Homeಮುಖಪುಟಗುರುವನ್ನು ಅರಸುವ ಕಲೆ: ಗುರುಪೂರ್ಣಿಮ ದಿನದ ಅಂಗವಾಗಿ ವಿಶೇಷ ಸ್ಟೋರಿ ಓದಿ

ಗುರುವನ್ನು ಅರಸುವ ಕಲೆ: ಗುರುಪೂರ್ಣಿಮ ದಿನದ ಅಂಗವಾಗಿ ವಿಶೇಷ ಸ್ಟೋರಿ ಓದಿ

ಅಕಸ್ಮಾತ್ ಗುರು ಮತ್ತು ದೇವರು ಇಬ್ಬರೂ ಏಕ ಕಾಲಕ್ಕೆ ಎದುರಾದರೆ ನಾನು ಯಾರ ಕಾಲಿಗೆ ಮೊದಲು ಬೀಳಲಿ ಎಂದು. (ಒಳ ಮನಸ್ಸು ಹೇಳುತ್ತದೆ) ಮೊದಲು ಗುರುಗಳ ಪಾದಕ್ಕೆ ಎರಗು ಏಕೆಂದರೆ ಗುರುಗಳಿಂದಲೇ ಆ ಗೋವಿಂದನ ದರ್ಶನ ಸಾಧ್ಯವಾಯಿತು ಎಂದು

- Advertisement -
- Advertisement -

ಪರಸ್ಪರ ವೈಯುಕ್ತಿಕ ಸಂಬಂಧಗಳ ಬಗ್ಗೆ ಲೇಖನ ಬರೆದಾಗ, ಕೆಲವು ಸಂಬಂಧಗಳು ವಿಶೇಷವಾಗಿರುತ್ತವೆ ಎಂದು ತಿಳಿಸಿದ್ದೆ. ಅವುಗಳಲ್ಲಿ ಗುರು-ಶಿಷ್ಯ ಸಂಬಂಧವೂ ಒಂದು.

ಗುರುಗಳು ಶಿಷ್ಯರನ್ನು ಹುಡುಕುತ್ತಿದ್ದರೆ, ಶಿಷ್ಯರು ಗುರುಗಳನ್ನು ಅರಸುತ್ತಿರುತ್ತಾರೆ. ಇಬ್ಬರ ಮಿಲನವೂ ತೀರ ಅಪರೂಪ ಮತ್ತು ಕೇವಲ ಆಕಸ್ಮಿಕ. ಹೆಚ್ಚಾಗಿ ಇದು ರಾಂಗ್ ನಂಬರ್ ಅಥವಾ ಮಿಸ್ಡ್ ಕಾಲ್ ಪ್ರಸಂಗಗಳೇ ಆಗಿರುತ್ತದೆ.

ಯಾರು ಈ ಗುರುಗಳು? ಮನೆ ಬಿಟ್ಟು ಮಠದಲ್ಲಿರುವ ಕಾವಿ ಧರಿಸಿದ ಸನ್ಯಾಸಿಗಳೇ? ಸರಕಾರಿ ಜಮೀನು ಕಬಳಿಸಿ, ರಾಜಕಾರಣಿಗಳ ಹಣವನ್ನು ಭದ್ರವಾಗಿರಿಸಿಕೊಂಡಿರುವ, ಸ್ವಿಸ್ ಬ್ಯಾಂಕ್ ಎಕ್ಸ್ಟೆನ್ಷನ್ ಕೌಂಟರ್ ನಡೆಸುತ್ತಿರುವ ಪ್ರವಚನಕಾರರೇ? ಸಾಮ್ರಾಜ್ಯ ಕಟ್ಟಿಕೊಂಡು ರಾಜಕೀಯ ಪಕ್ಷಗಳಿಗೆ ಮತಬ್ಯಾಂಕ್ ಸರಬರಾಜು ಮಾಡುತ್ತಿರುವ ಸ್ವಾಮೀಜಿಗಳೇ? ಮುಗ್ಧ ಜನರನ್ನು ದಾರಿತಪ್ಪಿಸಿ, ಮಾಡಬಾರದ್ದನ್ನು ಮಾಡಿ, ಜೈಲಿಗೆ ಹೋಗಿ ಕುಳಿತಿರುವ ಬಾಪೂ/ಬಾಬಾಗಳೇ? ನಾನು ಹೇಳುತ್ತಿರುವುದು ಇಂತಹ ಢೋಂಗಿಗಳ ಬಗ್ಗೆ ಅಲ್ಲ.

