ನೆನ್ನೆ (ಆಗಸ್ಟ್ 23ರಂದು) ಪ್ರಧಾನಿ ನರೇಂದ್ರ ಮೋದಿ ತಾವು ನವಿಲುಗಳೊಂದಿಗೆ ಅನ್ಯೋನ್ಯವಾಗಿರುವ ವೀಡಿಯೋವೊಂದನ್ನು ಟ್ವೀಟ್ ಮಾಡಿದ್ದರು. ಆಗಿನಿಂದಲೂ ಅದರ ಕುರಿತ ಪರ-ವಿರೋಧದ ಚರ್ಚೆಗಳು ಸಾಮಾಜಿಕ ಮಾದ್ಯಮಗಳಲ್ಲಿ ಜೋರಾಗಿವೆ.
ಮೋದಿ ತಮ್ಮ ಅನಿಸಿಕೆಯನ್ನು ಬರೆದು, ತಮ್ಮ ಟ್ವಿಟರ್ ಖಾತೆಯಿಂದಲೇ ನವಿಲುಗಳೊಂದಿಗೆ ವೀಡಿಯೋವೊಂದನ್ನು ಹಂಚಿಕೊಂಡಿದ್ದರು.
भोर भयो, बिन शोर,
मन मोर, भयो विभोर,
रग-रग है रंगा, नीला भूरा श्याम सुहाना,
मनमोहक, मोर निराला।रंग है, पर राग नहीं,
विराग का विश्वास यही,
न चाह, न वाह, न आह,
गूँजे घर-घर आज भी गान,
जिये तो मुरली के साथ
जाये तो मुरलीधर के ताज। pic.twitter.com/Dm0Ie9bMvF— Narendra Modi (@narendramodi) August 23, 2020
ಈ ಟ್ವೀಟ್ ಸುಮಾರು 21 ಲಕ್ಷ ವೀಕ್ಷಣೆ, 2 ಲಕ್ಷದಷ್ಟು ಲೈಕ್ಸ್ ಮತ್ತು 54 ಸಾವಿರ ರೀಟ್ವೀಟ್ ಗಳನ್ನು ಗಳಿಸಿದೆ.
ಇದಕ್ಕೆ ಪ್ರತಿಯಾಗಿ ಅದ್ವೈದ್ ಎನ್ನುವವರು ಆ ದಿನವೇ ಸಂಜೆ 6 ಗಂಟೆಯ ಸುಮಾರಿಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಹಿಟ್ಲರ್‌ನ ಚಿತ್ರವೊಂದನ್ನು ಹಂಚಿಕೊಂಡರು. ಇದೇ ಚಿತ್ರವನ್ನು ನೂರಾರು ಜನ ಹಂಚಿಕೊಳ್ಳುವ ಮೂಲಕ ಹಿಟ್ಲರ್‌ಗೆ ಮೋದಿಯನ್ನು ಹೋಲಿಸಿದ್ದಾರೆ.
1934 : Adolf Hitler feeding a baby deer from his hand at Berghof.
The caption of the photo was 'Der Fuehrer als Tierfreund' or The Fuehrer, Friend to Animals. After coming to power in 1933, the Nazis used propaganda photos of Hitler with many animals, to showcase his animal love pic.twitter.com/aZCBs4vlpA
— Advaid അദ്വൈത് ? (@Advaidism) August 23, 2020
ಈ ಚಿತ್ರದಲ್ಲಿ ಸರ್ವಾಧಿಕಾರಿ ಹಿಟ್ಲರ್ ಜಿಂಕೆಮರಿಯೊಂದಕ್ಕೆ ಏನನ್ನೋ ತಿನಿಸುತ್ತಿದ್ದಾನೆ. ಇದರಿಂದ ಪ್ರಾಣಿಯೊಂದಿಗೆ ಆತನ ಅನ್ಯೋನ್ಯತೆ ಎದ್ದು ಕಾಣುತ್ತದೆ. ಆದರೆ ಇದನ್ನು ಮೋದಿಯವರ ವಿಡಿಯೋಗೆ ಹೋಲಿಸಿ ಹಲವರು ರೀಟ್ವೀಟ್ ಮಾಡಿದ್ದಾರೆ.
