Homeಮುಖಪುಟಭಗವದ್ಗೀತೆ ಕಾರ್ಯಕ್ರಮದಲ್ಲಿ ಚಿಕನ್ ಪಫ್ಸ್ ಮಾರಿದ ಮುಸ್ಲಿಂ ವ್ಯಾಪಾರಿಗೆ ಥಳಿತ : ಮೂವರ ಬಂಧನ

ಭಗವದ್ಗೀತೆ ಕಾರ್ಯಕ್ರಮದಲ್ಲಿ ಚಿಕನ್ ಪಫ್ಸ್ ಮಾರಿದ ಮುಸ್ಲಿಂ ವ್ಯಾಪಾರಿಗೆ ಥಳಿತ : ಮೂವರ ಬಂಧನ

ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಲು ಕೋರಿ ಹೈಕೋರ್ಟ್ ನ್ಯಾಯಾಧೀಶರಿಗೆ ಪತ್ರ

- Advertisement -
- Advertisement -

ಲಕ್ಷ ಕಂಠ ಗೀತಾ ಪಾರಾಯಣ (ಸುಮಾರು 5 ಲಕ್ಷ ಜನರಿಂದ ಭಗವದ್ಗೀತೆ ಪಾರಾಯಣ) ಕಾರ್ಯಕ್ರಮದಲ್ಲಿ ಚಿಕನ್ ಪಫ್ಸ್ ಮಾರಿದ ಬಡ ಮುಸ್ಲಿಂ ವ್ಯಾಪಾರಿಗೆ ಥಳಿಸಿದ ಘಟನೆ ಭಾನುವಾರ (ಡಿಸೆಂಬರ್ 7) ಕೋಲ್ಕತ್ತಾದ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ನಡೆದಿದೆ.

ಈ ಕುರಿತ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಸಂಬಂಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಲು ಕೋರಿ ಕಲ್ಕತ್ತಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ.

ಘಟನೆ ಸಂಬಂಧ ಪ್ರಮುಖ ಆರೋಪಿಗಳಾದ ಸೌಮಿಕ್ ಗೋಲ್ಡರ್ (23), ಸ್ವರ್ಣೇಂದು ಚಕ್ರವರ್ತಿ (32) ಮತ್ತು ತರುಣ್ ಭಟ್ಟಾಚಾರ್ಯ (51) ಅವರನ್ನು ಬುಧವಾರ (ಡಿಸೆಂಬರ್ 11) ಬೆಳಿಗ್ಗೆ ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಬಂಧಿತರ ವಿರುದ್ದ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್‌) ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ. ಸೌಮಿಕ್ ಗೋಲ್ಡರ್ ಪ್ರಕರಣ ಪ್ರಮುಖ ಆರೋಪಿ ಎಂದು ಗುರುತಿಸಲಾಗಿದೆ.

ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ರಾಜಕೀಯ ಸಮಾವೇಶಗಳು ಸೇರಿದಂತೆ ವಿವಿಧ ರೀತಿಯ ಬೃಹತ್ ಕಾರ್ಯಕ್ರಮಗಳು ನಡೆಯುವಾಗ ಕಲರ್‌ಫುಲ್ ಟ್ಯೂಬ್ ಪಾಪಡ್, (ಬಣ್ಣದ ನಳಿಕೆ ರೀತಿಯ ಹಪ್ಪಳ), ಲೋಝೆಂಜ್‌ಗಳು (ಮಾತ್ರೆ ರೀತಿಯ ಬಣ್ಣ ತಿಂಡಿಗಳು), ಕಾಟನ್ ಕ್ಯಾಂಡಿ, ಸ್ಕಿನ್ನಿ ಐಸ್‌ಕ್ರೀಮ್ ಸ್ಟಿಕ್‌ಗಳು ಇತ್ಯಾದಿ ಸಣ್ಣಪುಟ್ಟ ತಿಂಡಿ-ತಿನಿಸುಗಳನ್ನು ಮಾರಿ ಜೀವನ ನಡೆಸುವ ನೂರಾರು ಮಂದಿಯಿದ್ದಾರೆ.

