Homeಮುಖಪುಟಕತ್ತೆ ಹಾಲಿನಿಂದ ಕ್ಯಾನ್ಸರ್‌ ಗುಣ ಎನ್ನುತ್ತಿದೆ ಸಂಶೋಧನೆ: ಹರಿಯಾಣದಲ್ಲಿ ತಲೆಎತ್ತಲಿದೆ ಕತ್ತೆ ಹಾಲಿನ ಡೈರಿ

ಕತ್ತೆ ಹಾಲಿನಿಂದ ಕ್ಯಾನ್ಸರ್‌ ಗುಣ ಎನ್ನುತ್ತಿದೆ ಸಂಶೋಧನೆ: ಹರಿಯಾಣದಲ್ಲಿ ತಲೆಎತ್ತಲಿದೆ ಕತ್ತೆ ಹಾಲಿನ ಡೈರಿ

ಒಂದು ಲೀಟರ್ ಕತ್ತೆ ಹಾಲಿನ ಬೆಲೆ 2000 ರಿಂದ 7000 ರೂ. ಎನ್ನಲಾಗಿದೆ.

- Advertisement -
- Advertisement -

ಕತ್ತೆ ಹಾಲು ಕುಡಿಯುವುದರಿಂದ ಕ್ಯಾನ್ಸರ್ ಹಾಗೂ ಬೊಜ್ಜು ಕಾಯಿಲೆ ಗುಣವಾಗುತ್ತದೆ ಎಂದು ಸಂಶೋಧನೆಯೊಂದು ಹೇಳಿದೆ. ಈ ಕುರಿತಾದ ಸಂಶೋಧನೆಯನ್ನು ರಾಷ್ಟ್ರೀಯ ಸಂಶೋಧನಾ ಕೇಂದ್ರದ ಈಕ್ವಿನ್ಸ್‌ನ (ಎನ್‌ಆರ್‌ಸಿಇ) ಮಾಜಿ ನಿರ್ದೇಶಕ ಡಾ.ಬಿ.ಎನ್. ತ್ರಿಪಾಠಿ ಪ್ರಾರಂಭಿಸಿದ್ದು ಪ್ರಸ್ತುತ ಎನ್‌ಆರ್‌ಸಿಇಯ ನಿರ್ದೇಶಕ ಡಾ. ಯಶ್‌ಪಾಲ್ ಕತ್ತೆಯ ಹಾಲಿನಲ್ಲಿ ಗಣನೆಗೆ ಬಾರದ ಕೊಬ್ಬುಗಳಿವೆ ಎಂದು ಹೇಳಿದ್ದಾರೆ.

ಸಂಶೋಧನೆಯ ಪ್ರಕಾರ, ಕತ್ತೆಯ ಹಾಲು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ ಮತ್ತು ಇದನ್ನು ಅನೇಕ ಔಷಧಿಗಳಲ್ಲಿ ಬಳಸಲಾಗುತ್ತದೆ. ಕ್ಯಾನ್ಸರ್, ಬೊಜ್ಜು, ಕೆಲವು ಅಲರ್ಜಿ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಸಹ ಇದನ್ನು ಬಳಸಲಾಗುತ್ತದೆ ಜೊತೆಗೆ ಪ್ರತಿರಕ್ಷಣಾ ವ್ಯವಸ್ಥೆಗೆ ಹಾಲು ಒಳ್ಳೆಯದು ಎಂದು ಸಂಶೋಧನೆ ಹೇಳಿದೆ.