ಕಲಿಸಿದಾತಂ ವರ್ಣ ಮಾತ್ರಂ ಗುರು ಎಂದು ನಮ್ಮ ಭಾಷೆ ಹೇಳುತ್ತದೆ. ನಿನಗೆ ಒಂದು ಅಕ್ಷರ ಹೇಳಿಕೊಟ್ಟವರೂ ಸಹ ಗುರು ಎಂದು. ಅಂದ ಮಾತ್ರಕ್ಕೆ ಕೇವಲ ಒಂದಕ್ಷರ ಕಲಿಸಿದ ಮಾತ್ರಕ್ಕೆ ಅವರು ನಮ್ಮ ಸಂಪೂರ್ಣ ಜೀವನದ ಗುರುಗಳಾದರೇ? ಗುರುಗಳು ಇರಲೇ ಬೇಕೇ, ಅವರಿಲ್ಲದೆ ನಮಗೆ ಮೋಕ್ಷಕ್ಕೆ ದಾರಿಯೇ ಇಲ್ಲವೇ?

ನಮ್ಮ ಸಂಸ್ಕೃತಿ ಗುರುಗಳಿಗೆ ಬಹಳ ಉನ್ನತ ಸ್ಥಾನ ನೀಡಿದೆ. ಶ್ರೇಷ್ಠ ಕವಿ ಮತ್ತು ಭಕ್ತ ಕಬೀರ್ ದಾಸ್ ಹೇಳುತ್ತಾರೆ:

ಗುರು ಗೋವಿಂದ್ ದೋಊ ಖಡೇ ಕಾಕೆ ಲಾಗೌ ಪಾಯ್ |

ಬಲಿಹಾರೀ ಗುರು ಆಪನೇ ಗೋವಿಂದ್ ದಿಯೋ ಬತಾಯ್ ||

ಅರ್ಥಾತ್ (ಹೊರ ಮನಸ್ಸು ಪ್ರಶ್ನೆ ಮಾಡುತ್ತಿದೆ) ಅಕಸ್ಮಾತ್ ಗುರು ಮತ್ತು ದೇವರು ಇಬ್ಬರೂ ಏಕ ಕಾಲಕ್ಕೆ ಎದುರಾದರೆ ನಾನು ಯಾರ ಕಾಲಿಗೆ ಮೊದಲು ಬೀಳಲಿ ಎಂದು. (ಒಳ ಮನಸ್ಸು ಹೇಳುತ್ತದೆ) ಮೊದಲು ಗುರುಗಳ ಪಾದಕ್ಕೆ ಎರಗು ಏಕೆಂದರೆ ಗುರುಗಳಿಂದಲೇ ಆ ಗೋವಿಂದನ ದರ್ಶನ ಸಾಧ್ಯವಾಯಿತು ಎಂದು. ಹೀಗೆ ಗುರುಗಳನ್ನು ದೇವರಿಗಿಂತಲೂ ಎತ್ತರದ ಸ್ಥಾನದಲ್ಲಿ ನಾವು ನೋಡುತ್ತೇವೆ.

ನಮ್ಮ ತಾಯಿಯೇ ನಮಗೆಲ್ಲಾ ಮೊದಲ ಗುರು. ತಂದೆಯೂ ಸಹ ಗುರುವಿನ ಸ್ಥಾನದಲ್ಲಿದ್ದಾರೆ. ನಮ್ಮ ಶಾಲೆಯ ಶಿಕ್ಷಕರೂ ಸಹ ನಮಗೆ ಗುರುಗಳೇ. ಆದರೆ ನಿಜವಾದ, ನಾವು ಅರಸುತ್ತಿರುವ ಗುರು ಯಾರು? ಗುರುಗಳು ನಮಗೆ ಯಾವ ಕಾಲದಲ್ಲಿ ಯಾವ ರೂಪದಲ್ಲಿ ಸಿಗುತ್ತಾರೋ, ಕಾಣುತ್ತಾರೋ ಅದನ್ನು ಅಥವಾ ಯಾವಾಗ ನಮಗೆ ಯಾವ ಪಾಠ ಕಲಿಸುತ್ತಾರೆ ಅದನ್ನೂ ಹೇಳುವುದು ಸಾಧ್ಯವಿಲ್ಲ.

