- Advertisement -
- Advertisement -
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೂ 50:50 ಅನುಪಾತದಲ್ಲಿ ಸೈಟ್ ಹಂಚಿಕೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಕುರಿತು ಸಿಎಂ ಸ್ಪಷ್ಟನೆ ನೀಡಿದ್ದಾರೆ.
“ನನ್ನ ಪತ್ನಿಗೆ ಅವರ ತಮ್ಮ ಉಡುಗೊರೆಯಾಗಿ 3 ಎಕರೆ 16 ಗುಂಟೆ ಜಮೀನು ನೀಡಿದ್ದರು. ಮೈಸೂರಿನ ರಿಂಗ್ ರೋಡ್ ಪಕ್ಕದ ಕೆಸರೆಯಲ್ಲಿ ಆ ಜಮೀನು ಇತ್ತು. ಮೂಡಾದವರು ನಮ್ಮ ಜಮೀನನ್ನು ನಮ್ಮಿಂದ ಸ್ವಾಧೀನಪಡಿಸಿಕೊಳ್ಳದೆ ಸೈಟ್ ಮಾಡಿ ಹಂಚಿದ್ದರು. ಇದರಿಂದ ನಮ್ಮ ಜಮೀನು ಬೇರೆಯವರ ಪಾಲಾಗಿತ್ತು” ಎಂದು ತಿಳಿಸಿದ್ದಾರೆ.
“ಬಿಜೆಪಿ ಸರ್ಕಾರದ ಅವಧಿಯಲ್ಲಿ ನಮಗೆ ಪರ್ಯಾಯ ಜಮೀನು ನೀಡುವಂತೆ ಮೂಡಾವನ್ನು ಕೋರಿದ್ದೆವು. ಹಾಗಾಗಿ, ಅವರು ಕಾನೂನು ಪ್ರಕಾರ 50:50 ಅನುಪಾತದಲ್ಲಿ ಸೈಟ್ ಹಂಚಿಕೆ ಮಾಡಿದ್ದಾರೆ. ಇದರಲ್ಲಿ ಯಾವುದೇ ಅಕ್ರಮ ನಡೆದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ : ಗಿಗ್ ಕಾರ್ಮಿಕರ ಕಲ್ಯಾಣ ಮಂಡಳಿ : ಕರಡು ಮಸೂದೆ ಪ್ರಕಟಿಸಿದ ರಾಜ್ಯ ಸರ್ಕಾರ


