Homeಮುಖಪುಟಮೋದಿ ಲ್ಯಾಂಡ್‌‌ ಆಗಲು ಬಿಡುವುದಿಲ್ಲ; ಹೆಲಿಪ್ಯಾಡ್‌ನಲ್ಲೇ ಮಲಗುತ್ತೇವೆ: ಪುರೋಹಿತರ ಬೆದರಿಕೆ

ಮೋದಿ ಲ್ಯಾಂಡ್‌‌ ಆಗಲು ಬಿಡುವುದಿಲ್ಲ; ಹೆಲಿಪ್ಯಾಡ್‌ನಲ್ಲೇ ಮಲಗುತ್ತೇವೆ: ಪುರೋಹಿತರ ಬೆದರಿಕೆ

ಪ್ರಧಾನಿ ಮೋದಿಯವರು ನವೆಂಬರ್‌ 5ರಂದು ಉತ್ತರಖಾಂಡ್‌ ರಾಜ್ಯಕ್ಕೆ ಭೇಟಿ ನೀಡಲಿದ್ದು, ಕೇದಾರನಾಥ ದೇವಾಲಯ ಪುರೋಹಿತರ ಪ್ರತಿಭಟನೆಯ ಬಿಸಿಯನ್ನು ಎದುರಿಸಬೇಕಾಗಿದೆ.

- Advertisement -
- Advertisement -

ನವೆಂಬರ್‌ 5ರಂದು ಪ್ರಧಾನಿ ನರೇಂದ್ರ ಮೋದಿಯವರು ಕೇದಾರನಾಥಕ್ಕೆ ಭೇಟಿ ನೀಡಲಿದ್ದು, ಪ್ರಧಾನಿಯವರನ್ನು ಭೇಟಿ ಮಾಡಲು ಅವಕಾಶ ನೀಡದಿದ್ದರೆ ವೇದಿಕೆ ಪ್ರತಿಭಟನೆ ಮಾಡಲಾಗುವುದು ಎಂದು ತೀರ್ಥ ಪುರೋಹಿತರು (ಯಾತ್ರಾ ಪುರೋಹಿತರು) ಎಚ್ಚರಿಸಿದ್ದಾರೆ.

ಉತ್ತರಖಾಂಡ್‌ ಚಾರ್ ಧಾಮ್‌ ದೇವಸ್ಥಾನಮ್‌ ಮ್ಯಾನೇಜ್‌ಮೆಂಟ್‌ ಬೋರ್ಡ್‌ ರಚಿಸಿ ಅದರ ಅಡಿಯಲ್ಲಿ ದೇವಾಲಯಗಳನ್ನು ಹಿಡಿತಕ್ಕೆ ತೆಗೆದುಕೊಂಡಿರುವ ಕ್ರಮವನ್ನು ಖಂಡಿಸಿ, ಪ್ರಧಾನಿಯವರ ಭೇಟಿಯನ್ನು ಬಹಿಷ್ಕರಿಸಲು ಪುರೋಹಿತರು ಸಜ್ಜಾಗಿದ್ದಾರೆ.

ಪ್ರಧಾನಿ ಮೋದಿಯವರು ಅಂದು ಕೇದಾರನಾಥದಲ್ಲಿ ಆದಿ ಶಂಕರಾಚಾರ್ಯರ ಪ್ರತಿಭೆ ಅನಾವರಣ ಮಾಡಲಿದ್ದಾರೆ ಹಾಗೂ ಇತರೆ ಅಭಿವೃದ್ಧಿ ಕಾರ್ಯಕ್ರಗಳಿಗೆ ಚಾಲನೆ ನೀಡಲಿದ್ದಾರೆ.

“ಚಾರ್‌ಧಾಮ್‌ ದೇವಸ್ಥಾನಮ್‌ ಮ್ಯಾನೇಜ್‌ಮೆಂಟ್‌ ರದ್ದುಗೊಳಿಸಲು ಆಗ್ರಹಿಸಿ ಪ್ರಧಾನಿ ಮೋದಿ ಅವರೊಂದಿಗೆ ಸಭೆ ನಡೆಸಲು ಪದೇ ಪದೇ ಕೋರಲಾಗುತ್ತಿದೆ. ಆದರೆ ಅದಕ್ಕೆ ಮೋದಿಯವರು ಅವಕಾಶ ನೀಡುತ್ತಿಲ್ಲ” ಎಂದು ಪುರೋಹಿತರು ಬೇಸರ ವ್ಯಕ್ತಪಡಿಸಿದ್ದಾರೆ.

