ಖ್ಯಾತ ಚಲನಚಿತ್ರ ಸಂಕಲನಕಾರ (ಎಡಿಟರ್) ನಿಶಾದ್ ಯೂಸುಫ್ ಬುಧವಾರ (ಅ.30) ಕೇರಳದ ಕೊಚ್ಚಿಯ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾತ್ರಿ 2 ಗಂಟೆ ಸುಮಾರಿಗೆ ಕೊಚ್ಚಿಯ ಪಣಂಪಳ್ಳಿ ನಗರದ ಅಪಾರ್ಟ್‌ಮೆಂಟ್‌ನಲ್ಲಿನಿಶಾದ್ ಶವವಾಗಿ ಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಘಟನೆಯನ್ನು ಆತ್ಮಹತ್ಯೆ ಎಂದು ಶಂಕಿಸಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ, ಅವರು ಹೆಚ್ಚಿನ ವಿವರಗಳನ್ನು ನೀಡಿಲ್ಲ ಎಂದು ವರದಿಗಳು ಹೇಳಿವೆ.
ನಿಶಾದ್ ಅವರು 2022ರಲ್ಲಿ ‘ತಲ್ಲುಮಾಲ’ ಸಿನಿಮಾದ ಅತ್ಯುತ್ತಮ ಸಂಕಲನಕ್ಕಾಗಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ಪಡೆದಿದ್ದರು. ಚಾವೆರ್, ಉಂಡಾ, ಸೌದಿ ವೆಲ್ಲಕ್ಕ, ಒನ್, ಆಪರೇಷನ್ ಜಾವಾ, ಬಾಜೂಕಾ, ಮತ್ತು ಕಂಗುವಾ ಮುಂತಾದ ಚಿತ್ರಗಳಿಗೆ ಅವರು ಸಂಕಲನ ಮಾಡಿದ್ದಾರೆ.
‘ಕಂಗುವಾ’ ಸಿನಿಮಾದ ನಿರ್ಮಾಣ ಸಂಸ್ಥೆ ಸ್ಟುಡಿಯೋ ಗ್ರೀನ್ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ನಿಶಾದ್ ಸಾವಿಗೆ ಸಂತಾಪ ಸೂಚಿಸಿದೆ.
We are deeply shocked and saddened by the sudden passing of our beloved editor, #NishadYusuf 💔
Your talent, dedication and vision were invaluable assets to our team and your absence leaves us with a profound void. Our thoughts and prayers are with your family and friends during… pic.twitter.com/mHOhVDDsgg
— Studio Green (@StudioGreen2) October 30, 2024
ನಿಶಾದ್ ಸಂಕಲನ ಮಾಡಿರುವ ನಟ ಮಮ್ಮುಟ್ಟಿ ಅಭಿನಯದ ‘ಬಾಜೂಕಾ’ ಮತ್ತು ಸೂರ್ಯ ಅಭಿನಯದ ತಮಿಳು ಚಲನಚಿತ್ರ ‘ಕಂಗುವಾ’ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.
ಇದನ್ನೂ ಓದಿ : ರಂಗೋಲಿ ಹಾಕುತ್ತಿದ್ದವರ ಮೇಲೆ ಕಾರು ಚಲಾಯಿಸಿದ ಅಪ್ರಾಪ್ತ ಬಾಲಕ; ಇಬ್ಬರ ಸ್ಥಿತಿ ಗಂಭೀರ


