Homeಮುಖಪುಟವಿಷಕಾರುವ ಚಾನೆಲ್‌ಗಳಿಗೆ ಜಾಹೀರಾತು ನೀಡುವುದಿಲ್ಲ: ಪಾರ್ಲೆ-ಜಿ ನಿರ್ಧಾರಕ್ಕೆ ನೆಟ್ಟಿಗರ ಮೆಚ್ಚುಗೆ

ವಿಷಕಾರುವ ಚಾನೆಲ್‌ಗಳಿಗೆ ಜಾಹೀರಾತು ನೀಡುವುದಿಲ್ಲ: ಪಾರ್ಲೆ-ಜಿ ನಿರ್ಧಾರಕ್ಕೆ ನೆಟ್ಟಿಗರ ಮೆಚ್ಚುಗೆ

ದ್ವೇಷ ಹರಡುವ ಚಾನೆಲ್‌ಗಳಿಗೆ ಜಾಹೀರಾತು ನೀಡದಿರುವ ಪಾರ್ಲೆಜಿಯ ನಿರ್ಧಾರವನ್ನು ನಾನು ಅಭಿನಂದಿಸುತ್ತೇನೆ. ನೀವು ಜಾಹೀರಾತು ನೀಡದಿದ್ದರೂ ನಾವು ಪಾರ್ಲೆಜಿಯನ್ನು ಪ್ರೀತಿಸುತ್ತೇವೆ ಎಂದು ವಿಧುಷಿ ಕೌಶಿಕ್ ತಿಳಿಸಿದ್ದಾರೆ.

- Advertisement -
- Advertisement -

ದ್ವೇಷ ಹರಡುವ ಚಾನೆಲ್‌ಗಳಿಗೆ ಜಾಹೀರಾತು ನೀಡುವುದಿಲ್ಲ ಎಂದು ಯುವ ಉದ್ಯಮಿ ರಾಜೀವ್‌ ಬಜಾಜ್ ಘೋಷಿಸಿದ ಬೆನ್ನಲ್ಲೆ, ವಿಷಕಾರುವ ಚಾನೆಲ್‌ಗಳಿಗೆ ನಾವು ಜಾಹೀರಾತು ನೀಡುವುದಿಲ್ಲ ಎಂದು ಖ್ಯಾತ ಬಿಸ್ಕೆಟ್ ಕಂಪನಿ ಪಾರ್ಲೆ-ಜಿಯ ಹಿರಿಯ ಅಧಿಕಾರಿ ಕೃಷ್ಣರಾವ್ ಬುದ್ಧ ತಿಳಿಸಿದ್ದಾರೆ.

ಟಿಆರ್‌ಪಿ ಹಗರಣದಲ್ಲಿ ಈಗಾಗಲೇ ಎರಡು ಚಾನೆಲ್‌ ನಿರ್ದೇಶಕರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ರಿಪಬ್ಲಿಕ್ ಟಿವಿಯ ಅಧಿಕಾರಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ. ಹಲವು ಚಾನೆಲ್‌ಗಳ ವಿರುದ್ಧ ಬಾಲಿವುಡ್ ಸಿನಿಮಾ ತಯಾರಕ ಕಂಪನಿಗಳು ಕೋರ್ಟ್ ಮೆಟ್ಟಿಲೇರಿವೆ. ಮಾಧ್ಯಮಗಳು ದ್ವೇಷ ಹರಡುತ್ತಿವೆ ಎಂದು ಬಹುತೇಕರು ದೂರುತ್ತಿರುವ ಸಮಯದಲ್ಲಿ ಬಜಾಜ್ ಮತ್ತು ಪಾರ್ಲೆಜಿ ಕಂಪನಿಗಳ ನಿರ್ಧಾರಗಳು ವ್ಯಕ್ತವಾಗಿವೆ.

ಮಿಂಟ್ ಪತ್ರಿಕೆಯೊಂದಿಗೆ ಮಾತನಾಡಿದ ಅವರು “ವಿಷಯುಕ್ತ ವಿಷಯಗಳನ್ನು ಪ್ರಚಾರ ಮಾಡುವ ಟಿವಿ ಚಾನೆಲ್‌ಗಳಿಗೆ ಜಾಹೀರಾತು ನಿಯಂತ್ರಿಸುವುದರ ಕುರಿತು ಯೋಚಿಸುತ್ತಿದ್ದೇವೆ. ಇತರೆ ಉದ್ಯಮಗಳು ಸಹ ಈ ರೀತಿ ಮಾಡಿದರೆ, ಅಂತಹ ಟಿವಿ ಚಾನೆಲ್‌ಗಳಿಗೆ ಇದೊಂದು ಸ್ಪಷ್ಟ ಸಂದೇಶವಾದ್ದರಿಂದ ಅವರು ಅನಿವಾರ್ಯವಾಗಿ ತಮ್ಮ ವರ್ತನೆಯನ್ನು ಬದಲಿಸಿಕೊಳ್ಳುತ್ತಾರೆ” ಎಂದಿದ್ದಾರೆ.

