Homeಮುಖಪುಟದೇಶಾದ್ಯಂತ 'ಭಗತ್ ಸಿಂಗ್ ಜನ್ ಅಧಿಕಾರ ಯಾತ್ರೆ' ಆರಂಭ; ನೂರಾರು ಯುವಕರು, ಕಾರ್ಮಿಕರು ಭಾಗಿ

ದೇಶಾದ್ಯಂತ ‘ಭಗತ್ ಸಿಂಗ್ ಜನ್ ಅಧಿಕಾರ ಯಾತ್ರೆ’ ಆರಂಭ; ನೂರಾರು ಯುವಕರು, ಕಾರ್ಮಿಕರು ಭಾಗಿ

- Advertisement -
- Advertisement -

ದೇಶ ಹಿಂದೆಂದೂ ಕಂಡರಿಯದಂತಹ ನಿರುದ್ಯೋಗ, ಹಣದುಬ್ಬರ ಮತ್ತು ಆರ್ಥಿಕ ಅಸಮಾನತೆಯನ್ನು ಎದುರಿಸುತ್ತಿದೆ. ನಿರಂತರವಾಗಿ ಬೆಲೆ ಏರಿಕೆ ಮತ್ತು ಉದ್ಯೋಗಗಳಿಲ್ಲದೆ ಯುವಕರು ಹತಾಶರಾಗಿದ್ದಾರೆ. ಈ ರೀತಿಯ ಅನೇಕ ಸಮಸ್ಯೆಗಳ ಪರಿಹಾರಕ್ಕಾಗಿ ವಿವಿಧ ಸಂಘಟನೆಗಳು ಇಂದಿನಿಂದ (12 ಮಾರ್ಚ್ 2023ರಿಂದ) 14 ಏಪ್ರಿಲ್ 2023 ರವರೆಗೆ ಭಗತ್ ಸಿಂಗ್ ಜನ್ ಅಧಿಕಾರ ಯಾತ್ರೆ (BSJAY) ಹೆಸರಿನಲ್ಲಿ ದೇಶಾದ್ಯಂತ ಒಂದು ತಿಂಗಳ ಮೆರವಣಿಗೆ ಪ್ರಾರಂಭಿಸಿವೆ.

ಈ ಯಾತ್ರೆಯನ್ನು ರೆವಲ್ಯೂಷನರಿ ವರ್ಕರ್ಸ್ ಪಾರ್ಟಿ ಆಫ್ ಇಂಡಿಯಾ (RWPI), ನೌಜವಾನ್ ಭಾರತ್ ಸಭಾ, ದಿಶಾ ವಿದ್ಯಾರ್ಥಿಗಳ ಸಂಘಟನೆ, ದೆಹಲಿ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘ ಮತ್ತು ಬಿಗುಲ್ ಮಜ್ದೂರ್ ದಸ್ತಾ ಎಂಬ ಹಲವಾರು ವಿದ್ಯಾರ್ಥಿಗಳು, ಯುವಕರು ಮತ್ತು ಕಾರ್ಮಿಕರ ಸಂಘಟನೆಗಳು ಆಯೋಜಿಸಿವೆ.

ಇಂದಿನಿಂದ ಆರಂಭವಾಗುವ ಯಾತ್ರೆಯು ದೆಹಲಿ, ಉತ್ತರ ಪ್ರದೇಶ, ಮಹಾರಾಷ್ಟ್ರ, ಹರಿಯಾಣ, ಬಿಹಾರ, ಉತ್ತರಾಖಂಡ, ಪಂಜಾಬ್, ಆಂಧ್ರಪ್ರದೇಶ, ಚಂಡೀಗಢ, ರಾಜಸ್ಥಾನ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಸಾಗಲಿದೆ. ಈ ರಾಜ್ಯಗಳ ಹಳ್ಳಿಗಳು ಮತ್ತು ನಗರಗಳಲ್ಲಿ ಸಾರ್ವಜನಿಕರೊಂದಿಗೆ ಅವರ ಸಮಸ್ಯಗಳ ಕುರಿತಾಗಿ ಸಂವಾದಗಳನ್ನು ನಡೆಸಲಾಗುತ್ತದೆ.