ಚಾರ್‌ಧಾಮ್‌ ಕಾಯಿದೆಯು ನಮ್ಮ ಧಾರ್ಮಿಕ ಹಕ್ಕುಗಳನ್ನು ಉಲ್ಲಂಘಿಸುವುದು ಮಾತ್ರವಲ್ಲದೆ, ಮಂಡಳಿಯ ವ್ಯಾಪ್ತಿಯಲ್ಲಿರುವ ದೇವಾಲಯದ ಆವರಣಗಳಲ್ಲಿನ ನಮ್ಮ ಆಸ್ತಿಗಳ ಮಾಲೀಕತ್ವವನ್ನು ಕಸಿದುಕೊಂಡಿದೆ. ಹೀಗಾಗಿ ಮೋದಿ ವಿರುದ್ಧ ನಮ್ಮ ದನಿಯನ್ನು ಎತ್ತಿದ್ದೇವೆ ಎಂದು ಬದ್ರಿನಾಥದ ಪುರೋಹಿತ ಹಾಗೂ ಚಾರ್‌ಧಾಮ್‌ ತೀರ್ಥ ಪುರೋಹಿತ್‌ ಹಕ್‌ಹುತುಕ್‌ ಮಹಾ ಪಂಚಾಯತ್‌‌ ಅಧ್ಯಕ್ಷ ಕೆ.ಕೆ.ಕೋಟಿಯಾಲ್‌‌ ತಿಳಿಸಿದ್ದಾರೆ.

ಇದನ್ನೂ ಓದಿರಿ: ಸಂಕಷ್ಟದಲ್ಲಿ ನರೇಗ ನಂಬಿದ ಜನಸಮೂಹ: ಕೇಂದ್ರ ನೀಡಿದ ನಿಧಿ ಆರು ತಿಂಗಳಿಗೇ ಖಾಲಿ!

“ಪ್ರಧಾನಿ ಭೇಟಿಗೆ ಮುನ್ನ ರಾಜ್ಯ ಸರ್ಕಾರವು ಬೋರ್ಡ್ ಅನ್ನು ರದ್ದುಪಡಿಸುತ್ತದೆ ಎಂದು ಚಾರ್ ಧಾಮ್ ತೀರ್ಥ ಪುರೋಹಿತರು ನಂಬಿದ್ದೇವೆ. ಇಲ್ಲದಿದ್ದರೆ ನಾವು ಕೇದಾರನಾಥದಲ್ಲಿ ಪ್ರತಿಭಟನೆಗೆ ಸಿದ್ಧರಿದ್ದೇವೆ” ಎಂದು ಕೋಟಿಯಾಲ್‌ ಎಚ್ಚರಿಕೆ ನೀಡಿದ್ದಾರೆ.

“ಪ್ರತಿಭಟನೆ ಕೇವಲ ಘೋಷಣೆಗಳಿಗೆ ಸೀಮಿತವಾಗುವುದಿಲ್ಲ, ಪ್ರಧಾನಿ ಲ್ಯಾಡ್‌ ಆಗಲು ಬಿಡುವುದಿಲ್ಲ. ನಾವು ಹೆಲಿಪ್ಯಾಡ್‌ನಲ್ಲೇ ಮಲಗುತ್ತೇವೆ. ಅವರ ಭೇಟಿಯನ್ನು ವಿರೋಧಿಸಿ ಕಪ್ಪು ಬಾವುಟ ತೋರಿಸಿ ಬಂದ್‌ಗೆ ಕರೆ ನೀಡುತ್ತೇವೆ” ಎಂದು ಸ್ಥಳೀಯ ಪುರೋಹಿತರ ಸಂಘವಾಗಿರುವ ಕೇದಾರನಾಥ ಸಭಾದ ಅಧ್ಯಕ್ಷ ವಿನೋದ್ ಶುಕ್ಲಾ ಹೇಳಿದ್ದಾರೆ.

ಅಕ್ಟೋಬರ್ 11ರ ಸಭೆಯ ನಂತರ ಬೋರ್ಡ್ ಅನ್ನು ರದ್ದುಗೊಳಿಸುವ ಭರವಸೆಯನ್ನು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ನೀಡಿದ್ದರು. ಅಕ್ಟೋಬರ್ 30ರವರೆಗೆ ಪ್ರತಿಭಟನೆಯನ್ನು ತಡೆಹಿಡಿಯುವಂತೆ ಮುಖ್ಯಮಂತ್ರಿ ಮನವಿ ಮಾಡಿದ್ದರು. ಆದರೆ ಇಲ್ಲಿಯವರೆಗೆ ಯಾವುದೇ ಕ್ರಮ ಜರುಗಿಸಿಲ್ಲ. ನವೆಂಬರ್ 1ರಿಂದ ನಾವು ನಮ್ಮ ಪ್ರತಿಭಟನೆಯನ್ನು ಪುನಾರಂಭಿಸುತ್ತಿದ್ದೇವೆ” ಎಂದಿದ್ದಾರೆ ಶುಕ್ಲಾ.

