Homeಮುಖಪುಟದೆಹಲಿ ಗಡಿ ಬಿಟ್ಟು ತೆರಳಲು ಮನಸ್ಸಾಗುತ್ತಿಲ್ಲ: ರೈತರ ಭಾವನಾತ್ಮಕ ಮಾತುಗಳು

ದೆಹಲಿ ಗಡಿ ಬಿಟ್ಟು ತೆರಳಲು ಮನಸ್ಸಾಗುತ್ತಿಲ್ಲ: ರೈತರ ಭಾವನಾತ್ಮಕ ಮಾತುಗಳು

- Advertisement -
- Advertisement -

ರೈತ ಹೋರಾಟಕ್ಕೆ ಜಯವಾಗಲಿ, ರೈತರ ಐಕ್ಯತೆ ಚಿರಾಯುವಾಗಲಿ ಎಂದು ಮೊಳಗುತ್ತಿರುವ ಘೋಷಣೆಗಳು, ಸಿಹಿ ಹಂಚಿ ಸಂಭ್ರಮಿಸುತ್ತಿರುವ ರೈತರು, ಒಬ್ಬರನ್ನೊಬ್ಬರ ಆಲಂಗಿಸುತ್ತಾ ಅಭಿನಂದಿಸುತ್ತಿರುವ ಚಿತ್ರಗಳು….. ಇದು ದೆಹಲಿ ಗಡಿಗಳಲ್ಲಿ ಇತ್ತೀಚೆಗೆ ಕಾಣಬರುತ್ತಿರುವ ದೃಶ್ಯಗಳು

ಕಳೆದ ಒಂದು ವರ್ಷದಿಂದ ದೆಹಲಿ ಗಡಿಗಳಲ್ಲಿ ನಡೆಯುತ್ತಿದ್ದ ರೈತ ಹೋರಾಟಕ್ಕೆ ಗುರುವಾರ ತೆರೆ ಬಿದ್ದಿದೆ. ಜನರು ತಮ್ಮ ಹಳ್ಳಿಗಳತ್ತಾ ಸಾಗಲು, ಟೆಂಟ್‌ಗಳನ್ನು ಬಿಚ್ಚುತ್ತಿದ್ದಾರೆ. ಸದಾ ಜನರಿಂದ ಗಿಜುಗುಡುತ್ತಿದ್ದ ರಸ್ತೆಗಳು ಬರಿದಾಗುತ್ತಿವೆ, ಹಳ್ಳಿಗಳಾಗಿ ಬದಲಾಗಿದ್ದ ದೆಹಲಿ ಗಡಿಗಳು, ಪುನಃ ವಾಹನ ಸಂಚಾರಕ್ಕೆ ಮುಕ್ತವಾಗಿವೆ.

ಎಂಎಸ್‌ಪಿ ಸೇರಿದಂತೆ ರೈತರ ಬೇಡಿಕೆಗಳನ್ನು ಈಡೇರಿಸುವುದಾಗಿ ಕೇಂದ್ರ ಸರ್ಕಾರ ಲಿಖಿತ ಭರವಸೆ ನೀಡಿದ್ದು, ಸಂಯುಕ್ತ ಕಿಸಾನ್‌ ಮೋರ್ಚಾದ ರೈತ ನಾಯಕರು  ಪ್ರಸ್ತುತ ರೈತ ಹೋರಾಟವನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದ್ದಾರೆ. ಕೇಂದ್ರ ಸರ್ಕಾರ ರೈತರ ಎಲ್ಲಾ ಹಕ್ಕೊತ್ತಾಯಗಳನ್ನು ಒಪ್ಪಿಕೊಂಡ ನಂತರ ಪ್ರತಿಭಟನಾಕಾರರು ಟ್ಯ್ರಾಕ್ಟರ್‌ಗಳ ಮೇಲೆ ಹತ್ತಿ ನೃತ್ಯ ಮಾಡುವುದರೊಂದಿಗೆ ಸಂಭ್ರಮ ಆಚರಿಸುತ್ತಿದ್ದಾರೆ. 

ದೆಹಲಿ ಗಡಿಗಳಲ್ಲಿ ಹೋರಾಟ ಆರಂಭದಿಂದಲೂ ಭಾಗವಹಿಸಿರುವ ಪಂಜಾಬ್‌ನ ರೋಪರ್‌ ಚಾರಿಯನ್‌ ಗ್ರಾಮದ ರವೀಂದರ್‌ ಸಿಂಗ್, ‘ಇದು ರೈತರ ಪರಿಶ್ರಮಕ್ಕೆ ಸಂದ ಗೆಲುವು. ನಮ್ಮ ಚಳವಳಿ  ಮುಗಿದಿಲ್ಲ. ಹೋರಾಟ ಮುಂದುವರಿಯಲಿದೆ. ನನಗೆ ಹಿಂತಿರುಗಬೇಕು ಎನಿಸುತ್ತಿಲ್ಲ. ನನಗೆ ಇಲ್ಲಿ ಅತೀವ ಪ್ರೀತಿ ಸಿಕ್ಕಿದೆ’ ಎನ್ನುತ ರೈತ ಹೋರಾಟವನ್ನು ಸ್ಮರಿಸಿಕೊಂಡಿದ್ದಾರೆ.