ವಿವಿಧ ಸಂಘಟನೆಗಳ ಪ್ರತಿನಿಧಿಗಳು ಈ ಬಗ್ಗೆ ವಾರದ ಆರಂಭದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದರು. ಈ ವೇಳೆ ಸಧ್ಯ ಜಾರಿಯಲ್ಲಿರುವ ಬಿಜೆಪಿ ಸರ್ಕಾರದ ಜನವಿರೋಧಿ ನೀತಿಗಳ ಅಡಿಯಲ್ಲಿ ವಿದ್ಯಾರ್ಥಿಗಳು ಮತ್ತು ಕಾರ್ಮಿಕರ ಬಿಕ್ಕಟ್ಟನ್ನು ಎತ್ತಿ ತೋರಿಸಿದರು.

ರೆವಲ್ಯೂಷನರಿ ವರ್ಕರ್ಸ್ ಪಾರ್ಟಿ ಆಫ್ ಇಂಡಿಯಾ ಪರವಾಗಿ ಮಾತನಾಡಿದ ಯೋಗೇಶ್, ”ಕೇಂದ್ರ ಸರ್ಕಾರ ‘ಧರ್ಮದ ಉನ್ಮಾದ’ವನ್ನು ಬಳಸಿಕೊಂಡು ಮೂಲಭೂತ ಸಾಮಾಜಿಕ ಭದ್ರತೆ ಮತ್ತು ಆರ್ಥಿಕ ಹಕ್ಕುಗಳ ಬಗೆಗಿನ ಗಮನವನ್ನು ಬೆರೆಡೆಗೆ ತಿರುಗಿಸಲು ಪ್ರಯತ್ನಿಸುತ್ತಿದೆ” ಎಂದು ವಾದಿಸಿದರು.

”ಕೇಂದ್ರ ಬಿಜೆಪಿ ಸರ್ಕಾರ ಸುಳ್ಳು ಧಾರ್ಮಿಕ ಶತ್ರುವನ್ನು ಹುಟ್ಟುಹಾಕುವ ಮೂಲಕ, ಬ್ರಿಟಿಷರ ಒಡೆದು ಆಳುವ ನೀತಿಯನ್ನು ನಿಷ್ಠೆಯಿಂದ ಜಾರಿಗೆ ತರುತ್ತಿದೆ. ಬಿಜೆಪಿ, ಕಾಂಗ್ರೆಸ್, ಎಸ್‌ಪಿ, ಬಿಎಸ್‌ಪಿ, ಆರ್‌ಜೆಡಿ, ಜೆಡಿಯು ಮತ್ತು ಎಎಪಿ ದೊಡ್ಡ ಬಂಡವಾಳಶಾಹಿಗಳ ಹಿತಾಸಕ್ತಿಗಳನ್ನು ಪೂರೈಸುತ್ತಿವೆ. ಈಗ ಕ್ರಾಂತಿಯ ಮನೋಭಾವವನ್ನು ಪುನಶ್ಚೇತನಗೊಳಿಸುವುದು ಮುಖ್ಯವಾಗಿದೆ. ಭಗತ್ ಸಿಂಗ್ ಜನ್ ಅಧಿಕಾರ ಯಾತ್ರೆಯು (BSJAY) ಆ ನಿಟ್ಟಿನಲ್ಲಿ ಒಂದು ಪ್ರಯತ್ನವಾಗಿದೆ” ಎಂದು ಅವರು ಹೇಳಿದರು.