ಮತ್ತೊಬ್ಬ ಅರ್ಚಕ, ಚಾರ್ ಧಾಮ್ ಮಹಾ ಪಂಚಾಯತ್‌ನ ಸಂಚಾಲಕ ಮತ್ತು ಗಂಗೋತ್ರಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಸುರೇಶ್ ಸೆಂವಾಲ್ ಪ್ರತಿಕ್ರಿಯಿಸಿ, “ಚಾರ್ ಧಾಮ್ ದೇವಾಸ್ಥಾನಂ ಆಡಳಿತ ಮಂಡಳಿ ಕಾಯಿದೆಯು ಒಂದು ಕರಾಳ ಕಾನೂನು” ಎಂದಿದ್ದಾರೆ.

ಇದನ್ನೂ ಓದಿರಿ: ಸತತ ನಾಲ್ಕನೇ ದಿನವೂ ಪೆಟ್ರೊಲ್‌, ಡೀಸೆಲ್‌ ಬೆಲೆ ಏರಿಕೆ

“ಚಾರ್ ಧಾಮ್ ದೇವಾಲಯಗಳ ಪುರೋಹಿತರು ಕೇದಾರನಾಥದಲ್ಲಿ ಪ್ರಧಾನಿ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಾರೆ. ಇತರ ಧರ್ಮಗಳಿಗೆ ಕಾನೂನು ಇಲ್ಲದಿರುವಾಗ ಕೇವಲ ಹಿಂದೂ ದೇವಾಲಯಗಳ ಮೇಲೆ ಸರ್ಕಾರ ಏಕೆ ಹೀಗೆ ಮಾಡುತ್ತಿದೆ? ಅವರು ತಮ್ಮ ವ್ಯಾಪ್ತಿಯಲ್ಲಿರುವ ಯಾವುದೇ ಮಸೀದಿ ಅಥವಾ ಚರ್ಚ್‌ಗಳನ್ನು ತೆಗೆದುಕೊಂಡಿಲ್ಲ” ಎಂದು ಸುರೇಶ್ ಸೆಂವಾಲ್‌ ಹೇಳಿದ್ದಾರೆ.

ಏನಿದು ವಿವಾದ?

2019ರ ಡಿಸೆಂಬರ್‌ನಲ್ಲಿ ಉತ್ತರಖಾಂಡ್‌ ಸರ್ಕಾರವು ಉತ್ತರ ಖಾಂಡ್‌ ಚಾರ್‌ ಧಮ್‌ ಶ್ರೈನ್‌ ಮ್ಯಾನೇಜ್‌ಮೆಂಟ್ ಮಸೂದೆಯನ್ನು ಮಂಡಿಸಿತು. ಈ ಮಸೂದೆಯು ಶಾಸನ ಸಭೆಯಲ್ಲಿ ಅಂಗೀಕಾರವಾಗಿ ಉತ್ತರಖಾಂಡ್‌ ಚಾರ್‌ ಧಮ್‌ ದೇವಸ್ಥಾನಮ್‌‌ ಮ್ಯಾನೇಜ್‌ಮೆಂಟ್‌ ಆಕ್ಟ್‌- 2019 ಜಾರಿಗೊಳಿಸಿ, 2020 ಜನವರಿ 15ರಂದು ಗೆಜೆಟ್‌ ನೋಟಿಫಿಕೇಷನ್‌ ಕೂಡ ಮಾಡಲಾಯಿತು.

ಈ ಬೋರ್ಡ್‌‌ನಲ್ಲಿ ಮುಖ್ಯಮಂತ್ರಿ ಅಧ್ಯಕ್ಷರಾಗಿರುತ್ತಾರೆ. ರಾಜ್ಯದ ಸಂಸ್ಕೃತಿ ಸಚಿವರು ಉಪಾಧ್ಯಕ್ಷರಾಗಿರುತ್ತಾರೆ. ಇತರ ಪದಾಧಿಕಾರಿಗಳೊಂದಿಗೆ ರಾಜ್ಯದ ಮುಖ್ಯ ಕಾರ್ಯದರ್ಶಿಯವರು ಪದನಿಮಿತ್ತ ಸದಸ್ಯರಾಗಿರುತ್ತಾರೆ.