ಆಕ್ರಮಣಶೀಲತೆ ಮತ್ತು ವಿಷಕಾರಿ ವಿಷಯಗಳನ್ನು ಪ್ರಸಾರ ಮಾಡುವ ಕಂಪನಿಗಳಿಗೆ ಹಣ ನೀಡುವ ಕಂಪನಿ ನಮ್ಮದಲ್ಲ. ಆ ರೀತಿಯ ನಿರ್ದಿಷ್ಟ ಗುಂಪನ್ನು ಗುರಿಯಾಗಿಸಿಕೊಂಡು ಸುದ್ದಿ ಬಿತ್ತರಿಸುವ ಚಾನೆಲ್‌ಗಳು ನಮಗೆ ಬೇಡ ಎಂದಿದ್ದಾರೆ.

ಪಾರ್ಲೆ-ಜಿ ಕಂಪನಿಯ ಈ ನಿರ್ಧಾರಕ್ಕೆ ನೆಟ್ಟಿಗರು ಮೆಚ್ಚುಗೆಯ ಸುರಿಮಳೆ ಸುರಿಸಿದ್ದಾರೆ. ತಮ್ಮ ಬಾಲ್ಯದ ಅಚ್ಚುಮೆಚ್ಚಿನ ಬಿಸ್ಕೆಟ್ ಕಂಪನಿ ಸರಿಯಾದ ದಾರಿಯಲ್ಲಿದೆ, ನಾವು ನಿಮ್ಮೊಂದಿಗಿದ್ದೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದ್ವೇಷ ಹರಡುವ ಚಾನೆಲ್‌ಗಳಿಗೆ ಜಾಹೀರಾತು ನೀಡದಿರುವ ಪಾರ್ಲೆಜಿಯ ನಿರ್ಧಾರವನ್ನು ನಾನು ಅಭಿನಂದಿಸುತ್ತೇನೆ. ನೀವು ಜಾಹೀರಾತು ನೀಡದಿದ್ದರೂ ನಾವು ಪಾರ್ಲೆಜಿಯನ್ನು ಪ್ರೀತಿಸುತ್ತೇವೆ ಎಂದು ವಿಧುಷಿ ಕೌಶಿಕ್ ತಿಳಿಸಿದ್ದಾರೆ.

ಬಜಾಜ್ ಹಾಗೂ ಪಾರ್ಲೆ ಜಿ ಕೂಟಗಳು ದ್ವೇಶವನ್ನು ಹಬ್ಬಿಸುವ ಟಿವಿ ಚಾನೆಲ್ಲುಗಳಲ್ಲಿ ಇನ್ನು ಮುಂದೆ ತಮ್ಮ ಕೂಟಗಳ ಬಯಲರಿಕೆಗಳನ್ನು (ಜಾಹೀರಾತು) ಮೂಡಿಸದಿರಲು ತೀರ್ಮಾನಿಸಿವೆ. ಕಾರ್ಪೋರೇಟ್ ಹರವಿನ ಮಂದಿಯಿಂದ ಒಂದು ಒಳ್ಳೆಯ ತೀರ್ಮಾನ. ಬರಬರುತ್ತಾ ಹೆಂಡ ಕುಡಿದ ಮಂಗಗಳೇ ಆಗುತ್ತಿರುವ ಮೀಡಿಯಾಗಳನ್ನ ಸಮಾಜವು ಅಂಕೆಯಲ್ಲಿಡಬೇಕಾಗಿದೆ ಎಂದು ಚೈತನ್ಯ ಎಸ್‌ ಗೌಡ ಎಂಬುವವರು ಅಭಿಪ್ರಾಯಪಟ್ಟಿದ್ದಾರೆ.

ಗುರುವಾರ ರಾಜೀವ್ ಬಜಾಜ್ ಸಿಎನ್‌ಬಿಸಿ ಟಿವಿ18 ಜೊತೆ ನಡೆಸಿದ ಸಂಭಾಷಣೆಯಲ್ಲಿ “ನಮ್ಮ ಕಂಪನಿಯು ಮೂರು ಚಾನೆಲ್‌ಗಳನ್ನು ಕಪ್ಪು ಪಟ್ಟಿಗೆ ಸೇರಿಸಿ, ಜಾಹೀರಾತು ನಿಷೇಧಿಸಿದ್ದೇವೆ. ದ್ವೇಷದ ಮೂಲಗಳೆನ್ನುವ ಯಾವುದರೊಂದಿಗೂ ನಾವು ಸಂಬಂಧ ಹೊಂದುವುದಿಲ್ಲ..” ಎಂದು ಘೋಷಿಸಿದ್ದರು.


ಇದನ್ನೂ ಓದಿ: ವಿಷಕಾರುವ, ದ್ವೇಷ ಹರಡುವ ಚಾನೆಲ್‌ಗಳಿಗೆ ಜಾಹೀರಾತು ನೀಡುವುದಿಲ್ಲ: ರಾಜೀವ್‌ ಬಜಾಜ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...