ದೆಹಲಿ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಒಕ್ಕೂಟದ ಅಧ್ಯಕ್ಷೆ ಶಿವಾನಿ ಕೌಲ್ ಮಾತನಾಡಿ, ”ಈ ಯಾತ್ರೆಯ ಉದ್ದೇಶವು ಜಾಗೃತಗೊಳಿಸುವುದು, ಜನರಲ್ಲಿ ಪ್ರಜ್ಞೆಯನ್ನು ಮೂಡಿಸುವುದು ಮತ್ತು ಅವರ ಮೂಲಭೂತ ಹಕ್ಕುಗಳಿಗಾಗಿ ಹೋರಾಡಲು ಅವರನ್ನು ಸಂಘಟಿಸುವುದಾಗಿದೆ” ಎಂದು ತಿಳಿಸಿದರು.

ದಿಶಾ ಸ್ಟೂಡೆಂಟ್ಸ್ ಆರ್ಗನೈಸೇಶನ್‌ನ ಪ್ರಿಯಂವದಾ, ”ಪ್ರಾಥಮಿಕ ಮತ್ತು ಉನ್ನತ ಶಿಕ್ಷಣದ ದುಃಸ್ಥಿತಿಯನ್ನು ವಿವರಿಸಿದರು. ದೇಶದಾದ್ಯಂತ ಶಾಲೆಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಶುಲ್ಕಗಳು ಹೆಚ್ಚಾಗುತ್ತಲೇ ಇವೆ ಆದರೆ ಬೋಧಕರ ಹುದ್ದೆಗಳು ಖಾಲಿ ಉಳಿದಿವೆ. ಮೋದಿ ಸರ್ಕಾರ ತಂದಿರುವ ಹೊಸ ಶಿಕ್ಷಣ ನೀತಿಯು ಶಿಕ್ಷಣದ ಖಾಸಗೀಕರಣ ಮತ್ತು ಕೋಮುವಾದವನ್ನು ಮಾತ್ರ ಮುಂದಿಡುತ್ತದೆ” ಎಂದು ಹೇಳಿದರು.

ನೌಜವಾನ್ ಭಾರತ್ ಸಭೆಯನ್ನು ಪ್ರತಿನಿಧಿಸುವ ವಿಶಾಲ್ ಅವರು ನಿರುದ್ಯೋಗದ ಬಗ್ಗೆ ಮಾತನಾಡಿ, ”ಮೋದಿ ಸರ್ಕಾರ ಪ್ರತಿ ವರ್ಷ ಎರಡು ಕೋಟಿ ಉದ್ಯೋಗಗಳನ್ನು ಒದಗಿಸುವ ಭರವಸೆಯ ಮೇಲೆ ಅಧಿಕಾರಕ್ಕೆ ಬಂದಿದೆ. ಆದರೆ ದೇಶದ ಸುಮಾರು 32 ಕೋಟಿ ಜನಸಂಖ್ಯೆಯು ನಿರುದ್ಯೋಗದ ಸಂಕಷ್ಟವನ್ನು ಎದುರಿಸುತ್ತಿದೆ” ಎಂದು ತಿಳಿಸಿದರು.

ಇದನ್ನೂ ಓದಿ: ಮೋದಿ ರೋಡ್‌ ಶೋ: ಒಂದು ಬದಿಗಷ್ಟೇ ಡಾಂಬರು, ಅಲಂಕಾರ ಮತ್ತೊಂದು ಬದಿಯಲ್ಲಿ ಗುಂಡಿಗಳ ಸಾಲು

