Homeಕರ್ನಾಟಕಅಸೂಕ್ಷ್ಮ, ಪ್ರೊಪಗಂಡಾ ಮತ್ತು ಕ್ರಿಮಿನಲ್‌ಗಳಿಗೆ ಮಾರ್ಗದರ್ಶಿಯಂತಿರುವ ಕ್ರೈಮ್ ಸ್ಟೋರೀಸ್ ಇಂಡಿಯಾ ಡಿಟೆಕ್ಟಿವ್ಸ್

ಅಸೂಕ್ಷ್ಮ, ಪ್ರೊಪಗಂಡಾ ಮತ್ತು ಕ್ರಿಮಿನಲ್‌ಗಳಿಗೆ ಮಾರ್ಗದರ್ಶಿಯಂತಿರುವ ಕ್ರೈಮ್ ಸ್ಟೋರೀಸ್ ಇಂಡಿಯಾ ಡಿಟೆಕ್ಟಿವ್ಸ್

- Advertisement -
- Advertisement -

ಪ್ರಸ್ತುತ ನೆಟ್‌ಫ್ಲಿಕ್ಸ್ ಒಟಿಟಿ ವೇದಿಕೆಯಲ್ಲಿ ಪ್ರಸಾರವಾಗುತ್ತಿರುವ ’ಕ್ರೈಮ್ ಸ್ಟೋರಿಸ್: ಇಂಡಿಯಾ ಡಿಟೆಕ್ಟಿವ್ಸ್’ನ ಎಲ್ಲಾ ಸಂಚಿಕೆಗಳು ಈ ನೆಲದ ಕಾನೂನುಗಳ ಸ್ಪಷ್ಟ ಉಲ್ಲಂಘನೆಯ ಕಾರಣಕ್ಕಾಗಿ ವೀಕ್ಷಿಸಲು ಅನರ್ಹವಾಗಿವೆ. ಹಾಗಾಗಿ ಅವುಗಳ ಪ್ರಸಾರವನ್ನು ನೆಟ್‌ಫ್ಲಿಕ್ಸ್ ನಿಲ್ಲಿಸಬೇಕೆನ್ನುವ ಕೂಗು ಸಕಾರಣದಿಂದ ಕೂಡಿದೆ.

