ಭಯೋತ್ಪಾದನೆಯಿಂದಾಗಿ ಬಿಜೆಪಿಯ ಯಾರೊಬ್ಬರು ಜೀವ ತೆತ್ತಿಲ್ಲ, ಆದರೂ ಪ್ರಧಾನಿ ಮೋದಿ ಅದರ ಬಗ್ಗೆಯೇ ಪದೇ ಪದೇ ಮಾತನಾಡುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಭಯೋತ್ಪಾದನೆ ಬಗ್ಗೆ ಪ್ರಧಾನಿ ಮೋದಿಯವರು ಸುಖಾಸುಮ್ಮನೆ ಮಾತನಾಡುತ್ತಾರೆ. ಕಾಂಗ್ರೆಸ್ ಭಯೋತ್ಪಾದನೆ ಬೆಂಬಲಿಸುತ್ತಿದೆ ಎಂದು ಸುಳ್ಳು ಹೇಳುತ್ತಾರೆ. ಆದರೆ ಭಯೋತ್ಪಾದನೆಯಿಂದಾಗಿ ಬಿಜೆಪಿಯ ಯಾರೊಬ್ಬರು ಪ್ರಾಣ ಕಳೆದುಕೊಂಡಿಲ್ಲ. ಭಯೋತ್ಪಾದನೆ ವಿರುದ್ಧ ಹೋರಾಡಿ ಪ್ರಾಣ ಕಳೆದುಕೊಂಡವರು ಕಾಂಗ್ರೆಸ್‌ನ ಹಿರಿಯ ನಾಯಕರಾದ ಇಂದಿರಾಗಾಂಧಿ ಮತ್ತು ರಾಜೀವ್ ಗಾಂಧಿ” ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಸಾರ್ವತ್ರಿಕ ವಯಸ್ಕರ ಶಿಕ್ಷಣ, ಅಧಿಕಾರದ ವಿಕೇಂದ್ರೀಕರಣ ಮತ್ತು ಹಿಂದುಳಿದ ವರ್ಗಗಳಿಗೆ ಮೀಸಲಾತಿ ಒದಗಿಸುವ ರಾಜೀವ್ ಗಾಂಧಿಯವರ ಕೊಡುಗೆಯು ಭಾರತದಲ್ಲಿ ರಾಜಕೀಯ ಸಮಾನತೆಗೆ ಕಾರಣವಾಗಿದೆ ಎಂದು ಸಿಎ ಹೇಳಿದ್ದಾರೆ.
ಇದನ್ನೂ ಓದಿ; ಕರ್ನಾಟಕದ ಜಯಭೇರಿ ಬೆನ್ನಲ್ಲೆ ಮುಂಬರುವ 5 ರಾಜ್ಯಗಳ ಚುನಾವಣೆ ಮೇಲೆ ಕಣ್ಣಿಟ್ಟ ಕಾಂಗ್ರೆಸ್