ಇದನ್ನೂ ಓದಿ: ವಿಡಿಯೋ| ಸೂರ್ಯಸ್ನಾನದಿಂದ ಕೊರೊನ ಬರೋಲ್ಲ : ಕೇಂದ್ರ ಸಚಿವರ ಹೇಳಿಕೆಗೆ ವ್ಯಾಪಕ ಟೀಕೆ

ಒಂದು ಲೀಟರ್ ಕತ್ತೆ ಹಾಲಿನ ಬೆಲೆ 2000 ರಿಂದ 7000 ರೂ. ಎನ್ನಲಾಗಿದೆ. ಈ ಹಾಲು ಕೆಲವು ಸೌಂದರ್ಯವರ್ಧಕ ಪ್ರಯೋಜನಗಳನ್ನು ನೀಡುತ್ತದೆ ಎಂದು ಎನ್‌ಆರ್‌ಸಿಇ ಹಿರಿಯ ವಿಜ್ಞಾನಿ ಡಾ.ಅನುರಾಧಾ ಹೇಳುತ್ತಾರೆ.

ಅನುರಾಧಾ ಅವರ ಪ್ರಕಾರ, ಕತ್ತೆಯ ಹಾಲು ಮಕ್ಕಳಿಗೆ ಉತ್ತಮವಾಗಿದೆ. ಏಕೆಂದರೆ ಕೆಲವು ಮಕ್ಕಳಿಗೆ ಹಸು ಮತ್ತು ಎಮ್ಮೆಯ ಹಾಲು ಅಲರ್ಜಿಯಾಗಬಹುದು, ಆದರೆ ಕತ್ತೆಯ ಹಾಲು ಎಂದಿಗೂ ಅಲರ್ಜಿಯಾಗಿರುವುದಿಲ್ಲ ಎಂದು ಹೇಳಿದ್ದಾರೆ.

ಸಾಬೂನು, ಲಿಪ್-ಬಾಮ್ ಮತ್ತು ಬಾಡಿ-ಲೋಷನ್ ತಯಾರಿಸಲು ಈ ಹಾಲನ್ನು ಬಳಸಲಾಗುತ್ತದೆ. ಮೊಟ್ಟಮೊದಲ ಕತ್ತೆಯ ಹಾಲಿನ ಡೈರಿಯನ್ನು ಹರಿಯಾಣದಲ್ಲಿ ತೆರೆಯಲಾಗುವುದು. ರಾಷ್ಟ್ರೀಯ ಕುದುರೆ ಸಂಶೋಧನಾ ಕೇಂದ್ರವು ಈ ಡೈರಿಯನ್ನು ಹರಿಯಾಣದ ಹಿಸಾರ್ ಜಿಲ್ಲೆಯಲ್ಲಿ ತೆರೆಯಲಿದ್ದು, ಡೈರಿಯನ್ನು ಪ್ರಾರಂಭಿಸಲು, “ಹಲಾರಿ ತಳಿ” ಯ 10 ಕತ್ತೆಗಳನ್ನು ಗುಜರಾತ್‌ನಿಂದ ತರಿಸಿಕೊಳ್ಳಲು ನಿರ್ಧರಿಸಲಾಗಿದೆ.


ಇದನ್ನೂ ಓದಿ:‘ಮೇಘ ಸಂದೇಶವೇ ನಮ್ಮ ಇಮೇಲ್’. ಎನ್.ಐ.ಎ ಪ್ರಗ್ಯಾ ಮೇಲಿನ ಕೇಸ್ ಕೈಬಿಟ್ಟಿದ್ದು ಹೀಗೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ‘ಸಂವಿಧಾನ ಮತ್ತು ಮೀಸಲಾತಿ’ಯನ್ನು ರದ್ದುಗೊಳಿಸಲು ಬಯಸುತ್ತಿದೆ: ಲಾಲು ಪ್ರಸಾದ್ ಯಾದವ್

0
ಬಿಜೆಪಿ ಸಂವಿಧಾನ ಮತ್ತು ಮೀಸಲಾತಿಯನ್ನು ರದ್ದುಗೊಳಿಸಲು ಬಯಸುತ್ತಿದೆ, ಸರ್ಕಾರಿ ಉದ್ಯೋಗ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರು ಕೂಡ ಮೀಸಲಾತಿಯನ್ನು ಪಡೆಯಬೇಕು, ಅವರ ಮೀಸಲಾತಿ ಪರವಾಗಿ ನಾನಿದ್ದೇನೆ ಎಂದು ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ)...