ನಾಲ್ಕು ಸಂಚಿಕೆಗಳ ಈ ಡಾಕ್ಯುಮೆಂಟರಿ ಸರಣಿಯಲ್ಲಿ ಬೆಂಗಳೂರು ಪೊಲೀಸ್ ಠಾಣೆಗಳಲ್ಲಿ ದಾಖಲಾದ ಪ್ರಕರಣಗಳ ವಿಚಾರಣೆಯನ್ನು ಯಾವುದೇ ನಿರ್ಬಂಧಗಳನ್ನು ಹೇರಿಕೊಳ್ಳದೆ, ಕ್ಯಾಮರಾಕ್ಕೆ ಯಾವುದೇ ರೀತಿಯ ತಡೆಗೋಡೆಗಳನ್ನು ಹಾಕಿಕೊಳ್ಳದೆ ನೇರವಾಗಿ ತೋರಿಸಲಾಗಿದೆ. ಕಾನೂನು ಎಚ್ಚರಿಕೆಗಳನ್ನು ಸ್ಪಷ್ಟವಾಗಿ ಗಾಳಿಗೆ ತೂರಲಾಗಿದೆ. ಪ್ರಕರಣವೊಂದರ ತನಿಖೆಯ ವೇಳೆ ಅದರ ವಿವರಗಳನ್ನು ಯಾವುದೇ ಪ್ರಕಾರದ ಮಾಧ್ಯಮಗಳಿಗೆ ನೀಡಬಾರದು ಎಂಬ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗಳ ನಿರ್ದೇಶನವನ್ನು ಈ ಚಿತ್ರದಲ್ಲಿ ಕಾಣಿಸಿಕೊಂಡ ಪೊಲೀಸ್ ಅಧಿಕಾರಿಗಳು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಕ್ರೈಮ್ ರಿಪೋರ್ಟರ್‌ಗಳು ತನಿಖಾ ಅಧಿಕಾರಿಗಳಿಂದ ಮತ್ತು ಹಿರಿಯ ಶ್ರೇಣಿಯ ಅಧಿಕಾರಿಗಳಿಂದ ತನಿಖೆಯ ಕೆಲ ವಿವರಗಳನ್ನು ಪಡೆಯಲು ದಿನನಿತ್ಯ ಹೆಣಗಾಡುತ್ತಿರುವ ಸಂದರ್ಭದಲ್ಲಿ, ಪೊಲೀಸರು ತಮ್ಮ ತಥಾಕಥಿತ ತನಿಖೆಯ ಕೌಶಲ್ಯದ ಪ್ರೊಪಗಾಂಡವನ್ನು ಬಿತ್ತಲು ಹಾಗೂ ಪ್ರದರ್ಶಿಸಿಕೊಳ್ಳಲು ಈ ಡಾಕ್ಯುಮೆಂಟರಿ ಸರಣಿಯನ್ನು ವೇದಿಕೆಯಾಗಿ ಬಳಸಿಕೊಂಡಿದ್ದಾರೆ. ಬೆಂಗಳೂರು ಪೊಲೀಸರ ತನಿಖಾ ಶೈಲಿಯನ್ನು ಪ್ರದರ್ಶಿಸಿಕೊಳ್ಳಲು ಹೋಗಿ, ಕ್ರಿಮಿನಲ್‌ಗಳಿಗೆ ಮಾರ್ಗದರ್ಶನ ನೀಡುವ ರೀತಿಯಲ್ಲಿ ಸರಣಿ ಅಂತ್ಯಗೊಂಡಿದೆ ಎಂದು ಕೆಲ ಹಿರಿಯ ಪೊಲೀಸ್ ಅಧಿಕಾರಿಗಳು ಹೇಳುತ್ತಾರೆ. ಪ್ರಚಾರಕ್ಕಾಗಿ ಹಸಿದಿದ್ದ ಪೊಲೀಸ್ ಅಧಿಕಾರಿಗಳನ್ನು ಯಶಸ್ವಿಯಾಗಿ ಮರಳು ಮಾಡಿದ ಈ ಸರಣಿ ತಯಾರಕರಿಗೆ ಧನ್ಯವಾದ ತಿಳಿಸಬೇಕಾಗಿದೆ.

