ಹೊಸ ಕಾರ್ಮಿಕ ಕಾನೂನುಗಳ ವಿರುದ್ಧ 10 ರಾಷ್ಟ್ರೀಯ ಕಾರ್ಮಿಕ ಸಂಘಟನೆಗಳು ಮತ್ತು ರೈತ ಸಂಘಟನೆಗಳ ಒಕ್ಕೂಟ ಕರೆ ನೀಡಿರುವ ಜುಲೈ 9ರ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ನರೇಗಾ ಕಾರ್ಮಿಕರನ್ನು ಪ್ರತಿನಿಧಿಸುವ 20ಕ್ಕೂ ಹೆಚ್ಚು ಕಾರ್ಮಿಕ ಗುಂಪುಗಳು ಮತ್ತು ಎಡ ಪಕ್ಷಗಳಿಗೆ ಸಂಬಂಧಿಸಿದ ವಿದ್ಯಾರ್ಥಿ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.
ಮೋದಿ ಸರ್ಕಾರ 2019-2020ರಲ್ಲಿ ಜಾರಿಗೆ ತಂದಿರುವ ನಾಲ್ಕು ಕಾರ್ಮಿಕ ಸಂಹಿತೆಗಳ ವಿರುದ್ಧದ ಮುಷ್ಕರದಲ್ಲಿ ಎನ್‌ಆರ್‌ಇಜಿಎ ಸಂಘರ್ಷ ಮೋರ್ಚಾ ಭಾಗವಹಿಸಲಿದೆ ಎಂದು ವರದಿಯಾಗಿದೆ.
ನರೇಗಾ ಕಾರ್ಮಿಕರ ವೇತನವನ್ನು ದಿನಕ್ಕೆ ರೂ. 800ಕ್ಕೆ ಹೆಚ್ಚಿಸಬೇಕು. ಮೂರು ವರ್ಷಗಳಿಗೂ ಹೆಚ್ಚು ಕಾಲ ಈ ಯೋಜನೆ ಸ್ಥಗಿತಗೊಂಡಿರುವ ಬಂಗಾಳದಲ್ಲಿ ತಕ್ಷಣ ಕೆಲಸ ಪುನರಾರಂಭಿಸಬೇಕು. ಡಿಜಿಟಲ್ ಹಾಜರಾತಿ ವ್ಯವಸ್ಥೆ ಮತ್ತು ಆಧಾರ್ ಆಧಾರಿತ ಪಾವತಿ ವ್ಯವಸ್ಥೆಯನ್ನು ರದ್ದುಗೊಳಿಸಬೇಕು. ಕೆಲಸ ಮುಗಿದ 15 ದಿನಗಳಲ್ಲಿ ವೇತನ ಪಾವತಿಸಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಎನ್‌ಆರ್‌ಇಜಿಎ ಸಂಘರ್ಷ ಮೋರ್ಚಾ ಮುಷ್ಕರವನ್ನು ಬೆಂಬಲಿಸಿದೆ.
ಕಾರ್ಮಿಕ ಸಂಹಿತೆಗಳು ಕಾರ್ಮಿಕರ ವೇತನ ಮತ್ತು ಒಕ್ಕೂಟ ರಚಿಸುವ ಹಕ್ಕುಗಳನ್ನು ಕಸಿದುಕೊಳ್ಳಲಿವೆ. ಕೆಲಸದ ಸಮಯವನ್ನು ಹೆಚ್ಚಿಸಲಿವೆ ಎಂದು ಭಾರತೀಯ ವಿದ್ಯಾರ್ಥಿ ಒಕ್ಕೂಟ, ಅಖಿಲ ಭಾರತ ವಿದ್ಯಾರ್ಥಿ ಒಕ್ಕೂಟ ಮತ್ತು ಅಖಿಲ ಭಾರತ ವಿದ್ಯಾರ್ಥಿ ಸಂಘ ಜಂಟಿ ಹೇಳಿಕೆ ನೀಡಿದೆ.
Silence for Gaza| ಇಸ್ರೇಲ್ ನರಮೇಧದ ವಿರುದ್ಧ ‘ಡಿಜಿಟಲ್ ಸತ್ಯಾಗ್ರಹ’ಕ್ಕೆ ಕರೆ ಕೊಟ್ಟ ಸಿಪಿಐ(ಎಂ)