ನನ್ನ ಸ್ನೇಹಿತನೊಬ್ಬ ರಾಜ್ಯದ ಗ್ರಾಮೀಣ ಭಾಗದಲ್ಲಿರುವ ಆಯುರ್ವೇದ ಮಹಾವಿದ್ಯಾಲಯದಲ್ಲಿ ಶಿಕ್ಷಣ ಪಡೆಯುತ್ತಿದ್ದ. ಅಲ್ಲಿನ ಪ್ರಾಚಾರ್ಯರು ಘನ ಪಂಡಿತರು ಮತ್ತು ಸಹಜಜ್ಞಾನಿಗಳು. ಒಳ್ಳೆಯ ವಿದ್ಯಾರ್ಥಿಯಾದ ಈತನನ್ನು ಕಂಡಾಗಲೆಲ್ಲಾ, ತಮ್ಮ ಕೊಠಡಿಗೆ ಕರೆದು, ಒಂದಿಷ್ಟು ಪುಡಿ ಅಥವಾ ಚೂರ್ಣ ಅಥವಾ ಲೇಹ್ಯ ಮುಂತಾದ ಆಯುರ್ವೇದದ ಔಷಧಿಯನ್ನು ಒಂದು ಕಾಗದದ ಮೇಲೆ ಹಾಕಿ, ಇವನಿಗೆ ಕೊಟ್ಟು ಅದನ್ನು ಸರಿಯಾಗಿ ತೂಕಮಾಡಿಸಿಕೊಂಡು ಬರಲು ಆದೇಶಿಸುತ್ತಿದ್ದರು. ಕಾಲೇಜಿನ ಹೊರಗೆ ಒಂದು ಸಣ್ಣ ಕಿರಾಣಿ ಅಂಗಡಿ ಇತ್ತು. ಆ ಹಳ್ಳಿಗೆ ಇದ್ದುದು ಒಂದೇ ಅಂಗಡಿಯಾದ್ದರಿಂದ ಯಾವಾಗಲೂ ಗ್ರಾಹಕರು ಇರುತ್ತಿದ್ದರು. ವ್ಯಾಪಾರವಿಲ್ಲದೆ ಸುಮ್ಮನೆ ಕೂತಿದ್ದಾಗ ಮಾತ್ರ, ಇಂತಹ (ಬಿಟ್ಟಿ) ತೂಕ ಮಾಡುವ ಕೆಲಸ ಅಂಗಡಿಯ ಮಾಲೀಕ ಮಾಡಿಕೊಡುತ್ತಿದ್ದ. ಮಿಕ್ಕಂತೆ ಇವನನ್ನು ಆತ ಕಣ್ಣೆತ್ತಿಯೂ ನೋಡುತ್ತಿರಲಿಲ್ಲ. ಈತನಿಗೆ ತುಂಬಾ ಮುಜುಗರವಾಗಿ, ಅವಶ್ಯಕತೆ ಇಲ್ಲದಿದ್ದರೂ, ಅಂಗಡಿಯಿಂದ ಏನಾದರೂ ಸೋಪು, ಬ್ಲೇಡು ಮುಂತಾದ ವಸ್ತುವನ್ನು ಖರೀದಿಸಿ, ಪ್ರಾಚಾರ್ಯರ ಬಿಟ್ಟಿ ಕೆಲಸ ಬೇಗನೇ ಮಾಡಿಸಿಕೊಳ್ಳುತ್ತಿದ್ದ. ನಿದಾನವಾಗಿ ಹಿಂತಿರುಗಿದರೆ ಪ್ರಾಚಾರ್ಯರಿಂದಲೂ ಒಂದೆರಡು ಮಾತು ಕೇಳಬೇಕಾಗುತ್ತಿತ್ತು. ಆದ್ದರಿಂದ ಸಾಧ್ಯವಾದಷ್ಟು ಮಟ್ಟಿಗೆ, ಆತ ಪ್ರಾಚಾರ್ಯಕರ ಕಣ್ಣಿಗೆ ಬೀಳದಂತೆ ಓಡಾಡುತ್ತಿದ್ದ ಆದರೆ ಅವರ ಹದ್ದಿನ ಕಣ್ಣಿನಿಂದ ಸದಾ ತಪ್ಪಿಸಿಕೊಳ್ಳುವುದೂ ಸಹ ಕಷ್ಟದ ಕೆಲಸವಾಗಿತ್ತು.

