಂದ್ರ ಪ್ರಾಯೋಜಿತ ಯೋಜನೆಯಂತೆ ರಾಜ್ಯದ ಪಾಲನ್ನು ಶೇಕಡಾ 40 ಕ್ಕೆ ಹೆಚ್ಚಿಸಲು ಮಸೂದೆ ಕಾರಣವಾಗುತ್ತದೆ ಎಂದು ವರದಿಯಾಗಿದೆ.


