ಹೆಸರಿನ ಗೊಂದಲದಿಂದಾಗಿ ಜಾಮೀನು ಸಿಕ್ಕ ಆರೋಪಿ ಬದಲಿಗೆ ಫರೀದಾಬಾದ್ ಜಿಲ್ಲಾ ಜೈಲು ಆಡಳಿತವು ಪೋಕ್ಸೊ ಪ್ರಕರಣದ ಆರೋಪಿಯನ್ನು ಬಿಡುಗಡೆ ಮಾಡಿದೆ ಎಂದು ಪೊಲೀಸರು ಶುಕ್ರವಾರ (ಮೇ.30) ತಿಳಿಸಿದ್ದಾರೆ.
ಘಟನೆ ಬಳಿಕ ತನ್ನ ಗುರುತನ್ನು ಮರೆಮಾಚಿ ಬಿಡುಗಡೆಗೊಂಡಿರುವ ಪೋಕ್ಸೋ ಕೈದಿಯ ವಿರುದ್ದ ಸದರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪೊಲೀಸರು ಆತನಿಗಾಗಿ ಹುಡುಕಾಟ ಆರಂಭಿಸಿದ್ದು, ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಸದರ್ ಪೊಲೀಸ್ ಠಾಣೆಯ ಮುಖ್ಯ ಅಧಿಕಾರಿ ಉಮೇಶ್ ಕುಮಾರ್ ಭರವಸೆ ನೀಡಿದ್ದಾರೆ.
ಫರಿದಾಬಾದ್‌ನಲ್ಲಿ ಒಂಬತ್ತು ವರ್ಷದ ಬಾಲಕನ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ್ದಕ್ಕಾಗಿ ರವೀಂದರ್ ಪಾಂಡೆ ಎಂಬವರ ಮಗ 27 ವರ್ಷದ ನಿತೇಶ್ ಪಾಂಡೆಯನ್ನು ಅಕ್ಟೋಬರ್ 2021 ರಂದು ಬಂಧಿಸಲಾಗಿತ್ತು.
ಕಳೆದ ಭಾನುವಾರ ಮನೆಗೆ ಅತಿಕ್ರಮಣ ಪ್ರವೇಶ ಮತ್ತು ಹಲ್ಲೆ ಆರೋಪದ ಮೇಲೆ ನಿತೇಶ್ ಪಾಂಡೆ ಎಂಬ ಹೆಸರಿನ ಮತ್ತೊಬ್ಬ ಯುವಕನನ್ನು ಬಂಧಿಸಲಾಗಿತ್ತು. ಆತನ ತಂದೆಯ ಹೆಸರು ಕೂಡ ರವೀಂದರ್ ಪಾಂಡೆ ಎಂದಾಗಿದೆ. ಇಬ್ಬರನ್ನೂ ಫರಿದಾಬಾದ್‌ನ ನೀಮ್ಕಾ ಜೈಲಿನಲ್ಲಿ ಇರಿಸಲಾಗಿತ್ತು.
ಕಳೆದ ಭಾನುವಾರ ಬಂಧಿತನಾದ ಎರಡನೇ ನಿತೇಶ್‌ಗೆ ಸೋಮವಾರ ಫರಿದಾಬಾದ್ ನ್ಯಾಯಾಲಯದ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಜಾಮೀನು ನೀಡಿದ್ದರು.
ಮಂಗಳವಾರ ಆತ ಜೈಲಿನಿಂದ ಬಿಡುಗಡೆಯಾಗಬೇಕಿತ್ತು. ಆದರೆ, ಅಧಿಕಾರಿಗಳು ತಪ್ಪಿ ಅತ್ಯಾಚಾರ ಆರೋಪಿ ನಿತೇಶ್ ಪಾಂಡೆಯನ್ನು ಬಿಡುಗಡೆ ಮಾಡಿದ್ದಾರೆ.
ಜೈಲು ಆಡಳಿತವು ಅತ್ಯಾಚಾರ ಆರೋಪಿ ನಿತೇಶ್ ಪಾಂಡೆ ತನ್ನ ಗುರುತನ್ನು ಮರೆಮಾಚುವ ಮೂಲಕ ಬಿಡುಗಡೆಯಾಗುವಲ್ಲಿ ಯಶಸ್ವಿಯಾಗಿದ್ದಾನೆ ಎಂದು ಹೇಳಿಕೊಂಡಿದೆ.
“ಗುರುತನ್ನು ಮರೆಮಾಡಿ ಬಿಡುಗಡೆ ಪಡೆದಿದ್ದಕ್ಕಾಗಿ ನಿತೀಶ್ ಪಾಂಡೆ ವಿರುದ್ಧ ನಾವು ಸದರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ” ಎಂದು ಜೈಲು ಉಪ ಅಧೀಕ್ಷಕ ವಿಕ್ರಮ್ ಸಿಂಗ್ ತಿಳಿಸಿದ್ದಾರೆ.
ಪಹಲ್ಗಾಮ್ ದಾಳಿಗೆ ಕೋಮು ಬಣ್ಣ ಬಳಿದು ವಿವಾದ ಸೃಷ್ಟಿಸಿದ ಶಂಕಿತ ಭಯೋತ್ಪಾದಕಿ ಪ್ರಜ್ಞಾ ಸಿಂಗ್ ಠಾಕೂರ್


