ರಿಲಾಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷರಾದ ಮುಖೇಶ್ ಅಂಬಾನಿ ವಿಶ್ವದ ಐದನೇ ಶ್ರೀಮಂತ ವ್ಯಕ್ತಿ ಎಂದು ವ್ಯಾಪಾರಿ ಪತ್ರಿಕೆ ಪೋರ್ಬ್ಸ್ ಪಟ್ಟಿಮಾಡಿದೆ. ಅಮೆರಿಕನ್ ಹೂಡಿಕೆದಾರ ವಾರೆನ್ ಬಫೆಟ್‌ರನ್ನು ಹಿಂದಿಕ್ಕಿ ಫೋರ್ಬ್ಸ್‌ನ ರಿಯಲ್ ಟೈಮ್ ಶ್ರೇಯಾಂಕದಲ್ಲಿ ಅವರು ಐದನೇ ಸ್ಥಾನವನ್ನು ಪಡೆದರು.
ಪತ್ರಿಕೆಯು ಅಂಬಾನಿಯ ಸಂಪತ್ತನ್ನು 75 ಬಿಲಿಯನ್ ಡಾಲರ್ ಎಂದು ಅಂದಾಜಿಸಿದೆ (5.61 ಲಕ್ಷ ಕೋಟಿ ರೂಪಾಯಿ). ಮುಖೇಶ್ ಅಂಬಾನಿ ಫೇಸ್‌ಬುಕ್ ಸಹ-ಸಂಸ್ಥಾಪಕ ಹಾಗೂ ಸಿಇಒ ಮಾರ್ಕ್ ಜುಕರ್‌ಬರ್ಗ್ ಸನಿಹದಲ್ಲೇ ಇದ್ದಾರೆ, ಪ್ರಸ್ತುತ ಜುಕರ್‌ಬರ್ಗ್ ಸಂಪತ್ತು 89 ಬಿಲಿಯನ್ ಡಾಲರ್.
ಫೋರ್ಬ್ಸ್ ಪಟ್ಟಿಯ ಪ್ರಕಾರ, ಅಮೆಜಾನ್ ಸಂಸ್ಥಾಪಕ ಮತ್ತು ಸಿಇಒ ಜೆಫ್ ಬೆಜೋಸ್ ಈ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಅವರ ಆಸ್ತಿಯ ನಿವ್ವಳ ಮೌಲ್ಯ 185.8 ಬಿಲಿಯನ್ ಡಾಲರ್.
ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ (3 113.1 ಬಿಲಿಯನ್) ಎರಡನೇ ಸ್ಥಾನದಲ್ಲಿದ್ದಾರೆ.
ಮುಖೇಶ್ ಅಂಬಾನಿ ಆಸ್ತಿಯ ನಿವ್ವಳ ಮೌಲ್ಯವು ಬುಧವಾರ 3.2 ಬಿಲಿಯನ್ ಡಾಲರ್‌ಗಳಷ್ಟು ಹೆಚ್ಚಾಗಿದೆ ಎಂದು ಫೋರ್ಬ್ಸ್ ವರದಿ ಮಾಡಿದೆ. ಇದು ಆಸ್ತಿಯ ಶೇಕಡಾ 4.49 ರಷ್ಟಾಗಿದೆ.
ಓದಿ: ಜಿಯೋ ಜಾಹಿರಾತಿನಿಂದ ಶಾರುಖ್ ಖಾನ್‌ನನ್ನು ಮುಖೇಶ್ ಅಂಬಾನಿ ಕಿತ್ತೆಸೆದರೆ?


