ತನ್ನ ಅನುಮತಿಯಿಲ್ಲದೆ ದೇಶಾದ್ಯಂತ ಖಾಸಗಿ ಆಸ್ತಿಗಳನ್ನು ನೆಲಸಮ ಮಾಡುವುದನ್ನು ಅಕ್ಟೋಬರ್ 1 ರವರೆಗೆ ನಿಲ್ಲಿಸಬೇಕು ಎಂದು ಸುಪ್ರಿಂಕೋರ್ಟ್ ಮಂಗಳವಾರ ಆದೇಶಿಸಿದೆ. ಪ್ರಕರಣಗಳ ಮುಂದಿನ ವಿಚಾರಣೆ ನಡೆಸಲಿರುವ ಸುಪ್ರೀಂ ಕೋರ್ಟ್ ಈ ಮಧ್ಯಂತರ ಆದೇಶವನ್ನು ನೀಡಿದೆ. ಆದಾಗ್ಯೂ, ಅನಧಿಕೃತ ನಿರ್ಮಾಣವನ್ನು ತೆರವುಗೊಳಿಸಲು ಅಗತ್ಯವಿರುವ ಪ್ರಕರಣಗಳಿಗೆ ಈ ಆದೇಶವು ಅನ್ವಯಿಸುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.ಬುಲ್ಡೋಜರ್ ದಾಳಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಕೆ.ವಿ.ವಿಶ್ವನಾಥನ್ ಅವರ ಪೀಠವು ನೀಡಿದ ಈ ಆದೇಶಕ್ಕೆ ಆಕ್ಷೇಪ ಎತ್ತಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಶಾಸನಬದ್ಧ ಅಧಿಕಾರಿಗಳ ಕೈಗಳನ್ನು ಈ ರೀತಿ ಕಟ್ಟಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಗವಾಯಿ, “ಎರಡು ವಾರಗಳ ಕಾಲ ಕೆಡವುವುದನ್ನು ನಿಲ್ಲಿಸಿದರೆ ಸ್ವರ್ಗ ಕುಸಿಯುವುದಿಲ್ಲ. ನಿಮ್ಮ ಹಾಗೆ ಇರಿ, 15 ದಿನಗಳಲ್ಲಿ ಏನಾಗುತ್ತದೆ?” ಎಂದು ಕೇಳಿದ್ದಾರೆ.
“ಮುಂದಿನ ದಿನಾಂಕದವರೆಗೆ ಈ ನ್ಯಾಯಾಲಯದ ಅನುಮತಿ ಪಡೆಯದೆ ಯಾವುದೇ ಆಸ್ತಿಗಳನ್ನು ಕೆಡವಬಾರದು. ಆದರೆ ಸಾರ್ವಜನಿಕ ಬೀದಿಗಳು, ಫುಟ್‌ಪಾತ್‌ಗಳು, ರೈಲ್ವೆ ಮಾರ್ಗಗಳು ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಇರುವ ಅನಧಿಕೃತ ನಿರ್ಮಾಣಗಳಿಗೆ ಈ ಆದೇಶವು ಅನ್ವಯಿಸುವುದಿಲ್ಲ” ಎಂದು ನ್ಯಾಯಾಲಯ ಹೇಳಿದೆ.
ಇದನ್ನೂಓದಿ: ಸ್ಯಾಂಡಲ್‌ವುಡ್‌ನಲ್ಲಿ ಮಹಿಳಾ ಸುರಕ್ಷಾ ಸಮಿತಿ ರಚನೆಗೆ ಸಿಎಂಗೆ ಪತ್ರ ಬರೆದ ನಟಿ ಸಂಜನಾ ಗಲ್ರಾನಿ
ಸಂವಿಧಾನದ 142ನೇ ಪರಿಚ್ಛೇದದ ಅಡಿಯಲ್ಲಿ ತನ್ನ ವಿಶೇಷ ಅಧಿಕಾರವನ್ನು ಅನ್ವಯಿಸುವ ಮೂಲಕ ತಾನು ಈ ನಿರ್ದೇಶನವನ್ನು ನೀಡಿದ್ದೇನೆ ಎಂದು ನ್ಯಾಯಾಲಯ ಹೇಳಿದೆ. ಅಪರಾಧಗಳ ಆರೋಪ ಹೊತ್ತಿರುವ ವ್ಯಕ್ತಿಗಳಿಗೆ ಸೇರಿದ ಖಾಸಗಿ ಕಟ್ಟಡಗಳನ್ನು ಕೇಂದ್ರ ಮತ್ತು ವಿವಿಧ ರಾಜ್ಯ ಸರ್ಕಾರಗಳು ಶಿಕ್ಷಾರ್ಹ ಕ್ರಮವಾಗಿ ಕೆಡವಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆಯನ್ನು ಪೀಠ ನಡೆಸುತ್ತಿದೆ.
ಸೆಪ್ಟೆಂಬರ್ 2 ರಂದು ನ್ಯಾಯಾಲಯ ಮಾಡಿದ ಟೀಕೆಗಳ ನಂತರವೂ ಬುಲ್ಡೋಜರ್ ಕ್ರಮವನ್ನು ಸಮರ್ಥಿಸಿಕೊಂಡ ಮತ್ತು ವೈಭವೀಕರಿಸಿದ ಸಚಿವರು ಮತ್ತು ವಿವಿಧ ರಾಜಕಾರಣಿಗಳನ್ನು ನ್ಯಾಯಾಲಯವು ತೀವ್ರವಾಗಿ ಟೀಕಿಸಿತು. “ಆದೇಶದ ನಂತರ ಕೂಡಾ ಬುಲ್ಡೋಜರ್ ಮುಂದುವರಿಯುತ್ತದೆ ಎಂದು ಹೇಳಿಕೆಗಳು ಬಂದಿವೆ…” ಎಂದು ನ್ಯಾಯಮೂರ್ತಿ ಗವಾಯಿ ಹೇಳಿದದ್ದಾರೆ.
“ಸೆಪ್ಟೆಂಬರ್ 2 ರ ನಂತರ ಕೂಡಾ ಇಂತಹ ನಿಲುವು ಮತ್ತು ಸಮರ್ಥನೆ ಕಂಡುಬಂದಿದೆ. ಇದು ನಮ್ಮ ದೇಶದಲ್ಲಿ ಆಗಬೇಕೇ? ಚುನಾವಣಾ ಆಯೋಗವು ಗಮನಿಸಬೇಕೇ? ನಾವು ನಿರ್ದೇಶನಗಳನ್ನು ರೂಪಿಸುತ್ತೇವೆ” ಎಂದು ನ್ಯಾಯಮೂರ್ತಿ ವಿಶ್ವನಾಥನ್ ಹೇಳಿದ್ದಾರೆ. ದೇಶದ ಪುರಸಭೆಯ ಕಾನೂನುಗಳ ಅಡಿಯಲ್ಲಿ ಆಸ್ತಿಗಳನ್ನು ಯಾವಾಗ ಮತ್ತು ಹೇಗೆ ಕೆಡವಬಹುದು ಎಂಬುದರ ಕುರಿತು ನಿರ್ದೇಶನಗಳನ್ನು ರೂಪಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.ಬುಲ್ಡೋಜರ್ ದಾಳಿ
ವಿಡಿಯೊ ನೋಡಿ: ಬಾಲಗೋಪಾಲ್ ಅವರ ಬಹಳಷ್ಟು ಲೇಖನಗಳು ಕನ್ನಡಕ್ಕೆ ಬರುವ ಅಗತ್ಯವಿದೆ: ಬಂಜಗೆರೆ ಜಯಪ್ರಕಾಶ


