Homeಮುಖಪುಟಕೇರಳದಲ್ಲೀಗ ಕೇವಲ 16 ಕೊರೊನಾ ಸೋಂಕಿತರು: ಸಚಿವ ಥಾಮಸ್ ಐಸಾಕ್

ಕೇರಳದಲ್ಲೀಗ ಕೇವಲ 16 ಕೊರೊನಾ ಸೋಂಕಿತರು: ಸಚಿವ ಥಾಮಸ್ ಐಸಾಕ್

- Advertisement -
- Advertisement -

100 ದಿನಗಳ ನಂತರ ಕೇರಳವು ಕೊರೊನಾ ವೈರಸ್ ರೇಖೆ ಚಪ್ಪಟೆಯಾಗಿ ಹೋಗುತ್ತಿದೆ ಎಂದು ಕೇರಳ ರಾಜ್ಯ ಹಣಕಾಸು ಸಚಿವ ಥಾಮಸ್ ಐಸಾಕ್ ಟ್ವೀಟ್ ಮಾಡಿದ್ದಾರೆ. ಕೇರಳದಾದ್ಯಂತ ಆಸ್ಪತ್ರೆಗಳಲ್ಲಿ ಕೇವಲ 16 ಸಕ್ರಿಯ ಕೊರೊನಾ ಪ್ರಕರಣಗಳು ಮಾತ್ರ ಇದೆ ಎಂದು ಅವರು ಹೇಳಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯ ವಿಶೇಷ ಕೊರೊನಾ ರಾಯಭಾರಿ ಡಾ. ಡೇವಿಡ್ ನಬರೋ ಜುಲೈ ಅಂತ್ಯದ ವೇಳೆಗೆ ಭಾರತದಲ್ಲಿ ಕೊರೊನಾ ವಕ್ರರೇಖೆ ಸಮತಟ್ಟಾಗುತ್ತದೆ ಎಂದು ಹೇಳಿದ ಕೆಲವೇ ಗಂಟೆಗಳ ಅಂರದಲ್ಲಿ ಕೇರಳ ಸಚಿವರು ಟ್ವೀಟ್ ಬಂದಿದೆ.

ಭಾರತದಲ್ಲಿ ಮೊದಲ ಮೂರು ಕೊರೊನಾ ವೈರಸ್ ಪ್ರಕರಣಗಳು ಕೇರಳದಿಂದ ವರದಿಯಾಗಿತ್ತು. ಕೇರಳದಿಂದ ಇದುವರೆಗೂ 503  ಪ್ರಕರಣಗಳನ್ನು ವರದಿಯಾಗಿದೆ, ಅದರಲ್ಲಿ 484 ಜನರು ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಕೇವಲ ನಾಲ್ಕು ಸಾವುಗಳು ದಾಖಲಾಗಿವೆ.

ವಿಷೇಷವೆಂದರೆ ಈ ತಿಂಗಳ ಮೊದಲ ವಾರದಲ್ಲಿ ಕೇರಳದಲ್ಲಿ ಕೇವಲ ಐದು ಹೊಸ ಪ್ರಕರಣಗಳು ವರದಿಯಾಗಿದೆ.

ಸಚಿವ ಥಾಮಸ್ ಐಸಾಕ್ ಹಂಚಿಕೊಂಡ ಲೈನ್ ಗ್ರಾಫ್‌ನಲ್ಲಿ, ಸಕ್ರಿಯ ಕೊರೊನಾ ಪ್ರಕರಣಗಳ ಸಂಖ್ಯೆಯನ್ನು ಹಳದಿ ಬಣ್ಣದಲ್ಲಿ ತೋರಿಸಲಾಗಿದೆ ಮತ್ತು ಈ ರೇಖೆಯು ಏಪ್ರಿಲ್ 9 ರಿಂದ ಕೆಳಕ್ಕೆ ಇಳಿಯುತ್ತಿದೆ ಎಂದು ತೋರಿಸಲಾಗಿದೆ.

keralaflatteningcurve

ಇದಕ್ಕೆ ತದ್ವಿರುದ್ಧವಾಗಿ, ವೈರಸ್‌ನಿಂದ ಚೇತರಿಸಿಕೊಂಡ ಜನರನ್ನು ಪ್ರತಿನಿಧಿಸುವ ರೇಖೆ (ಹಸಿರು ಬಣ್ಣ) ಅದೇ ದಿನಾಂಕದಿಂದ ಸಮಾನವಾಗಿ ಮೇಲಕ್ಕೆ ಏರುತ್ತದೆ.

