Homeಮುಖಪುಟಕೊರೊನಾ ಕಾಲದಲ್ಲಿಯೂ ಬಡ್ಡಿಗೆ ಬಡ್ಡಿ ಸೇರಿಸಿ ಹಣ ವಸೂಲಿ: ಮುತ್ತೂಟ್ ಫೈನಾನ್ಸ್‌ನಿಂದ ಗ್ರಾಹಕರಿಗೆ ಕಿರುಕುಳ ಆರೋಪ

ಕೊರೊನಾ ಕಾಲದಲ್ಲಿಯೂ ಬಡ್ಡಿಗೆ ಬಡ್ಡಿ ಸೇರಿಸಿ ಹಣ ವಸೂಲಿ: ಮುತ್ತೂಟ್ ಫೈನಾನ್ಸ್‌ನಿಂದ ಗ್ರಾಹಕರಿಗೆ ಕಿರುಕುಳ ಆರೋಪ

- Advertisement -
- Advertisement -

ಕೊರೊನಾ ಸಂಕಷ್ಟದ ಕಾಲದಲ್ಲೂ ಮುತ್ತೂಟ್ ಫೈನಾನ್ಸ್ ಗ್ರಾಹಕರಿಂದ ಬಡ್ಡಿಗೆ ಬಡ್ಡಿ ಸೇರಿಸಿ ವಸೂಲಿಯಲ್ಲಿ ತೊಡಗಿದೆ. ಜನ ಸಂಕಷ್ಟದಲ್ಲಿದ್ದು ಸೆಪ್ಟೆಂಬರ್ ತಿಂಗಳವರೆಗೆ ಕಂತುಗಳನ್ನು ಕಟ್ಟಬಾರದು ಎಂದು ಆರ್.ಬಿ.ಐ  ಸೂಚನೆ ನೀಡಿರುವ ನಡುವೆಯೂ ಮುತ್ತೂಟ್ ಫೈನಾನ್ಸ್ ಸಾಲ ವಸೂಲಿಗೆ ಕಿರುಕುಳ ನೀಡುತ್ತಿದೆ ಎಂದು ಗ್ರಾಹಕರು ಆರೋಪಿಸಿದ್ದಾರೆ.

ಈಗ ಕೊರೊನಾ ಲಾಕ್ ಡೌನ್ ಸಡಿಲಿಕೆಯಾಗಿದೆ ಆದರೂ ಸಾಲದ ಕಂತುಗಳನ್ನು ಗ್ರಾಹಕರು ಸ್ವಯಂಪ್ರೇರಿತರಾಗಿ ಕಟ್ಟಬಹುದೇ ಹೊರತು ಯಾವುದೇ ಬ್ಯಾಂಕ್, ಸಹಕಾರಿ ಬ್ಯಾಂಕುಗಳು ಮತ್ತು ಪೈನಾನ್ಸ್ ಗಳು ಸಾಲವನ್ನು ಬಲವಂತವಾಗಿ ವಸೂಲಿ ಮಾಡುವಂತಿಲ್ಲ. ಇದು ಆರ್.ಬಿ.ಐ ನಿಯಮ. ಆದರು ಆರ್.ಬಿ.ಐ ಸೂಚನೆಯನ್ನು ಮುತ್ತೂಟ್ ಫೈನಾನ್ಸ್ ಉಲ್ಲಂಘಿಸಿ ಗ್ರಾಹಕರಿಂದ ಡಬಲ್ ಬಡ್ಡಿ ವಸೂಲಿ ಮಾಡುತ್ತಿದೆ.

ಮುತ್ತೂಟ್ ಫೈನಾನ್ಸ್ ನಿಂದ ಸಾವಿರಗಳಿಂದ ಹಿಡಿದು ಲಕ್ಷ ರೂಗಳವರೆಗೆ ಚಿನ್ನಾಭರಣಗಳ ಮೇಲೆ ಗ್ರಾಹಕರು ಸಾಲ ತೆಗೆದುಕೊಂಡಿದ್ದಾರೆ. ಹೀಗಾಗಿ ಒಂದು ಲಕ್ಷ ಸಾಲ ಪಡೆದಿದ್ದರೆ ಈಗ ಮುತ್ತೂಟ್ ಫೈನಾನ್ಸ್ 2 ಲಕ್ಷ ರೂ ವಸೂಲಿ ಮಾಡುತ್ತಿದೆ ಎಂದು ನೊಂದ ಗ್ರಾಹಕರು ಆರೋಪಿಸಿದ್ದು ಖಾಸಗಿ ಫೈನಾನ್ಸ್ ಗಳ ಕಿರುಕುಳಕ್ಕೆ ಸ್ಪಷ್ಟ ನಿದರ್ಶನವಾಗಿದೆ.

