Homeಚಳವಳಿರೈತರ ವಿರುದ್ಧ 'NAGA - ನರೇಂದ್ರ, ಅಮಿತ್‌, ಗೌತಮ್‌, ಅಂಬಾನಿ' ಕಂಪನಿ ನಿಂತಿದೆ: ಶ್ರೀ ಹರ್ಷಾನಂದ್‌ಜಿ...

ರೈತರ ವಿರುದ್ಧ ‘NAGA – ನರೇಂದ್ರ, ಅಮಿತ್‌, ಗೌತಮ್‌, ಅಂಬಾನಿ’ ಕಂಪನಿ ನಿಂತಿದೆ: ಶ್ರೀ ಹರ್ಷಾನಂದ್‌ಜಿ ಮಹಾರಾಜ್

ಜಗತ್ತಿನ ಎಲ್ಲ ವಸ್ತುಗಳನ್ನು ಮಾರುವವನು ನಿರ್ಧಾರ ಮಾಡುತ್ತಾನೆ. ಆದರೆ ರೈತನ ಫಸಲಿನ ಬೆಲೆಯನ್ನು ಮಾತ್ರ ಖರೀದಿಸುವವನು ನಿರ್ಧರಿಸುತ್ತಾನೆ

- Advertisement -

ರೈತರ ವಿರುದ್ಧ ‘ನಾಗ (NAGA)’ ಎಂಬ ಕಂಪನಿ ನಿಂತಿದೆ. ನಾಗ ಎಂದರೆ “ನರೇಂದ್ರ ಮೋದಿ, ಅಮಿತ್ ಶಾ‌, ಗೌತಮ್ ಅದಾನಿ,‌ ರಿಲಾಯನ್ಸ್ ಅಂಬಾನಿ” ಎಂದು ಯೋಗ ದರ್ಶನ ಪಾರಮಾರ್ಥಿಕ ಟ್ರಸ್ಟ್‌ ಸಂಸ್ಥಾಪಕ ಶ್ರೀ ಹರ್ಷಾನಂದಜಿ ಮಹಾರಾಜ್‌ ಅಭಿಪ್ರಾಯಪಟ್ಟಿದ್ದಾರೆ.

ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವ ಹರ್ಷಾನಂದ್‌ ಜಿ ಮಹರಾಜ್‌, ‘ಮಾಸ್‌ ಮೀಡಿಯಾ ಫೌಂಡೇಷನ್‌’ ಪ್ರತಿನಿಧಿಯೊಂದಿಗೆ ಮಾತಾಡುತ್ತಾ, ಕಾರ್ಪೋರೇಟ್‌ ಶಕ್ತಿಗಳಿಗಾಗಿ ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸಲಾಗಿದೆ ಎಂದಿದ್ದಾರೆ.

“ರೈತ ಭಾರತದ ಆತ್ಮ. ಇಂದು ಆ ರೈತ ಕನಿಷ್ಠ ಬೆಂಬಲ ಬೆಲೆಗಾಗಿ ಹೋರಾಟ ನಡೆಸುತ್ತಿದ್ದಾನೆ. ಜಗತ್ತಿನ ಎಲ್ಲ ವಸ್ತುಗಳನ್ನು ಮಾರುವವನು ನಿರ್ಧಾರ ಮಾಡುತ್ತಾನೆ. ಆದರೆ ರೈತನ ಫಸಲಿನ ಬೆಲೆಯನ್ನು ಮಾತ್ರ ಖರೀದಿಸುವವನು ನಿರ್ಧರಿಸುತ್ತಾನೆ” ಎಂದು ಬೇಸರ ವ್ಯಕ್ತಪಡಿಸಿದರು.

ಅವರು ಮಾತನಾಡಿದ ವಿಡಿಯೋ ನೋಡಿ.

