ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ ‘ದೋ ಪಟ್ಟಿ’ ಸಿನಿಮಾದ ವಿರುದ್ಧ ಹರಿಯಾಣದ ಪ್ರಭಾವಿ ‘ಹೂಡಾ’ ಸಮುದಾಯ ಸಾಮಾಜಿಕ ಬಹಿಷ್ಕಾರಕ್ಕೆ ತಮ್ಮ ಖಾಪ್ ಪಂಚಾಯತ್‌ನಲ್ಲಿ ಈ ನಿರ್ಧಾರ ಕೈಗೊಂಡಿದೆ. ಸಿನಿಮಾದ ನಿರ್ಮಾಪಕರು, ಪಾತ್ರವರ್ಗ ಮತ್ತು ನೆಟ್‌ಫ್ಲಿಕ್ಸ್ ಇಂಡಿಯಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ರಾಜ್ಯದ ಬಿಜೆಪಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಚಿತ್ರದ ವಿರುದ್ಧ ಕ್ರಮ ಕೈಗೊಳ್ಳಲು ಬಿಜೆಪಿ ನೇತೃತ್ವದ ಹರಿಯಾಣ ಸರ್ಕಾರಕ್ಕೆ ಒಂದು ತಿಂಗಳ ಕಾಲಾವಕಾಶ ನೀಡಿರುವ ಹೂಡಾ ಖಾಪ್ ಪಂಚಾಯತ್, ಚಿತ್ರದಿಂದ `ಹೂಡಾ’ ಪದವನ್ನು ಅಳಿಸಿ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದೆ. ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ಸಮುದಾಯವು ಸಭೆ ಕರೆದು ‘ತೀವ್ರ ಕ್ರಮ’ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಹರಿಯಾಣದ ರೋಹ್ಟಕ್ ಜಿಲ್ಲೆಯ ಬಸಂತ್‌ಪುರದಲ್ಲಿರುವ ಸರ್ವ್ ಹೂಡಾ ಖಾಪ್‌ನ ವೇದಿಕೆಯಲ್ಲಿ ಭಾನುವಾರ ಹೂಡಾ ಖಾಪ್ ಸಭೆಯನ್ನು ಕರೆದಿದ್ದಾರೆ. ನಟ ಶಾಹೀರ್ ಶೇಖ್ ಅವರ ಅವಹೇಳನಕಾರಿ ಸಂಭಾಷಣೆಯಿಂದ ‘ಹೂಡಾ’ ಪದವನ್ನು ತೆಗೆದುಹಾಕುವಂತೆ ಅವರು ಒತ್ತಾಯಿಸಿದ್ದು, ತಮ್ಮ ಈಡೇರರಿದ್ದರೆ ದೋ ಪಟ್ಟಿ ಮತ್ತು ನೆಟ್‌ಫ್ಲಿಕ್ಸ್ ಇಂಡಿಯಾ ವಿರುದ್ಧ ಕೈಗೊಳ್ಳುವ ಕ್ರಮಗಳ ಬಗ್ಗೆ ಹಲವಾರು ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ.
ಈ ಕುರಿತು ಮಾತನಾಡಿದ ಹೂಡಾ ಖಾಪ್‌ನ ಮುಖ್ಯಸ್ಥ ಓಂ ಪ್ರಕಾಶ್ ಹೂಡಾ ಮತ್ತು ಸಾಮಾಜಿಕ ಕಾರ್ಯಕರ್ತ ಸುರೇಂದರ್ ಸಿಂಗ್ ಹೂಡಾ, “ದೋ ಪಟ್ಟಿ ಮತ್ತು ನೆಟ್‌ಫ್ಲಿಕ್ಸ್ ಇಂಡಿಯಾ, ನಿರ್ಮಾಪಕರು, ನಟರು, ನಿರ್ದೇಶಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು. ಎಲ್ಲಿಯವರೆಗೆ ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸುವುದಿಲ್ಲವೊ ಮತ್ತು ತಮ್ಮ ಚಲನಚಿತ್ರದಿಂದ `ಹೂಡಾ’ ಪದವನ್ನು ಅಳಿಸುವುದಿಲ್ಲವೋ ಅಲ್ಲಿಯವರೆಗೆ ಚಿತ್ರದ ನಿರ್ಮಾಪಕರು, ನಟರು, ನಿರ್ದೇಶಕರು ಮತ್ತು ನೆಕ್ಸ್ಟ್‌ಫ್ಲಿಕ್ಸ್ ಸಾಮಾಜಿಕ ಬಹಿಷ್ಕಾರ ಮುಂದುವರಿಯುತ್ತದೆ” ಎಂದು ಹೇಳಿದ್ದಾರೆ.
ಅಲ್ಲದೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಹಾಗೂ ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರಿಗೆ ಪತ್ರ ಬರೆದು ಸೂಕ್ತ ಕ್ರಮ ಕೈಗೊಳ್ಳುವಂತೆ ಖಾಪ್ ಪಂಚಾಯತ್ ಒತ್ತಾಯಿಸಿದ್ದು, ಅವರು ಕ್ರಮ ಕೈಗೊಳ್ಳದಿದ್ದಲ್ಲಿ ಹೂಡಾ ಖಾಪ್ ಮಾತ್ರವಲ್ಲದೆ ಜಾಟ್ ಸಮುದಾಯವೂ “ತೀವ್ರ ಕ್ರಮ ಕೈಗೊಳ್ಳಲು ಒತ್ತಾಯಿಸಲಾಗುವುದು. ” ಎಂದು ಹೇಳಿದ್ದಾರೆ.
“ಅಲ್ಲದೆ, ಎಲ್ಲಾ ಖಾಪ್‌ಗಳು ಮತ್ತು ಜಾಟ್ ಸಮುದಾಯಗಳಿಗೆ ವಿರುದ್ಧವಾದ ಎಲ್ಲಾ ರೀತಿಯ ಅವಹೇಳನಕಾರಿ ವಿಷಯಗಳನ್ನು ತೆಗೆದುಹಾಕಬೇಕು ಮತ್ತು ನಿಲ್ಲಿಸಬೇಕು. ಇಲ್ಲದಿದ್ದರೆ ಅದು ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಎಚ್ಚರಿಕೆ ನೀಡಲಾಗಿದೆ. ರೋಹ್ಟಕ್ ಸಂಸತ್ ಸದಸ್ಯ ದೀಪಿಂದರ್ ಸಿಂಗ್ ಹೂಡಾ ಮತ್ತು ಸ್ಥಳೀಯ ಶಾಸಕ ಮತ್ತು ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರು ಕ್ರಮವಾಗಿ ಸಂಸತ್ತು ಮತ್ತು ರಾಜ್ಯ ವಿಧಾನಸಭೆಯಲ್ಲಿ ಈ ಬಗ್ಗೆ ಮಾತನಾಡಲಿದ್ದಾರೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ‘ಕೆಫಿಯಹ್’ ಧರಿಸಿ ಫುಟ್ಬಾಲ್ ವೀಕ್ಷಿಸಲು ತೆರಳಿದ್ದಕ್ಕೆ ಬಂಧಿಸಿದ ಕೇರಳ ಪೊಲೀಸರು!
‘ಕೆಫಿಯಹ್’ ಧರಿಸಿ ಫುಟ್ಬಾಲ್ ವೀಕ್ಷಿಸಲು ತೆರಳಿದ್ದಕ್ಕೆ ಬಂಧಿಸಿದ ಕೇರಳ ಪೊಲೀಸರು!