ಕಾನೂನು ಉಲ್ಲಂಘನೆಗಳಿಗಿಂತಲೂ ಈ ಸರಣಿಯು ಆರೋಪಿಗಳು ಮತ್ತು ಸಂತ್ರಸ್ತರ ಬಗ್ಗೆ ಅಸೂಕ್ಷ್ಮತೆಯನ್ನು ಮೆರೆಯುತ್ತದೆ. ಅದಕ್ಕಾಗಿ ಸರಣಿಯು ಸೂಕ್ತ ಬೆಲೆ ಕೂಡ ತೆತ್ತಿದೆ. ಆರೋಪಿಯೊಬ್ಬರು ಹೈಕೋರ್ಟ್ ಮೆಟ್ಟಿಲೇರಿದ್ದು, ಈ ಸರಣಿಯ ಮೊದಲ ಸಂಚಿಕೆಯಲ್ಲಿ (A murdered mother) ತಮ್ಮ ಪ್ರಕರಣ ಇನ್ನೂ ವಿಚಾರಣೆಯಲ್ಲಿರುವ ಸಂದರ್ಭದಲ್ಲಿಯೇ ತನ್ನನ್ನು ಕೆಟ್ಟದಾಗಿ ತೋರಿಸಲಾಗಿದೆ ಮತ್ತು ನಾನೇ ನನ್ನ ಸ್ವಂತ ತಾಯಿಯನ್ನು ಕೊಂದೆ ಎನ್ನುವ ರೀತಿ ಬಿಂಬಿಸಲಾಗಿದೆ ಎಂದು ದೂರಿ, ಸರಣಿಯ ಆ ಸಂಚಿಕೆಯನ್ನು ತಡೆಹಿಡಿಯುವಂತೆ ಕೋರಿದ್ದರು. ಯಾವುದೇ ಮಾಧ್ಯಮಗಳಿಗೆ ಆರೋಪಿಗಳನ್ನು ಅಪರಾಧಿಗಳ ರೀತಿ ತೋರಿಸುವ ಹಕ್ಕು ಇಲ್ಲ. ಅಲ್ಲದೇ ಪ್ರತಿಯೊಬ್ಬ ಆರೋಪಿಗೂ ಸಹ ತನ್ನನ್ನು ಸಮರ್ಥಿಸಿಕೊಳ್ಳುವ ಹಕ್ಕು ಇದೆ. ಕರ್ನಾಟಕ ಹೈಕೋರ್ಟ್ ಈ ವಿಷಯದಲ್ಲಿ ಮಧ್ಯಂತರ ಆದೇಶ ನೀಡಿದ್ದು ಆ ಮೊದಲ ಸಂಚಿಕೆಯನ್ನು ಪ್ರಸಾರ ಮಾಡದಂತೆ ನೆಟ್‌ಫ್ಲಿಕ್ಸ್‌ಗೆ ಆದೇಶಿಸಿದೆ.

PC : The Economic Times

ಈ ಸರಣಿಯಲ್ಲಿ ಬರುವ ಮಹಿಳೆಯರು, ಮಕ್ಕಳು ಸೇರಿದಂತೆ ಆರೋಪಿಗಳು, ಶಂಕಿತರು, ಸಂತ್ರಸ್ತರು ಯಾರೊಬ್ಬರ ಮುಖವನ್ನು ಸಹ ಬ್ಲರ್ ಮಾಡದೇ ನೇರವಾಗಿ ತೋರಿಸಲಾಗಿದೆ. ಇದು ಆತಂಕಕಾರಿ ಪ್ರವೃತ್ತಿಯಾಗಿದೆ. ಆರೋಪಿ ಮತ್ತು ಸಂತ್ರಸ್ತರ ಒಪ್ಪಿಗೆಯಿಲ್ಲದೆ ಅವರನ್ನು ತೋರಿಸುವ ಹಕ್ಕು ಅಥವಾ ಅಧಿಕಾರ ಯಾವ ಮಾಧ್ಯಮಗಳಿಗೂ ಇಲ್ಲ ಎಂದು ಖ್ಯಾತ ವಕೀಲರಾದ ಬಿ.ಟಿ ವೆಂಕಟೇಶ್ ಹೇಳುತ್ತಾರೆ. ಒಂದು ವೇಳೆ ಅವರ ಒಪ್ಪಿಗೆ ಸಿಕ್ಕಿದರೂ ಸಹ ಅದನ್ನು ತಿರುಚುವ ಕೆಲಸವನ್ನು ಮಾಧ್ಯಮಗಳು ಮಾಡಬಾರದು. ಮಹಿಳೆಯರು ಮತ್ತು ಅಪ್ರಾಪ್ತ ವಯಸ್ಕರೊಂದಿಗೆ ವ್ಯವಹರಿಸುವಾಗ ಮಾಧ್ಯಮಗಳು ಹೆಚ್ಚು ಎಚ್ಚರಿಕೆ ಮತ್ತು ಜಾಗೃತರಾಗಿರಬೇಕು.