ಅಂತಹ ಮಾರಾಟಗಾರರಲ್ಲಿ ಹಲ್ಲೆಗೊಳಗಾದ ಶೇಖ್ ರಿಯಾಝುಲ್ ಕೂಡ ಒಬ್ಬರು. ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಅರಂಬಾಗ್ ನಿವಾಸಿಯಾದ ಇವರು, ಸುಮಾರು ಇಪ್ಪತ್ತು ವರ್ಷಗಳಿಂದ ಕೋಲ್ಕತ್ತಾದಲ್ಲಿ ಪಫ್ಸ್ ಮಾರಾಟ ಮಾಡುತ್ತಿದ್ದಾರೆ ಎಂದು ದಿ ವೈರ್ ವರದಿ ಹೇಳಿದೆ.

ಭಾನುವಾರದ ಭಗವದ್ಗೀತೆ ಕಾರ್ಯಕ್ರಮದಲ್ಲಿ ಜನಸ್ತೋಮದ ನಡುವೆ ರಿಯಾಝುಲ್ ಅವರು ವೆಜ್ ಮತ್ತು ಚಿಕನ್ ಎರಡೂ ರೀತಿಯ ಪಫ್ಸ್‌ಗಳನ್ನು ಬಾಕ್ಸ್‌ವೊಂದರಲ್ಲಿ ಹಾಕಿಕೊಂಡು ಮಾರಾಟ ಮಾಡುತ್ತಿದ್ದರು.

ಈ ವೇಳೆ, ಕೆಲವರು ನಿಮ್ಮ ಬಾಕ್ಸ್‌ನಲ್ಲಿ ಚಿಕನ್ ಪಫ್ಸ್ ಇದೆಯಾ? ಎಂದು ರಿಯಾಝುಲ್ ಅವರಿಗೆ ಕೇಳಿದ್ದಾರೆ. ರಿಯಾಝುಲ್ ಇದೆ ಎಂದಾಗ ಅವರು ಥಳಿಸಲು ಶುರು ಮಾಡಿದ್ದಾರೆ. ರಿಯಾಝುಲ್ ಅವರ ಹೆಸರು ಗೊತ್ತಾದ ಮೇಲೆ ಇನ್ನಷ್ಟು ತೀವ್ರವಾಗಿ ಥಳಿಸಿದ್ದಾರೆ. ಅಲ್ಲದೆ, ಬಸ್ಕಿ ಹೊಡೆಸಿದ್ದಾರೆ ಎಂದು ದಿ ವೈರ್ ವರದಿ ವಿವರಿಸಿದೆ.

“ಅವರು ನನ್ನಲ್ಲಿದ್ದ 3 ಸಾವಿರ ರೂಪಾಯಿ ವಸ್ತುವನ್ನು ಹಾಳುಗಡೆವಿದರು. ಆ ಮೊತ್ತ ನನ್ನ ಒಂದು ವಾರದ ಆದಾಯಕ್ಕಿಂತ ಹೆಚ್ಚು” ಎಂದು ರಿಯಾಝುಲ್ ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.

ರಿಯಾಝುಲ್ ಪ್ರತಿದಿನ ಕೋಲ್ಕತ್ತಾದ ಮಧ್ಯಭಾಗದಲ್ಲಿರುವ ಬೇಕರಿಯೊಂದರಿಂದ ವೋಲ್‌ಸೇಲ್ ದರದಲ್ಲಿ ಪಫ್ಸ್ ಖರೀದಿಸಿ, ನಗರದ ವಿವಿಧ ಭಾಗಗಳಲ್ಲಿ ನಡೆದುಕೊಂಡು ಹೋಗಿ ಅವುಗಳನ್ನು ಮಾರಾಟ ಮಾಡುತ್ತಿದ್ದರು. ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ಫುಟ್ಬಾಲ್ ಪಂದ್ಯಗಳು ಅಥವಾ ದೊಡ್ಡ ರಾಜಕೀಯ ಸಮಾವೇಶಗಳು ಇದ್ದರೆ, ಅಲ್ಲಿಯೇ ವ್ಯಾಪಾರ ಮಾಡಿ ದಿನವೊಂದಕ್ಕೆ 500 ರಿಂದ 1,000 ರೂ.ಗಳವರೆಗೆ ಗಳಿಸುತ್ತಿದ್ದರು. ಸಾಮಾನ್ಯ ದಿನಗಳಲ್ಲಿ, ಅವರ ಆದಾಯ 200-300 ರೂ. ಇತ್ತು. ತಲಾ 30-35 ರೂ. ಬೆಲೆಗೆ ಪಫ್ಸ್ ಮಾರುತ್ತಿದ್ದರು. ಕೆಲಸ ನಿಮಿತ್ತ ನಗರದ ಖಿದ್ದರ್ಪೋರ್‌ನಲ್ಲಿ ವಾಸಿಸುತ್ತಿದ್ದರು.