CMIE (ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ)ದ ಅಂಕಿಅಂಶಗಳ ಪ್ರಕಾರ, ಪ್ರಸ್ತುತ, ದೇಶದಲ್ಲಿ ನಿರುದ್ಯೋಗ ದರವು COVID ಸಮಯದಲ್ಲಿ ಇದ್ದ ಮಟ್ಟವನ್ನು ತಲುಪಿದೆ. ಕೋವಿಡ್ ಸಮಯದಲ್ಲಿ ಕೆಲಸವನ್ನು ಕಳೆದುಕೊಂಡ ಪ್ರತಿ ಐದು ಯುವಕರಲ್ಲಿ ಒಬ್ಬರೂ ಇಲ್ಲಿಯವರೆಗೆ ಉದ್ಯೋಗವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಟ್ವಿಟರ್, ಅಮೆಜಾನ್, ಎಚ್‌ಪಿ, ಮೈಕ್ರೋಸಾಫ್ಟ್ ಮತ್ತು ನೆಟ್‌ಫ್ಲಿಕ್ಸ್‌ನಂತಹ ದೊಡ್ಡ ಮತ್ತು ಪ್ರತಿಷ್ಠಿತ ಕಂಪನಿಗಳು ಉದ್ಯೋಗಿಗಳನ್ನು ಕಡಿಮೆ ಮಾಡುತ್ತಿದೆ ಮತ್ತು ಹಿಂಬಡ್ತಿಯನ್ನು ನೀಡಲಾರಂಭಿಸಿವೆ. ಇದರಿಂದ ವೈಟ್-ಕಾಲರ್ ಟೆಕ್ ಮತ್ತು ಮ್ಯಾನೇಜರ್ ವರ್ಗಗಳು ಸಹ ಉದ್ಯೋಗ ನಷ್ಟ ಎದುರಿಸುತ್ತಿದೆ. ಇದೇ ರೀತಿ ಇಡೀ ದೇಶದ ಎಲ್ಲಾ ಕಾರ್ಖಾನೆಗಳು, ಕಚೇರಿಗಳು, ಅಂಗಡಿಗಳು, ವರ್ಕ್‌ಶಾಪ್‌ಗಳು ಇತ್ಯಾದಿಗಳಲ್ಲಿ ನಡೆಯುತ್ತಿದೆ. ಇದರಿಂದ ನಿರುದ್ಯೋಗ ಹೆಚ್ಚಾಗುತ್ತಲೇ ಇದೆ” ಎಂದು ವಿಶಾಲ್ ಅವರು ವಿವರಿಸಿದರು.

ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಕೆಳಗಿನ ಬೇಡಿಕೆಗಳನ್ನು ಮುಂದಿಟ್ಟು ಯಾತ್ರೆಯನ್ನು ಆಯೋಜಿಸಲಾಗಿದೆ:

1.) ಉದ್ಯೋಗದ ಮೂಲಭೂತ ಹಕ್ಕು: ಭಗತ್ ಸಿಂಗ್ ರಾಷ್ಟ್ರೀಯ ಉದ್ಯೋಗ ಖಾತರಿ ಕಾಯಿದೆ (BASNEGA)ಯನ್ನು ಸಂಸತ್ತಿನಲ್ಲಿ ಅಂಗೀಕರಿಸಬೇಕು. ಅದರ ಅಡಿಯಲ್ಲಿ ಎಲ್ಲಾ ಅರ್ಹ ನಾಗರಿಕರಿಗೆ ಉದ್ಯೋಗಗಳನ್ನು ಒದಗಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ತಪ್ಪಿದಲ್ಲಿ ಕನಿಷ್ಠ 10,000 ರೂ. ನಿರುದ್ಯೋಗ ಭತ್ಯೆ ರೂಪದಲ್ಲಿ ನೀಡಬೇಕು.

