Homeಮುಖಪುಟಚುನಾವಣಾ ಆಯೋಗವನ್ನು ಭೇಟಿ ಮಾಡಿದ ಪ್ರತಿಪಕ್ಷ ನಿಯೋಗ: ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆಗೆ ತೀವ್ರ ವಿರೋಧ

ಚುನಾವಣಾ ಆಯೋಗವನ್ನು ಭೇಟಿ ಮಾಡಿದ ಪ್ರತಿಪಕ್ಷ ನಿಯೋಗ: ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆಗೆ ತೀವ್ರ ವಿರೋಧ

- Advertisement -
- Advertisement -

ಭಾರತೀಯ ಚುನಾವಣಾ ಆಯೋಗವನ್ನು ಬುಧವಾರ ಭೇಟಿಯಾಗಿರುವ ಪ್ರತಿಪಕ್ಷ ನಿಯೋಗ ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಎಆರ್‌) ಕುರಿತು ಕಳವಳ ವ್ಯಕ್ತಪಡಿಸಿದೆ.

ಕಾಂಗ್ರೆಸ್, ಆರ್‌ಜೆಡಿ, ಸಿಪಿಐ, ಸಿಪಿಐ(ಎಂಎಲ್‌) ಲಿಬರೇಶನ್, ಎನ್‌ಸಿಪಿ-ಎಸ್‌ಪಿ ಮತ್ತು ಸಮಾಜವಾದಿ ಪಕ್ಷಗಳ 11 ಮಂದಿ ನಾಯಕರು ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಮತ್ತು ಇತರ ಚುನಾವಣಾ ಆಯುಕ್ತರನ್ನು ಭೇಟಿ ಮಾಡಿ, ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗ ಕೈಗೊಂಡಿರುವ ಮತದಾರರ ಪಟ್ಟಿ ಪರಿಶೀಲನೆಯನ್ನು ವಿರೋಧಿಸಿದ್ದಾರೆ.

ಬಿಹಾರದಲ್ಲಿ ಈಗಾಗಲೇ ಪ್ರಾರಂಭವಾಗಿರುವ ಮತ್ತು ಮುಂದಿನ ವರ್ಷ ಚುನಾವಣೆ ನಡೆಯಲಿರುವ ಅಸ್ಸಾಂ, ಕೇರಳ, ಪುದುಚೇರಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಜಾರಿಗೆ ಬರಲಿರುವ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯನ್ನು ಇಂಡಿಯಾದ ಒಕ್ಕೂಟದ ಪಕ್ಷಗಳು ತೀವ್ರವಾಗಿ ವಿರೋಧಿಸುತ್ತಿವೆ.

ಚುನಾವಣಾ ಆಯೋಗದ ಜೊತೆಗಿನ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕಾಂಗ್ರೆಸ್ ಸಂಸದ ಅಭಿಷೇಕ್ ಮನು ಸಿಂಘ್ವಿ, ಪಕ್ಷದ ಅಧ್ಯಕ್ಷರು ಮಾತ್ರ ತನ್ನ ಮುಂದೆ ಹಾಜರಾಗಬೇಕೆಂದು ಹೇಳುವ, ಚುನಾವಣಾ ಆಯೋಗದ ಅವರಣ ಪ್ರವೇಶಕ್ಕೆ ಸಂಬಂಧಿಸಿದ ಆಯೋಗದ ಹೊಸ ನಿರ್ದೇಶನದ ವಿರುದ್ದವೂ ನಾವು ಪ್ರತಿಭಟಿಸಿದ್ದೇವೆ ಎಂದು ಹೇಳಿದ್ದಾರೆ.

