ಸುಪ್ರೀಂ ಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ರೋಹಿಂಟನ್ ಫಾಲಿ ನಾರಿಮನ್ ಅವರು “ಭಾರತಕ್ಕೆ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿ ಆಗುವ ಸಮಯ ತುಂಬಾ ದೂರ ಇಲ್ಲ” ಎಂದು ಶುಕ್ರವಾರ ಹೇಳಿದ್ದಾರೆ. ‘ಇತಿಹಾಸದ ಶ್ರೇಷ್ಠ ಮಹಿಳೆಯರು’ ಎಂಬ ವಿಷಯದ ಕುರಿತು 26 ನೇ ನ್ಯಾಯಮೂರ್ತಿ ಸುನಂದಾ ಭಂಡಾರೆ ಸ್ಮಾರಕ ಉಪನ್ಯಾಸ ನೀಡುವಾಗ ಅವರು ಈ ವಿಷಯ ತಿಳಿಸಿದ್ದಾರೆ.
20 ನೇ ಶತಮಾನದಲ್ಲಿ ಮಹಿಳಾ ನಾಯಕತ್ವದ ಕುರಿತು ಮಾತನಾಡಿದ ಅವರು, “1960 ರ ದಶಕವು ಹಲವು ಮಹಿಳಾ ಪ್ರಧಾನ ಮಂತ್ರಿಗಳು ಆಯ್ಕೆಯಾಗಿದ್ದರು. ಸಿಲೋನ್‌ನಲ್ಲಿ ಮೊದಲ ಬಾರಿಗೆ ಸಿರಿಮಾವೊ ಬಂಡರನಾಯ್ಕ, ಭಾರತದಲ್ಲಿ ಇಂದಿರಾ ಗಾಂಧಿ, ಇಸ್ರೇಲ್‌ನಲ್ಲಿ ಗೋಲ್ಡಾ ಮೀರ್, ಅಂದಿನಿಂದ 125 ಮಹಿಳೆಯರು ರಾಷ್ಟ್ರಗಳ ಅಧ್ಯಕ್ಷರಾಗಲಿ ಅಥವಾ ಪ್ರಧಾನ ಮಂತ್ರಿಯಾಗಲಿ ಆಗಿದ್ದಾರೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದು: ಕುಂಭಮೇಳ ಸಾಂಕೇತಿಕವಾಗಿಸಬೇಕು, ಇದು ಕೊರೊನಾ ವಿರುದ್ಧದ ಹೋರಾಟಕ್ಕೆ ಬಲ ತರುತ್ತದೆ: ಪ್ರಧಾನಿ ಮೋದಿ
“ಭಾರತದಲ್ಲಿ, ನಾವು ನಾವು ಮಹಿಳಾ ಅಧ್ಯಕ್ಷರನ್ನು ಹೊಂದಿದ್ದೇವೆ, ನಾವು ಮಹಿಳಾ ಪ್ರಧಾನ ಮಂತ್ರಿಯನ್ನು ಹೊಂದಿದ್ದೇವೆ. ಆದರೆ ದುರದೃಷ್ಟವಶಾತ್, ನಾವು ಎಂದಿಗೂ ಮಹಿಳಾ ಮುಖ್ಯ ನ್ಯಾಯಮೂರ್ತಿಗಳನ್ನು ಹೊಂದಿಲ್ಲ” ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ದಿವಂಗತ ನ್ಯಾಯಮೂರ್ತಿ ಭಂಡಾರೆ ಬಹುಶಃ ಭಾರತದ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗುವ ಅಭ್ಯರ್ಥಿಯಾಗಿದ್ದರು. ದುರದೃಷ್ಟವಶಾತ್, ಅವರ ಜೀವನವು ಅವರೊಂದಿಗೆ ಕ್ರೂರವಾಗಿ ವರ್ತಿಸಿ ವೃತ್ತಿಜೀವನವನ್ನು ಮೊಟಕುಗೊಳಿಸಿತು. ಆದರೆ ಭಾರತಕ್ಕೆ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿ ಆಗುವ ಸಮಯ ತುಂಬಾ ದೂರ ಇಲ್ಲ” ಎಂದು ಅವರು ಹೇಳಿದ್ದಾರೆ.
ಇತ್ತಿಚೆಗೆ ಭಾರತದ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ಅವರು ಅವರುಯ ಕೂಡಾ “ಮಹಿಳಾ ಮುಖ್ಯ ನ್ಯಾಯಮೂರ್ತಿಯ ಸಮಯ ಬಂದಿದೆ” ಎಂದು ಹೇಳಿದ್ದರು.
ಹೈಕೋರ್ಟ್‌ಗಳಲ್ಲಿ ನ್ಯಾಯಾಧೀಶರಾಗಿ ನೇಮಕಗೊಳ್ಳಲು ಹೆಚ್ಚಿನ ಮಹಿಳೆಯರನ್ನು ಪರಿಗಣಿಸಲು ನ್ಯಾಯಾಲಯದ ಹಸ್ತಕ್ಷೇಪ ಕೋರಿ ಸುಪ್ರೀಂ ಕೋರ್ಟ್ ಮಹಿಳಾ ವಕೀಲರ ಸಂಘ ಸಲ್ಲಿಸಿದ್ದ ಮನವಿಯನ್ನು ಅವರ ನೇತೃತ್ವದ ನ್ಯಾಯಪೀಠ ವಿಚಾರಣೆ ನಡೆಸಿತ್ತು.
ಇದನ್ನೂ ಓದು: ಮಸ್ಕಿ: ಬಿಜೆಪಿ ಪರ ಹಣ ಹಂಚಿ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಹಾಸನದ ಯುವಕರ ಬಂಧನ



