ಮುಂಬೈ ಮಹಿಳಾ ಪೊಲೀಸ್ ಅಧಿಕಾರಿಯ ಮೇಲೆ ಮೂವರು ವ್ಯಕ್ತಿಗಳು ಅತ್ಯಾಚಾರ ಮಾಡಿರುವ ಘಟನೆಯ ಕುರಿತು ಮುಂಬೈನ ಪೊವಾಯಿನ ಮೇಘವಾಡಿ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಸಹಾಯಕ ಪೊಲೀಸ್ ಅಧಿಕಾರಿಯ ಮೇಲೆ ಮೂವರು ವ್ಯಕ್ತಿಗಳು ಲೈಂಗಿಕ ದೌರ್ಜನ್ಯ ಮತ್ತು ಬ್ಲ್ಯಾಕ್ ಮೇಲ್ ನಡೆಸಿದ್ದಾರೆ ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನೆಯಲ್ಲಿ ಮುಖ್ಯ ಆರೋಪಿಯು ಮಹಿಳಾ ಪೊಲೀಸ್ ಅಧಿಕಾರಿಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಭೇಟಿಯಾಗಿದ್ದಾನೆ. ಸಂಭಾಷಣೆಯನ್ನು ನಡೆಸಿ ಮುದುವೆಯಾಗುವ ನೆಪದಲ್ಲಿ ಪೊಲೀಸ್ ಅಧಿಕಾರಿಯೊಂದಿಗೆ ದೈಹಿಕ ಸಂಬಂಧವನ್ನೂ ಸಹ ಬೆಳೆಸಿದ್ದಾನೆ. ಇದಾದ ಮೇಲೆ ಮಹಿಳಾ ಅಧಿಕಾರಿಯೊಂದಿಗಿನ ಖಾಸಗಿ ಕ್ಷಣಗಳನ್ನು ವಿಡಿಯೋ ಮಾಡಿ ಆ ಮೂಲಕ ಅಧಿಕಾರಿಗೆ ಬ್ಲಾಕ್ ಮೇಲೆ ಆರಂಭಿಸಿದ್ದಾನೆ. ಇದಾದ ಮೇಲೆ ಆರೋಪಿಯ ಇಬ್ಬರು ಸ್ನೇಹಿತರು ಕೂಡ ಮಹಿಳಾ ಅಧಿಕಾರಿಯ ಮೇಲೆ ಬ್ಲ್ಯಾಕ್ ಮೇಲ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಪ್ರಕರಣದ ಮುಖ್ಯ ಆರೋಪಿಯು ಔರಂಗಾಬಾದ್ ಜಿಲ್ಲೆಗೆ ಸೇರಿದವನಾಗಿದ್ದು ಬ್ಯಾಂಕ್ ಉದ್ಯೋಗಿಯಾಗಿರುತ್ತಾನೆ. ಆರೋಪಿಯ ಸ್ನೇಹಿತರು ಮತ್ತು ಆರೋಪಿ ಸಂತ್ರಸ್ತ ಮಹಿಳಾ ಅಧಿಕಾರಿಗೆ ಜೀವ ಬೆದರಿಕೆಯನ್ನು ಕೂಡ ಒಡ್ಡಿದ್ದು ತಮ್ಮೊಂದಿಗೆ ಸಹಕರಿಸದಿದ್ದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಗೊಳಿಸುವುದಾಗಿ ಸತತವಾಗಿ ಕಿರುಕುಳ ನೀಡಿದ್ದಾರೆ. ಆರೋಪಿಗಳ ಕಿರುಕುಳದಿಂದ ಬೇಸತ್ತ ಪೊಲೀಸ್ ಅಧಿಕಾರಿ ಈಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
IPC ಸೆಕ್ಷನ್ 376 (ಅತ್ಯಾಚಾರ) ಮತ್ತು ಸೆಕ್ಷನ್ 420 (ಮೋಸ) ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಆರಂಭಿಸಿದ್ದಾರೆ. ಹಾಗೇ ಮುಂಬೈ ಪೊಲೀಸರು ಆರೋಪಿಗಳ ಬಂಧನಕ್ಕಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಇತ್ತೀಚೆಗೆ ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಲೇ ಇವೆ. ಸುಶಿಕ್ಷಿತ ಮಹಿಳಾ ಪೊಲೀಸ್ ಅಧಿಕಾರಿಯ ವಿರುದ್ಧವೇ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ನಡೆದಿರುವುದು ಅತ್ಯಂತ ಖಂಡನೀಯ. ಪೊಲೀಸ್ ಇಲಾಖೆ ಆದಷ್ಟು ಶೀಘ್ರವಾಗಿ ಪ್ರಕರಣದ ತನಿಖೆ ನಡೆಸಿ ಆರೋಪಿಗಳಿಗೆ ಶಿಕ್ಷೆ ನೀಡಲು ಮುಂದಾಗಬೇಕು.
ಇದನ್ನೂ ಓದಿ :ಸಂಪೂರ್ಣ ಪ್ಯಾಕೇಜ್‌ಗಾಗಿ ಸಿsಎಂ ಮನೆ ಮುತ್ತಿಗೆ ಯತ್ನ: ಹೋರಾಟಗಾರರ ಬಂಧನ