ಮೊಟ್ಟ ಮೊದಲ ಬಾರಿಗೆ ನಮಗೆ ಇಂತಹ ನಿಯಮಗಳನ್ನು ವಿಧಿಸಲಾಗಿದೆ. ಪಕ್ಷದ ಮುಖ್ಯಸ್ಥರು ಮಾತ್ರ ಭೇಟಿ ಮಾಡಬಹುದು ಎಂದು ಮೊದಲ ಬಾರಿಗೆ ಹೇಳಲಾಗಿದೆ. ಈ ರೀತಿಯ ನಿರ್ಬಂಧಗಳಿಂದ ಚುನಾವಣಾ ಆಯೋಗ ಮತ್ತು ರಾಜಕೀಯ ಪಕ್ಷಗಳ ನಡುವೆ ಅತ್ಯಗತ್ಯ ಮಾತುಕತೆಗಳನ್ನು ನಡೆಸಲು ಸಾಧ್ಯವಿಲ್ಲ ಎಂದು ಸಿಂಘ್ವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಾವು ಪಟ್ಟಿಯನ್ನು ಕೊಟ್ಟಿದ್ದೇವೆ. ಅನಧಿಕೃತ ವ್ಯಕ್ತಿಗಳನ್ನು ಅನುಮತಿಸಲು ಸಾಧ್ಯವಿಲ್ಲ. ಇಬ್ಬರಿಗೆ ಮಾತ್ರ ಅವಕಾಶ ನೀಡುವುದು ವಿಪರ್ಯಾಸ. ಕೆಲವು ಹಿರಿಯ ನಾಯಕರು ಮೂರು ಗಂಟೆಗಳ ಕಾಲ ಕಾಯಬೇಕಾಯಿತು ಎಂದು ಸಿಂಘ್ವಿ ತಿಳಿಸಿದ್ದಾರೆ.

ನಾವು ಕಳೆದ ಪರಿಷ್ಕರಣೆಯಿಂದ ಮಾಹಿತಿ ಕೇಳಿದ್ದೇವೆ. ಅವಾಗಿನಿಂದ ಬಿಹಾರದಲ್ಲಿ ನಾಲ್ಕು ಅಥವಾ ಐದು ಚುನಾವಣೆಗಳು ನಡೆದಿವೆ. 2003ರ ಎಸ್‌ಐಆರ್ ಲೋಕಸಭಾ ಚುನಾವಣೆಗೆ ಒಂದು ವರ್ಷ ಮೊದಲು ನಡೆದಿತ್ತು. ಅಂದರೆ, ಬಿಹಾರ ವಿಧಾನಸಭಾ ಚುನಾವಣೆಯ 24 ತಿಂಗಳು ಮೊದಲು ಎಂದು ಸಿಂಘ್ವಿ ಹೇಳಿದ್ದಾರೆ.

“ಎರಡನೆಯದಾಗಿ ನೀವು ಎಸ್‌ಐಆರ್ ಮಾಡುವುದಾದರೆ ಜೂನ್ ಅಂತ್ಯದಲ್ಲಿ ಏಕೆ ಘೋಷಣೆ ಮಾಡಿದಿರಿ ಎಂದು ನಾವು ಕೇಳಿದ್ದೇವೆ. ಮೂರನೆಯದಾಗಿ, ಕಳೆದ ಒಂದು ದಶಕದಲ್ಲಿ ಎಲ್ಲದಕ್ಕೂ ಆಧಾರ್ ಮತ್ತು ಪಡಿತರ ಚೀಟಿಯನ್ನು ಕೇಳಿದ್ದೀರಿ. ಮೊಟ್ಟ ಮೊದಲ ಜನನ ಪ್ರಮಾಣ ಪತ್ರ ಇಲ್ಲದವರನ್ನು ಪರಿಗಣಿಸುವುದಿಲ್ಲ ಎನ್ನುತ್ತಿದ್ದೀರಿ ಎಂಬುವುದನ್ನು ಪ್ರಶ್ನಿಸಿದ್ದೇವೆ ಎಂದು ಸಿಂಘ್ವಿ ತಿಳಿಸಿದ್ದಾರೆ.

ವಿಶೇಷ ಸಚಿವ ಸಂಪುಟ ಸಭೆಯಲ್ಲಿ 48 ವಿಷಯಗಳು ಕುರಿತು ಚರ್ಚೆ; 3400 ಕೋಟಿ ಮೊತ್ತ ಮಂಜೂರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಲಿಗಢ ಮುಸ್ಲಿಂ ವಿವಿ ಆವರಣದಲ್ಲಿ ಗುಂಡಿಕ್ಕಿ ಶಿಕ್ಷಕನ ಹತ್ಯೆ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ (ಎಎಂಯು)ದ ಶಿಕ್ಷಕರೊಬ್ಬರನ್ನು ವಿಶ್ವವಿದ್ಯಾಲಯದ ಆವರಣದಲ್ಲಿ ಬುಧವಾರ (ಡಿ.24) ರಾತ್ರಿ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಲ್ಲಿ ಭೀತಿ ಮೂಡಿಸಿದೆ. ಮೃತರನ್ನು ಎಎಂಯುನ ಎಬಿಕೆ ಯೂನಿಯನ್ ಹೈಸ್ಕೂಲ್‌ನ ಶಿಕ್ಷಕ...

