ಆಯುಷ್ ವೈದ್ಯೆ ನುಸ್ರತ್ ಪರ್ವೀನ್ ಇತ್ತೀಚೆಗೆ ತಮ್ಮ ನೇಮಕಾತಿ ಪತ್ರವನ್ನು ಪಡೆದಿದ್ದರೂ ಬಿಹಾರ ಸರ್ಕಾರಿ ಸೇವೆಗೆ ಸೇರದಿರಲು ನಿರ್ಧರಿಸಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಪಾಟ್ನಾದಲ್ಲಿ ನಡೆದ ಸಕಾfರಿ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಾರ್ವಜನಿಕವಾಗಿ ತಮ್ಮ ಹಿಜಾಬ್ ಅನ್ನು ಎಳೆದಿರುವುದ ವಿವಾದ ಸ್ವರೂಪ ಪಡೆದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಕೃತ್ಯವು ವ್ಯಾಪಕ ರಾಜಕೀಯ ಮತ್ತು ಸಾಮಾಜಿಕ ವಿರೋಧಕ್ಕೆ ಕಾರಣವಾಗಿದೆ.
ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಲವಾರು ಹಿಜಾಬ್ ಧರಿಸಿದ ಮಹಿಳೆಯರಲ್ಲಿ ಒಬ್ಬರಾದ ಪರ್ವೀನ್ ಡಿಸೆಂಬರ್ 20 ರಂದು ಸೇವೆಗೆ ಸೇರಲಿದ್ದಾರೆ ಎನ್ನಲಾಗಿತ್ತು. ಆದರೂ ಅವರ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕುಟುಂಬವು ಅವರನ್ನು ಮನವೊಲಿಸಲು ಪ್ರಯತ್ನಿಸುತ್ತಿದೆ ಎಂದು ತಿಳಿದುಬಂದಿದೆ.
ಕೋಲ್ಕತ್ತಾದ ಸರ್ಕಾರಿ ಕಾನೂನು ವಿಶ್ವವಿದ್ಯಾಲಯದಲ್ಲಿ ಬೋಧಿಸುವ ಅವರ ಸಹೋದರ ಮಾತನಾಡಿ, ಬೇರೆಯವರ ತಪ್ಪಿಗೆ ಅವರನ್ನು ತಡೆಹಿಡಿಯಬಾರದು ಎಂದು ಕುಟುಂಬವು ಅಭಿಪ್ರಾಯಪಟ್ಟಿದೆ ಎಂದು ಹೇಳಿದ್ದಾರೆ. ಆದರೆ ಘಟನೆಯ ಬಗ್ಗೆ ಅವರ ದುಃಖದ ಬಗ್ಗೆ ಅವರಿಗೆ ಚೆನ್ನಾಗಿ ತಿಳಿದಿದೆ. ಅವರ ಪತಿ ಕಾಲೇಜಿನಲ್ಲಿ ಕ್ಲಿನಿಕಲ್ ಮನಶ್ಶಾಸ್ತ್ರಜ್ಞರಾಗಿ ಕೆಲಸ ಮಾಡುತ್ತಿದ್ದಾರೆ.
ರಾಷ್ಟ್ರೀಯ ಜನತಾ ದಳವು ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ, ಪರ್ವೀನ್ ಅವರೊಂದಿಗಿನ ಸಂವಾದದ ವೀಡಿಯೊ ಕ್ಲಿಪ್ ಅನ್ನು ಹಂಚಿಕೊಂಡಿದೆ. ಈ ದೃಶ್ಯಗಳು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವ್ಯಾಪಕವಾಗಿ ಹರಡಿತು. ನೆಟಿಜನ್‌ಗಳು, ವಿಶೇಷವಾಗಿ ಮಹಿಳೆಯರು, ಈ ಕೃತ್ಯವನ್ನು ಅನುಚಿತ ಮತ್ತು ಅವಮಾನಕರ ಎಂದು ಬಣ್ಣಿಸಿದರು.
ಆರ್‌ಜೆಡಿ ಬಲವಾದ ಪದಗಳ ಪೋಸ್ಟ್ ಮೂಲಕ ಮುಖ್ಯಮಂತ್ರಿಯ ನಡವಳಿಕೆ ಮತ್ತು ಮಾನಸಿಕ ಸದೃಢತೆಯನ್ನು ಪ್ರಶ್ನಿಸಿತು. ಘಟನೆಯನ್ನು ಆಳವಾದ ರಾಜಕೀಯ ಮತ್ತು ಸೈದ್ಧಾಂತಿಕ ಬದಲಾವಣೆಯ ಪ್ರತಿಬಿಂಬ ಎಂದು ಹೇಳಿದೆ.
ಮುಖ್ಯಮಂತ್ರಿಯ ನಡವಳಿಕೆಯನ್ನು ಖಂಡಿಸುವ ಮತ್ತು ಅವರ ರಾಜೀನಾಮೆಗೆ ಒತ್ತಾಯಿಸುವ ಮೂಲಕ ಕಾಂಗ್ರೆಸ್ ಕೂಡ ಮುಖ್ಯಮಂತ್ರಿಗಳ ನಡೆಯನ್ನು ಖಂಡಿಸಿದೆ. ಆದರೆ ಈ ಘಟನೆಯನ್ನು ಬಿಹಾರದಲ್ಲಿ ಮಹಿಳೆಯರ ಸುರಕ್ಷತೆಯ ಬಗೆಗಿನ ಕಳವಳಗಳಿಗೆ ಜೋಡಿಸಿತು. ರಾಜ್ಯದ ಅತ್ಯುನ್ನತ ಸಾಂವಿಧಾನಿಕ ಪ್ರಾಧಿಕಾರದ ಅಂತಹ ನಡವಳಿಕೆಯು ಸಮಾಜಕ್ಕೆ ಗೊಂದಲದ ಸಂದೇಶವನ್ನು ರವಾನಿಸಿದೆ ಎಂದು ವಾದಿಸಿತು.
ಹೆಚ್ಚುತ್ತಿರುವ ಆಕ್ರೋಶ ಮತ್ತು ನಿರಂತರ ರಾಜಕೀಯ ಒತ್ತಡದ ಹೊರತಾಗಿಯೂ, ವೀಡಿಯೊ ವೈರಲ್ ಆದ ಒಂದು ದಿನಕ್ಕಿಂತ ಹೆಚ್ಚು ಸಮಯದ ನಂತರ ನಿತೀಶ್ ಕುಮಾರ್ ಅಥವಾ ಅವರ ಪಕ್ಷ ಅಥವಾ ಬಿಹಾರ ಸರ್ಕಾರ ಯಾವುದೇ ಅಧಿಕೃತ ಸ್ಪಷ್ಟೀಕರಣ ಅಥವಾ ಪ್ರತಿಕ್ರಿಯೆಯನ್ನು ನೀಡಿಲ್ಲ.