2020ರ ನವೆಂಬರ್ 26ರಂದು ದೆಹಲಿ ಚಲೋದಲ್ಲಿ ನಾನು ಭಾಗವಹಿಸಿದ್ದೆ ಎನ್ನುವ ಅವರು, ‘ನಾವು ಪಂಜಾಬ್ನಿಂದ ಬರುವಾಗ ಲಾಠಿಚಾರ್ಜ್ನಲ್ಲಿ ನಾನು ಗಾಯಗೊಂಡಿದ್ದೆ. ನಾವು ನಮ್ಮ ಟ್ರಾಲಿಗಳಲ್ಲಿ ಹಲವಾರು ಬ್ಯಾರಿಕೇಡ್ಗಳನ್ನು ದಾಟುವಲ್ಲಿ ಯಶಸ್ವಿಯಾಗಿದ್ದೇವೆ, ಆದರೆ ಪೊಲೀಸರು ನಮ್ಮನ್ನು ಬುರಾರಿ ಮೈದಾನಕ್ಕೆ ಪ್ರವೇಶಿಸುವಂತೆ ಒತ್ತಾಯಿಸಿದರು. ಅದರ ನಂತರ ಬುರಾರಿಯಲ್ಲಿ ಎರಡು ತಿಂಗಳು ಮುತ್ತಿಗೆ ನಡೆಯಿತು. ಪೊಲೀಸರು ನನ್ನ ಟ್ರ್ಯಾಕ್ಟರ್ ವಶಪಡಿಸಿಕೊಂಡಿದ್ದರು’ಎಂದರು.

ಗುರುವಾರ ಬೆಳಿಗ್ಗೆ ತನ್ನ ತಾತ್ಕಾಲಿಕ ಟೆಂಟ್‌ನಿಂದ ಟಾರ್ಪಾಲಿನ್ ಮತ್ತು ಥರ್ಮಾಕೋಲ್ ಶೀಟ್‌ಗಳನ್ನು  ಕಿತ್ತುಹಾಕಿದ ಜಲಂಧರ್‌ನ ಶಾದಿಪುರದ 25 ವರ್ಷದ ದಿಲ್ಬರ್ ಸಿಂಗ್, ‘ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಿದ ದಿನವೇ ವಿಜಯವನ್ನು ಸಾಧಿಸಲಾಯಿತು. ಸರ್ಕಾರವು ರೈತರ ಉಳಿದ ಹಕ್ಕೊತ್ತಾಯಗಳನ್ನು ಔಪಚಾರಿಕವಾಗಿ ಸ್ವೀಕರಿಸಬೇಕು ಎಂದು ನಾವು ಕಾಯುತ್ತಿದ್ದೆವು. ಅಲ್ಲಿಂದೀಚೆಗೆ ಸಂಭ್ರಮದ ವಾತಾವರಣವಿದೆ’ ಎಂದರು.

ಕಿಸಾನ್ ಯೂನಿಯನ್‌ನ ಸದಸ್ಯರು ಮತ್ತು ಫೆಬ್ರವರಿಯಿಂದ ಸಿಂಘುವಿನಲ್ಲಿ ಸ್ಥಾಪಿಸಲಾದ ಸಮುದಾಯ ಅಡುಗೆಮನೆಯಲ್ಲಿ ಸ್ವಯಂಸೇವಕರಾಗಿರುವ ಪಟಿಯಾಲಾದ ಖಾಂಗ್ ಗ್ರಾಮದ 70 ವರ್ಷದ ಜಸ್ವೀರ್‌ ಕೌರ್‌ ಕೀರ್ತಿ ಕಳೆದ ಒಂದು ವರ್ಷದಿಂದ ಸಿಂಘು ಗಡಿಯಲ್ಲಿ ನಡೆಯುತ್ತಿರುವ ರೈತ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ನಿನ್ನೆ ಒಕ್ಕೂಟದ ಸದಸ್ಯರೊಬ್ಬರು ಆಂದೋಲನವನ್ನು ಅಮಾನತುಗೊಳಿಸುವ ಸಂಯುಕ್ತ ಕಿಸಾನ್‌ ಮೋರ್ಚಾದನ ನಿರ್ಧಾರವನ್ನು ತಿಳಿಸಿದಾಗ ಅವರು ‘ಲಂಗರ್ ಸೇವೆ’ ಮಾಡುತ್ತಿದ್ದರು.