ಮತ್ತೊಬ್ಬ ವಲಸೆ ಕಾರ್ಮಿಕನ ಗುಂಪು ಹತ್ಯೆ : ಆರು ಜನರ ಬಂಧನ

ಬುಧವಾರ (ಡಿ.24) ಒಡಿಶಾದ ಸಂಬಾಲ್‌ಪುರದಲ್ಲಿ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ 30 ವರ್ಷದ ವಲಸೆ ಕಾರ್ಮಿಕರೊಬ್ಬರನ್ನು ಗುಂಪು ಹತ್ಯೆ ಮಾಡಲಾಗಿದೆ. ಈ ಸಂಬಂಧ ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್...

ಉನ್ನಾವೋ ಅತ್ಯಾಚಾರ ಪ್ರಕರಣ : ಕುಲದೀಪ್ ಸೆಂಗಾರ್ ಶಿಕ್ಷೆ ಅಮಾನತು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

ಉನ್ನಾವೋ ಅತ್ಯಾಚಾರ ಪ್ರಕರಣದ ಅಪರಾಧಿ ಕುಲದೀಪ್ ಸಿಂಗ್ ಸೆಂಗಾರ್‌ನ ಜೀವಾವಧಿ ಶಿಕ್ಷೆ ಅಮಾನತುಗೊಳಿಸಿರುವುದನ್ನು ಪ್ರಶ್ನಿಸಿ ಇಬ್ಬರು ಮಹಿಳಾ ವಕೀಲರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಕುಲದೀಪ್ ಸಿಂಗ್ ಸೆಂಗಾರ್‌ಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು...

ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ಅಪಹಾಸ್ಯ : ಮಾಧ್ಯಮಗಳ ಮುಂದೆ ವ್ಯಂಗ್ಯವಾಗಿ ನಕ್ಕ ಯುಪಿ ಸಚಿವ

ದೆಹಲಿಯ ಇಂಡಿಯಾ ಗೇಟ್ ಬಳಿ ಪ್ರತಿಭಟಿಸಿದ ಉನ್ನಾವೋ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯನ್ನು ಉತ್ತರ ಪ್ರದೇಶದ ಬಿಜೆಪಿ ಸರ್ಕಾರದ ಸಚಿವ ಓಂ ಪ್ರಕಾಶ್ ರಾಜ್‌ಭರ್ ಅಪಹಾಸ್ಯ ಮಾಡಿದ್ದು, "ಆಕೆಯ ಮನೆ ಉನ್ನಾವೋದಲ್ಲಿರುವಾಗ ದೆಹಲಿಯಲ್ಲಿ ಏಕಿದ್ದಾಳೆ?"...

ಹತ್ಯೆಯ ಕೆಲವೇ ಗಂಟೆಗಳ ಮೊದಲು ನಾನು ಹಮಾಸ್ ಮುಖ್ಯಸ್ಥರನ್ನು ಭೇಟಿಯಾಗಿದ್ದೆ: ಕೇಂದ್ರ ಸಚಿವ ನಿತಿನ್ ಗಡ್ಕರಿ

ಹತ್ಯೆಯಾಗುವ ಕೆಲವೇ ಗಂಟೆಗಳ ಮೊದಲು ಟೆಹ್ರಾನ್‌ನಲ್ಲಿ ಹಮಾಸ್‌ನ ಮಾಜಿ ಮುಖ್ಯಸ್ಥ ಇಸ್ಮಾಯಿಲ್ ಹನಿಯಾ ಅವರನ್ನು ಭೇಟಿಯಾಗಿದ್ದಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಬಹಿರಂಗಪಡಿಸಿದ್ದಾರೆ. ನವದೆಹಲಿಯಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಗಡ್ಕರಿ, ಅಧ್ಯಕ್ಷ...

ಕರ್ನಾಟಕ ಜನಶಕ್ತಿ ಸಕ್ರಿಯ ಕಾರ್ಯಕರ್ತೆ, ಹೋರಾಟದ ಒಡನಾಡಿ ಕೆ.ಪದ್ಮಾ ಇನ್ನಿಲ್ಲ

ಹಿರಿಯ ಹೋರಾಟಗಾರ್ತಿ, ಕರ್ನಾಟಕ ಜನಶಕ್ತಿ ಸಂಘಟನೆಯ ಸಕ್ರಿಯ ಕಾರ್ಯಕರ್ತೆ ಕೆ ಪದ್ಮಾ ಅವರು ಹೋರಾಟದ ಬದುಕನ್ನು ಮುಗಿಸಿದ್ದಾರೆ. ಬುಧವಾರ ರಾತ್ರಿ, ಬೆಂಗಳೂರಿನಲ್ಲಿ ಕೊನೆಯುಸಿಳೆದಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು, ತಮ್ಮನ್ನು ಬಾಧಿಸುತ್ತಿದ್ದ...