2.) ಕಾರ್ಮಿಕರ ಪರವಾದ ಕಾನೂನುಗಳ ಕಟ್ಟುನಿಟ್ಟಾದ ಅನುಷ್ಠಾನ: ಎಲ್ಲಾ ಕಾರ್ಮಿಕ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಮತ್ತು ಹೊಸ ಉದ್ದೇಶಿತ ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಬೇಕು. ಕಾನೂನುಗಳು- 8ಗಂಟೆಗಳ ಕೆಲಸದ ದಿನ, ಸಾಪ್ತಾಹಿಕ ರಜೆ, ಹೆಚ್ಚುವರಿ ಕೆಲಸಕ್ಕೆ ಹೆಚ್ಚುವರಿ ಸಂಬಳ, ಒಕ್ಕೂಟವನ್ನು ರಚಿಸುವ ಹಕ್ಕು ಮತ್ತು ಭದ್ರತಾ ನಿಬಂಧನೆಗಳ ಹಕ್ಕು, ಅನೌಪಚಾರಿಕ ಕಾರ್ಖಾನೆಗಳ ಮೇಲೆ ಸರ್ಕಾರದ ನಿಯಂತ್ರಣ, ನಿರಂತರವಾಗಿ ಕೆಲಸ ಮಾಡುವವರ ಗುತ್ತಿಗೆ ಕೆಲಸವನ್ನು ರದ್ದುಗೊಳಿಸಿ ಖಾಯಂಗೊಳಿಸಬೇಕು ಮತ್ತು ಕಾರ್ಮಿಕ ಕಾನೂನುಗಳ ಉಲ್ಲಂಘನೆಯನ್ನು ಕ್ರಿಮಿನಲ್ ವರ್ಗದ ಅಡಿಯಲ್ಲಿ ತರಬೇಕು ಆ ಮೂಲಕ ಅದನ್ನು ಶಿಕ್ಷಾರ್ಹಗೊಳಿಸಬೇಕು.

3.) ಹಣದುಬ್ಬರ ನಿಯಂತ್ರಣ: ಕಾಳಧನ ಮತ್ತು ಬೆಟ್ಟಿಂಗ್‌ಅನ್ನು ಶಿಕ್ಷಾರ್ಹ ಅಪರಾಧಗಳೆಂದು ಘೋಷಿಸುವ ಕಾನೂನನ್ನು ತರಬೇಕು. ಮೂಲ ಸರಕು ಮತ್ತು ಸೇವೆಗಳ ವಿತರಣೆಯ ವ್ಯವಸ್ಥೆಯನ್ನು ರಾಷ್ಟ್ರೀಕರಣಗೊಳಿಸಬೇಕು. ಎಲ್ಲಾ ನಾಗರಿಕರಿಗೆ ಆಹಾರ ಲಭ್ಯವಾಗುವಂತೆ ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಸಾರ್ವತ್ರೀಕರಣಗೊಳಿಸಬೇಕು. ಹಣದುಬ್ಬರವನ್ನು ಕಡಿಮೆ ಮಾಡಲು, ಪರೋಕ್ಷ ತೆರಿಗೆಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು ಮತ್ತು ಆಸ್ತಿಯ ಆಧಾರದ ಮೇಲೆ ನೇರ ತೆರಿಗೆಗಳ ವ್ಯವಸ್ಥೆಯನ್ನು ಬಲಪಡಿಸಬೇಕು.

4.) ಶಿಕ್ಷಣ ಮೂಲಭೂತ ಹಕ್ಕು: ಜನವಿರೋಧಿ ಹೊಸ ಶಿಕ್ಷಣ ನೀತಿ 2020ನ್ನು ರದ್ದುಗೊಳಿಸಬೇಕು ಮತ್ತು ಪ್ರಾಥಮಿಕ ಮತ್ತು ಉನ್ನತ ಶಿಕ್ಷಣವನ್ನು ಬಲಪಡಿಸಬೇಕು.

5.) ಜಾತ್ಯತೀತ ದೇಶ: ‘ಸರ್ವ ಧರ್ಮ ಸಮಭವ’ದ ನಕಲಿ ಸೆಕ್ಯುಲರಿಸಂ ಬದಲಿಗೆ ನಿಜವಾದ ಜಾತ್ಯತೀತ ರಾಜ್ಯವನ್ನು ನಿರ್ಮಾಣ ಮಾಡಬೇಕು. ಯಾವುದೇ ಸಾರ್ವಜನಿಕ ನಾಯಕರು ಯಾವುದೇ ಧರ್ಮ, ಸಮುದಾಯ ಅಥವಾ ನಂಬಿಕೆಯ ಯಾವುದೇ ಉಲ್ಲೇಖ ಅಥವಾ ಬಳಕೆ ಮಾಡಿದರೆ ಅದನ್ನು ಶಿಕ್ಷಾರ್ಹ ಅಪರಾಧವೆಂದು ಕಾನೂನು ಮಾಡಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...