ಈ ವೀಡಿಯೋ ಕುರಿತು ಚಿಂತಕರಾದ ಶಿವಸುಂದರ್ ಅವರು ಕವಿತೆಯೊಂದನ್ನು ಬರೆದಿದ್ದಾರೆ. ಸಧ್ಯ ಫೇಸ್ ಬುಕ್ ನಲ್ಲಿ ಈ ಕವಿತೆ ಹರಿದಾಡುತ್ತಿದೆ.
ಮೋದಿಯವರು ಹಂಚಿಕೊಂಡಿರುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿದೆ. ಕೆಲವರು, ನವಿಲನ್ನು ಬಳಸಿಕೊಂಡಿರುವುದು ಕಾನೂನುಬಾಹಿರ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಇಂಥಾ ಸಂದರ್ಭದಲ್ಲಿ ಈ ರೀತಿಯ ವೀಡಿಯೋ ಬೇಕಿತ್ತೇ ಎಂದು ಪ್ರಶ್ನಿಸಿದ್ದಾರೆ.
ಪ್ರಧಾನಿ ಮೋದಿಯವರ ವಿಡಿಯೋಗಿಂತ ಈ ವಿಡಿಯೋ ಎಷ್ಟೋ ವಾಸಿ ಎಂದು ಪತ್ರಕರ್ತ ರವಿ ನಾಯರ್ ಟ್ವೀಟ್ ಮಾಡಿದ್ದಾರೆ.
This peacock looks so much more happy and relaxed. Maybe someone with a degree in 'entire peacock psychology' can throw more light. https://t.co/8ikXr9CSSo
— Dipankar (@Dipankar_cpiml) August 24, 2020
ರೋಮ್‌ನ ಚಕ್ರವರ್ತಿಯನ್ನು ನೆನಪಿಸುತ್ತಿರುವ ನವಿಲು ಎಂಬುದಾಗಿ ಹಲವರು ಅಭಿಪ್ರಾಯಪಟ್ಟಿದ್ದಾರೆ.
ಲಾಕ್’ಡೌನ್ ಸಮಯದಲ್ಲಿ ನಿಗಿನಿಗಿ ಸುಡುವ ಡಾಂಬರು ರಸ್ತೆಗಳ ಮೇಲೆ ನೂರಾರು ಕಿಲೋಮೀಟರ್ ನಡೆದ ಬಡವರ ಬೊಬ್ಬೆಯೊಡೆದ ಅಂಗಾಲುಗಳ ಗಾಯವಿನ್ನೂ ಹಸಿಯಾಗಿದೆ. ನಿನ್ನ ಕಾಲ ಕೆಳಗೆ ಚೆಲ್ಲಿರುವ ಒಂದಷ್ಟು ಪೆಬಲ್ ಸ್ಟೋನ್’ಗಳನ್ನು ಕೈ ಸಾಲ ಕೊಡು ದೊರೆಯೇ. ಆದಾಗ ಸೋಪಿನಲ್ಲಿ ತೊಳೆದು ಮರಳಿಸುತ್ತೇನೆ ಎಂದು ಯುವ ಬರಹಗಾರ ದಯಾನಂದ್ ಟಿ.ಕೆ ಬರೆದಿದ್ದಾರೆ.
ನಮ್ಮಂತ ಸಾಮನ್ಯ ಪ್ರಜೆಗಳು ಕೂಡ ಮನೆಯಲ್ಲಿ ನವಿಲು ಸಾಕಬಹುದಾ? ಹೋಗಲಿ ನವಿಲಿಗೆ ಆಹಾರ ನೀಡಬಹುದಾ? ಇಲ್ಲ ಅದು ಕೇವಲ ನಟ ಭಯಂಕರರಿಗೆ ಮಾತ್ರ ಅವಕಾಶ ಇರೋದ? ಯಾರಾದ್ರೂ ಅರಣ್ಯ ಇಲಾಖೆ/ ಕಾನೂನುಗಳ ಅರಿವು ಇರೋರು ತಿಳಿಸಿ ಕೊಡ್ತೀರಾ? ಅವಕಾಶ ಇದ್ದರೆ ನಾನು ನಾಲ್ಕೈದು ಸಾಕಬೇಕು ಅನಿಸ್ತಿದೆ ಎಂದು ಪ್ರತಾಪ್ ಕಣಗಲ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಮೋದಿ ಸರ್ಕಾರದ ಮಹಾದ್ರೋಹ-ಮಾರಾಟವಾಗುತ್ತಿರುವ ’ಮಹಾರತ್ನಗಳು’: ಚಿಂತಕ ಶಿವಸುಂದರ್ ಬರಹ