ದೇಶದ ಹಲವೆಡೆ ಕ್ರೈಸ್ತರ ಮೇಲೆ ಮತಾಂಧ ಕೋಮುವಾದಿಗಳ ದಾಳಿ : ಕ್ರಿಸ್‌ಮಸ್ ಆಚರಣೆಗೆ ಅಡ್ಡಿ

ಪ್ರತಿ ವರ್ಷದಂತೆ ಈ ವರ್ಷವೂ ಡಿಸೆಂಬರ್ ತಿಂಗಳಲ್ಲಿ, ವಿಶೇಷವಾಗಿ ಡಿಸೆಂಬರ್ 25ರಂದು ಇಡೀ ಜಗತ್ತು ಕ್ರಿಸ್‌ಮಸ್ ಹಬ್ಬದ ಸಂಭ್ರಮದಲ್ಲಿದೆ. ಏಸು ಕ್ರಿಸ್ತನ ಜನ್ಮದಿನದ ಪ್ರಯುಕ್ತ ಜನರು ಗಡಿಗಳನ್ನು ಮೀರಿ ಪರಸ್ಪರ ಸಂತಸ ಹಂಚಿಕೊಳ್ಳುತ್ತಿದ್ದಾರೆ. ಈ...

ಹರಿಯಾಣ| ಕಳ್ಳತನ ಆರೋಪದ ಮೇಲೆ 12 ವರ್ಷದ ದಲಿತ ಬಾಲಕನಿಗೆ ಚಿತ್ರಹಿಂಸೆ; ಕಟ್ಟಿಹಾಕಿ ದೌರ್ಜನ್ಯ

12 ವರ್ಷದ ದಲಿತ ಬಾಲಕನ ಮೇಲೆ ಕಳ್ಳತನದ ಶಂಕೆಯಿಂದ ಹಲವಾರು ಗಂಟೆಗಳ ಕಾಲ ಚಿತ್ರಹಿಂಸೆ ನೀಡಿ ಅಕ್ರಮ ಬಂಧನದಲ್ಲಿಟ್ಟ ಆರೋಪದ ಮೇಲೆ ಕುಟುಂಬವೊಂದರ 10 ಸದಸ್ಯರ ವಿರುದ್ಧ ಹರಿಯಾಣದ ಪಲ್ವಾಲ್‌ನಲ್ಲಿ ಪೊಲೀಸರು ಪ್ರಕರಣ...

ಉನ್ನಾವೋ ಅತ್ಯಾಚಾರಿಯ ಶಿಕ್ಷೆ ಅಮಾನತು : ದೆಹಲಿ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಮೊರೆ ಹೋಗಲು ಮುಂದಾದ ಸಿಬಿಐ

ಉನ್ನಾವೋ ಅತ್ಯಾಚಾರ ಅಪರಾಧಿಯ ಶಿಕ್ಷೆ ಅಮಾನತಿನಲ್ಲಿಟ್ಟ ದೆಹಲಿ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಕೇಂದ್ರ ತನಿಖಾ ದಳ (ಸಿಬಿಐ) ಮುಂದಾಗಿದೆ ಎಂದು ಬುಧವಾರ (ಡಿ.24) ವರದಿಯಾಗಿದೆ. ಸಿಬಿಐ ಈ ಪ್ರಕರಣದ ತನಿಖೆ...

ಚಿತ್ರದುರ್ಗ | ಹೊತ್ತಿ ಉರಿದ ಖಾಸಗಿ ಬಸ್​​​​ : 10ಕ್ಕೂ ಹೆಚ್ಚು ಜನರು ಸಜೀವ ದಹನ, ಹಲವರಿಗೆ ಗಾಯ

ಖಾಸಗಿ ಸ್ಲೀಪರ್ ಕೋಚ್ ಬಸ್ ಹೊತ್ತಿ ಉರಿದ ಪರಿಣಾಮ 10ಕ್ಕೂ ಹೆಚ್ಚು ಜನರು ಸಜೀವ ದಹನವಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಗೊರ್ಲತ್ತು ಕ್ರಾಸ್ ಬಳಿ ಗುರುವಾರ (ಡಿ.25) ನಡೆದಿದೆ. ರಾಷ್ಟ್ರೀಯ ಹೆದ್ದಾರಿ...