Homeಕೊರೊನಾಓಮಿಕ್ರಾನ್ ಆತಂಕ: ಪಿಎಂ ಸಾಹೇಬ್, ದಯವಿಟ್ಟು ಅಂತರರಾಷ್ಟ್ರೀಯ ವಿಮಾನಗಳನ್ನು ನಿರ್ಬಂಧಿಸಿ- ಕೇಜ್ರಿವಾಲ್ ಮನವಿ

ಓಮಿಕ್ರಾನ್ ಆತಂಕ: ಪಿಎಂ ಸಾಹೇಬ್, ದಯವಿಟ್ಟು ಅಂತರರಾಷ್ಟ್ರೀಯ ವಿಮಾನಗಳನ್ನು ನಿರ್ಬಂಧಿಸಿ- ಕೇಜ್ರಿವಾಲ್ ಮನವಿ

- Advertisement -
- Advertisement -

ಸುಮಾರು 13 ದೇಶಗಳಲ್ಲಿ ಕಂಡು ಬಂದಿರುವ ಓಮಿಕ್ರಾನ್ ಆತಂಕದಿಂದಾಗಿ ಹಲವು ರಾಷ್ಟ್ರಗಳು ಮುನ್ನೆಚ್ಚರಿಕೆ ವಹಿಸುತ್ತಿದ್ದು, ದೇಶದಲ್ಲಿಯೂ ಅಂತರರಾಷ್ಟ್ರೀಯ ವಿಮಾನಯಾನವನ್ನು ನಿರ್ಬಂಧಿಸಬೇಕು ಎನ್ನುವ ಒತ್ತಾಯ ಕೇಳಿ ಬರುತ್ತಿದೆ. ಇದಕ್ಕೆ ಪುಷ್ಠಿ ಕೊಡುವಂತೆ ದಕ್ಷಿಣ ಆಫ್ರಿಕಾದಿಂದ ಬಂದ ಪ್ರಯಾಣಿಕರೊಬ್ಬರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.

ಇಂದು ಬೆಳಗ್ಗೆ ಟ್ವೀಟ್ ಮಾಡಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಪಿಎಂ ಸಾಹೇಬ್ ದಯವಿಟ್ಟು ತಕ್ಷಣವೇ ಅಂತರರಾಷ್ಟ್ರೀಯ ವಿಮಾನಯಾನವನ್ನು ನಿರ್ಬಂಧಿಸಿ, ಅಂತರರಾಷ್ಟರೀಯ ವಿಮಾನಯಾನದಿಂದ ಮೊದಲು ಅಪಾಯಕ್ಕೆ ಒಳಗಾಗುವುದು ದೆಹಲಿ ಎಂದ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದ್ದಾರೆ.

“ಕನಿಷ್ಠ 13 ದೇಶಗಳಲ್ಲಿ ‘ಓಮಿಕ್ರಾನ್’ ಹೊಸ ರೂಪಾಂತರವು ಕಂಡುಬಂದಿದೆ. ಈ ಹೊಸ ರೂಪಾಂತರವು ಅತ್ಯಂತ ಹೆಚ್ಚಿನ ಜಾಗತಿಕ ಅಪಾಯವನ್ನು ಉಂಟುಮಾಡುತ್ತದೆ. ಜೊತೆಗೆ ತೀವ್ರ ಪರಿಣಾಮಗಳನ್ನು ಉಂಟುಮಾಡಬಹುದು” ಎಂದು ಸೋಮವಾರದ ವಿಶ್ವ ಆರೋಗ್ಯ ಸಂಸ್ಥೆ (WHO) ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: ಓಮಿಕ್ರಾನ್ ಆತಂಕ: ಸೌತ್ ಆಫ್ರಿಕಾದಿಂದ ಬಂದ ವ್ಯಕ್ತಿಗೆ ಸೋಂಕು, 3 ದೇಶಗಳಿಂದ ವಿಮಾನಯಾನ ಬಂದ್ ಮಾಡಲು ಸಿಎಂ ಬೊಮ್ಮಾಯಿ ಮನವಿ

ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ತುರ್ತು ಮನವಿ ಮಾಡಿರುವ ಸಿಎಂ ಕೇಜ್ರಿವಾಲ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. “ಹಲವು ದೇಶಗಳು ಓಮಿಕ್ರಾನ್ ಪೀಡಿತ ರಾಷ್ಟ್ರಗಳಿಂದ ವಿಮಾನಗಳನ್ನು ನಿರ್ಬಂಧಿಸಿವೆ. ನಾವು ಏಕೆ ಇನ್ನು ವಿಳಂಬ ಮಾಡುತ್ತಿದ್ದೇವೆ?. ಮೊದಲ ಅಲೆಯಲ್ಲೂ ನಾವು ವಿಮಾನಗಳ ಮೇಲೆ ನಿಷೇಧ ಹೇರುವುದನ್ನು ವಿಳಂಬಗೊಳಿಸಿದ್ದೇವೆ. ಹೆಚ್ಚಿನ ಅಂತರಾಷ್ಟ್ರೀಯ ವಿಮಾನಗಳು ದೆಹಲಿಗೆ ಬಂದಿಳಿಯುತ್ತವೆ. ಇದರಿಂದ ದೆಹಲಿ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಪಿಎಂ ಸಾಹೇಬ್, ದಯವಿಟ್ಟು ವಿಮಾನಗಳನ್ನು ನಿಲ್ಲಿಸಿ” ಎಂದು ಮನವಿ ಮಾಡಿದ್ದಾರೆ.

ಈ ಹಿಂದೆಯೂ ಕೂ ಅರವಿಂದ್ ಕೇಜ್ರಿವಾಲ್ ಪ್ರಧಾನಿಅವರಿಗೆ ಪತ್ರ ಬರೆದು ಓಮಿಕ್ರಾನ್ ಪೀಡಿತ ದೇಶಗಳಿಂದ ತಕ್ಷಣವೇ ವಿಮಾನಗಳನ್ನು ನಿಲ್ಲಿಸುವಂತೆ ಒತ್ತಾಯಿಸಿದ್ದರು. “ಯಾವುದೇ ವಿಳಂಬವು ದೇಶಕ್ಕೆ ತುಂಬಾ ಹಾನಿಕಾರಕವಾಗಿದೆ” ಎಂದು ಹೇಳಿದ್ದರು.

ಮಹಾರಾಷ್ಟ್ರದ ಉದ್ಧವ್ ಠಾಕ್ರೆ ಸರ್ಕಾರವು ಕೂಡ ಹೊಸ ರೂಪಾಂತರ ಕಂಡುಬಂದಿರುವ 13 ದೇಶಗಳಿಂದ ವಿಮಾನಗಳನ್ನು ಸ್ಥಗಿತಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲು ನಿರ್ಧರಿಸಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಈ ರಾಷ್ಟ್ರಗಳಿಂದ ವಿಮಾನಗಳನ್ನು ನಿರ್ಬಂಧಿಸುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದಾರೆ.


ಇದನ್ನೂ ಓದಿ: ರಾಜ್ಯದಲ್ಲಿ ’ಓಮಿಕ್ರಾನ್’ ಆತಂಕ: ಗಡಿ ಜಿಲ್ಲೆಗಳಲ್ಲಿ ಸೋಂಕು ನಿಯಂತ್ರಣಕ್ಕೆ ಕಟ್ಟೆಚ್ಚರ- ಸಿಎಂ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಂಗಳೂರು: ‘ಶೂದ್ರ ವರ್ಗದವ ನಮ್ಮನ್ನು ಆಳಲು ಹೊರಟರೆ, ಬಂಟರು ಸಹಿಸುವುದಕ್ಕೆ ಸಾಧ್ಯವಿದೆಯೇ?’: ಬಿಜೆಪಿಗೆ ಮತ...

0
ಲೋಕಸಭೆ ಚುನಾವಣೆ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾನಕ್ಕೆ 24 ಗಂಟೆಗಳು ಮಾತ್ರ ಬಾಕಿ ಉಳಿದಿದೆ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬಂಟ ಸಮುದಾಯದ  ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬಿಲ್ಲವ...