ರಿಯಾಝುಲ್ ಈ ಪಫ್ಸ್ ಮಾರಿಯೇ ಜೀವನದ ಬಂಡಿ ಓಡಿಸುತ್ತಿದ್ದರು. ಅವರಿಗೆ ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳಿದ್ದಾರೆ. ಹಿರಿಯ ಮಗ ಹೈದರಾಬಾದ್‌ನಲ್ಲಿ ಆಭರಣ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರೆ, ಕಿರಿಯ ಮಗ ವರ್ಕ್‌ಶಾಪ್‌ ಒಂದರಲ್ಲಿ ಅಪ್ರೆಂಟಿಸ್ ಆಗಿದ್ದಾನೆ.

ಹಲ್ಲೆಯ ವಿಡಿಯೋ ಬಹಿರಂಗವಾದಾಗಿನಿಂದ ನನ್ನ ಕುಟುಂಬ ಭಯದಿಂದ ಬದುಕುತ್ತಿದೆ ಎಂದು ರಿಯಾಝುಲ್ ಹೇಳಿಕೊಂಡಿದ್ದಾರೆ. “ನನಗೆ ಏನಾಯಿತು ಎಂದು ನನ್ನ ಮನೆಯವರು ಅಳುತ್ತಿದ್ದಾರೆ. ಅವರು ಭಯಭೀತರಾಗಿದ್ದಾರೆ. ನಾನು ಕಡು ಬಡವ. ಈಗ ನನಗೆ ನನ್ನ ಕುಟುಂಬದ ಭವಿಷ್ಯದ ಚಿಂತೆಯಾಗಿದೆ. ನಾನು ಯಾರನ್ನೂ ಮಾಂಸಹಾರ ಖರೀದಿಸಲು ಒತ್ತಾಯಿಸಿಲ್ಲ. ಆದರೂ, ಅವರು ನನಗೆ ಏಕೆ ಹೊಡೆದರು ಎಂದು ಗೊತ್ತಿಲ್ಲ” ಎಂದಿದ್ದಾರೆ.

ರಿಯಾಝುಲ್ ಮೇಲೆ ಹಲ್ಲೆ ನಡೆದಿರುವುದು ಒಂದು ಘಟನೆ ಮಾತ್ರವಲ್ಲ. ಟೋಪ್ಸಿಯಾ ಮೂಲದ ಶೇಖ್ ಸಲಾವುದ್ದೀನ್ ಎಂಬ ಮಾರಾಟಗಾರ ಸೇರಿದಂತೆ ಕನಿಷ್ಠ ಇಬ್ಬರು ಇತರ ಪಫ್ಸ್ ಮಾರಾಟಗಾರರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ವರದಿಯಾಗಿದೆ.

