Homeಮುಖಪುಟಸಿಎಂ ಕೇಜ್ರಿವಾಲ್‌ಗೆ ಶೂಟ್‌ ಮಾಡುತ್ತೇನೆ ಎಂದು ಬೆದರಿಕೆ ಒಡ್ಡಿದ ನರಸಿಂಗಾನಂದ ಹಿಂಬಾಲಕ

ಸಿಎಂ ಕೇಜ್ರಿವಾಲ್‌ಗೆ ಶೂಟ್‌ ಮಾಡುತ್ತೇನೆ ಎಂದು ಬೆದರಿಕೆ ಒಡ್ಡಿದ ನರಸಿಂಗಾನಂದ ಹಿಂಬಾಲಕ

ಈತ ಮುಸ್ಲಿಂ ಮಹಿಳೆಯರ ಮೇಲೆ ಕೂಡಾ ಲೈಂಗಿಕ ಹಿಂಸಾಚಾರದ ಬೆದರಿಕೆಯನ್ನು ಒಡ್ಡಿದ್ದಾನೆ

- Advertisement -

ದೀಪಾವಳಿಯಂದು ಪಟಾಕಿ ನಿಷೇಧ ಮಾಡಿದ್ದಕ್ಕಾಗಿ ನವೆಂಬರ್ 4 ರಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜೀವ ಬೆದರಿಕೆ ಹಾಕಲಾಗಿದೆ. ಹಿಂದೂ ಶೇರ್ ಬಾಯ್‌ ಎಂದು ಜನಪ್ರಿಯವಾಗಿರುವ ಬಲಪಂಥೀಯ ಯೂಟ್ಯೂಬರ್ ಸುರೇಶ್ ರಜಪೂತ್ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಅರವಿಂದ್ ಕೇಜ್ರಿವಾಲ್ ಅವರನ್ನು ನಿಂದಿಸಿ ಶೂಟ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಈತ ವಿವಾದಾತ್ಮಕ ಧಾರ್ಮಿಕ ಗುರು ಯತಿ ನರಸಿಂಗಾನಂದ ಅವರ ಹಿಂಬಾಲಕ ಎಂದು ದಿ ವೈರ್‌ ತನ್ನ ವರದಿಯಲ್ಲಿ ಹೇಳಿದೆ.

“ಪಾಕಿಸ್ತಾನದ ಎದುರು ಭಾರತ ಸೋತಾಗ ದೆಹಲಿಯಲ್ಲಿ ಪಟಾಕಿಗಳನ್ನು ಸುಡಲಾಯಿತು. ಆಗ ನಿಮ್ಮಗೆ ಯಾವುದೆ ಸಮಸ್ಯೆ ಇರಲಿಲ್ಲ. ನಿಮ್ಮ ಗಮನ ದೀಪಾವಳಿ ಮತ್ತು ಹೋಳಿಯ ಸಮಯದಲ್ಲಷ್ಟೇ ಬರುತ್ತದೆ. ಕೇಜ್ರಿವಾಲ್‌ ನಿಮ್ಮನ್ನು ಶೂಟ್ ಮಾಡಲಾಗುವುದು”  ಎಂದು ಬೆದರಿಕೆ ಹಾಕಿದ್ದಾನೆ.

ಜಬ್‌ ಪಾಕಿಸ್ತಾನ್‌ ಸೆ ಹಿಂದೂಸ್ತಾನ್‌ ಹರಾ ಥಾ, ತಬ್ ದಿಲ್ಲಿ ಮೆ ಪಟಾಕೆ ಚಲೇ ತೆ, ತಬ್ ತೇರಾ ಏಕ್‌ ಬಾಲ್‌ ಬಿ ನಾ ಉಕ್ಡಾ…ತೇರಾ ಗ್ಯಾನ್‌ ದಿವಾಲಿ ಔರ್‌ ಹೋಲಿ ಪರ್‌ ಹಿ ಬಾಹರ್‌ ಆತಾ ಹೆ. ಕೇಜ್ರಿವಾಲ್‌ ಪೀತಲ್‌ ಭರ್‌ ದೂಂಗಾ, ಪೀತಲ್‌

46 ನಿಮಿಷಗಳ ಈ ವಿಡಿಯೊವನ್ನು ಆತ ಶೀಘ್ರದಲ್ಲೇ ಡಿಲೀಟ್ ಮಾಡಿದ್ದಾನೆ. ವಿಡಿಯೊದಲ್ಲಿ ಹಿಂಸಾತ್ಮಕ ಲೈಂಗಿಕ ನಿಂದನೆಗಳು ಮತ್ತು ಮುಸ್ಲಿಮರಿಗೆ ಬೆದರಿಕೆಗಳನ್ನೂ ಹಾಕಲಾಗಿತ್ತು.