Body in the Bag ಎಂಬ ಸಂಚಿಕೆಯಲ್ಲಿ ಪೊಲೀಸರು ಕೊಲೆಯಾದ ಸಂತ್ರಸ್ತನ ತಾಯಿಯ ಆರೋಪದ ಮೇಲೆ, ಆರಂಭದಲ್ಲಿಯೇ ಕೊಲೆಯಾದವನ ಹೆಂಡತಿ ಮತ್ತು ಆಕೆಯ ತಾಯಿಯ ಮೇಲೆ ಶಂಕೆ ವ್ಯಕ್ತಪಡಿಸಿ ವಶಕ್ಕೆ ಪಡೆಯುತ್ತಾರೆ. ಪೊಲೀಸರು ಅವರ ವಿರುದ್ಧ ಒಂದು ಸಣ್ಣ ಸಾಕ್ಷ್ಯ ಕೂಡ ಸಂಗ್ರಹಿಸಲು ವಿಫಲವಾದರೂ, ಸಂಚಿಕೆಯುದ್ದಕ್ಕೂ ಅವರಿಬ್ಬರೆ ಕೊಲೆಗಾರರು ಎಂಬ ಭಾವನೆ ನೋಡುಗರಲ್ಲಿ ಉಳಿಯುತ್ತದೆ. ಅವರಿಬ್ಬರ ಮೇಲೆ ಈ ಸರಣಿ ತಯಾರಕರಾದ ಎನ್ ಅಮಿತ್ ಮತ್ತು ಜಾಕ್ ರ್‍ಯಾಂಪ್ಲಿಂಗ್‌ರವರು ಸಂಚಿಕೆಯ ಕೊನೆಯವರೆಗೂ ಯಾವುದೇ ಕರುಣೆ ತೋರಿಸುವುದಿಲ್ಲ. ಆದರೆ ಸಂಚಿಕೆಯ ಕೊನೆಯಲ್ಲಿ ಆ ಕೊಲೆ ಮಾಡಿದ ಇನ್ನೊಂದು ಜೋಡಿ ಸಿಕ್ಕ ನಂತರ ಮಾತ್ರ ಆರಂಭದಿಂದಲೂ ಶಂಕಿತರಾಗಿದ್ದ ಇವರನ್ನು ಅಕ್ರಮ ಬಂಧನದಿಂದ ಬಿಡುಗಡೆ ಮಾಡಲಾಗುತ್ತದೆ. ಯಾವುದೇ ವಾರೆಂಟ್ ಇಲ್ಲದೆ ಅವರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿರುತ್ತದೆ!

Dying for Protection ಸಂಚಿಕೆಯಲ್ಲಿ ಕೊಲೆಯಾದ ವೇಶ್ಯೆಯೊಬ್ಬರ ಮಗನನ್ನು ಅಪ್ರಾಪ್ತ ಎಂಬುದನ್ನು ಕೂಡ ಲೆಕ್ಕಿಸದೇ ಅಕ್ರಮವಾಗಿ ವಶಕ್ಕೆ ಪಡೆಯಲಾಗುತ್ತದೆ. ಆತನ ವಿರುದ್ಧ ಪೊಲೀಸರು ಅಶ್ಲೀಲ ಪದಗಳನ್ನು ಬಳಸುತ್ತಾರೆ. ಇಡೀ ಘಟನೆಯನ್ನು ವೈಭವೀಕರಿಸುವುದು ನಿರ್ದೇಶಕರಿಗೆ ಸಮಸ್ಯೆ ಅನ್ನಿಸುವುದಿಲ್ಲ. ಆದರೂ ಕೊನೆಗೆ ಆಕೆಯ ಗ್ರಾಹಕನಾಗಿದ್ದವನನ್ನು ಈ ಪ್ರಕರಣದಲ್ಲಿ ಪೊಲೀಸರು ಬಂಧಿಸುತ್ತಾರೆ. ಇಲ್ಲಿ ಅಪ್ರಾಪ್ತ ಬಾಲಕನ ಹಕ್ಕುಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ ಮತ್ತು ಯಾರಾದರೂ ಈ ವಿಷಯದಲ್ಲಿ ತಯಾರಕರ ವಿರುದ್ಧ ದೂರು ನೀಡಿದರೆ ಪ್ರಕರಣ ದಾಖಲಾಗುವುದರಲ್ಲಿ ಅನುಮಾನವಿಲ್ಲ. ಕೊನೆಯ Stolen Baby ಸಂಚಿಕೆಯಲ್ಲಿ ಚಿಕ್ಕ ಮಕ್ಕಳನ್ನು ಕೂಡ ಪೊಲೀಸ್ ಠಾಣೆಯಲ್ಲಿ ನಿಲ್ಲಿಸಿ, ಮಗುವನ್ನು ಕಳೆದುಕೊಂಡ ದುಃಖಿತ ತಾಯಿ ಮತ್ತು ತಂದೆಯೊಂದಿಗೆ ತೋರಿಸಲಾಗಿದೆ.