“ಅವತ್ತು ನನ್ನ ಮೇಲೆಯೂ ಹಲ್ಲೆ ನಡೆಯುತ್ತಿತ್ತು. ಆದರೆ, ನಾನು ಆಗಲೇ ಮನೆಗೆ ಹೋದ ಕಾರಣ ಸ್ವಲ್ಪದರಲ್ಲಿ ಪಾರಾದೆ. ನಮ್ಮಲ್ಲಿ ಸುಮಾರು 15ರಿಂದ 20 ಜನರು ಪಫ್ಸ್ ಮಾರುತ್ತಾರೆ. ದುರ್ಗಾ ಪೂಜೆಯಿಂದ ಹಿಡಿದು ವಿವಿಧ ಪಂದ್ಯಾಟಗಳವರೆಗೆ ವಿವಿಧ ಕಾರ್ಯಕ್ರಮಗಳಲ್ಲಿ ಹಲವು ವರ್ಷಗಳಿಂದ ನಾವು ಪಫ್ಸ್ ಮಾರಿದ್ದೇವೆ. ಎಂದಿಗೂ ಇಂತಹ ಅನುಭ ಆಗಿಲ್ಲ ಎಂದು ರಿಯಾಝುಲ್ ಅವರ ಸ್ನೇಹಿತ ಹಾಗೂ ಪಫ್ಸ್ ಮಾರಾಟಗಾರ ಶೇಖ್ ಮೊಯ್ದುಲ್ ಇಸ್ಲಾಂ ಹೇಳಿರುವುದಾಗಿ ದಿ ವೈರ್‌ ತಿಳಿಸಿದೆ.

ರಿಯಾಝುಲ್ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕಿಸ್ಟ್) (ಸಿಪಿಐ(ಎಂ)) ನಾಯಕ ಮತ್ತು ವಕೀಲ ಸಯಾನ್ ಬಂಡೋಪಾಧ್ಯಾಯ ಅವರು ಕಲ್ಕತ್ತಾ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸುಜಯ್ ಪಾಲ್ ಅವರಿಗೆ ಪತ್ರ ಬರೆದು, ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳ ಅನುಸಾರ ಇದು ಗುಂಪು ಹತ್ಯೆಗೆ ಸಮಾನವಾದ ಪ್ರಕರಣ ಎಂದಿದ್ದಾರೆ. ನ್ಯಾಯಾಲಯ ಸ್ವಯಂ ಪ್ರೇರಿತ ಪ್ರಕರಣ ಕೈಗೆತ್ತಿಕೊಳ್ಳಲು ಮನವಿ ಮಾಡಿದ್ದಾರೆ.

ಬಂಡೋಪಾಧ್ಯಾಯ ಅವರು ಸೋಮವಾರ (ಡಿಸೆಂಬರ್ 8) ಮಧ್ಯಾಹ್ನ ಕೋಲ್ಕತ್ತಾದ ಮೈದಾನ್ ಪೊಲೀಸ್ ಠಾಣೆಗೆ ಭೇಟಿ ನೀಡಿ ನೇರವಾಗಿ ಘಟನೆ ಸಂಬಂಧ ದೂರು ದಾಖಲಿಸಿದ್ದಾರೆ. ದೂರಿನ ಜೊತೆಗೆ ಹೈಕೋರ್ಟ್ ನ್ಯಾಯಾಧೀಶರಿಗೆ ಬರೆದ ಪತ್ರದ ಪ್ರತಿಯನ್ನೂ ಸಲ್ಲಿಸಿದ್ದಾರೆ.

ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳ ಪ್ರಕಾರ, ಗುಂಪು ಹಲ್ಲೆ ಕೂಡ ‘ಗುಂಪು ಹತ್ಯೆ’ಯ ವ್ಯಾಪ್ತಿಗೆ ಬರುತ್ತದೆ. ಈ ಘಟನೆ ಕೋಲ್ಕತ್ತಾದ ಹೃದಯ ಭಾಗದಲ್ಲಿ ನಡೆದಿದೆ, ದೂರದ ಜಿಲ್ಲೆಯಲ್ಲಿ ಅಲ್ಲ. ಇಂತಹ ಘಟನೆ ನಗರದ ಮಧ್ಯಭಾಗದಲ್ಲಿ ನಡೆದಿದ್ದರೂ ಕೋಲ್ಕತ್ತಾ ಪೊಲೀಸರು ಮೌನವಾಗಿದ್ದಾರೆ. ಅವರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕಿತ್ತು ಎಂದು ಬಂಡೋಪಾಧ್ಯಾಯ ಹೇಳಿದ್ದರು.