ಹಾಗೂ ಹೀಗೂ ಒಂದು ವರ್ಷ ಕಳೆದ ನಂತರ, ಆತ ರಜೆಯ ಮೇಲೆ ತನ್ನ ಊರಿಗೆ ಬಂದ. ಪ್ರಾಚಾರ್ಯರ ಬಿಟ್ಟಿ ಚಾಕರಿಯಿಂದ ಬೇಸತ್ತಿದ್ದ ಆತ ತನ್ನ ತಂದೆಯ ಹತ್ತಿರ ಕೇಳಿ ಹಣ ಪಡೆದು, ನಗರಕ್ಕೆ ಹೋಗಿ, ಒಂದು ಸಣ್ಣ ತೂಕದ ಯಂತ್ರ ಖರೀದಿಸಿದ. ಅದನ್ನು ಜೋಪಾನವಾಗಿ ತನ್ನೊಡನೆ ರಜೆ ಮುಗಿದಾಗ ಕಾಲೇಜಿಗೆ ತೆಗೆದುಕೊಂಡು ಹೋದ. ಇವನನ್ನು ಕಂಡಕೂಡಲೇ ಮತ್ತೆ ಪ್ರಾಚಾರ್ಯರು ಕರೆದು ಒಂದಿಷ್ಟು ಪುಡಿ ಕೊಟ್ಟು, ತೂಕ ಮಾಡಿಸಿಕೊಂಡು ಬರಲು ಹೇಳಿದರು. ಇವನು ತನ್ನ ಹಾಸ್ಟೆಲ್ ರೂಮಿಗೆ ಹೋಗಿ, ತೂಕದ ಯಂತ್ರವನ್ನು ಹೊರತೆಗೆದು, ಅದರಲ್ಲಿ ಸರಿಯಾಗಿ ಪುಡಿಯನ್ನು ತೂಕ ಮಾಡಿ, ಜೊತೆಗೆ ಯಂತ್ರವನ್ನೂ ತೆಗೆದುಕೊಂಡು, ಪ್ರಾಚಾರ್ಯರ ಕೊಠಡಿಗೆ ಹೋದ. ಆ ಯಂತ್ರವನ್ನು ಅವರಿಗೆ ಕಾಣಿಕೆಯಾಗಿ ಕೊಡುತ್ತಾ, ಇನ್ನು ಮೇಲೆ ಯಾವುದೇ ಸಣ್ಣ-ಪುಟ್ಟ ವಸ್ತುವನ್ನು ಇಲ್ಲೇ ತೂಗಬಹುದು ಎಂದು ಹೇಳಿದ. ಕೆಲಸದಿಂದ ತಪ್ಪಿಸಿಕೊಂಡ ಸಾಧನೆಯಿಂದ ಬೀಗುತ್ತಿದ್ದ ಇವನ ಮುಖಚರ್ಯೆ ಕಂಡು ಖಿನ್ನರಾದ ಪ್ರಾಚಾರ್ಯರು ಇವನ ಯಂತ್ರವನ್ನು ಒಂದು ಸಣ್ಣ ಪೆಟ್ಟಿಗೆ ತೆಗೆದು ಅದರಲ್ಲಿ ಈಗಾಗಲೇ ಇದ್ದ, ಇನ್ನೂ ಹಲವಾರು ತೂಕದ ಯಂತ್ರಗಳ ಜೊತೆಗೆ ಸೇರಿಸಿ ಬಾಗಿಲು ಹಾಕಿದರು. ಇವನ ಮುಖ ಆಗಲೇ ಬಿಳಿಚಿತ್ತು. ಪ್ರಾಚಾರ್ಯರ ಬಳಿ ಈಗಾಗಲೇ ಇಷ್ಟೊಂದು ಯಂತ್ರಗಳಿದ್ದರೆ ಏಕೆ ನನ್ನನ್ನುಕಂಡಾಗಲೆಲ್ಲಾ ಪುಡಿ ಇತ್ಯಾದಿಯನ್ನು ಹೊರಗಿನಿಂದ ತೂಕ ಮಾಡಿಸಿಕೊಂಡು ಬರಲು ಹೇಳುತ್ತಿದ್ದರು ಎಂಬುದು ಇವನಿಗೆ ಅರ್ಥವಾಗಲಿಲ್ಲ. ಇವನ ಮನಃಸ್ಥಿತಿ ಅರಿತ ಪ್ರಾಚಾರ್ಯರು ಸ್ವತಃ ಹೇಳಿದರು.