ಈ ಮಂಡಲಿ ರಚನೆಯಾದಾಗಿನಿಂದಲೂ ಪುರೋಹಿತರು ಪ್ರತಿಭಟನೆ ನಡೆಸುತ್ತಿದ್ದಾರೆ. ಬದ್ರಿ ಕೇದಾರನಾಥ ದೇವಾಲಯ ಸಮಿತಿ ಮುಖ್ಯಸ್ಥ ಮನೋಹರ್ ಕಾಂತ್ ಧ್ಯಾನಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸುವಂತೆ ಕಳೆದ ಜುಲೈನಲ್ಲಿ ಪ್ರತಿಭಟನಾಕಾರರು ಆಗ್ರಹಿಸಿದ್ದರು. ಅಕ್ಟೋಬರ್ 25ರಂದು ಧ್ಯಾನಿ ಸಮಿತಿಯು ಮಧ್ಯಂತರ ವರದಿಯನ್ನು ಸಿಎಂಗೆ ಸಲ್ಲಿಸಿತು.

ಪ್ರಸ್ತುತ, ಉತ್ತರಾಖಂಡ್ ಚಾರ್ ಧಾಮ್ ದೇವಸ್ತಾನಂ ಮಂಡಳಿಯು ರಾಜ್ಯದ 51 ದೇವಾಲಯಗಳ ವ್ಯವಹಾರಗಳನ್ನು ನಿರ್ವಹಿಸುವ ನಿಯಂತ್ರಕ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ. ಇವುಗಳಲ್ಲಿ ಗಂಗೋತ್ರಿ, ಯಮುನೋತ್ರಿ, ಬದರಿನಾಥ, ಕೇದಾರನಾಥ ಮತ್ತು 47 ಇತರ ದೇವಾಲಯಗಳು ಸೇರಿವೆ.

ಎಲ್ಲಾ ಚಾರ್ ಧಾಮ್ ದೇಗುಲಗಳು ಮತ್ತು ಅವುಗಳ ಸಂಯೋಜಿತ ದೇವಾಲಯಗಳ ಅರ್ಚಕರು, ಪುರೋಹಿತರು ಅತಿದೊಡ್ಡ ಮಧ್ಯಸ್ಥಗಾರರಾಗಿದ್ದಾರೆ. ಆದರೆ ದೇವಸ್ಥಾನಂ ಬೋರ್ಡ್ ಕಾನೂನನ್ನು ರೂಪಿಸುವ ಮೊದಲು ಉತ್ತರಾಖಂಡ ಸರ್ಕಾರವು ತಮ್ಮನ್ನು ಸಂಪರ್ಕಿಸಿಲ್ಲ ಎಂದು ಪುರೋಹಿತರು ಆರೋಪಿಸಿದ್ದಾರೆ.

“ಎಲ್ಲಾ ನಾಲ್ಕು ಚಾರ್ ಧಾಮ್ ದೇಗುಲಗಳಲ್ಲಿ ಮತ್ತು ಅವರಿಗೆ ಸಂಯೋಜಿತವಾಗಿರುವ ದೇವಾಲಯಗಳಲ್ಲಿ ತೀರ್ಥಯಾತ್ರೆ ಪುರೋಹಿತರು ಮಾತ್ರ ತಮ್ಮ ಹಕ್ಕನ್ನು ಹೊಂದಿದ್ದಾರೆ. ಸರ್ಕಾರ ಕಾನೂನು ರೂಪಿಸುವ ಮುನ್ನ ಅವರ ಸಲಹೆ ಕೇಳಬೇಕಿತ್ತು. ಆದರೆ ಕೇಳಲಿಲ್ಲ. ಚಾರ್ ಧಾಮ್ ಅರ್ಚಕರ ಭೂಮಿ ಹಕ್ಕನ್ನು ಕಸಿದುಕೊಂಡು ಅವರ ಆಸ್ತಿಯನ್ನು ದೇವಸ್ಥಾನಂ. ಮಂಡಳಿಯ ಸ್ವಾಧೀನದಲ್ಲಿಡಲು ಉದ್ದೇಶಿಸಲಾಗಿದೆ” ಎಂದು ಗಂಗೋತ್ರಿ ದೇವಸ್ಥಾನ ಸಮಿತಿಯ ವಕ್ತಾರ ರಜನಿಕಾಂತ್ ಸೆಮ್ವಾಲ್ ಹೇಳಿದ್ದಾರೆ.


ಇದನ್ನೂ ಓದಿರಿ: ಜನರ ಜೀವದೊಂದಿಗೆ ಚೆಲ್ಲಾಟ ಆಡಲು ಸಾಧ್ಯವಿಲ್ಲ: ಸುಪ್ರೀಂಕೋರ್ಟ್‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...