“ಯೇ ಕಟೀ ಲುಲ್ಲಿ ವಾಲಿ ಜಿತ್ನೆ ಭಿ ಆ ರಹೇ ಹೈ ನಾ, ಬೇಟಾ ಏಕ್ ಏಕ್ ಕರ್ಕೆ ಪೇಲ್ ದಿಯೆ ಜಾವೋಗೆ. ಜಾವೋ ತುಮ್ಹಾರಿ ಅಮ್ಮ ಬುಲಾ ರಹೀ ಹೈ ಅಪ್ನಿ ಅಮ್ಮಾ ಕೆ **** ****. ಅಪ್ನಿ ಬೆಹನ್ ಕಾ ರಿಷ್ಟ ಲೇಕರ್ ಆ ಜಾತೇ ಹೈಂ. ಶಾಹೀನ್ ಬಾಗ್ ಮೇ ಜಿತ್ನಾ ಭಿ ತುಮ್ಹಾರಿ ಮಾ ಬೆಹ್ನೋ ಕಾ ಧಂಧಾ ಕರ್ನಾ ಥಾ ಕರ್ ಚುಕೇ ಹೈ… ಸಾಲಿ ಜೈಲ್ ಜಾನೇ ಕೆ ಬಾದ್ ಭಿ ಪ್ರಗ್ನೆಂಟ್‌ ಹೋ ಗಯಿ. ತೊ ಕಾಟ್*** ತುಂ ನಿಕ್ಲೊ. ಮತ್ಲಾಬ್ ವೋ ಪ್ರಗ್ನೆಂಟ್‌ ಹೋ ಗಯಿ ಜಿಂಕಿ ಶಾದಿ ಭೀ ನಹೀ ಹುಯಿ” ಎಂದು ನಿಂದನೀಯವಾಗಿ ಮಾತನಾಡಿದ್ದಾನೆ ಎಂದು ದಿ ವೈರ್‌ ವರದಿ ಮಾಡಿದೆ. 

ಇದರ ನಂತರ ವಿಡಿಯೊದಲ್ಲಿ, ಸುರೇಶ್ ರಜಪೂತ್ ಮತ್ತು ರಾಹುಲ್ ಶರ್ಮಾ ಎಂಬವನ ಜೊತೆ ಸೇರಿ “ಯುಪಿ ಪೊಲೀಸರು ಹೇಗೆ ಮುಸ್ಲಿಂ ಮಹಿಳೆಯರಿಗೆ ಪಾಠ ಕಲಿಸಿದರು” ಎಂದು ವಿವರಿಸುತ್ತಾರೆ.

ಇದನ್ನೂ ಓದಿ: BJP ನಾಯಕ ಕಪಿಲ್ ಮಿಶ್ರಾ ಭಾಗವಹಿಸಿದ್ದ ಸಭೆಯಲ್ಲಿ ಮತ್ತೆ ‘ಗೋಲಿ ಮಾರೋ’ ಘೋಷಣೆ

ಇಡೀ ವೀಡಿಯೊದಲ್ಲಿ, ಮುಸ್ಲಿಂ ಪುರುಷರನ್ನು “ಪಿಂಪಕ್‌ಗಳು”, “ಪಂಕ್ಚರ್ ,ಮಕ್ಕಳು” ಮತ್ತು “ಜಿಹಾದಿಗಳು” ಎಂದು ಉಲ್ಲೇಖಿಸಲಾಗಿದೆ ಮತ್ತು ಲೈಂಗಿಕ ಹಿಂಸೆಯ ಮೂಲಕ ಬೆದರಿಕೆ ಹಾಕಲಾಗಿದೆ. ಇಷ್ಟೇ ಅಲ್ಲದೆ ಸುರೇಶ್‌ ರಾಜಪೂತ್‌ ತ್ರಿಪುರಾದಲ್ಲಿ ನಡೆದ ಮುಸ್ಲಿಂ ವಿರೋಧಿ ಹಿಂಸಾಚಾರವನ್ನು ಕೂಡಾ ಸಂಭ್ರಮಿಸಿದ್ದಾನೆ. “ನಿಜವಾದ ದೀಪಾವಳಿಯನ್ನು ತ್ರಿಪುರಾದಲ್ಲಿ ಆಚರಿಸಲಾಗಿದೆ. ದೀಪಾವಳಿ ಎಂದರೆ ಇದೇ. ತ್ರಿಪುರಾದಂತೆ ಎಲ್ಲಾ ಹಿಂದೂಗಳು ಎಚ್ಚೆತ್ತುಕೊಂಡರೆ, ನಿಮ್ಮ ಭವಿಷ್ಯ ಏನಾಗಬಹುದು ಎಂದು ಊಹಿಸಿ” ಎಂದು ಎಚ್ಚರಿಸಿದ್ದಾನೆ.