ಈ ಚಿತ್ರಣವನ್ನು ಬದಲಿಸುವುದು ಈ ಸಮಯದ ಅಗತ್ಯ. ಆದರೆ ರೈತರಿಗೆ ಮುಖಾಮುಖಿಯಾಗಿರುವುದು ಒಂದು ಖಾಸಗಿ ಕಂಪನಿ. ಅದನ್ನು ನಾನು ನಾಗ ಎಂದು ಕರೆಯುತ್ತೇನೆ. ನಾಗ ಎಂದರೆ, ನರೇಂದ್ರ, ಅಮಿತ್‌, ಗೌತಮ್‌, ಅಂಬಾನಿ. ಸರ್ಕಾರ ಎಂಬುದು ಇದ್ದಿದ್ದರೆ, ರೈತರ ಜೊತೆಗೆ ಕೂತು ಮಾತನಾಡುತ್ತಿತ್ತು. ಆದರೆ ಇಂದು ವಿಶಾಲ ಆಕಾಶದ ಕೆಳಗೆ ಅಸಂಖ್ಯ ರೈತರು ಸೇರಿದ್ದಾರೆ. ಈ ಚಳಿಯಲ್ಲಿ ಅಮಾಯಕರು ಸಾವನ್ನಪ್ಪಿದ್ದಾರೆ. ಇದಾವುದೂ ಖಾಸಗಿ ಕಂಪನಿಯವರಿಗೆ ತಟ್ಟುತ್ತಿಲ್ಲ. ಅಂತಹ ಸಂವೇದನೆ ಅವರಿಗೆ ಇರುವುದೂ ಇಲ್ಲ” ಎಂದರು.

ನಾವು ಈಸ್ಟ್‌ ಇಂಡಿಯಾ ಕಂಪನಿಯನ್ನು ನೋಡಿದ್ದೇವೆ. ಅವರು ಹೇಗೆ ರಕ್ತ ಹೀರುತ್ತಿದ್ದರು ಎಂಬುದನ್ನು ನೋಡಿದ್ದೇವೆ. ಅದೇ ಪರಿಸ್ಥಿತಿ ಇಂದೂ ಇದೆ. ಈ ಪರಿಸ್ಥಿತಿಯನ್ನು ಬದಲಿಸುವುದಕ್ಕಾಗಿಯೇ ಪ್ರಕೃತಿಯೇ ಈ ಆಂದೋಲನವನ್ನು ನಡೆಸುತ್ತಿದೆ. ಈ ಆಂದೋಲನ ಸಂಪೂರ್ಣ ಮಾನವ ಕುಲಕ್ಕೆ ಪಾಠವಾಗಲಿದೆ. ಸೇವೆಯೊಂದಿಗೆ ಒಂದು ಆಂದೋಲನವನ್ನು ಹೇಗೆ ನಡೆಸಬಹುದು, ಹೇಗೆ ಜಯವನ್ನು ರೂಪಿಸಬಹುದು ಎಂಬುದನ್ನು ಕಲಿಸಿಕೊಡಲಿದೆ ಎಂಬ ವಿಶ್ವಾಸ ನನ್ನದು ಎಂದು ಹರ್ಷಾನಂದ್‌ ಜಿ ಮಹಾರಾಜ್‌ ಹೇಳಿದರು.

ಈ ವರದಿ ‘ಮಾಸ್ ಮೀಡಿಯಾ ಫೌಂಡೇಷನ್’ ನಿಯೋಜಿಸಿರುವ ವಿಶೇಷ ದೆಹಲಿ ತಂಡದಿಂದ ಪಡೆದ ಮಾಹಿತಿ ಆಧರಿಸಿ, ಸಿದ್ಧಪಡಿಸಿದೆ


ಇದನ್ನೂ ಓದಿ: ಕೃಷಿ ಕಾಯ್ದೆಗಳು: ರೈತರಿಗಷ್ಟೇ ಮಾರಕವಲ್ಲ, ನಮ್ಮ ನಿಮ್ಮ ಬದುಕಿಗೂ ಅಪಾಯಕಾರಿ

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋಮುವಾದಿಗಳು ಆಕ್ಟೀವ್ ಆಗಿರುವುದರಿಂದ ಇಂತಹ ಘಟನೆಗಳಾಗುತ್ತಿವೆ: ಜಸ್ಟೀಸ್ ದಾಸ್‌

1
"ಪ್ರಜಾಪ್ರಭುತ್ವ ವಿರೋಧಿಗಳು, ಕೋಮುವಾದಿಗಳು ಕ್ರಿಯಾಶೀಲವಾಗಿರುವುದರಿಂದ ಇಂತಹ ಘಟನೆಗಳಾಗುತ್ತಿವೆ" ಎಂದು ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್.ನಾಗಮೋಹನ ದಾಸ್‌ ಹೇಳಿದರು. ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಫೋಟೋವನ್ನು ಇಟ್ಟರೆ ಧ್ವಜಾರೋಹಣ ಮಾಡುವುದಿಲ್ಲ ಎಂದು ರಾಯಚೂರಿನ ಜಿಲ್ಲಾ...
Wordpress Social Share Plugin powered by Ultimatelysocial