ಪ್ರಮುಖ ಆರೋಪಿ ಉತ್ತರ 24 ಪರಗಣ ಜಿಲ್ಲೆಯ ಬಿಜೆಪಿ ಪದಾಧಿಕಾರಿ ಎಂದು ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಂಡಿದ್ದಾರೆ. ಆದರೆ, ಈ ಬಗ್ಗೆ ಪೊಲೀಸರು ಖಚಿತಪಡಿಸಿಲ್ಲ.

ಸಿಪಿಐ(ಎಂ) ನಾಯಕಿ ದೀಪ್ಸಿತಾ ಧರ್ ರಿಯಾಝುಲ್ ಮೇಲಿನ ದಾಳಿಯ ವಿರುದ್ಧ ಮೊದಲು ಧ್ವನಿ ಎತ್ತಿದವರು. ಇವರು ಸಂತ್ರಸ್ತ ವ್ಯಾಪಾರಿಗಳಿಗೆ ಪರಿಹಾರ ನೀಡಲು ನಿಧಿಸಂಗ್ರಹ ಅಭಿಯಾನ ಪ್ರಾರಂಭಿಸಿದ್ದಾರೆ.

ಮಾಂಸಹಾರ ಸಾಮಾನ್ಯವಾಗಿರುವ ಬಂಗಾಳದಂತಹ ಸ್ಥಳದಲ್ಲಿ ಮಾಂಸಹಾರ ಮಾರಾಟದ ಹೆಸರಿನಲ್ಲಿ ಹಲ್ಲೆ ನಡೆದಿರುವುದು ಆಶ್ಚರ್ಯಕರ. ವೈರಲ್ ವಿಡಿಯೋದಲ್ಲಿ ಹಲ್ಲೆಕೋರರು ಸ್ಪಷ್ಟವಾಗಿ ಗೋಚರಿಸುತ್ತಿದ್ದರೂ ಪೊಲೀಸರು ಯಾರನ್ನೂ ಬಂಧಿಸಿಲ್ಲ ಏಕೆ? ಚುನಾವಣಾ ಲಾಭಕ್ಕಾಗಿ ಈ ದ್ವೇಷ ಸಂಸ್ಕೃತಿಯನ್ನು ಪ್ರೋತ್ಸಾಹಿಸಲಾಗುತ್ತಿದೆಯೇ ಎಂದು ನಾನು ಬಿಜೆಪಿ ಮತ್ತು ಟಿಎಂಸಿ ಎರಡನ್ನೂ ಪ್ರಶ್ನಿಸಲು ಬಯಸುತ್ತೇವೆ ಎಂದು ದೀಪ್ಸಿತಾ ಧರ್ ಹೇಳಿದ್ದರು.

“ನೀವು ಮಾಂಸಾಹಾರ ತಿನ್ನದಿದ್ದರೆ ಖರೀದಿಸಬೇಡಿ, ಆದರೆ ಮಾರಾಟಗಾರನಿಗೆ ಥಳಿಸಿದ್ದು ಏಕೆ? ಅದು ಅವರ ಜೀವನೋಪಾಯ. ನಾನು ಈ ಘಟನೆಯನ್ನು ಖಂಡಿಸುತ್ತೇನೆ” ಎಂದು ಟಿಎಂಸಿ ವಕ್ತಾರ ಕುನಾಲ್ ಘೋಷ್ ಬರೆದುಕೊಂಡಿದ್ದರು.

Courtesy : thewire.in

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...

ಖ್ಯಾತ ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್ ನಿಧನ

ಖ್ಯಾತ ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್ (82 ವರ್ಷ) ಅವರು ಬುಧವಾರ (ಜನವರಿ 7, 2026) ತಡರಾತ್ರಿ ಪುಣೆಯಲ್ಲಿರುವ ತಮ್ಮ ಮನೆಯಲ್ಲಿ ಅಲ್ಪಕಾಲದ ಅನಾರೋಗ್ಯದ ನಂತರ ನಿಧನರಾದರು. ಈ ಕುರಿತು ಗಾಡ್ಗೀಳ್ ಅವರ...