ಈ ಉಲ್ಲಂಘನೆಗಳಿಗೆ, ನಿರ್ದಿಷ್ಟವಾಗಿ ಸಂತ್ರಸ್ತರು ಮತ್ತು ಆರೋಪಿಗಳ ಹಕ್ಕುಗಳನ್ನು ಉಲ್ಲಂಘಿಸಿರುವುದಕ್ಕೆ ನಿರ್ದೇಶಕರು, ನಿರ್ಮಾಪಕರು ಮತ್ತು ಪೊಲೀಸ್ ಅಧಿಕಾರಿಗಳ ಮೇಲೆ ಕೋರ್ಟ್‌ಗಳು ಕ್ರಮ ತೆಗೆದುಕೊಳ್ಳಬಹುದಾಗಿದೆ ಎಂದು ಮತ್ತೊಬ್ಬ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳುತ್ತಾರೆ. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗಳ ಹಲವು ನಿರ್ದೇಶನಗಳನ್ನು ಉಲ್ಲಂಘಿಸಿರುವ ಪೊಲೀಸರು ಕೂಡ ಶಿಸ್ತು ಕ್ರಮ ಎದುರಿಸುವ ಸಾಧ್ಯತೆ ಇದೆ. ಈ ಸರಣಿಯನ್ನು ನೋಡುವ ಕ್ರಿಮಿನಲ್‌ಗಳಿಗೆ ಇದು ಪೊಲೀಸರನ್ನು ದಿಕ್ಕು ತಪ್ಪಿಸಲು ಮತ್ತು ಸಾಕ್ಷ್ಯಗಳನ್ನು ನಾಶಮಾಡಲು ಉತ್ತಮ ಅಧ್ಯಯನವಾಗಲಿದೆ.

ಮಧು ಜಿ.ಸಿ
ಮಣಿಪಾಲ್ ವಿಶ್ವವಿದ್ಯಾಲಯದಿಂದ ಸಾಮಾಜಿಕ ಮಾನವಶಾಸ್ತ್ರ ವಿಭಾಗದಲ್ಲಿ ಪದವಿ ಪಡೆದಿದ್ದಾರೆ ಮತ್ತು ಸಾಮಾಜಿಕ ಸಮಸ್ಯೆಗಳಿಗೆ ಸಕ್ರಿಯವಾಗಿ ಸ್ಪಂದಿಸುತ್ತಾರೆ.

ಕನ್ನಡಕ್ಕೆ: ಮುತ್ತುರಾಜ್


ಇದನ್ನೂ ಓದಿ: ವೆಬ್‌ಸೀರೀಸ್‌: ಕರ್ನಾಟಕ ಪೊಲೀಸರಿಂದ ಖಾಸಗಿತನದ ಉಲ್ಲಂಘನೆ; ಮೊದಲ ಸಂಚಿಕೆಗೆ ಹೈಕೋರ್ಟ್‌ ತಡೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...