ಲಸಿಕೆ ಪಡೆಯುವಂತೆ ಯಾರಿಗೂ ಒತ್ತಾಯಿಸುವಂತಿಲ್ಲ ಎಂದು ಆದೇಶಿಸಿರುವ ಸುಪ್ರೀಂ ಕೋರ್ಟ್ ಲಸಿಕೆಯಿಂದಾಗಿ ಉಂಟಾಗಿರುವ ಅಡ್ಡಪರಿಣಾಮಗಳ ವರದಿಯನ್ನು ಪ್ರಕಟಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಪ್ರತಿಯೊಬ್ಬರೂ ತಮ್ಮ ದೈಹಿಕ ಸಮಗ್ರತೆಯ ಹಕ್ಕನ್ನು ಹೊಂದಿದ್ದಾರೆ. ಹಾಗಾಗಿ ಲಸಿಕೆ ತೆಗೆದುಕೊಳ್ಳುವಂತೆ ಒತ್ತಾಯ ಮಾಡಬಾರದು. ಆದರೆ ಸಮುದಾಯದ ಹಿತದೃಷ್ಟಿಯಿಂದ ವಯಕ್ತಿಕ ಹಕ್ಕುಗಳ ಮೇಲೆ ಕೆಲ ಮಿತಿಗಳನ್ನು ಹೇರಬಹುದು ಎಂದಿದೆ.
ಕೋವಿಡ್ ನಿಯಮಾವಳಿಗಳನ್ನು ಹೊರತುಪಡಿಸಿ ಸಾರ್ವಜನಿಕ ಸ್ಥಳಗಳು, ಸೇವೆಗಳು ಮತ್ತು ಇತರ ಪ್ರವೇಶಗಳಲ್ಲಿ ಲಸಿಕೆ ಹಾಕದ ವ್ಯಕ್ತಿಗಳ ಮೇಲೆ ಯಾವುದೇ ನಿರ್ಬಂಧಗಳಿಲ್ಲ ಎಂದು ಸುಪ್ರೀಂ ಸ್ಪಷ್ಟಪಡಿಸಿದೆ. ಈಗ ಆ ನಿರ್ಬಂಧ ಜಾರಿಯಲ್ಲಿದ್ದರೆ ಅದನ್ನು ರದ್ದುಗೊಳಿಸಬೇಕೆಂದು ಆದೇಶಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಕೋವಿಡ್ ಲಸಿಕೆಯಿಂದಾದ ಅಡ್ಡಪರಿಣಾಮಗಳ ಕುರಿತು ಎಲ್ಲರಿಗೂ ಮಾಹಿತಿ ಸಿಗುವಂತೆ ವರದಿ ಮಾಡಬೇಕು. ಯಾವುದೇ ರಾಜಿಯಿಲ್ಲದೆ ವಯಕ್ತಿಕ ದೂರುಗಳನ್ನು ಸಹ ಅದು ಒಳಗೊಂಡಿರಬೇಕು ಎಂದು ಕೋರ್ಟ್ ನಿರ್ದೇಶನ ನೀಡಿದೆ.
ವ್ಯಕ್ತಿಗಳ ಗೌಪ್ಯತೆಗೆ ಒಳಪಟ್ಟಿರುವ ಲಸಿಕೆ ಪ್ರಯೋಗದ ದತ್ತಾಂಶವನ್ನು ಪ್ರತ್ಯೇಕಿಸುವ ಬಗ್ಗೆ, ಈಗಾಗಲೇ ನಡೆಸಲಾದ ಮತ್ತು ನಂತರ ನಡೆಸಲಿರುವ ಎಲ್ಲಾ ಪ್ರಯೋಗಗಳು, ಎಲ್ಲಾ ಡೇಟಾವನ್ನು ಮತ್ತಷ್ಟು ವಿಳಂಬವಿಲ್ಲದೆ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಬೇಕು ಎಂದು ಕೋರ್ಟ್ ಹೇಳಿದೆ.
ನ್ಯಾಶನಲ್ ಟೆಕ್ನಿಕಲ್ ಅಡ್ವೈಸರಿ ಗ್ರೂಪ್ ಆನ್ ಇಮ್ಯುನೈಸೇಶನ್ (ಎನ್‌ಟಿಜಿಐ) ನ ಮಾಜಿ ಸದಸ್ಯ ಜಾಕೋಬ್ ಪುಲಿಯೆಲ್ ಅವರು, ಸರ್ಕಾರಿ ಯೋಜನೆಗಳು ಅಥವಾ ಸೇವೆಗಳನ್ನು ಪ್ರವೇಶಿಸಲು ರಾಜ್ಯಗಳು ಲಸಿಕೆಯನ್ನು ಕಡ್ಡಾಯಗೊಳಿಸುವುದು ಅಸಂವಿಧಾನಿಕ ಮತ್ತು ನಾಗರಿಕರ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಅರ್ಜಿ ಸಲ್ಲಿಸಿದ್ದರು. ಅನೇಕ ರಾಜ್ಯಗಳು, ರಾಜ್ಯ ಸರ್ಕಾರಿ ನೌಕರರಿಗೆ, ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸಲು ಮತ್ತು ಸಬ್ಸಿಡಿ ಆಹಾರ ಧಾನ್ಯಗಳನ್ನು ವಿತರಿಸಲು ಲಸಿಕೆ ಕಡ್ಡಾಯಗೊಳಿಸಿ ತಾರತಮ್ಯ ಮಾಡುತ್ತಿವೆ ಎಂದು ವಾದಿಸಿದ್ದರು.
ಇದನ್ನೂ ಓದಿ; ವಿಶೇಷ ವರದಿ: ಪಿಎಸ್‌ಐ ಪರೀಕ್ಷೆ ಅಕ್ರಮ ಒಂದೇ ಅಲ್ಲ, ಶಿಕ್ಷಣದ ಅವ್ಯವಸ್ಥೆಗೆ ಕೊನೆಯೇ ಇಲ್ಲ!
ಅರ್ಜಿಯು ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿದೆ ಮತ್ತು ಜನರಲ್ಲಿ ಲಸಿಕೆ ಹಿಂಜರಿಕೆಯನ್ನು ಸೃಷ್ಟಿಸುತ್ತದೆ ಎಂದು ಕೇಂದ್ರವು ನ್ಯಾಯಾಲಯದಲ್ಲಿ ವಾದಿಸಿತ್ತು. ಲಸಿಕೆ ಸ್ವಯಂಪ್ರೇರಿತವಾಗಿದ್ದು, ಸಂಭಾವ್ಯ ಅಪಾಯಗಳ ಆಧಾರದ ಮೇಲೆ ಕೆಲ ರಾಜ್ಯಗಳು ಕಡ್ಡಾಯ ಮಾಡಿವೆ ಎಂದಿತ್ತು.



ಲಸಿಕೆ ಕಡ್ಡಾಯ ಅಲ್ಲ,
ನಾಳೆ ಕೊರೋಣಾ ಬಂದ್ರೆ ಮಾತ್ರ ಸರಕಾರವೇ ಜವಾಬ್ದಾರಿ.