ರಾಷ್ಟ್ರ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ಮಾಪಕ, ನಿರ್ದೇಶಕ ಕೋಡಳ್ಳಿ ಶಿವರಾಮ್ ಸೋಮವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ಅವಿವಾಹಿತಾಗಿದ್ದ ಅವರು ಬೆಂಗಳೂರಿನ ಹನಮಂತನಗರದಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದ ಅವರು ರಾಜ್ಯದ ಮಾಜಿ ಮುಖ್ಯಮಂತ್ರಿಗಳಿಗೆ ರಾಜಕೀಯ ಸಲಹೆಗಾರರಾಗಿಯೂ ಕರ್ತವ್ಯ ನಿರ್ವಹಿಸಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಕನ್ನಡ ಚಿತ್ರರಂಗಕ್ಕೆ ಕೊಡುಗೆ ನೀಡಿರುವ ಅವರಿಗೆ ಸೋಮವಾರ ಬೆಳಿಗ್ಗೆ 10.30ಕ್ಕೆ ಹೃದಯಾಘಾತದಿಂದಾಗಿ ನಿಧನರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾಗಿ ಕುಟುಂಬಿಕರು ನಾನುಗೌರಿ.ಕಾಮ್‌ಗೆ ಹೇಳಿದ್ದಾರೆ. ಆದರೆ ಅವಿವಾಹಿತರಾಗಿರುವ ಅವರು ಏಕಾಂಗಿಯಾಗಿ ವಾಸಿಸುತ್ತಿದ್ದರು. ಅವರು ನಿಧನರಾಗಿದ್ದು ಕುಟುಂಬಿಕರಿಗೆ ಮಂಗಳವಾರ ಸಂಜೆ ವೇಳೆಗೆ ತಿಳಿದು ಬಂದಿತ್ತು.
ಇದನ್ನೂಓದಿ: ಜಮ್ಮು ಕಾಶ್ಮೀರ | ವಿಧಾನಸಭೆ ಚುನಾವಣೆ ಮತದಾನ ಆರಂಭ
ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಬಂಗಾರಪ್ಪ, ರಾಮಕೃಷ್ಣ ಹೆಗಡೆ ಅವರಿಗೆ ಶಿವರಾಮ್ ಅವರು ರಾಜಕೀಯ ಸಲಹೆಗಾರರಾಗಿ ಕೆಲಸ ಮಾಡಿದ್ದರು. 1981ರಲ್ಲಿ ಬಿಡುಗಡೆಯಾದ ಗ್ರಹಣ ಚಲನಚಿತ್ರಕ್ಕೆ ಶಿವರಾಮ್ ಅವರು ಕತೆ ಬರೆದಿದ್ದರು. ಈ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಲಭ್ಯವಾಗಿತ್ತು. ಅಲ್ಲದೆ, ಬೆಳ್ಳಿ ಬೆಳಕು ಸೇರಿದಂತೆ ಇತರೆ ಚಿತ್ರಗಳನ್ನು ಅವರು ಕೆಲಸ ಮಾಡಿದ್ದರು.
ಪಾರ್ಥೀವ ಶರೀರ ಹನುಮಂತಗರದ 4ನೇ ಕ್ರಾಸ್ ಬಳಿಯ ಪೋಸ್ಟ್ ಆಫೀಸ್ ಮುಂದುಗಡೆ ಇರುವ ಅವರ ನಿವಾಸದಲ್ಲಿ ಇದ್ದು, ಮಧ್ಯಾಹ್ನ 1.30ಕ್ಕೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಕುಟುಂಬದ ಮೂಲಗಳು ನಾನುಗೌರಿ.ಕಾಂಗೆ ತಿಳಿಸಿವೆ.
ವಿಡಿಯೊ ನೋಡಿ: ‘ಅಭಿವೃದ್ಧಿ ಎಂಬ ವಿನಾಶ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ವಿ.ಎಲ್.ನರಸಿಂಹಮೂರ್ತಿ ಅವರ ಮಾತು