ತುಮಕೂರಿನ ಕಾಲ್ ಟ್ಯಾಕ್ಸ್ ಸಮೀಪ ಗುಬ್ಬಿ ರಸ್ತೆಯಲ್ಲಿ ಮುತ್ತೋಟ್ ಫೈನಾನ್ಸ್ ಶಾಖೆ ಇದೆ. ಇದರಲ್ಲಿ ಸುಮಾರು 500 ಮಂದಿ ಗ್ರಾಹಕರು ಚಿನ್ನದ ಮೇಲೆ ಸಾಲ ಪಡೆದಿದ್ದಾರೆ. ಎಲ್ಲರಿಗೂ ನೋಟಿಸ್ ನೀಡಿರುವ ಮುತ್ತೋಟ್ ಫೈನಾನ್ಸ್ ಸಾಲ ನೀಡುವಂತೆ ಕಿರುಕುಳ ನೀಡಲು ಆರಂಭಿಸಿದ್ದು ಗ್ರಾಹಕರು ಇಕ್ಕಟ್ಟಿಗೆ ಸಿಲುಕು ವಂತೆ ಮಾಢಿದೆ.

ಗ್ರಾಹಕರಿಗೆ ಶಾಪವಾದ ಮುತ್ತೂಟ್ ಫೈನಾನ್ಸ್

ಕೊರೊನಾ ಕಾಲದಲ್ಲಿಯೂ ಬಡ್ಡಿಗೆ ಬಡ್ಡಿ ಸೇರಿಸಿ ಹಣ ವಸೂಲಿ: ‌ನಿಂದ ಗ್ರಾಹಕರಿಗೆ ಕಿರುಕುಳ ಆರೋಪ. ನಾನುಗೌರಿ.ಕಾಂ ಜೊತೆ ಮಾಹಿತಿ ಹಂಚಿಕೊಂಡ ಗ್ರಾಹಕ ರವಿಕುಮಾರ್..

Posted by Naanu Gauri on Sunday, June 21, 2020

ಗ್ರಾಹಕ ರವಿಕುಮಾರ್ ನಾನುಗೌರಿ.ಕಾಂ ಜೊತೆ ಮಾಹಿತಿ ಹಂಚಿಕೊಂಡರು. ನಾನು ಒಡವೆ ಇಟ್ಟು 50 ಸಾವಿರ ಸಾಲ ಪಡೆದಿದ್ದೇನೆ. ಪ್ರತಿ ತಿಂಗಳು 500 ರೂಪಾಯಿ ಬಡ್ಡಿ ಬರುತ್ತದೆ. ಕೊರೊನಾ ಸಂಕಷ್ಟದ ಕಾರಣಕ್ಕೆ ಕಳೆದ ಮೂರು ತಿಂಗಳಿಂದ ಬಡ್ಡಿ ಕಟ್ಟಿಲ್ಲ. ಈಗ ಮೂರು ತಿಂಗಳಿಗೆ 1500 ರೂ ಬಡ್ಡಿ ಬಂದಿದೆ. ಮುತ್ತೂಟ್ ಫೈನಾನ್ಸ್ ಕಚೇರಿಗೆ ಹೋಗಿ ಕೇಳಿದರೆ 3800 ರೂ ಬಡ್ಡಿ ಕಟ್ಟಬೇಕು ಎಂದು ಹೇಳುತ್ತಿದ್ದಾರೆ. ಯಾಕೆ ಎರಡುಪಟ್ಟು ಬಡ್ಡಿ ಹಾಕಿದ್ದೀರ ಅಂದ್ರ ಮ್ಯಾನೇಜರ್ ಕೇಳಿ ಅನ್ನುತ್ತಾರೆ. ನಾನು ಮೂರು ತಿಂಗಳ 1500 ರೂ ಬಡ್ಡಿಯನ್ನು ಕಟ್ಟುತ್ತೇನೆ. ಬಡ್ಡಿ ಮೇಲಿನ ಬಡ್ಡಿಯನ್ನು ಕಟ್ಟಲಾರೆ ಎಂದು ನೊಂದು ನುಡಿದರು.

