ನೀವು ಸೈಕ್ಲಿಂಗ್ ಪ್ರಿಯರಾಗಿದ್ದು, ನಿಮ್ಮ ಮನಸ್ಸಿನಲ್ಲಿ ಸೈಕಲಿಂಗ್ ಮಾರ್ಗದ ಬಗ್ಗೆ ಐಡಿಯಾಗಳು ಇದ್ದರೆ ಅದನ್ನು ಸಾಕಾರಗೊಳಿಸಲು ನಗರ ಭೂ ಸಾರಿಗೆ ನಿರ್ದೇಶನಾಲಯ (DULT) ಹೊರಟಿದೆ. ಈ ಪ್ರಕ್ರಿಯೆಯಲ್ಲಿ ಬೈಸಿಕಲ್ ಲೈನ್‌ಗಾಗಿ ಐಡಿಯಾಗಳನ್ನು ಜನರಿಂದಲೇ ಕ್ರೌಡ್‌ಸೋರ್ಸ್ ಆಗಿ ಪಡೆಯಲು DULT ಮುಂದಾಗಿದೆ.
ಕೇಂದ್ರ ಸರ್ಕಾರದ ಸೈಕಲ್ ಫಾರ್ ಚೇಂಜ್ ಅಭಿಯಾನದ ಭಾಗವಾಗಿ, ಈಗಾಗಲೆ ಬೆಂಗಳೂರಿನ ಹೊರ ವರ್ತುಲ ರಿಂಗ್ ರಸ್ತೆ (ಔಟರ್ ರಿಂಗ್ ರೋಡ್)ಯ ಸರ್ವಿಸ್ ರಸ್ತೆಯಲ್ಲಿ ಬೈಸಿಕಲ್ ಲೇನ್ ನಿರ್ಮಿಸಲು ನಗರ ಭೂ ಸಾರಿಗೆ ನಿರ್ದೇಶನಾಲಯ (DULT) ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಯೊಂದಿಗೆ ಕೆಲಸ ಮಾಡಲು ಪ್ರಾರಂಭಿಸಿದೆ.
“ನಾವು ಸೈಕ್ಲಿಂಗ್ ಲೇನ್ ನಿರ್ಮಿಸಲು ತಾತ್ಕಾಲಿಕವಾಗಿ ಒಆರ್‌ಆರ್ ಮತ್ತು ಓಲ್ಡ್ ಮದ್ರಾಸ್ ರಸ್ತೆಯನ್ನು ಕೈಗೆತ್ತಿಕೊಂಡಿದ್ದೇವೆ. ಸೈಕ್ಲಿಸ್ಟ್‌ಗಳು ವಿಭಿನ್ನ ಬೇಡಿಕೆಗಳನ್ನು ಹೊಂದಿರಬಹುದು ಮತ್ತು ಮುಖ್ಯ ರಸ್ತೆಗಳನ್ನು ಹೊರತುಪಡಿಸಿ ವಿಭಿನ್ನ ಮಾರ್ಗಗಳನ್ನು ಬಯಸುತ್ತಾರೆ. ಆದ್ದರಿಂದ ನಾವು ಅವರ ಅಭಿಪ್ರಾಯ ಮತ್ತು ಅವರು ಎದುರಿಸುತ್ತಿರುವ ಸವಾಲುಗಳನ್ನು ಅರ್ಥಮಾಡಿಕೊಳ್ಳಲು ಅವರಿಂದಲೇ ವಿಚಾರವನ್ನು ಪಡೆಯಲು ನಿರ್ಧರಿಸಿದ್ದೇವೆ” ಎಂದು DULT ನಿರ್ದೇಶಕಿ ವಿ. ಮಂಜುಳಾ ಹೇಳಿದ್ದಾರೆ.
ಸೈಕ್ಲಿಂಗ್ ಉತ್ಸಾಹಿಗಳು ಅವರು ಪ್ರಯಾಣಿಸುವ ನಿರ್ದಿಷ್ಟ ಮಾರ್ಗವನ್ನು DULT ವೆಬ್‌ಸೈಟ್‌ನಲ್ಲಿ ಜಿಪಿಎಸ್ ದೃಶ್ಯೀಕರಣ ಸಾಧನದಲ್ಲಿ ತಿಳಿಸಬಹುದು. Google ಫಾರ್ಮ್ ಮೂಲಕ ಬಳಕೆದಾರರು ಹೆಚ್ಚುವರಿ ಮಾಹಿತಿಯನ್ನು ಒದಗಿಸಬಹುದಾಗಿದೆ.
DULT ಅವರ ಆಹ್ವಾನಕ್ಕೆ ಪ್ರತಿಕ್ರಿಯಿಸುವವರು ತಮ್ಮ ಆದ್ಯತೆಗಳನ್ನು ORR ಅಥವಾ ಪೂರ್ವ ಬೆಂಗಳೂರು ರಸ್ತೆಗೆ ಸೀಮಿತವಾಗಿ ಅಭಿಪ್ರಾಯ ನೀಡಬೇಕಾಗಿಲ್ಲ. ಅವರು ಬೆಂಗಳೂರಿನ ಪೂರ್ತಿ ತಮಗೆ ಬೇಕಾದ ಸೈಕಲಿಂಗ್ ಲೇನ್‌ಗಳ ಬಗ್ಗೆ ಐಡಿಯಾಗಳನ್ನು ನೀಡಬಹುದು. ತಮ್ಮ ಅಭಿಪ್ರಾಯಗಳನ್ನು ನೀಡಲು ಆಗಸ್ಟ್ 14 ರವರೆಗೆ ಸಮಯವಿದೆ. ಭವಿಷ್ಯದ ಯೋಜನೆಗಳು ಸಾರ್ವಜನಿಕ ಬೇಡಿಕೆಯೊಂದಿಗೆ ಸಮನ್ವಯವಾಗಿವೆಯೇ ಎಂದು ಖಚಿತಪಡಿಸಿಕೊಳ್ಳಲು, ನಗರದಾದ್ಯಂತ ಸೈಕ್ಲಿಂಗ್ ಲೇನ್‌ಗಳ ಆದ್ಯತೆಗಳನ್ನು ಅರ್ಥಮಾಡಿಕೊಳ್ಳಲು ಇಲಾಖೆ ಈ ಕ್ರಮ ಕೈಗೊಂಡಿದೆ.
“ಇದು ವ್ಯಾಪಕವಾದ ನೆಟ್‌ವರ್ಕ್‌ಗಳನ್ನು ನಿರ್ಮಿಸುವ ಯೋಜನೆಗಳನ್ನು ಹೆಚ್ಚಿಸಲು ನಮಗೆ ಸಹಾಯ ಮಾಡುತ್ತದೆ. ಯಶಸ್ವಿ ಮಾದರಿಯಿಂದ ಸೈಕ್ಲಿಂಗ್ ಮಾಡಲು ಅನೇಕರನ್ನು ಪ್ರೋತ್ಸಾಹಿಸುತ್ತದೆ ಎಂದು ನಾವು ಭಾವಿಸುತ್ತೇವೆ” ಎಂದು ಮಂಜುಳಾರವರು ಹೇಳಿದ್ದಾರೆ.
ಓದಿ: ವಿದೇಶದಲ್ಲಿ ತೊಗಲುಗೊಂಬೆಯಾಟ ಪ್ರದರ್ಶಿಸಿ ಮೆಚ್ಚುಗೆ ಗಳಿಸಿದ ಕಿಳ್ಯೇಕ್ಯಾತರ ಭೀಮವ್ವ!


