ಒಡಿಶಾ: 5 ವರ್ಷಗಳಲ್ಲಿ ಕಾಣೆಯಾಗಿರುವ 36,000 ಮಹಿಳೆಯರು: ಮುಖ್ಯಮಂತ್ರಿ ಮಾಝಿ

ಭುವನೇಶ್ವರ: ಕಳೆದ ಐದು ವರ್ಷಗಳಲ್ಲಿ ಒಡಿಶಾದಲ್ಲಿ ಒಟ್ಟು 36,420 ಮಹಿಳೆಯರು ಮತ್ತು 8,403 ಮಕ್ಕಳು ಕಾಣೆಯಾಗಿದ್ದಾರೆ ಎಂದು ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಸೋಮವಾರ ವಿಧಾನಸಭೆಗೆ ಮಾಹಿತಿ ನೀಡಿದ್ದಾರೆ. ಮಧ್ಯವರ್ತಿಗಳ ಮೂಲಕ 421 ಮಹಿಳೆಯರನ್ನು ಇತರ ರಾಜ್ಯಗಳಿಗೆ ಕಳ್ಳಸಾಗಣೆ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ 453 ಜನರನ್ನು ಬಂಧಿಸಲಾಗಿದೆ ಎಂದು ಮಾಝಿ ಹೇಳಿದ್ದಾರೆ. ದೂರುಗಳ ಆಧಾರದ ಮೇಲೆ ಪೊಲೀಸರು ತಕ್ಷಣ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ ಮತ್ತು ಕಳ್ಳಸಾಗಣೆಗೊಳಗಾದ ಮಹಿಳೆಯರನ್ನು ಪತ್ತೆಹಚ್ಚಲು ಕ್ರಮಕೈಗೊಂಡಿದ್ದಾರೆ ಎಂದು ಅವರು ಸದನಕ್ಕೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. … Continue reading ಒಡಿಶಾ: 5 ವರ್ಷಗಳಲ್ಲಿ ಕಾಣೆಯಾಗಿರುವ 36,000 ಮಹಿಳೆಯರು: ಮುಖ್ಯಮಂತ್ರಿ ಮಾಝಿ