ರೈತ ಹೋರಾಟದ ಬಗ್ಗೆ ಮಾತನಾಡಿದ ಅವರು, ‘ನನಗೆ ಹಿಂತಿರುಗಬೇಕು ಎನಿಸುತ್ತಿಲ್ಲ. ಕಳೆದ ವರ್ಷ ನಮ್ಮ ಗ್ರಾಮದ ಜನರೊಂದಿಗೆ ಇಲ್ಲಿಗೆ ಬಂದಿದ್ದೆ. ಆಂದೋಲನ ಇಷ್ಟು ದಿನ ಇರುತ್ತದೆ ಎಂದು ನಾನು ಊಹಿಸಿರಲಿಲ್ಲ. ಆರಂಭದಲ್ಲಿ, ವಿಪರೀತ ಹವಾಮಾನ ವೈಪರಿತ್ಯದಿಂದಾಗಿ ರಸ್ತೆಗಳಲ್ಲಿ ಕುಳಿತುಕೊಳ್ಳಲು, ಆರಾಮದಾಯಕ ಜೀವನದಿಂದ ಈ ಪರಿಸ್ಥಿತಿಗೆ ಹೊಂದಿಕೊಳ್ಳುವುದು ತುಂಬಾ ಕಷ್ಟಕರವಾಗಿತ್ತು. ಜನವರಿ 26 ರ ಘಟನೆಯ ಸಂದರ್ಭದಲ್ಲಿ ಅರೆಸೇನಾ ಪಡೆಗಳನ್ನು ನಿಯೋಜಿಸಬಹುದೆಂಬ ಭಯವಿತ್ತು. ಅದರೆ ಅದು ಈಗ ಮಾಯವಾಗಿದೆ. ರೈತ ಹೋರಾಟದ ಗೆಲುವಿಗಾಗಿ ಬಹಳಷ್ಟು ರೈತರು ಪ್ರಾಣತೆತ್ತಿದ್ದಾರೆ’ ಎಂದು ಹೇಳಿದರು.

‘ನಾವು ನಮ್ಮ ಕರ್ತವ್ಯವನ್ನು ಮಾಡಿದ್ದೇವೆ. ನಮ್ಮ ಭೂಮಿ ಮತ್ತು ಹಕ್ಕುಗಳ ಹೋರಾಟ ಈ ಎಲ್ಲಾ ಕಷ್ಟಗಳಿಗಿಂತ ದೊಡ್ಡದಾಗಿದೆ. ನಾನು ಇನ್ನೂ ನನ್ನ ಸಾಮಾನುಗಳನ್ನು ಪ್ಯಾಕ್ ಮಾಡಿಲ್ಲ. ನಾವು ಶನಿವಾರದಂದು ಲಂಗರ್ನಲ್ಲಿ ಕೊನೆಯ ಬಾರಿಗೆ ಎಲ್ಲರಿಗೂ ಸೇವೆ ಸಲ್ಲಿಸಿದ ನಂತರ ಹೊರಡುತ್ತೇವೆ’ ಎಂದು ಕೌರ್ ಹೇಳಿದರು.

ನವೆಂಬರ್‌ 19ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದ್ದರು. ಇತ್ತೀಚೆಗಷ್ಟೆ ಸಂಸತ್ತಿನಲ್ಲಿಯೂ ಕೃಷಿ ಕಾನೂನುಗಳ ರದ್ದತಿ ಮಸೂದೆಗೆ ಅಂಗೀಕಾರ ದೊರೆತಿತ್ತು. ಇದರ ನಂತರವೂ ಪ್ರತಿಭಟನೆ ಮುಂದುವರೆಸಿದ್ದ ರೈತರು ಕನಿಷ್ಠ ಬೆಂಬಲ ಬೆಲೆ ಕಾನೂನುಬದ್ಧ ಗೊಳಿಸಬೇಕು, ರೈತರ ಮೇಲಿನ ಪ್ರಕರಣಗಳನ್ನು ಹಿಂಪಡೆಯಬೇಕು ಎಂಬುದನ್ನು ಸೇರಿದಂತೆ ಇತರ ಬೇಡಿಕೆಗಳನ್ನು ಈಡೇರಿಸುವವರೆಗೂ ಪ್ರತಿಭಟನೆ ಮುಂದುವರೆಸುವುದಾಗಿ ತಿಳಿಸಿದ್ದರು. ಗುರುವಾರ ಕೇಂದ್ರ ಸರ್ಕಾರವು ರೈತರ ಇತರ ಬೇಡಿಕೆಗಳನ್ನು ಈಡೇರಿಸುವುದಾಗಿ ಲಿಖಿತ ಭರವಸೆ ನೀಡಿದ್ದು, ಸಂಯುಕ್ತ ಕಿಸಾನ್ ಮೋರ್ಚಾವು ರೈತ ಹೋರಾಟವನ್ನು ಹಿಂಪಡೆಯುವುದಾಗಿ ನಿನ್ನೆ ನಿರ್ಧರಿಸಿದೆ.


ಇದನ್ನೂ ಓದಿ: ಹರಿಯಾಣದ ಹಳ್ಳಿಗಳಿಗೆ ತೆರಳಿ ಧನ್ಯವಾದ ತಿಳಿಸುತ್ತಿರುವ ಪಂಜಾಬ್ ರೈತರು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...