ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ಮಸೂದೆ ವಿರುದ್ದ ಇಂದು (ಮಾ.17) ದೆಹಲಿಯ ಜಂತರ್‌ಮಂತರ್‌ನಲ್ಲಿ ಪ್ರತಿಭಟಿಸಿದ ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ಸದಸ್ಯರು, “ಇದು ಮುಸ್ಲಿಮರ ಮೇಲಿನ ನೇರ ದಾಳಿ, ತಿದ್ದುಪಡಿ ಮಸೂದೆಯು ವಕ್ಫ್ ಆಸ್ತಿಗಳನ್ನು ಕಬಳಿಸಲು ದಾರಿ ಮಾಡಿಕೊಡುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಮಾರ್ಚ್ 13ರಂದು ನಡೆಸಲು ಉದ್ದೇಶಿಸಲಾಗಿದ್ದ ಪ್ರತಿಭಟನೆಯನ್ನು ಹೋಳಿ ಹಬ್ಬದ ಕಾರಣ ಮುಂದೂಡಲಾಗಿತ್ತು. ಕಳೆದ ವಾರ ಪತ್ರಿಕಾಗೋಷ್ಠಿ ನಡೆಸಿದ್ದ ಮಂಡಳಿಯ ವಕ್ತಾರ ಸೈಯದ್ ಖಾಸಿಂ ರಸೂಲ್ ಇಲ್ಯಾಸ್ ಪ್ರತಿಭಟನೆಯ ಬಗ್ಗೆ ಘೋಷಿಸಿದ್ದರು. ತಿದ್ದುಪಡಿ ಮಸೂದೆಯು ‘ತಾರತಮ್ಯ’ಕ್ಕೆ ಸಮನಾಗಿದೆ ಎಂದಿದ್ದರು.
ಪ್ರತಿಭಟನೆಯಲ್ಲಿ ಮಾತನಾಡಿದ ಎಐಎಂಪಿಎಲ್‌ಬಿ ಪ್ರಧಾನ ಕಾರ್ಯದರ್ಶಿ ಫಝಲುರ್ ರಹೀಮ್ ಮುಜದ್ದಿದಿ, “ಮಂಡಳಿಯು ಎಲ್ಲಾ ಪ್ರಜಾಸತ್ತಾತ್ಮಕ ವಿಧಾನಗಳ ಮೂಲಕ ಸರ್ಕಾರಕ್ಕೆ ಮನವರಿಕೆ ಮಾಡಲು ಪ್ರಯತ್ನಿಸಿದೆ. ಆದರೆ, ಸರ್ಕಾರ ಈ ಬಗ್ಗೆ ಆಲಿಸುತ್ತಿಲ್ಲ. ಇದರಿಂದಾಗಿ ಪ್ರತಿಭಟನೆ ಮಾಡುವುದು ಬಿಟ್ಟು ನಮಗೆ ಬೇರೆ ದಾರಿಯಿಲ್ಲ. ಸರ್ಕಾರ ಈ ತಿದ್ದುಪಡಿಯನ್ನು ನಮ್ಮ ಮೇಲೆ ಹೇರಲು ಬಯಸುತ್ತಿದೆ. ಪರಿಸ್ಥಿತಿ ಹದಗೆಡುವುದನ್ನು ನಾವು ಬಯಸುವುದಿಲ್ಲ, ನಾವು ಅಭಿವೃದ್ಧಿ ಹೊಂದಿದ ಭಾರತವನ್ನು ನೋಡಲು ಬಯಸುತ್ತೇವೆ. ಆದರೆ, ಈ ಪರಿಸ್ಥಿತಿಗಳಲ್ಲಿ ನಮ್ಮ ಕನಸು ನನಸಾಗುವುದಿಲ್ಲ. ಈ ತಿದ್ದುಪಡಿ ದೇಶದ ವಿರುದ್ಧವಾಗಿದೆ” ಎಂದು ಹೇಳಿದರು.
ಕೇರಳ : ಆಶಾ ಕಾರ್ಯಕರ್ತರಿಂದ ತೀವ್ರ ಪ್ರತಿಭಟನೆ, ಸಚಿವಾಲಯಕ್ಕೆ ಮುತ್ತಿಗೆ