ಕೊರೊನಾ ವಿರುದ್ದ ಹೋರಾಡಲು ಕೇರಳವೂ ಶಂಕಿತ ಪ್ರಕರಣಗಳಿಗೆ 28 ​​ದಿನಗಳ ಸಂಪರ್ಕತಡೆಯ ಅವಧಿಯನ್ನು ನಿರ್ಧಾರ ಮಾಡಿತ್ತು; ರಾಷ್ಟ್ರವ್ಯಾಪಿ ಈ ಅವಧಿ 14 ದಿನಗಳಾಗಿದೆ. ಅಲ್ಲದೆ ಕಳೆದ ತಿಂಗಳು ದಕ್ಷಿಣ ಕೊರಿಯಾದಿಂದ ಪ್ರೇರಿತವಾಗಿ ಕೇರಳವು ಸಾಮೂಹಿಕ ಮಾದರಿಗಳನ್ನು ಸಂಗ್ರಹಿಸಲು ವಾಕ್-ಇನ್ ಕಿಯೋಸ್ಕ್ಗಳನ್ನು ಬಳಸಿದ ಮೊದಲ ರಾಜ್ಯವಾಗಿತ್ತು.

ದೇಶಾದ್ಯಂತ ಕೊರೊನಾ ಪ್ರಕರಣಗಳ ಸಂಖ್ಯೆ 60,000 ಕ್ಕೆ ತಲುಪಿದ್ದು, ಸುಮಾರು 2,000 ಜನರು ಸಾವಿಗೀಡಾಗಿದ್ದಾರೆ. ಆರೋಗ್ಯ ಸಚಿವಾಲಯದ ಅಂಕಿ ಅಂಶಗಳಂತೆ ಕಳೆದ 24 ಗಂಟೆಗಳಲ್ಲಿ 3,320 ಹೊಸ ಪ್ರಕರಣಗಳು ಮತ್ತು 95 ಸಾವುಗಳು ವರದಿಯಾಗಿದೆ.


ಇದನ್ನೂ ಓದಿ: ಭಾರತವೆಂಬ ಗಣರಾಜ್ಯ ಅನುಸರಿಸಬೇಕಾದ ದಾರಿ ಕೇರಳ ರಾಜ್ಯದಲ್ಲಿದೆ


ವಿಡಿಯೊ ನೋಡಿ: ಕಾರ್ಮಿಕರ ಬವಣೆ – ಮಾಧ್ಯಮಗಳ ಸಂಭ್ರಮ : ಕ್ರೋನಾಲಜಿ ಅರ್ಥ ಮಾಡಿಕೊಳ್ಳೋಣ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷ ಬಿತ್ತುವ, ವಿಭಜನೀಯ ಶಕ್ತಿಗಳನ್ನು ಸೋಲಿಸಲು ಒಗ್ಗಟ್ಟಾಗಬೇಕು: ಅಡ್ಮಿರಲ್ ರಾಮದಾಸ್ ಅವರ ಕೊನೆಯ ಸಂದೇಶ...

0
ಲೋಕಸಭೆ ಚುನಾವಣೆ ಹೊಸ್ತಿಲ್ಲಲ್ಲಿ ನೌಕಾಪಡೆಯ ಮಾಜಿ ಮುಖ್ಯಸ್ಥ ಅಡ್ಮಿರಲ್ ರಾಮ್‌ದಾಸ್ ಅವರ ಕೊನೆಯ ಕಾಲದ ಸಂದೇಶವನ್ನು ಅವರ ಪತ್ನಿ ಲಲಿತಾ ರಾಮದಾಸ್‌ ಸಾರ್ವಜನಿಕರ ಮುಂದಿಟ್ಟಿದ್ದು, ದ್ವೇಷಿಸುವ, ವಿಭಜನೀಯ, ಸರ್ವಾಧಿಕಾರಿಗಳನ್ನು ಸೋಲಿಸಲು ಒಗ್ಗಟ್ಟಾಗಬೇಕು ಎಂದು...