ಕೊರೊನಾ ಬಂದು ಜನರನ್ನು ಕಂಗೆಡಿಸಿದೆ. ಯಾವುದೇ ವ್ಯಾಪಾರವಿಲ್ಲ. ನಾನು ಬೀದಿಬದಿ ವ್ಯಾಪಾರಿ. ಕಳೆದ ಮೂರು ತಿಂಗಳಿಂದ ವ್ಯಾಪಾರ ನಡೆಸಲು ಆಗಿಲ್ಲ. ಈಗ ಲಾಕ್ ಡೌನ್ ಸಡಿಲಿಕೆಯಾಗಿದೆ. ವ್ಯಾಪಾರ ನಡೆಯುತ್ತಿಲ್ಲ. ಮನೆ ಬಾಡಿಗೆ ಕಟ್ಟಲು ಸಾಧ್ಯವಾಗುತ್ತಿಲ್ಲ. ಇದರ ನಡುವೆ ಫೈನಾನ್ಸ್ ನವರು ಸಾಲ ನೀಡುವಂತೆ ಕಿರುಕುಳ ನೀಡುತ್ತಿದ್ದಾರೆ. ಕೈಗೆ ಕೆಲವಿಲ್ಲ. ಜೇಬಿನಲ್ಲಿ ಹಣವಿಲ್ಲ. ಎಲ್ಲಿಂದ ತಂದು ಕಟ್ಟುವುದು. ಸೆಪ್ಟಂಬರ್ ವರೆಗೆ ಕಂತು ಕಟ್ಟದಿದ್ದರೂ ನಡೆಯುತ್ತೆ ಎಂದು ಹೇಳಲಾಗುತ್ತಿದೆ. ಇಲ್ಲಿ ನೋಡಿದರೆ ಮೂರು ತಿಂಗಳ ಬಡ್ಡಿಯನ್ನು ಒಂದೇ ಬಾರಿಗೆ ಕಟ್ಟಬೇಕೆಂದರೆ ಹೇಗೆ ಸಾಧ್ಯ ಎನ್ನುತ್ತಾರೆ ಚಂದ್ರಪ್ಪ.

ಗ್ರಾಹಕರು ಸ್ವಯಂ ಪ್ರೇರಿತರಾಗಿ ಬಡ್ಡಿ ಕಟ್ಟಲು ಮುಂದಾದರೂ ಈಗ ತೊಂದರೆ ಅನುಭವಿಸುವಂತಹ ಪರಿಸ್ಥಿತಿ ಉದ್ಭವಿಸಿದೆ. ಎರಡು ಪಟ್ಟು ಬಡ್ಡಿ ಕಟ್ಟಲು ಸಾಧ್ಯವಾಗದೆ ಗ್ರಾಹಕರು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ. ಬಡ್ಡಿ ಕಟ್ಟದವರಿಗೆ ನೋಟೀಸ್ ನೀಡಲಾಗುತ್ತಿದೆ. ಇದರಿಂದ ಗ್ರಾಹಕರು ಸಂಕಟದಲ್ಲಿ ಮುಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಮತ್ತೊಂದು ಕಡೆ ಸ್ತ್ರೀಶಕ್ತಿ ಸಂಘಗಳು ಮತ್ತು ಮಹಿಳಾ ಸ್ವಸಹಾಯ ಸಂಘಗಳು ಮೈಕ್ರೋ ಫೈನಾನ್ಸ್ ನಿಂದ ಸಾಲ ತೆಗೆದುಕೊಂಡಿದ್ದು, ಸಾಲಗಾರರು ನಿತ್ಯವು ಮನೆ ಬಾಗಿಲಿಗೆ ಬಂದು ಸಾಲ ಕಟ್ಟುವಂತೆ ತೊಂದರೆ ನೀಡುತ್ತಿದ್ದಾರೆ ಎಂದು ಹೆಸರು ಹೇಳಲು ಇಚ್ಚಿಸದ ಮಹಿಳೆಯೊಬ್ಬರು ಆರೋಪಿಸಿದ್ದಾರೆ.

ಮುತ್ತೋಟ್ ಫೈನಾನ್ಸ್ ಮತ್ತು ಮೈಕ್ರೋ ಫೈನಾನ್ಸ್ ನವರು ಕಷ್ಟ ಕಾಲದಲ್ಲಿ ಸಾಲ ಕಟ್ಟುವಂತೆ ಕಿರುಕುಳ ನೀಡುತ್ತಿರುವುದರಿಂದ ಗ್ರಾಹಕರು ಹೋರಾಟಕ್ಕೆ ಮುಂದಾಗಿದ್ದಾರೆ. ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ಸಿದ್ದತೆ ನಡೆಸಿದ್ದಾರೆ.


ಇದನ್ನೂ ಓದಿ : ದುಡ್ಡು ಕಟ್ಟಲಾಗದಿದ್ದರೆ ಸತ್ತೋಗಿ; ಕೊರೊನಾ ಸಮಯದಲ್ಲೂ ರಕ್ತ ಹೀರುತ್ತಿರುವ ಫೈನಾನ್ಸ್‌ಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್, ಕೆ. ಕವಿತಾಗೆ ನೋ ರಿಲೀಫ್‌: ನ್ಯಾಯಾಂಗ ಬಂಧನ ಮೇ 7ರವರೆಗೆ ವಿಸ್ತರಣೆ

0
ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕಿ ಕೆ ಕವಿತಾ ಅವರ ನ್ಯಾಯಾಂಗ ಬಂಧನವನ್ನು...