ಕಾನ್ಪುರದ ದೇಹತ್ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಉತ್ತರ ಪ್ರದೇಶದ ಸಚಿವರೊಬ್ಬರು, “ಗಂಗಾ ಮಾತೆ ನಿಮ್ಮ ಪಾದಗಳನ್ನು ತೊಳೆಯಲು ಬಂದಿದ್ದಾಳೆ. ಆಕೆಯ ದರ್ಶನದಿಂದ ನೀವು ಸ್ವರ್ಗಕ್ಕೆ ಹೋಗುತ್ತೀರಿ” ಎಂದು ಬೇಜವಬ್ದಾರಿ ಹೇಳಿಕೆ ನೀಡುವ ಮೂಲಕ ಭಾರೀ ಟೀಕೆಗೆ ಗುರಿಯಾಗಿದ್ದಾರೆ.
“ಗಂಗಾ ಮೈಯಾ ತೋ ಅಪ್ನೇ ಪುತ್ರೋನ್ ಕೆ ಪೈರ್ ಧೋನೇ ಆತಿ ಹೈ…ಉನ್ಕೆ ದರ್ಶನ್ ಸೇ ಪುತ್ರ್ ಸೀಧೆ ಸ್ವರ್ಗ್ ಜಾತಾ ಹೈ..ಯೇ ವಿರೋಧೀ ಲೋಗ್ ಆಪ್ಕೋ ಉಲ್ಟಾ ಪಡ್ತಾ ಹೈ” (ಗಂಗಾ ಮಾತೆ ತನ್ನ ಮಕ್ಕಳ ಪಾದಗಳನ್ನು ತೊಳೆಯಲು ಬಂದಿದ್ದಾಳೆ. ಆಕೆಯ ‘ದರ್ಶನ’ದಿಂದ ಮಕ್ಕಳು ಸ್ವರ್ಗಕ್ಕೆ ಹೋಗುತ್ತಾರೆ. ವಿರೋಧ ಪಕ್ಷಗಳು ನಿಮಗೆ ತಪ್ಪು ಮಾಹಿತಿ ನೀಡುತ್ತಿವೆ) ಉತ್ತರ ಪ್ರದೇಶದ ಸಚಿವ ಸಂಜಯ್ ನಿಶಾದ್ ದೇಹತ್ ಜಿಲ್ಲೆಯ ಭೋಗ್ನಿಪುರ ಪ್ರದೇಶದ ಪ್ರವಾಹ ಸಂತ್ರಸ್ತರಿಗೆ ಹೇಳಿರುವ ವಿಡಿಯೋ ಮಂಗಳವಾರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
"Mother Ganga comes to wash the feet of Ganga-putras, Ganga-putras goes straight to heaven."
This was the Response by Minister Sanjay Kumar Nishad when locals tried to explain the problems people were facing in the flood-affected Bhognipur village in Kanpur Dehat. BTW, The… pic.twitter.com/CYxpX2V5SR— Mohammed Zubair (@zoo_bear) August 5, 2025
ತಮ್ಮ ಮನೆಗಳನ್ನು ಕಳೆದುಕೊಂಡ ಪ್ರವಾಹ ಸಂತ್ರಸ್ತರು ಎಲ್ಲಿಗೆ ಹೋಗಬೇಕೋ ಗೊತ್ತಾಗುತ್ತಿಲ್ಲ ಎಂದು ಅಳಲು ತೋಡಿಕೊಂಡಾಗ, ಸಚಿವರು ಮೇಲಿನಂತೆ ಉತ್ತರಿಸಿದ್ದಾರೆ ಎಂದು ವರದಿಗಳು ಹೇಳಿವೆ.
“ಇಡೀ ಪ್ರದೇಶವೇ ಮುಳುಗಿದೆ, ನಮ್ಮ ಮನೆಗಳು ಕುಸಿದಿವೆ. ಎಲ್ಲಿಗೆ ಹೋಗಬೇಕೋ ನಮಗೆ ಗೊತ್ತಾಗುತ್ತಿಲ್ಲ” ಎಂದು ಸಚಿವರಿಗೆ ತಮ್ಮ ನೋವು ಹೇಳಿಕೊಂಡ ಜನರು, ಪರಿಹಾರದ ನಿರೀಕ್ಷೆಯಲಿದ್ದರು. ಆದರೆ, ಸಚಿವರು ಬೇಜವಬ್ದಾರಿಯ ವಿಚಿತ್ರ ಪ್ರತಿಕ್ರಿಯೆ ನೀಡಿದ್ದಾರೆ ಎಂದು ವರದಿಯಾಗಿದೆ.
ಸಚಿವರ ಹೇಳಿಕೆಗೆ ಸಂತ್ರಸ್ತರು ದಿಗ್ಭ್ರಮೆ ವ್ಯಕ್ತಪಡಿಸಿದ್ದು, ತಾವು ಭೇಟಿ ನೀಡುತ್ತಿರುವ ಹಳ್ಳಿಗಳು ಯಮುನಾ ನದಿಯ ದಂಡೆಯ ಮೇಲೆ ಇವೆಯೇ ಹೊರತು, ಗಂಗಾ ನದಿ ದಂಡೆ ಮೇಲೆ ಅಲ್ಲ ಎಂಬುವುದು ಸಚಿವರಿಗೆ ಗೊತ್ತಿರಲಿಲ್ಲ ಎಂದಿದ್ದಾರೆ.
ಆಗ್ರಾ, ಚಿತ್ರಕೂಟ, ಲಖಿಂಪುರ ಖೇರಿ, ಬಲ್ಲಿಯಾ, ಬಂದಾ, ಘಾಝಿಪುರ, ಚಂದೌಲಿ, ಜಲೌನ್, ಇಟಾವಾ ಸೇರಿದಂತೆ ಉತ್ತರ ಪ್ರದೇಶದ 17 ಜಿಲ್ಲೆಗಳ 402 ಗ್ರಾಮಗಳು ಪ್ರವಾಹಕ್ಕೆ ತುತ್ತಾಗಿವೆ. ಗಂಗಾ, ಯಮುನಾ ಸೇರಿದಂತೆ ಪ್ರಮುಖ ನದಿಗಳು ಹಲವೆಡೆ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ ಎಂದು ವರದಿಗಳು ವಿವರಿಸಿವೆ.
ಉತ್ತರಪ್ರದೇಶ: ದಾರಿ ಬಿಡುವ ವಿಚಾರಕ್ಕೆ ಗಲಾಟೆ; ದಲಿತ ಇ-ರಿಕ್ಷಾ ಚಾಲಕನ ಥಳಿಸಿ ಹತ್ಯೆ