ಮಗೂ, ಆಯುರ್ವೇದದ ಔಷದಿಗಳನ್ನು ಮಾಡುವ ಸಂಹಿತದಲ್ಲಿ ನಾವು ವಿವಿಧ ಸಾಮಗ್ರಿಗಳನ್ನು ಸೇರಿಸುತ್ತೇವೆ. ಅವನ್ನು ಈಗಿನ ಗ್ರಾಂ ಲೆಕ್ಕದಲ್ಲಿ ಅಲ್ಲ, ನಮ್ಮ ಕಾಲದ ಸೇರು, ಪಂಚೇರು, ಪಾವು, ತೊಲ ಗುಲಗಂಜಿ ತೂಕದಲ್ಲಿ ಅಳೆಯುತ್ತೇವೆ. ಒಳ್ಳೆಯ ವೈದ್ಯನಾಗಬೇಕಿದ್ದಲ್ಲಿ ವಸ್ತುವನ್ನು ಕಣ್ಣಿನಲ್ಲಿ ಕರಾರುವಾಕ್ಕಾಗಿ ತೂಗುವ, ಅಳೆಯುವ ಶಕ್ತಿ ಬರಬೇಕು. ಅ ಶಕ್ತಿ ನಿನಗೆ ಸಿಗಲಿ ಎಂದು ನಿನಗೆ ತೂಕ ಮಾಡಿಸಿಕೊಂಡು ಬರಲು ಹೇಳುತ್ತಿದ್ದೆ. ನಿನಗೆ ತೂಕಕ್ಕೆ ವಸ್ತುವನ್ನು ಕೊಡುವ ಮುಂಚೆಯೇ ಅದರಲ್ಲಿ ಎಷ್ಟಿದೆ ಅನ್ನುವುದು ನನಗೆ ಗೊತ್ತಿರುತ್ತಿತ್ತು, ಹಾಗಾಗಿ ನೀನು ಸರಿಯಾಗಿ ತೂಕ ಮಾಡಿಸಿಕೊಂಡು ಬಂದೆಯೋ ಅಥವಾ ಸುಳ್ಳು ಹೇಳಿದೆಯೋ ಅದೂ ಸಹ ನನಗೆ ತಿಳಿಯುತ್ತಿತ್ತು. ನಿನ್ನ ಜ್ಞಾನಕ್ಕಾಗಿ ನಾನು ನಿನಗೆ ಕೆಲಸ ಹೇಳುತ್ತಿದ್ದೆನೇ ಹೊರತು, ನನ್ನ ಪ್ರಯೋಜನಕ್ಕಾಗಿ ಅಲ್ಲ. ಕೂಡಲೇ ಜ್ಞಾನೋದಯವಾದ ಆತ ಗುರುಗಳ ಕಾಲಿಗೆ ಬಿದ್ದು ಕ್ಷಮೆ ಯಾಚಿಸಿದ. ಈಗ ನನ್ನ ಸ್ನೇಹಿತ ಆಯುರ್ವೇದ ಪಂಡಿತನಾಗಿ ಒಳ್ಳೆಯ ಹೆಸರು ಮತ್ತು ಸಂಪಾದನೆ ಎರಡೂ ಮಾಡಿಕೊಳ್ಳುತ್ತಿದ್ದಾನೆ.

ಹೀಗೆ ನಮಗೆ ಯಾವಾಗ ಗುರುಗಳ ಸಾನಿಧ್ಯ, ಸಾಕ್ಷಾತ್ಕಾರ, ಜ್ಞಾನ ಲಭ್ಯವಾಗುತ್ತದೋ, ಇಲ್ಲವೋ ಯಾರೂ ಹೇಳಲು ಬರುವುದಿಲ್ಲ. ಜೀವನದಲ್ಲಿ ನಮಗೆ ಕಾಲಕಾಲಕ್ಕೆ ಹಲವಾರು ಗುರುಗಳ ಅವಶ್ಯಕತೆ ಬರುತ್ತದೆ. ಸರಿಯಾದ ಗುರು ಸಿಗುವವರೆಗೆ ಅರಸುವ ಕೆಲಸ ತಪ್ಪುವುದಿಲ್ಲ.

ಶ್ರೀ ಗುರುಭ್ಯೋ ನಮಃ.

 

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...