ಈ ವೀಡಿಯೊಗೆ ಪ್ರತಿಕ್ರಿಯಿಸಿದ ಜಾಮಿಯಾ ಮಿಲಿಯಾ ಇಸ್ಲಾಮಿಯಾದ ವಿದ್ಯಾರ್ಥಿನಿ, ಸಿಎಎ ವಿರೋಧಿ ಹೋರಾಟಗಾರ್ತಿ ಸಫೂರಾ ಜರ್ಗರ್, “ನಾನು ಆನ್‌ಲೈನ್‌ಗೆ ಬೆದರಿಕೆಗಳಿಗೆ ನಾನು ಬೆದರುವುದಿಲ್ಲ. ಆದರೆ ನನಗೆ ಕೋಪ ಉಂಟುಮಾಡುವುದು ಇಂತವರಿಗೆ ಶಿಕ್ಷೆ ಆಗುವುದಿಲ್ಲ ಎಂಬುವುದಾಗಿದೆ. ಭಾರತದಲ್ಲಿ ಮುಸ್ಲಿಂ ಪುರುಷರ ಹತ್ಯೆಗಳನ್ನು ಸಾಮಾನ್ಯಗೊಳಿಸಿದ ರೀತಿಯಲ್ಲಿಯೇ ಅವರು ಮುಸ್ಲಿಂ ಮಹಿಳೆಯರ ವಿರುದ್ಧದ ಹಿಂಸಾಚಾರವನ್ನು ಸಾಮಾನ್ಯಗೊಳಿಸಲು ಒಂದು ನೆಲೆಗಟ್ಟನ್ನು ರಚಿಸುತ್ತಿದ್ದಾರೆ ಎಂಬುದನ್ನು ನಾವು ಮುಖ್ಯವಾಗಿ ಗಮನಿಸಬೇಕು” ಎಂದು ಹೇಳಿದ್ದಾರೆ. 

ಸುದ್ದಿ ಮಾಧ್ಯಮ ಸುರೇಶ್‌ ರಜಪೂತ್‌ ವಿವಾದಾತ್ಮಕ ಧಾರ್ಮಿಕ ಗುರು ಯತಿ ನರಸಿಂಗಾನಂದ ಅವರ ಹಿಂಬಾಲಕ ಎಂದು ತನ್ನ ವರದಿಯಲ್ಲಿ ಹೇಳಿದೆ. ಯತಿ ನರಸಿಂಗಾನಂದ ಅವರ ಹಿಂಬಾಲಕರು ಹಲವಾರು ಜನರು ಇದೇ ರೀತಿಯ ಬೆದರಿಕೆಗಳನ್ನು ಹಾಕಿರುವುದನ್ನು ದಿ ವೈರ್‌ ಪಟ್ಟಿ ಮಾಡಿದೆ. ಅದನ್ನು ಇಲ್ಲಿ ಕ್ಲಿಕ್ ಮಾಡಿ ನೋಡಬಹುದು.

ಇದನ್ನೂ ಓದಿ: BJP ನಾಯಕನನ್ನು ವಿರೋಧಿಸುವವರ ಕಣ್ಣು ಕಿತ್ತು, ಕೈಗಳನ್ನು ಕತ್ತರಿಸಲಾಗುವುದು: ಹರಿಯಾಣ ಸಂಸದ ಎಚ್ಚರಿಕೆ

ನಾನು ಗೌರಿ ಡೆಸ್ಕ್
+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಆಸ್ಪತ್ರೆ ಸಿಬ್ಬಂದಿಗೆ ಲಂಚ ನೀಡಲು ಸಾಧ್ಯವಾಗದೆ ರಸ್ತೆಯಲ್ಲೆ 6 ತಿಂಗಳ ಶಿಶುವಿಗೆ ಜನ್ಮ ನೀಡಿದ ಮಹಿಳೆ | Naanu Gauri

ಆಸ್ಪತ್ರೆ ಸಿಬ್ಬಂದಿಗೆ ಲಂಚ ನೀಡಲು ಸಾಧ್ಯವಾಗದೆ ರಸ್ತೆಯಲ್ಲೆ 6 ತಿಂಗಳ ಶಿಶುವಿಗೆ ಜನ್ಮ ನೀಡಿದ...

0
ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ನಿರಾಕರಿಸಿದ ಕಾರಣಕ್ಕೆ ಮಹಿಳೆಯೊಬ್ಬರು ರಸ್ತೆಯಲ್ಲೇ ಆರು ತಿಂಗಳ ಶಿಶುವಿಗೆ ಜನ್ಮ ನೀಡಿರುವ ಅಘಾತಕಾರಿ ಘಟನೆ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ. ಆರು ತಿಂಗಳ ಗರ್ಭಿಣಿಯಾಗಿದ್ದ ಕಲ್ಲೋ ಬಾಯಿಯನ್ನು...
Wordpress Social Share Plugin powered by Ultimatelysocial