Homeಅಂತರಾಷ್ಟ್ರೀಯಮೊದಲ ದಿನವೇ ವಲಸೆ, ಹವಾಮಾನ ಬದಲಾವಣೆ, ಕೋವಿಡ್ ನಿರ್ವಹಣೆಯ ನೀತಿಗಳ ಬದಲಾವಣೆಗೆ ಸಹಿ ಹಾಕಿದ ಬೈಡನ್!

ಮೊದಲ ದಿನವೇ ವಲಸೆ, ಹವಾಮಾನ ಬದಲಾವಣೆ, ಕೋವಿಡ್ ನಿರ್ವಹಣೆಯ ನೀತಿಗಳ ಬದಲಾವಣೆಗೆ ಸಹಿ ಹಾಕಿದ ಬೈಡನ್!

- Advertisement -
- Advertisement -

ಅಮೆರಿಕದ ನೂತನ ಅಧ್ಯಕ್ಷರಾದ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಜೋ ಬೈಡನ್, ಟ್ರಂಪ್  ಆಡಳಿತವು ಜಾರಿಗೆ ತಂದಿದ್ದ ಹಲವು ನೀತಿಗಳಲ್ಲಿ ಬದಲಾವಣೆ ತರುವುದಕ್ಕಾಗಿ ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕಿದ್ದಾರೆ. ವಲಸೆ, ಹವಾಮಾನ ಬದಲಾವಣೆ, ಕೋವಿಡ್ ನಿರ್ವಹಣೆ ಮತ್ತು ಜನಾಂಗೀಯ ಸಮಾನಯತೆಯ ವಿಷಯಗಳಲ್ಲಿ ಮಹತ್ವದ ತಿದ್ದುಪಡಿಗೆ ಮುಂದಾಗಿದ್ದಾರೆ.

ಕ್ಯಾಪಿಟಲ್ ಕಚೇರಿಯ ಅಧಿಕಾರ ಹಿಡಿದ ನಂತರ ಎರಡು ಪ್ರಮುಖ ನಿರ್ದೇಶನಗಳು ಮತ್ತು 15 ಕಾರ್ಯನಿರ್ವಾಹಕ ಕ್ರಮಗಳಿಗೆ ಬೈಡನ್ ಸಹಿ ಹಾಕಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಟ್ರಂಪ್ ಆಡಳಿತ ಜಾರಿಗೆ ತಂದ ಹಲವು ನೀತಿಗಳಲ್ಲಿ ಬದಲಾವಣೆಗೆ ಬೈಡನ್ ಒತ್ತುನೀಡಿದ್ದಾರೆ. ಇಂದಿನಂತೆ ಆರಂಭಿಸಲು ಬೇರೆ ಸಮಯವಿಲ್ಲ ಎಂದು ಪತ್ರಕರ್ತರ ಪ್ರಶ್ನೆಗಳಿಗೆ ಬೈಡನ್ ಉತ್ತರಿಸಿದ್ದಾರೆ.

ಕೋವಿಡ್ ಸಾಂಕ್ರಾಮಿಕವನ್ನು ಎದುರಿಸುವುದನ್ನು ಟ್ರಂಪ್ ಆಡಳಿತ ತನ್ನ ಮೊದಲ ಆದ್ಯತೆಯನ್ನಾಗಿಸಿಕೊಂಡಿದೆ. ಮುಂದಿನ ನೂರು ದಿನಗಳ ಕಾಲ ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸಲು ಬೈಡನ್ ಮನವಿ ಮಾಡಿದ್ದಾರೆ. ಹೊಸ ಫೆಡರಲ್ ಕಚೇರಿಯನ್ನು ರಚಿಸುವುದು ಮತ್ತು ಜಾಗತಿಕ ಆರೋಗ್ಯ ಸುರಕ್ಷತೆ ಮತ್ತು ರಕ್ಷಣೆಗಾಗಿ ಟ್ರಂಪ್ ಆಡಳಿತದಲ್ಲಿ ಮುಚ್ಚಿರುವ ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ನಿರ್ದೇಶನಾಲಯವನ್ನು ಪುನಃಸ್ಥಾಪಿಸಲು ಬೈಡನ್ ಮುಂದಾಗಿದ್ದಾರೆ.

ವಲಸೆ ವಿಚಾರದಲ್ಲಿ ಬೈಡನ್ ಮಹತ್ವದ ಹೆಜ್ಜೆಯಿಟ್ಟಿದ್ದಾರೆ. 2012ರಲ್ಲಿ ಜಾರಿಗೆ ತಂದ ಬಾಲ್ಯದ ವಲಸೆಯ ಹಕ್ಕುಗಳನ್ನು ರಕ್ಷಿಸಲು ಮುಂದಾಗಿದ್ದಾರೆ. ಇದರಿಂದ ಲಕ್ಷಾಂತರ ಜನರನ್ನು ಗಡೀಪಾರು ಮಾಡುವಿಕೆಯಿಂದ ರಕ್ಷಿಸಲಾಗುತ್ತದೆ. ಅಲ್ಲದೆ ಅಂತರ್ಯುದ್ಧ ಮತ್ತು ಎಬೋಲಾ ದಾಳಿಯಿಂದ ಪಲಾಯನ ಮಾಡಿದ ಲೈಬೀರಿಯನ್ನರಿಗೆ ತಾತ್ಕಾಲಿಕ ಕಾನೂನು ಸ್ಥಾನಮಾನವನ್ನು ಜೂನ್ 2022 ರವರೆಗೆ ವಿಸ್ತರಿಸುವುದಾಗಿ ಅವರ ಆದೇಶಗಳಲ್ಲಿ ತಿಳಿಸಲಾಗಿದೆ.

ಇದಲ್ಲದೆ ಹವಾಮಾನ ಬದಲಾವಣೆ ಮತ್ತು ಜನಾಂಗೀಯ ಸಮಾನತೆಗಾಗಿನ ಹಲವು ಆದೇಶಗಳಿಗೆ ಬೈಡನ್ ಸಹಿ ಹಾಕಿದ್ದಾರೆ.


ಇದನ್ನೂ ಓದಿ: ಅಮೆರಿಕದ 46 ನೇ ಅಧ್ಯಕ್ಷರಾಗಿ ಜೋ ಬೈಡೆನ್ – ಯಾರಿವರು? ; ಸಂಕ್ಷಿಪ್ತ ಪರಿಚಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...